Site icon Vistara News

KL Rahul: ಆರ್‌ಸಿಬಿ ಸೇರದಂತೆ ಕೆ.ಎಲ್​ ರಾಹುಲ್‌ಗೆ 25 ಕೋಟಿ ಆಫರ್ ಮಾಡಿದ ಫ್ರಾಂಚೈಸಿ!

KL Rahul

KL Rahul:RCB have offered 25 crore to KL Rahul to stay away from RCB

ಬೆಂಗಳೂರು: ಟೀಮ್​ ಇಂಡಿಯಾದ ಬ್ಯಾಟರ್​, ಕನ್ನಡಿಗ ಕೆ.ಎಲ್​ ರಾಹುಲ್(KL Rahul)​ ಮತ್ತೆ ತವರು ತಂಡವಾದ ಆರ್​ಸಿಬಿ(RCB) ತಂಡಕ್ಕೆ ಸೇರುವ ಪ್ರಯತ್ನ ನಡೆಸುತ್ತಿದ್ದರೆ, ಅತ್ತ ಫ್ರಾಂಚೈಸಿಯೇ ಆರ್‌ಸಿಬಿಯಿಂದ ದೂರ ಉಳಿಯಲು ರಾಹುಲ್‌ಗೆ 25 ಕೋಟಿ ಆಫರ್ ಮಾಡಿದೆ ಎಂದು ವರದಿಯಾಗಿದೆ.

ಹೌದು, ಅಜ್ನ್ಯೂಸ್ ಎಂಬ ಸುದ್ದಿ ಸಂಸ್ಥೆ ವರದಿ ಮಾಡಿರುವ ಪ್ರಕಾರ ರಾಹುಲ್​ ಈ ಬಾರಿಯ ಮೆಗಾ ಹರಾಜಿನಲ್ಲಿ(IPL 2025) ಆರ್‌ಸಿಬಿಯಿಂದ ದೂರ ಉಳಿಯಲು ಸ್ವತಃ ಆರ್​ಸಿಬಿ ಫ್ರಾಂಚೈಸಿಯೇ 25 ಕೋಟಿ ಆಫರ್ ಮಾಡಿದೆ ಎಂದು ತಿಳಿಸಿದೆ. ಆದರೆ, ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ. ಮುಫದ್ದಲ್ ವೋಹ್ರಾ ಎನ್ನುವ ನೆಟ್ಟಿಗ ಈ ವಿಚಾರವನ್ನು ತನ್ನ ಟ್ವಿಟರ್​ ಎಕ್ಸ್​ ಖಾತೆಯಲ್ಲಿ ಹಂಚಿಕೊಂಡಿದ್ದಾನೆ. ಸದ್ಯ ಈ ಸುದ್ದಿ ಇದೀಗ ಭಾರೀ ಚರ್ಚೆಗೆ ಗ್ರಾಸವಾಗಿದೆ. ಅಷ್ಟಕ್ಕೂ ಆರ್​ಸಿಬಿ ಸೇರದಂತೆ ರಾಹುಲ್​ಗೆ ಫ್ರಾಂಚೈಸಿಯೇ ಇಷ್ಟು ದೊಡ್ಡ ಮೊತ್ತವನ್ನು ನೀಡಲು ಮುಂದಾಗಿರುವುದೆ ಏಕೆ ಎನ್ನುವ ಅನುಮಾನ ಹುಟ್ಟಿಕೊಂಡಿದೆ.

ಇದೇ ವರ್ಷ ನಡೆದಿದ್ದ ಐಪಿಎಲ್​ ವೇಳೆ ಆರ್.ಅಶ್ವಿನ್ ಜತೆಗಿನ ಕುಟ್ಟಿ ಸ್ಟೋರೀಸ್ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಕೆಎಲ್ ರಾಹುಲ್, 2013ರಲ್ಲಿ ವಿರಾಟ್ ಕೊಹ್ಲಿ ಅವರು ತನ್ನನ್ನು ಆರ್​ಸಿಬಿ ತಂಡಕ್ಕೆ ಸೇರಿಸಿಕೊಂಡರು. ನಾನು ಬೆಂಗಳೂರು ತಂಡದಲ್ಲಿ ಆಡಲು ಇಷ್ಟಪಡುತ್ತೇನೆ. ನಾನು ಅಲ್ಲಿದಂದಲೇ ಈ ಪಯಣ ಆರಂಭಿಸಿದೆ. ಅಲ್ಲಿಯೇ ಇದನ್ನು ಅಂತ್ಯಗೊಳಿಸಲು ಬಯುಸುತ್ತೇನೆ. ಅದು ತನ್ನ ತಲೆಯಲ್ಲಿದೆ ಎಂದು ಹೇಳಿದ್ದರು. ಹೀಗಾಗಿ ರಾಹುಲ್​ 18ನೇ ಆವೃತ್ತಿಯಲ್ಲಿ ಆರ್​ಸಿಬಿ ಸೇರಲಿದ್ದಾರೆ ಎನ್ನಲಾಗಿತ್ತು. ಅಭಿಮಾನಿಗಳು ಕೂಡ ಆರ್​ಸಿಬಿ ಜೆರ್ಸಿಯಲ್ಲಿ ರಾಹುಲ್​ ಅವರ ಫೋಟೊ ಎಡಿಟ್​ ಮಾಡಿ ಆರ್​ಸಿಬಿಗೆ ಸ್ವಾಗತ ಎನ್ನುವ ಪೋಸ್ಟರ್​ ಕೂಡ ಹಂಚಿಕೊಂಡಿದ್ದರು. ಆದರೆ ಈಗ ಫ್ರಾಂಚೈಸಿಯೇ ಅವರನ್ನು ತಂಡ ಸೇರದಂತೆ ಹಣ ನೀಡಲು ಮುಂದಾಗಿದೆ ಎನ್ನಲಾಗಿದೆ.

ಇದನ್ನೂ ಓದಿ IPL 2025: ಫ್ರಾಂಚೈಸಿಗಳ ಒತ್ತಾಯಕ್ಕೆ ಮಣಿದು ಇಷ್ಟು ಆಟಗಾರರ ರಿಟೇನ್​ಗೆ ಅವಕಾಶ ನೀಡಲಿದೆ ಬಿಸಿಸಿಐ

ಕಳೆದ ಆವೃತ್ತಿಯಲ್ಲಿ ಲಕ್ನೋ ತಂಡದ ಮಾಲಿಕ ಗೋಯೆಂಕಾ ತೋರಿದ್ದ ವರ್ತನೆನಿಂದ ರಾಹುಲ್​ ಬೇಸರಗೊಂಡಿದ್ದರು. ಈ ವೇಳೆಯೇ ರಾಹುಲ್ ಮುಂದಿನ ಆವೃತ್ತಿಯಲ್ಲಿ ಲಕ್ನೋ ತೊರೆಯುವುದು ಬಹುತೇಕ ಖಚಿತ ಎನ್ನಲಾಗಿತ್ತು. ಒಟ್ಟಾರೆ ಟೀಮ್​ ಇಂಡಿಯಾ ಪರ ಕೂಡ ಫಾರ್ಮ್​ ಕಳೆದುಕೊಂಡಿರುವ ರಾಹುಲ್​ ಈ ಬಾರಿ ಯಾವ ತಂಡದ ಪಾಲಾಗಲಿದ್ದಾರೆ ಎನ್ನುವುದನ್ನು ಕಾದು ನೋಡಬೇಕಿದೆ.

ಇನ್ನೊಂದು ಮೂಲಗಳ ಪ್ರಕಾರ ರಿಂಕು ಸಿಂಗ್​ ಅಥವಾ, ಹಾರ್ದಿಕ್​ ಪಾಂಡ್ಯ ಅವರನ್ನು ಖರೀದಿಸಲು ಆರ್​ಸಿಬಿ ಯೋಚಿಸಿದೆ ಎನ್ನಲಾಗಿದೆ. ಮಧ್ಯಮ ಕ್ರಮಾಂಕದಲ್ಲಿ ಮ್ಯಾಚ್​ ಫಿನಿಶಿಂಗ್​ ಮಾಡುವ ಆಟಗಾರ ಇಲ್ಲದ್ದು ತಂಡಕ್ಕೆ ಇದುವರೆಗೂ ಹಿನ್ನಡೆಯಾಗಿತ್ತು. ಇದೇ ಕಾರಣಕ್ಕೆ ಪಾಂಡ್ಯ ಅಥವಾ ರಿಂಕು ಅವರನ್ನು ಖರೀದಿಸಲು ಮುಂದಾಗಿದೆ ಎನ್ನಲಾಗಿದೆ.

Exit mobile version