Site icon Vistara News

Ishan Kishan: ಟೀಮ್​ ಇಂಡಿಯಾದಲ್ಲಿ ಇಶಾನ್ ಕಿಶನ್​ಗೆ ಬಾಗಿಲು ಬಂದ್​?

Ishan Kishan

Ishan Kishan: Ishan Kishan Snubbed Again, Report Reveals Only Way India Star Can Return

ರಣಜಿ ಆಡಲು ಅಸಡ್ಡೆ ತೋರಿ ಬಿಸಿಸಿಐ ಕೆಂಗಣ್ಣಿಗೆ ಗುರಿಯಾಗಿದ್ದ ಇಶಾನ್​ ಕಿಶನ್​(Ishan Kishan) ಅವರು ಶ್ರೀಲಂಕಾ ವಿರುದ್ಧದ ಸರಣಿಯಲ್ಲಿ ಅವಕಾಶ ಸಿಗುವ ನಿರೀಕ್ಷೆಯಲ್ಲಿದ್ದರು. ಆದರೆ, ಅವರಿಗೆ ಮತ್ತೆ ನಿರಾಸೆಯಾಗಿದೆ. ಅವರನ್ನು ಆಯ್ಕೆಗೆ ಪರಿಗಣಿಸಿಲ್ಲ. ಇದೀಗ ಇಶಾನ್​ಗೆ ಸಂಪೂರ್ಣವಾಗಿ ಟೀಮ್​ ಇಂಡಿಯಾದ(Team India) ಬಾಗಿಲು ಬಂದ್​ ಆದಂತಿದೆ.

ಕಳೆದ ವರ್ಷ ನವೆಂಬರ್​ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಐದು ಪಂದ್ಯಗಳ ಸರಣಿಯ ಮೂರನೇ ಟಿ20 ಸಂದರ್ಭದಲ್ಲಿ ಕಿಶನ್ ಕೊನೆಯದಾಗಿ ಭಾರತಕ್ಕಾಗಿ ಆಡಿದ್ದರು. ನಂತರದ ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಆಯ್ಕೆಯಾಗಿದ್ದರೂ ಕೂಡ ಅಂತಿಮ ಹಂತದಲ್ಲಿ ವೈಯಕ್ತಿಕ ಕಾರಣಗಳಿಂದಾಗಿ ಟೆಸ್ಟ್ ಸರಣಿಯಿಂದ ಹೊರಗುಳಿದರು. ಸ್ವಲ್ಪ ವಿರಾಮವನ್ನು ತೆಗೆದುಕೊಂಡ ಇಶಾನ್​ಗೆ ಅಂದಿನ ಕೋಚ್​ ದ್ರಾವಿಡ್​ ಮತ್ತು ಆಯ್ಕೆ ಸಮಿತಿ ರಣಜಿ ಟ್ರೋಫಿ ಪಂದ್ಯಗಳಲ್ಲಿ ಆಡುವಂತೆ ಸೂಚನೆ ನೀಡಿತ್ತು. ಆದರೆ ಇದನ್ನು ಇಶಾನ್​ ಕಡೆಗಣಿಸಿದ್ದರು. ಈ ಕಾರಣದಿಂದ ಬಿಸಿಸಿಐ ಅವರನ್ನು ಕೇಂದ್ರೀಯ ಗುತ್ತಿಗೆಯಿಂದಲೂ ಕೈಬಿಟ್ಟಿತ್ತು.

ತಂಡಕ್ಕೆ ಆಯ್ಕೆ ಮಾಡದಿರುವುದ ಕುರಿತು ಕೆಲ ದಿನಗಳ ಹಿಂದೆ ಪ್ರತಿಕ್ರಿಯೆ ನೀಡಿದ್ದ ಇಶಾನ್​, “ನಾನು ಬ್ರೇಕ್ ಪಡೆದಿದ್ದೆ, ನನ್ನ ಪ್ರಕಾರ ಇದು ಸಾಮಾನ್ಯ. ತಂಡಕ್ಕೆ ಕಮ್ ಬ್ಯಾಕ್ ಮಾಡಬೇಕಾದರೆ ದೇಶೀಯ ಕ್ರಿಕೆಟ್​ನಲ್ಲಿ ಪ್ರದರ್ಶನ ನೀಡಬೇಕು ಎಂಬ ನಿಯಮವಿದೆ ಎನ್ನುವುದು ನನಗೆ ತಿಳಿದಿದೆ. ಆದರೆ, ಅಂದು ನಾನು ಆಡುವ ಮನಸ್ಥಿತಿಯಲ್ಲಿ ಇರಲಿಲ್ಲ. ಹಿಗಾಗಿಯೇ ಅಂತಾರಾಷ್ಟ್ರೀಯ ಕ್ರಿಕೆಟ್ ನಿಂದ ಬ್ರೇಕ್ ಪಡೆದಿದ್ದೆ. ಉತ್ತಮ ಫಾರ್ಮ್​ನಲ್ಲಿರುವಾಗ ಅಂತಾರಾಷ್ಟ್ರೀಯ ಕ್ರಿಕೆಟ್​ ಬಿಟ್ಟು ದೇಶೀಯ ಕ್ರಿಕೆಟ್​ನಲ್ಲಿ ಆಡಬೇಕು ಎನ್ನುವುದರಲ್ಲಿ ಯಾವುದೇ ಅರ್ಥವಿಲ್ಲ” ಎಂದು ಇಂಡಿಯನ್ ಎಕ್ಸ್ ಪ್ರೆಸ್​ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದರು.

ಇದನ್ನೂ ಓದಿ Ishan Kishan : ನನ್ನನ್ನು ಹೊರಗಿಟ್ಟಿರುವ ತೀರ್ಮಾನ ಮೂರ್ಖತನದ್ದು; ಜಯ್​ ಶಾಗೆ ಟಾಂಗ್​ ಕೊಟ್ಟ ಇಶಾನ್​ ಕಿಶನ್​

ಇಶಾನ್​ ಅವರಂತೆಯೇ ದೇಶೀಯ ಕ್ರಿಕೆಟ್​ ಆಡದೆ ಬಿಸಿಸಿಐ ಕೇಂದ್ರೀಯ ಗುತ್ತಿಗೆಯಿಂದ ಹೊರಬಿದ್ದ ಶ್ರೇಯಸ್​ ಅಯ್ಯರ್​ ಮತ್ತೆ ತಂಡಕ್ಕೆ ಸೇರ್ಪಡೆಯಾಗಿದ್ದಾರೆ. ಆದರೆ ಇಶಾನ್​ಗೆ ಅವಕಾಶ ಲಭಿಸಿಲ್ಲ. ಭಾರತ ಪರ ದ್ವಿಶತಕ ಬಾರಿಸಿರುವ ಇಶಾನ್​ಗೆ ಮುಂದಿನ ಸರಣಿಯಲ್ಲಾದರೂ ಅವಕಾಶ ನೀಡಬೇಕು ಎನ್ನುವುದು ಕ್ರಿಕೆಟ್​ ಅಭಿಮಾನಿಗಳ ಒತ್ತಾಯವಾಗಿದೆ. ಒಂದೊಮ್ಮೆ ಅವರಿಗೆ ಮುಂದಿನ ಕೆಲವು ಸರಣಿಯಲ್ಲಿಯೂ ಅವಕಾಶ ನೀಡದೇ ಹೋದರೆ ಅವರು ಮಾನಸಿಕವಾಗಿ ಕುಗ್ಗಿ ತಮ್ಮ ಕ್ರಿಕೆಟ್​ ಭವಿಷ್ಯವನ್ನೇ ಕಳೆದುಕೊಳ್ಳಬಹುದು ಎಂದು ಕೆಲ ಕ್ರಿಕೆಟ್​ ಪಂಡಿತರು ಅಭಿಪ್ರಾಯಪಟ್ಟಿದ್ದಾರೆ.

ಲಂಕಾ ಸರಣಿಗೆ ಭಾರತ ತಂಡ

ಟಿ20 ತಂಡ: ಸೂರ್ಯಕುಮಾರ್ ಯಾದವ್ (ನಾಯಕ), ಶುಭಮನ್ ಗಿಲ್ (ಉಪ ನಾಯಕ), ಯಶಸ್ವಿ ಜೈಸ್ವಾಲ್, ರಿಂಕು ಸಿಂಗ್, ರಿಯಾನ್ ಪರಾಗ್, ರಿಷಭ್ ಪಂತ್ (ವಿ.ಕೀ ), ಸಂಜು ಸ್ಯಾಮ್ಸನ್ (ವಿ.ಕೀ), ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ರವಿ ಬಿಷ್ಣೋಯಿ , ಅರ್ಶದೀಪ್​ ಸಿಂಗ್, ಖಲೀಲ್ ಅಹ್ಮದ್, ಮೊಹಮ್ಮದ್​ ಸಿರಾಜ್.

ಇದನ್ನೂ ಓದಿ Team India Srilanka Tour : ಶ್ರೀಲಂಕಾ ಪ್ರವಾಸಕ್ಕೆ ಭಾರತ ತಂಡ ಪ್ರಕಟ, ಸೂರ್ಯಕುಮಾರ್​ಗೆ ಟಿ20 ನಾಯಕತ್ವ

ಏಕದಿನ ತಂಡ: ರೋಹಿತ್ ಶರ್ಮ (ನಾಯಕ), ಶುಭಮನ್ ಗಿಲ್ (ಉಪ ನಾಯಕ), ವಿರಾಟ್ ಕೊಹ್ಲಿ, ಕೆ.ಎಲ್. ರಾಹುಲ್ (ವಿ.ಕೀ), ರಿಷಬ್ ಪಂತ್ (ವಿ.ಕೀ), ಶ್ರೇಯಸ್ ಅಯ್ಯರ್, ಶಿವಂ ದುಬೆ, ಕುಲದೀಪ್ ಯಾದವ್, ಮೊಹಮ್ಮದ್ ಸಿರಾಜ್, ವಾಷಿಂಗ್ಟನ್ ಸುಂದರ್, ಅರ್ಷದೀಪ್ ಸಿಂಗ್, ರಿಯಾನ್ ಪರಾಗ್, ಅಕ್ಷರ್ ಪಟೇಲ್, ಖಲೀಲ್ ಅಹ್ಮದ್, ಹರ್ಷಿತ್ ರಾಣಾ.

Exit mobile version