ಮುಂಬೈ: ಭಾರತ ಕ್ರಿಕೆಟ್ ತಂಡದ ನಾಯಕ, ಮುಂಬೈ ಇಂಡಿಯನ್ಸ್ (Mumbai Indians) ತಂಡದ ಸ್ಟಾರ್ ಆಟಗಾರ ರೋಹಿತ್ ಶರ್ಮಾ (Rohit Sharma) ಇರುವುದೇ ಹಾಗೆ. ಅವರು ಮೈದಾನದಲ್ಲಿದ್ದಾಗ ಸಹ ಆಟಗಾರರ ಜತೆ ತಮಾಷೆ ಮಾಡುತ್ತಾರೆ, ಕೆಲವೊಮ್ಮೆ ಬೈಯುತ್ತಾರೆ, ಅಂಪೈರ್‌ಗಳನ್ನೂ ಛೇಡಿಸುತ್ತಾರೆ. ಆ ಮೂಲಕ ಅವರು ಎಲ್ಲರನ್ನೂ ನಗಿಸುತ್ತಾರೆ. ಆದರೆ, ಸಿಎಸ್‌ಕೆ ವಿರುದ್ಧ ಭಾನುವಾರ (ಏಪ್ರಿಲ್ 14) ನಡೆದ ಪಂದ್ಯದಲ್ಲಿ (CSK vs MI) ರೋಹಿತ್ ಶರ್ಮಾ ಅವರೇ ನಗೆಪಾಟಲಿಗೀಡಾಗಿದ್ದಾರೆ. ರೋಹಿತ್ ಶರ್ಮಾ ಅವರು ಫೀಲ್ಡಿಂಗ್ (IPL 2024) ಮಾಡುವಾಗ ಪ್ಯಾಂಟ್ ಕಳಚಿದ್ದೇ ಇದಕ್ಕೆ ಕಾರಣವಾಗಿದೆ. ಈ ವಿಡಿಯೊ ಕೂಡ ವೈರಲ್ (Viral Video) ಆಗಿದೆ.
ಟಾಸ್ ಸೋತ ಮುಂಬೈ ಇಂಡಿಯನ್ಸ್ ತಂಡವು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಚೆನ್ನೈ ಸೂಪರ್ ಕಿಂಗ್ಸ್ ಉತ್ತಮವಾಗಿ ಬ್ಯಾಟಿಂಗ್ ಮಾಡಿತು. ಅದರಲ್ಲೂ, ಋತುರಾಜ್ ಗಾಯಕ್ವಾಡ್ ಮಿಂಚಿದರು. ಋತುರಾಜ್ ಗಾಯಕ್ವಾಡ್ ಹೊಡೆದ ಚೆಂಡು ಹಿಡಿಯಲು ರೋಹಿತ್ ಶರ್ಮಾ ಮುಂದಾದಾಗ ಅವರ ಪ್ಯಾಂಟ್ ಕಳಚಿತು. ಡೈವ್ ಹೊಡೆದು ಕ್ಯಾಚ್ ಹಿಡಿಯಲು ಯತ್ನಿಸಿದರೂ ಅದರಲ್ಲಿ ರೋಹಿತ್ ಶರ್ಮಾ ಸಫಲರಾಗಲಿಲ್ಲ. ಇದೇ ವೇಳೆ ಪ್ಯಾಂಟ್ ಕೂಡ ಕಳಚಿದ ಕಾರಣ ಆಟಗಾರರು, ಪ್ರೇಕ್ಷಕರು ನಕ್ಕರು. ರೋಹಿತ್ ಶರ್ಮಾ ಕೂಡ ನಕ್ಕರು.
Rohit bhai ka pant khool gayaa 😂 🤣🤣🤣🤣🤣🤣#CSKvsMI #RohitSharma #IPL24 pic.twitter.com/Um3vBVDTvc
— Tushar (@PLAYGAM73923190) April 14, 2024
ಚೆನ್ನೈ ಸೂಪರ್ ಕಿಂಗ್ಸ್‌ಗೆ ಗೆಲುವು
ಮತೀಶ್ ಪತಿರಾಣಾ (4 ವಿಕೆಟ್, 28 ರನ್) ಅವರ ಮಾರಕ ಬೌಲಿಂಗ್ ಹಾಗೂ ಋತುರಾಜ್ ಗಾಯಕ್ವಾಡ್ (69 ರನ್, 40 ಎಸೆತ, 5 ಫೋರ್, 5 ಸಿಕ್ಸರ್) , ಶಿವಂ ದುಬೆ (66 ರನ್, 38 ರನ್,10 ಫೋರ್, 2 ಸಿಕ್ಸರ್ ) ಅವರ ಅರ್ಧ ಶತಕಗಳ ನೆರವಿನಿಂದ ಮಿಂಚಿದ ಚೆನ್ನೈ ಸೂಪರ್ ಕಿಂಗ್ಸ್ ತಂಡ 29ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ 20 ರನ್ಗಳ ಅಂತರದಿಂದ ಗೆಲುವು ಸಾಧಿಸಿತು. ಅಂದ ಹಾಗೆ ಚೆನ್ನೈ ಪರ ಕೊನೇ ನಾಲ್ಕು ಎಸೆತಗಳನ್ನು ಎದುರಿಸಿದ್ದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ 20 ರನ್ಗಳನ್ನು ಬಾರಿಸಿದ್ದರು. ಅದರಲ್ಲಿ 3 ಸಿಕ್ಸರ್ಗಳಿದ್ದವು. ಅದೇ ರನ್ಗಳ ಅಂತರದಿಂದ ಚೆನ್ನೈ ಗೆದ್ದು ಬೀಗಿದ್ದು ವಿಶೇಷ. ಆದರೆ, ಮುಂಬೈ ಪರ ಏಕಾಂಗಿ ಹೋರಾಟ ನಡೆಸಿ ಅಮೋಘ 105 ರನ್ ಬಾರಿಸಿದ ರೋಹಿತ್ ಶರ್ಮಾ ಅವರ ಶತಕದ ಹೋರಾಟ ವ್ಯರ್ಥಗೊಂಡಿತು.
ಈ ಗೆಲುವು ಚೆನ್ನೈ ತಂಡಕ್ಕೆ ಹಾಲಿ ಆವೃತ್ತಿಯಲ್ಲಿ ನಾಲ್ಕನೆಯದ್ದು. ಅದೇ ರೀತಿ ಮುಂಬೈ ಇಂಡಿಯನ್ಸ್ ತಂಡಕ್ಕೆ ನಾಲ್ಕನೇ ಸೋಲು. ಹಾರ್ದಿಕ್ ಪಾಂಡ್ಯ ಬಳಗ ತವರಿನಲ್ಲಿ ನಡೆದ ಈ ಹಿಂದಿನ ಎರಡು ಪಂದ್ಯಗಳನ್ನು ಗೆದಿದ್ದರೆ ಮೂರನೇ ಪಂದ್ಯದಲ್ಲಿ ಸೋಲು ಕಂಡಿತು. ಅಲ್ಲದೆ ಪ್ಲೇ ಆಫ್ ಹಾದಿಯನ್ನು ಕಠಿಣಗೊಳಿಸಿತು. ಈ ಗೆಲುವಿನೊಂದಿಗೆ ಮುಂಬೈ ಇಂಡಿಯನ್ಸ್ ತಂಡದ ಚೆನ್ನೈ ಸೂಪರ್ ಕಿಂಗ್ಸ್ ಮೇಲಿನ ಗೆಲುವಿನ ಪಾರಮ್ಯದ ಅಂತರ ಕಡಿಮೆಯಾಯಿತು ಒಟ್ಟು 36 ಪಂದ್ಯಗಳಲ್ಲಿ ಮುಂಬೈ 20 ರಲ್ಲಿ ಗೆದ್ದಿದ್ದರೆ, ಚೆನ್ನೈ 17 ಪಂದ್ಯಗಳಲ್ಲಿ ಗೆದ್ದಂತಾಯಿತು.
ಇದನ್ನೂ ಓದಿ: Rohit Sharma : ನಾ ಡ್ರೈವರ… ಟೀಮ್ ಬಸ್ ಓಡಿಸಿದ ರೋಹಿತ್ ಶರ್ಮಾ