ಚೆನ್ನೈ : ವಿರಾಟ್ ಕೊಹ್ಲಿ (Virat Kohli) ಈಗ ಸಾಕಷ್ಟು ಸಮಯದಿಂದ ಕ್ರಿಕೆಟ್ ಆಟದಿದ ಹೊರಕ್ಕೆ ಉಳಿದಿದ್ದಾರೆ. ಅವರು ದಾಖಲೆಗಳನ್ನು ಬೆನ್ನಟ್ಟದಿದ್ದರೂ ದಾಖಲೆಗಳು ಅವರನ್ನು ಬೆನ್ನಟ್ಟುತ್ತಲೇ ಇರುತ್ತವೆ. ಇಂಡಿಯನ್ ಪ್ರೀಮಿಯರ್ ಲೀಗ್ 2024 ಕ್ಕೆ (IPL 2024) ಮರಳುತ್ತಿದ್ದಂತೆ ಬ್ಯಾಟರ್ ಚೆಪಾಕ್ನಲ್ಲಿ ನಡೆದ ಋತುವಿನ ಆರಂಭಿಕ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ವಿರುದ್ಧ ತಮ್ಮ ಬ್ಯಾಟಿಂಗ್ ಕೌಶಲ್ಯವನ್ನು ಪ್ರದರ್ಶಿಸಿದ್ದರು . ಟಿ20 ಕ್ರಿಕೆಟ್ನಲ್ಲಿ 12,000 ರನ್ಗಳ ಮೈಲಿಗಲ್ಲನ್ನು ದಾಟಿ ಸಾಧನೆ ಮಾಡಿದ್ದಾರೆ.
ಐಪಿಎಲ್ನಲ್ಲಿ 7000 ರನ್ ಗಡಿ ದಾಟಿದ ಏಕೈಕ ಆಟಗಾರ ಎನಿಸಿಕೊಂಡಿದ್ದಾರೆ ವಿರಾಟ್ ಕೊಹ್ಲಿ. 2016ರ ಐಪಿಎಲ್ ಟೂರ್ನಿಯಲ್ಲಿ 973 ರನ್ ಬಾರಿಸಿದ್ದರು. ನಗದು ಸಮೃದ್ಧ ಲೀಗ್ನ ಋತುವಿನಲ್ಲಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆಯನ್ನೂ ಅವರು ಹೊಂದಿದ್ದಾರೆ.
ಭಾರತದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಕ್ರಿಕೆಟ್ನಿಂದ ವಿರಾಮ ಪಡೆದುಕೊಂಡಿದ್ದಾರೆ. ಜನವರಿಯಲ್ಲಿ ಅಫ್ಘಾನಿಸ್ತಾನ ವಿರುದ್ಧದ ಟಿ 20 ಐ ಸರಣಿಯಲ್ಲಿ ಅವರು ಕೊನೆಯ ಬಾರಿಗೆ ಕಾಣಿಸಿಕೊಂಡಿದ್ದರು. ಟೆಸ್ಟ್ ಸರಣಿಗಾಗಿ ಅವರನ್ನು ಇಂಗ್ಲೆಂಡ್ ವಿರುದ್ಧದ ತಂಡಕ್ಕೆ ಸೇರಿಸಿಕೊಳ್ಳಬೇಕಾಗಿತ್ತು. ಆದರೆ ಬ್ಯಾಟ್ಸ್ಮನ್ ಕೊನೆಯ ಕ್ಷಣದಲ್ಲಿ ಹಿಂದೆ ಸರಿದರು ಮತ್ತು ಇಡೀ ಸರಣಿಗೆ ಲಭ್ಯವಿರಲಿಲ್ಲ. ಅಫ್ಘಾನಿಸ್ತಾನ ಸರಣಿಯಲ್ಲಿ ರನ್ ಮೆಷಿನ್ ಎರಡು ವರ್ಷಗಳ ವಿರಾಮದ ನಂತರ ಟಿ 20 ಐ ಅಖಾಡಕ್ಕೆ ಇಳಿದಿದ್ದರು.
ಮುಂಬರುವ ಟಿ 20 ವಿಶ್ವಕಪ್ಗೆ ಅವರನ್ನು ಬದಿಗಿಡುವ ಬಗ್ಗೆ ಮಾತುಕತೆಗಳು ನಡೆಯುತ್ತಿರುವ ಕಾರಣ ಐಪಿಎಲ್ 2024ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರವಾಗಿ ಗಳಿಸುವ ರನ್ ಅವರಿಗೆ ನಿರ್ಣಾಯಕವಾಗಿದೆ. ವೆಸ್ಟ್ ಇಂಡೀಸ್ ಮತ್ತು ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾದ ಪಿಚ್ಗಳಿಗ ಅವರ ಆಟದ ಆಟವು ಹೊಂದಿಕೆಯಾಗದ ಕಾರಣ ಆಯ್ಕೆದಾರರು ಅವರನ್ನು ಈವೆಂಟ್ಗೆ ಸೇರಿಸಲು ಹೆಚ್ಚು ಆಸಕ್ತಿ ಹೊಂದಿಲ್ಲ ಎಂದು ವರದಿಗಳು ಸೂಚಿಸಿದ್ದವು.
ಆರ್ಸಿಬಿ ತಂಡಕ್ಕೆ ಸೋಲು
ಐಪಿಎಲ್ 17ನೇ ಆವೃತ್ತಿಯ ಉದ್ಘಾಟನಾ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸೋಲು ಕಂಡಿದೆ. ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಗೆಲುವು ಸಿಕ್ಕಿದ್ದು ಮತ್ತೊಂದು ಉತ್ತಮ ಅಭಿಯಾನ ಆರಂಭಿಸಿದೆ. ಇಲ್ಲಿನ ಚೆಪಾಕ್ ಸ್ಟೇಡಿಯಮ್ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಆರ್ಸಿಬಿ ತಂಡ ಮೊದಲು ಬ್ಯಾಟ್ ಮಾಡಿ ನಿಗದಿತ 20 ಓವರ್ಗಳಲ್ಲಿ 6 ವಿಕೆಟ್ಗೆ 173 ರನ್ ಬಾರಿಸಿತು. ಪ್ರತಿಯಾಗಿ ವಿಶ್ವಾಸದಿಂದ ಆಡಿದ ಚೆನ್ನೈ ತಂಡ 18.4 ಓವರ್ಗಳಲ್ಲಿ176 ರನ್ ಬಾರಿಸಿ 6 ವಿಕೆಟ್ ಗೆಲುವು ಸಾಧಿಸಿತು. ಇದರೊಂದಿಗೆ ಕಾರ್ತಿಕ್ ಹಾಗೂ ಅನುಜ್ ರಾವತ್ ಪ್ರಯತ್ನ ವಿಫಲಗೊಂಡಿತು.
ಚೆನ್ನೈ ಪರ ಋತುರಾಜ್ ಗಾಯಕ್ವಾಡ್ 15, ರನ್, ರಚಿನ್ ರವೀಂದ್ರ 37 ರನ್, ಅಜಿಂಕ್ಯ ರಹಾನೆ 27 ರನ್, ಡ್ಯಾರಿಲ್ ಮಿಚೆಲ್ 22 ರನ್, ಶಿವಂ ದುಬೆ ಹಾಗೂ ಜಡೇಜಾ ರನ್ ಬಾರಿಸಿ ತಂಡಕ್ಕೆ ಗೆಲುವು ತಂದುಕೊಟ್ಟರು. ಆರ್ಸಿಬಿ ಬೌಲರ್ಗಳು ಚೆನ್ನೈ ಸಂಘಟಿತ ಹೋರಾಟಕ್ಕೆ ಮಂಕಾದರು.
ಇನ್ನೇನು 100 ರನ್ ಒಳಗಡೆ ಗಂಟುಮೂಟೆ ಕಟ್ಟುವ ಸ್ಥಿತಿಯಲ್ಲಿದ್ದ ಆರ್ಸಿಬಿಗೆ ಆಸರೆಯಾದದ್ದು ದಿನೇಶ್ ಕಾರ್ತಿಕ್ ಮತ್ತು ಅನುಜ್ ರಾವತ್. ಉಭಯ ಆಟಗಾರರು ಸೇರಿಕೊಂಡು ಜವಾಬ್ದಾರಿಯುವ ಬ್ಯಾಟಿಂಗ್ ನಡೆಸಿ ತಂಡದ ವೈಯಕ್ತಿಕ ಹಾಗೂ ತಂಡದ ಮೊತ್ತವನ್ನು ಹಿಗ್ಗಿಸಿದರು. 6ನೇ ವಿಕೆಟ್ಗೆ ಈ ಜೋಡಿ ಅತ್ಯಮೂಲ್ಯ 95 ರನ್ ಬಾರಿಸಿತು. ಉಭಯ ಆಟಗಾರರು ನಿಂತು ಆಡಿದ ಪರಿಣಾಮ ತಂಡ 150 ಗಡಿ ದಾಟಿ ಸ್ಪರ್ಧಾತ್ಮಕ ಮೊತ್ತ ಕಲೆಹಾಕಿತು. ತುಷಾರ್ ದೇಶ್ಪಾಂಡೆ ಎಸೆತ 18ನೇ ಓವರ್ನಲ್ಲಿ 25 ರನ್ ಹರಿದು ಬಂತು. ಇದರಲ್ಲಿ ರಾವುತ್ 2 ಸಿಕ್ಸರ್ ಮತ್ತು 1 ಫೋರ್ ಬಾರಿಸಿದರೆ, ಕಾರ್ತಿಕ್ ಒಂದು ಸಿಕ್ಸರ್ ಸಿಡಿಸಿದರು. 4 ಬೌಂಡರಿ ಮತ್ತು 3 ಸೊಗಸಾದ ಸಿಕ್ಸರ್ ಬಾರಿಸಿದ ಅನುಜ್ ರಾವತ್ 48 ರನ್ ಗಳಿಸಿ ಅಂತಿಮ ಎಸೆತದಲ್ಲಿ ಧೋನಿ ಅವರಿಂದ ರನೌಟ್ ಆದರು. ದಿನೇಶ್ ಕಾರ್ತಿಕ್ 26 ಎಸೆತಗಳಿಂದ 38 ರನ್ ಬಾರಿಸಿ ಅಜೇಯರಾಗಿ ಉಳಿದರು. ಸ್ಪಿನ್ ಟ್ರ್ಯಾಕ್ ಆಗಿದ್ದರೂ ಕೂಡ ಲಂಕಾದ ಸ್ಪಿನ್ನರ್ ಮಹೇಶ್ ತೀಕ್ಷಣ ಮತ್ತು ರವೀಂದ್ರ ಜಾಡೇಜ ತಲಾ 4 ಓವರ್ ಎಸೆದರೂ ವಿಕೆಟ್ ಕೀಳುವಲ್ಲಿ ವಿಫಲರಾದರು.
ಅದ್ಧೂರಿ ಉದ್ಘಾಟನಾ ಸಮಾರಂಭ
ಚೆನ್ನೈನ “ಎಂ.ಎ. ಚಿದಂಬರಂ ಸ್ಟೇಡಿಯಂನಲ್ಲಿ ವರ್ಣರಂಜಿತ ಚಾಲನೆ(IPL 2024 Opening Ceremony Live) ದೊರಕಿತು. ಬಾಲಿವುಡ್ ತಾರೆಯರಾದ ಅಕ್ಷಯ್ ಕುಮಾರ್(Akshay Kumar), ಟೈಗರ್ ಶ್ರಾಫ್(Tiger Shroff) ನೃತ್ಯದ ಮೂಲಕ ರಂಚಿಸಿದರೆ, ಆಸ್ಕರ್ ವಿಜೇತ ಎ.ಆರ್ ರೆಹಮಾನ್(AR Rahman), ಖ್ಯಾತ ಗಾಯಕ ಸೋನು ನಿಗಮ್(Sonu Nigam) ದೇಶಭಕ್ತಿ ಗೀತೆಗಳನ್ನು ಹಾಡಿ, ಪ್ರೇಕ್ಷಕರನ್ನು ಹುಚ್ಚೆಬ್ಬಿಸಿ ಕುಣಿಯುಂತೆ ಮಾಡಿದರು. ಇದರ ಜತೆಗೆ ಸ್ವೀಡನ್‌ನ ಡಿಜೆ, ಆಕ್ಸ್‌ವೆಲ್ ಪಾಪ್ ಗಾಯನ ಕಣ್ಮನಸೆಳೆಯಿತು.