Site icon Vistara News

Kuldeep Yadav: ಬಾಗೇಶ್ವರ್ ಬಾಬಾ ಆಶೀರ್ವಾದ ಪಡೆದ ಕುಲ್​ದೀಪ್​ ಯಾದವ್; ವಿಡಿಯೊ ವೈರಲ್​

Kuldeep Yadav

Kuldeep Yadav: Kuldeep Yadav visits Bageshwar Dham on eve of Guru Poornima Mahotsav

ಮಧ್ಯಪ್ರದೇಶ: ಟೀಮ್​ ಇಂಡಿಯಾದ ಸ್ಟಾರ್​ ಸ್ಪಿನ್ನರ್​ ಕುಲ್​ದೀಪ್​ ಯಾದವ್​ ಅವರು ಮಧ್ಯಪ್ರದೇಶದ ಛತ್ತರ್‌ಪುರ್(Chhatarpur) ಜಿಲ್ಲೆಯ ಬಾಗೇಶ್ವರ್ ಧಾಮ್ (Bageswhar Dham) ದೇಗುಲಕ್ಕೆ ಭೇಟಿ ನೀಡಿ ಪೀಠಾಧೀಶ್ವರ ಬಾಗೇಶ್ವರ್ ಬಾಬಾ(Baba Bageshwar) ಅವರ ಆಶೀರ್ವಾದ ಪಡೆದುಕೊಂಡಿದ್ದಾರೆ. ಈ ವಿಡಿಯೊ ವೈರಲ್​ ಆಗಿದೆ.

ಕುಲ್​ದೀಪ್​ ಬೌಲಿಂಗ್​ ಫಾರ್ಮ್​ ಕಳೆದುಕೊಂಡು ಹಲವು ವರ್ಷ ಭಾರತ ತಂಡದಲ್ಲಿ ಅವಕಾಶ ವಂಚಿತರಾಗಿದ್ದ ವೇಳೆ ಬಾಗೇಶ್ವರ್ ಧಾಮ್ (Bageswhar Dham) ದೇಗುಲಕ್ಕೆ ಭೇಟಿ ನೀಡಿ ವಿಶೇಷ ಪೋಜೆ ಸಲ್ಲಿಸಿದ್ದರು. ಈ ವೇಳೆ ಬಾಗೇಶ್ವರ್ ಬಾಬಾ ಕುಲ್​ದೀಪ್​ ಯಾದವ್ ಕೊರಳಿಗೆ ಹೂವಿನ ಹಾರ ಹಾಕುವ ಮೂಲಕ ಮತ್ತೆ ಭಾರತ ತಂಡದ ಪರ ಆಡಲಿದ್ದೀಯ ಎಂದು ಹಾರೈಸಿದ್ದರು. ಇದಾದ ಒಂದು ತಿಂಗಳ ಬಳಿಕ ಕುಲ್​ದೀಪ್​ ಭಾರತ ತಂಡಕ್ಕೆ ಆಯ್ಕೆಯಾಗಿದ್ದರು. ಏಕದಿನ ಸೇರಿ ಟಿ20 ವಿಶ್ವಕಪ್​ನಲ್ಲಿ ಪ್ರಧಾನ ಸ್ಪಿನ್ನರ್​ ಆಗಿ ಕಾಣಿಸಿಕೊಂಡಿದ್ದರು. ಅಂದಿನಿಂದ ಕುಲ್​ದೀಪ್​ ಬಾಗೇಶ್ವರ್ ಬಾಬಾ ಅವರ ಪರಮ ಭಕ್ತರಾಗಿದ್ದಾರೆ.

ಗುರು ಪೂರ್ಣಿಮ ದಿನದಂದು ಕುಲ್​ದೀಪ್​ ಬಾಗೇಶ್ವರ್ ಧಾಮ್​ಗೆ ಭೇಟಿ ನೀಡಿದ್ದರು. ಕುಲ್​ದೀಪ್​ ಆಶ್ರಮದಲ್ಲಿ ಕೆಲ ಕಾಲ ಧ್ಯಾನ ಮಾಡಿರುವ ವಿಡಿಯೊ ವೈರಲ್​ ಆಗಿದೆ. ಕೇವಲ 26 ವರ್ಷದ ಬಾಗೇಶ್ವರ್ ಬಾಬಾ ಅಲಿಯಾಸ್ ಶಾಸ್ತ್ರಿ ಅವರು ಸ್ವಯಂ ಘೋಷಿತ ದೇವಮಾನವ ಎನಿಸಿಕೊಂಡಿದ್ದಾರೆ. ಕಥಾ ಎಂಬ ಧಾರ್ಮಿಕ ಪ್ರವಚನ ನೀಡುವುದಕ್ಕಾಗಿ ಅವರು ದೇಶಾದ್ಯಂತ ಪ್ರವಾಸ ಕೈಗೊಳ್ಳುತ್ತಾರೆ. ಇತ್ತೀಚೆಗೆ, ಮಹಾರಾಷ್ಟ್ರ ಮೂಲದ ಮೂಢನಂಬಿಕೆ ವಿರೋಧಿ ಸಂಘಟನೆಯು ನಾಗ್ಪುರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ, ತಮಗಿರುವ ನಿಗೂಢ, ಪವಾಡ ಶಕ್ತಿಯನ್ನು ಪದರ್ಶಿಸುವಂತೆ ಸವಾಲು ಹಾಕಿದ್ದರು.

ಇದನ್ನೂ ಓದಿ Kuldeep Yadav: ಕುಲ್​ದೀಪ್ ಯಾದವ್​ರನ್ನು​ ಅಭಿನಂದಿಸಿದ ಯೋಗಿ ಆದಿತ್ಯನಾಥ್

ಕಥಾ ವಿಡಿಯೋ ವೈರಲ್

ಬಾಗೇಶ್ವರ್ ಬಾಬಾ ನಡೆಸುವ ಕಥಾ ವಿಡಿಯೋಗಳು ಸಾಕಷ್ಟು ವೈರಲ್ ಆಗಿವೆ. ಹೀಗೆ ವೈರಲ್ ಆದ ವಿಡಿಯೋವೊಂದರಲ್ಲಿ ಜನರ ಮಧ್ಯೆದಿಂದ ಪತ್ರಕರ್ತರೊಬ್ಬರನ್ನು ಬಾಬಾ ಕರೆಯುತ್ತಾರೆ. ಬಳಿಕ, ಅವರ ಕುಟುಂಬದ ಸದಸ್ಯರ ಮಾಹಿತಿಯನ್ನು ಹಂಚಿಕೊಳ್ಳುತ್ತಾರೆ. ಬಾಬಾಗೆ, ತಮ್ಮ ಕುಟುಂಬದ ಸಂಪೂರ್ಣ ಮಾಹಿತಿ ತಿಳಿದಿರುವುದು ಅಸಾಧಾರಣ ಕಾರ್ಯವೆಂದು ಆ ಪತ್ರಕರ್ತರು ಘೋಷಿಸುತ್ತಾರೆ. ಆದರೆ, ಈ ಪತ್ರಕರ್ತನ ಬಗ್ಗೆ ಬಾಬಾ ಹೇಳಿದ ಮಾಹಿತಿ ಎಲ್ಲವೂ ಸೋಷಿಯಲ್ ಮೀಡಿಯಾಗಳಲ್ಲಿದೆ ಎಂದು ಜನರು ಹೇಳಿಕೊಂಡಿದ್ದಾರೆ.

ಬಿಜೆಪಿ ನಾಯಕರ ಬೆಂಬಲ

ಬಾಗೇಶ್ವರ್ ಬಾಬಾ ಅವರಿಗೆ ಬಿಜೆಪಿಯ ಅನೇಕ ನಾಯಕರು ಬೆಂಬಲ ವ್ಯಕ್ತಪಡಿಸಿದ್ದಾರೆ. ವಿಶೇಷವಾಗಿ ಪಕ್ಷದ ಹಿರಿಯ ನಾಯಕ ಕೈಲಾಶ್ ವಿಜಯವರ್ಗೀಯ ಅವರು ಬಹಿರಂವಾಗಿಯೇ ಬಾಬಾ ಅವರನ್ನು ಬೆಂಬಲಿಸಿದ್ದಾರೆ. ದ್ವೇಷ ಭಾಷಣದಿಂದಲೇ ಕುಖ್ಯಾತಿ ಗಳಿಸಿರುವ ಬಿಜೆಪಿಯ ಮತ್ತೊಬ್ಬ ನಾಯಕ ಕಪಿಲ್ ಮಿಶ್ರಾ ಅವರು, ಶಾಸ್ತ್ರಿ ಪರವಾಗಿ ದಿಲ್ಲಿಯಲ್ಲಿ ರ್ಯಾಲಿಯನ್ನು ನಡೆಸಿದ್ದಾರೆ. ಬಾಬಾ ಅವರು ಲವ್ ಜಿಹಾದ್ ವಿರುದ್ಧ ಮಾತನಾಡಿದ್ದಕ್ಕಾಗಿ ಅವರನ್ನು ಟಾರ್ಗೆಟ್ ಮಾಡಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

ಯಾರು ಬಾಬಾ

ಬಾಗೇಶ್ವರ್ ಬಾಬಾ ಅವರು ಮಧ್ಯಪ್ರದೇಶದ ಛತ್ತರ್‌ಪುರ ಜಿಲ್ಲೆಯಲ್ಲಿರುವ ಬಾಗೇಶ್ವರ್ ಧಾಮ್ ಕ್ಷೇತ್ರದ ಧಾರ್ಮಿಕ ಮುಖಂಡರಾಗಿದ್ದಾರೆ. ಇವರ ಪೂರ್ತಿ ಹೆಸರು ಧೀರೇಂದ್ರ ಕೃಷ್ಣ ಶಾಸ್ತ್ರಿ. ಇವರು ಬಾಗೇಶ್ವರ ಬಾಬಾ ಎಂದೇ ಖ್ಯಾತರಾಗಿದ್ದಾರೆ. ಅವರ ಬೋಧಿಸುವ ಕಥಾಗಳು ಲಕ್ಷಾಂತರ ಭಕ್ತರನ್ನು ಸೆಳೆಯುತ್ತಿವೆ. ಜತೆಗೆ, ಪವಾಡಗಳನ್ನು ಮಾಡುತ್ತಿದ್ದಾರೆ. ಇದರಿಂದ ಸಾಕಷ್ಟು ಜನರು ಆಕರ್ಷಿತರಾಗುತ್ತಿದ್ದಾರೆ. ಆದರೆ, ಪವಾಡಗಳ ಮೂಲಕ ಇವರು ಜನರಲ್ಲಿ ಮೂಢನಂಬಿಕೆಗಳನ್ನು ಬಿತ್ತುತ್ತಿದ್ದಾರೆಂಬ ಆರೋಪವೂ ಕೇಳಿ ಬಂದಿತ್ತು.

Exit mobile version