Site icon Vistara News

KKR vs RCB: ತವರಿನ ಸೋಲಿಗೆ ಸೇಡು ತೀರಿಸೀತೇ ಆರ್​ಸಿಬಿ?

KKR vs RCB

ಕೋಲ್ಕತ್ತಾ: ಭಾನುವಾರದ ಐಪಿಎಲ್(IPL 2024)​ ಪಂದ್ಯದಲ್ಲಿ ಕೆಕೆಆರ್​(Kolkata Knight Riders) ಮತ್ತು ಆರ್​ಸಿಬಿ(RCB vs KKR) ತಂಡಗಳು ಮುಖಾಮುಖಿಯಾಗಲಿವೆ. ಈ ಪಂದ್ಯ ಆರ್​ಸಿಬಿಗೆ ಸೇಡಿನ ಪಂದ್ಯವಾಗಿದೆ. ಏಕೆಂದರೆ ಚಿನ್ನಸ್ವಾಮಿಯಲ್ಲಿ ನಡೆದಿದ್ದ ಪಂದ್ಯದಲ್ಲಿ ಕೆಕೆಆರ್​ ಗೆಲುವು ಸಾಧಿಸಿತ್ತು. ಇದೀಗ ಕೆಕೆಆರ್​ಗೆ ತನ್ನ ತವರಿನಲ್ಲೇ ಸೋಲುಣಿಸಿ ಸೇಡು ತೀರಿಸಲು ಆರ್​ಸಿಬಿ(Royal Challengers Bengaluru) ಪಣ ತೊಟ್ಟಿದೆ.

ತವರಿನಲ್ಲೇ ಸತತ ಸೋಲಿನ ಅವಮಾನ ಕಂಡಿರುವ ಆರ್​ಸಿಬಿ ಹೊರಗಡೆ ಆಡಿದ ಪಂದ್ಯದಲ್ಲಿ ಗೆಲ್ಲಬಹುದೇ ಎನ್ನುವ ಪ್ರಶ್ನೆ ಮೂಡುವುದು ಕೂಡ ಸಹಜ. ತಂಡದದಲ್ಲಿ ಸ್ಟಾರ್​ ಆಟಗಾರರಿದ್ದರೂ ಕೂಡ ಯಾರು ನಿರೀಕ್ಷಿತ ಪ್ರದರ್ಶನ ತೋರುತ್ತಿಲ್ಲ. ವಿರಾಟ್​ ಕೊಹ್ಲಿ, ದಿನೇಶ್​ ಕಾರ್ತಿಕ್​ ಮಾತ್ರ ತಂಡದ ನಂಬಿಕಸ್ಥ ಆಟಗಾರರಾಗಿದ್ದಾರೆ. ಆರ್​ಸಿಬಿ ಬ್ಯಾಟಿಂಗ್‌ನಲ್ಲಿ ಯಶಸ್ವಿಯಾದರೆ ಬೌಲಿಂಗ್‌ನಲ್ಲಿ ಎಡವುತ್ತಿದೆ. ಬೌಲಿಂಗ್‌ನಲ್ಲಿ ಯಶಸ್ವಿಯಾದರೆ, ಬ್ಯಾಟಿಂಗ್‌ನಲ್ಲಿ ಪಲ್ಟಿ ಹೊಡೆಯುತ್ತಿದೆ. ಬೌಲಿಂಗ್‌ ಪಡೆಯಂತೂ ಸಂಪೂರ್ಣ ಮೊನಚು ಕಳೆದುಕೊಂಡಿದೆ. ಇದು, ಸಹಜವಾಗಿ ಆರ್‌ಸಿಬಿಯನ್ನು ಸೋಲಿನ ಸುಳಿಗೆ ತಳ್ಳಿದೆ. ಒಟ್ಟಿನಲ್ಲಿ ಸಂಘಟನಾತ್ಮಕ ಹೋರಾಟವೇ ಬರುತ್ತಿಲ್ಲ. 

ನರೈನ್​ ಭಯ


ಆರ್​ಸಿಬಿ ತಂಡದ ದೊಡ್ಡ ಶತ್ರುವೆಂದರೆ ಸುನೀಲ್​ ನರೈನ್​ ಅವರ ಪ್ರಚಂಡ ಬ್ಯಾಟಿಂಗ್​. ನರೈನ್​ ಯಾವುದೇ ಪಂದ್ಯದಲ್ಲಿ ಆಡದಿದ್ದರೂ ಕೂಡ ಆರ್​ಸಿಬಿ ವಿರುದ್ಧ ಮಾತ್ರ ಸಿಡಿದು ನಿಲ್ಲುತ್ತಾರೆ. ಆರಂಭಿಕಾಗಿ ಕಣಕ್ಕಿಳಿದು ಕಡಿಮೆ ಎಸೆತಗಳಿಂದ ದೊಡ್ಡ ಮೊತ್ತ ಪೇರಿಸಿ ಆರ್​ಸಿಬಿ ಮೇಲೆ ಒತ್ತಡ ಹೇರುತ್ತಾರೆ. ಈ ಬಾರಿಯಂತು ಅವರು ಭಯಾನಕ ಬ್ಯಾಟಿಂಗ್​ ಲಯದಲ್ಲಿದ್ದಾರೆ. ಕಳೆದ ರಾಜಸ್ಥಾನ್​ ವಿರುದ್ಧ ಶತಕ ಕೂಡ ಬಾರಿಸಿದ್ದರು. ಅದು ಕೂಡ ಈಡನ್​ ಗಾರ್ಡನ್ಸ್​ನಲ್ಲೇ. ಹೀಗಾಗಿ ಈ ಪಂದ್ಯದಲ್ಲೂ ತಂಡ ಇವರ ಮೇಲೆ ಹೆಚ್ಚಿನ ನಿರೀಕ್ಷೆ ಇಟ್ಟಿದೆ.

ಇದನ್ನೂ ಓದಿ IPL 2024 : ಬಿಸಿಸಿಐ ನಿಯಮ ಉಲ್ಲಂಘನೆ; ಋತುರಾಜ್​, ರಾಹುಲ್​ಗೆ ದಂಡ

18 ವರ್ಷದ ಆಂಗ್ಕ್ರಿಶ್ ರಘುವಂಶಿ ಕೂಡ ಬಿರುಸಿನ ಬ್ಯಾಟಿಂಗ್​ ಮೂಲಕ ಗಮನಸೆಳೆಯುತ್ತಿದ್ದಾರೆ. ಯಾವುದೇ ಭಯವಿಲ್ಲದೆ ಬ್ಯಾಟಿಂಗ್​ ನಡೆಸುವ ಚಾಕಚಕ್ಯತೆ ಇವರಲ್ಲಿದೆ. ಭವಿಷ್ಯದ ಆಟಗಾರನೆಂದೇ ಗುರುತಿಸಿಕೊಂಡಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ರಸೆಲ್, ರಿಂಕು ಸಿಂಗ್​ ತಂಡಕ್ಕೆ ಆಸರೆಯಾಗಬಲ್ಲರು.

ಪಿಚ್​ ರಿಪೋರ್ಟ್​

ಈಡನ್‌ ಗಾರ್ಡನ್ಸ್‌ನ(Eden Gardens) ಪಿಚ್​ ಸೀಮರ್‌ಗಳಿಗೆ ನೆರವು ನೀಡುವ ಸಾಧ್ಯತೆ ಇದೆ. ಇಲ್ಲಿ ಚೇಸಿಂಗ್​ ನಡೆಸುವ ತಂಡಕ್ಕೆ ಹೆಚ್ಚಿನ ಅವಕಾಶ ಏಕೆಂದರೆ ರಾತ್ರಿಯ ವೇಳೆ ಇಲ್ಲಿ ಇಬ್ಬಿನಿ ಸಮಸ್ಯೆ ಕಾಡಲಿದೆ. ಇದು ಬೌಲರ್​ಗಳಿಗೆ ಕಷ್ಟಕರವಾಗಲಿದೆ. ಕೈಯಲ್ಲಿ ಸರಿಯಾಗಿ ಚೆಂಡು ನಿಲ್ಲದೆ ನಿರ್ದಿಷ್ಟ ಗುರಿಗೆ ಬೌಲಿಂಗ್​ ಮಾಡಲು ಸಾಧ್ಯವಾಗುವುದಿಲ್ಲ. ಟಾಸ್​ ಗೆದ್ದ ತಂಡ ಮೊದಲು ಬೌಲಿಂಗ್​ ಆಯ್ಕೆ ಮಾಡಿಕೊಂಡರೆ ಉತ್ತಮ. ವಿರಾಟ್​ ಕೊಹ್ಲಿ 2019ರಲ್ಲಿ ಕೆಕೆಆರ್​ ವಿರುದ್ಧ ಇದೇ ಮೈದಾನದಲ್ಲಿ ಶತಕ ಕೂಡ ಬಾರಿಸಿದ್ದರು. ಈ ಬಾರಿ ಏನು ಮಾಡಲಿದ್ದಾರೆ ಎಂದು ಕಾದು ನೋಡಬೇಕಿದೆ.

2017ರಲ್ಲಿ ಕೆಕೆಆರ್​ ವಿರುದ್ಧ ಇಲ್ಲಿ ನಡೆದ ಪಂದ್ಯದಲ್ಲಿ ಆರ್​ಸಿಬಿ ಕೇವಲ 49 ರನ್​ಗಳಿಗೆ ಆಲೌಟ್​ ಆಗಿತ್ತು. ಈ ವರೆಗೆ ಆರ್​ಸಿಬಿ ಮತ್ತು ಕೆಕೆಆರ್​ ಐಪಿಎಲ್​ನಲ್ಲಿ 33 ಬಾರಿ ಮುಖಾಮುಖಿಯಾಗಿವೆ. ಇದರಲ್ಲಿ ಆರ್​ಸಿಬಿ 14 ಗೆಲುವು ಕೆಕೆಆರ್​ 19 ಪಂದ್ಯಗಳಲ್ಲಿ ಮೇಲುಗೈ ಸಾಧಿಸಿದೆ. ಬಲಾಬಲದ ಲೆಕ್ಕಾಚಾರದಲ್ಲಿ ಕೆಕೆಆರ್​ ಮುಂದಿದೆ. 

Exit mobile version