ರಾಂಚಿ: ಸಾರ್ವಕಾಲಿಕ ಶ್ರೇಷ್ಠ ಕ್ರಿಕೆಟಿಗರಲ್ಲಿ ಒಬ್ಬರಾದ ಭಾರತ ತಂಡದ ಮಾಜಿ ಆಟಗಾರ ಎಂ.ಎಸ್ ಧೋನಿ(MS Dhoni) ಅವರು ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಿ ಕೆಲವು ವರ್ಷಗಳಾಗಿವೆ. ಕೇವಲ ಐಪಿಎಲ್ ಟೂರ್ನಿಯಲ್ಲಿ(IPL) ಮಾತ್ರ ಆಡುತ್ತಿದ್ದಾರೆ. ಧೋನಿ ಎಷ್ಟೇ ದೊಡ್ಡ ಖ್ಯಾತಿ ಗಳಿಸಿದ್ದರೂ ಕೂಡ ತಮ್ಮ ಬಾಲ್ಯದ ಸ್ನೇಹಿತರನ್ನು ಇಂದಿಗೂ ಮರೆತಿಲ್ಲ. ಧೋನಿ ಅವರು ತಮ್ಮ ಗೆಳೆಯರೊಬ್ಬರ(MS Dhoni Friends Birthday) ಹುಟ್ಟುಹಬ್ಬ ಆಚರಿಸಿದ ವಿಡಿಯೊವೊಂದು ವೈರಲ್(viral video) ಆಗಿದೆ.
ರಾಂಚಿಯಲ್ಲಿರುವ ಧೋನಿ ತಮ್ಮ ಬಾಲ್ಯದ ಗೆಳೆಯನ ಮನೆಯಲ್ಲಿ ಬರ್ತ್‌ಡೇ ಪಾರ್ಟಿ ಮಾಡಿದ್ದಾರೆ. ಗೆಳೆಯನಿಗೆ ಕೇಕ್ ತಿನ್ನಿಸಿ ಶುಭ ಹಾರೈಸಿದ್ದಾರೆ. ಧೋನಿಯ ಈ ಸರಳತೆಯನ್ನು ಕಂಡು ಅನೇಕ ನೆಟ್ಟಿಗರು ಮೆಚ್ಚುಗೆ ಸೂಚಿಸಿದ್ದಾರೆ. ಎಷ್ಟೇ ದೊಡ್ಡ ಶ್ರೀಮಂತನಾದರೂ ಧೋನಿ ಗೆಳೆಯರನ್ನು ಮರೆತಿಲ್ಲ ಗೆಳೆತನ ಎಂದರೆ ಇದು ಎಂದು ಕಮೆಂಟ್ ಮಾಡಿದ್ದಾರೆ. 2 ವರ್ಷಗಳ ಹಿಂದೆ ಧೋನಿ ದುಬೈಗೆ ತೆರಳಿ ಗೆಳೆಯರೊಬ್ಬರ ಬರ್ತ್‌ಡೇ ಪಾರ್ಟಿಯಲ್ಲಿ ಪಾಲ್ಗೊಂಡಿದ್ದರು. ಈ ವಿಡೊಯೊ ಕೂಡ ವೈರಲ್ ಆಗಿತ್ತು.
ಎಂ.ಎಸ್ ಧೋನಿ ಜೀವನಾಧಾರಿತ ‘ಎಂ.ಎಸ್ ಧೋನಿ, ದಿ ಅನ್‌ಟೋಲ್ಡ್ ಸ್ಟೋರಿ’ ಬಾಲಿವುಡ್ ಚಿತ್ರ 2016ರಲ್ಲಿ ಭಾರಿ ಸದ್ದು ಮಾಡಿತ್ತು. ಧೋನಿ ಯಶೋಗಾಥೆಯ ಈ ಚಿತ್ರ ಬಾಲಿವುಡ್ ಬಾಕ್ಸ್ ಆಫೀಸ್‌ನಲ್ಲಿ ಮಾತ್ರವಲ್ಲ, ಚಿತ್ರ ಪ್ರೀಯರ ಮೆಚ್ಚುಗೆಗೂ ಪಾತ್ರವಾಗಿತ್ತು. ಈ ಸಿನೆಮಾದಲ್ಲಿ ಧೋನಿ ಅವರು ಕ್ರಿಕೆಟ್ ಆಟಗಾರನಾಗಿ ಬೆಳೆದು ಬಂದ, ಅವರಿಗೆ ನೆರವು ನೀಡಿದ ಸ್ನೇಹಿತರ ಕುರಿತಾಗಿಯೂ ತೋರಿಸಲಾಗಿತ್ತು.
ಇದನ್ನೂ ಓದಿ MS Dhoni: ಕಾರಿನಲ್ಲಿ ಬರುತ್ತಿದ್ದ ಧೋನಿಯನ್ನು ತಡೆದು ನಿಲ್ಲಿಸಿ ಫೋಟೊ ತೆಗೆಸಿಕೊಂಡ ಅಭಿಮಾನಿ; ವಿಡಿಯೊ ವೈರಲ್
ಇದೇ ಆವೃತ್ತಿಯ ಐಪಿಎಲ್ ವೇಳೆ ಧೋನಿ ಅಭ್ಯಾಸ ಮಾಡುವಾಗ ತಮ್ಮ ಬ್ಯಾಟ್‌ನಲ್ಲಿ ಬಾಲ್ಯದ ಗೆಳೆಯನ ಕ್ರೀಡಾ ಪರಿಕರಗಳ ಶಾಪ್ನ ಹೆಸರನ್ನು ಹಾಕಿಕೊಂಡಿದ್ದರು. ‘ಪ್ರೈಮ್ ಸ್ಪೋರ್ಟ್ಸ್’ ಎಂದು ಬರೆದುಕೊಂಡಿರುವ ಸ್ಟಿಕ್ಕರ್ ಹಾಕಿದ್ದರು. ಧೋನಿ ವೃತ್ತಿಜೀವನದ ಆರಂಭಿಕ ಹಂತದಲ್ಲಿ ಅವರಿಗೆ ಬ್ಯಾಟ್ ಮತ್ತು ಕ್ರಿಕೆಟ್ ಕಿಟ್ಗಳನ್ನು ಈ ಶಾಪ್ನ ಗೆಳೆಯನೇ ನೀಡಿದ್ದರಂತೆ. ತನ್ನ ಗೆಳೆಯನ ಶಾಪ್ನ ಪ್ರಚಾರಕ್ಕಾಗಿ ಧೋನಿ ಈ ಶಾಪ್ನ ಹೆಸರನ್ನು ತನ್ನ ಬ್ಯಾಟ್‌ನಲ್ಲಿ ಬರೆದುಕೊಂಡಿದ್ದರು.
ಈ ಆವೃತ್ತಿಯಲ್ಲಿ ಧೋನಿ ಅವರು ಐಪಿಎಲ್ಗೆ ವಿದಾಯ ಹೇಳಲಿದ್ದಾರೆ ಎನ್ನಲಾಗಿತ್ತು. ಆದರೆ ಧೋನಿ ಇದುವರೆಗೆ ತಮ್ಮ ನಿವೃತ್ತಿ ಪ್ರಕಟಿಸಿಲ್ಲ. ಮುಂದಿನ ಬಾರಿಯೂ ಅವರು ಆಡಲಿದ್ದಾರೆ ಎಂದು ಫ್ರಾಂಚೈಸಿ ಮೂಲಗಳು ಮಾಹಿತಿ ನೀಡಿದೆ.
ಆರ್ಸಿಬಿ ವಿರುದ್ಧ ಸೋಲುವ ಮೂಲಕ ಚೆನ್ನೈ ಸೂಪರ್ ಕಿಂಗ್ಸ್(CSK) ತಂಡ 17ನೇ ಆವೃತ್ತಿಯ ಐಪಿಎಲ್ನಿಂದ ಹೊರಬಿದ್ದಿತ್ತು. ಬೆಂಗಳೂರಿನ ಚಿನ್ನಸ್ವಾಮಿಯಲ್ಲಿ ನಡೆದಿದ್ದ ಪಂದ್ಯದಲ್ಲಿ ಚೆನ್ನೈ 27 ರನ್ಗಳ ಅಂತರದಿಂದ ಸೋಲು ಕಂಡಿತ್ತು. ಈ ಸೋಲಿನ ಮರು ದಿನವೇ ಧೋನಿ(MS Dhoni) ತಮ್ಮ ತವರಾದ ರಾಂಚಿಗೆ ಮರಳಿದ್ದರು. ತವರಿನಲ್ಲಿ ಬೈಕ್ ರೈಡಿಂಗ್ ಮಾಡಿದ್ದರು. ಅವರು ಬೈಕ್ನಲ್ಲಿ ಸುತ್ತಾಡಿಕೊಂಡು ವಾಪಸ್ ಮನೆಗೆ ಬರುತ್ತಿರುವ ವಿಡಿಯೊ ವೈರಲ್ ಆಗಿತ್ತು.