Site icon Vistara News

Neeraj Chopra : ಡೈಮಂಡ್​ ಲೀಗ್​ನಲ್ಲಿ ನೀರಜ್​ ಚೋಪ್ರಾಗೆ ಎರಡನೇ ಸ್ಥಾನ

Neeraj Chopra

ನವದೆಹಲಿ: ಸೂಪರ್ ಸ್ಟಾರ್ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ (Neeraj Chopra) ಯುಜೀನ್ ಡೈಮಂಡ್ ಲೀಗ್ ಫೈನಲ್ ನಲ್ಲಿ 83.80 ಮೀಟರ್ ಎಸೆಯುವ ಮೂಲಕ 2 ನೇ ಸ್ಥಾನ ಪಡೆದಿದ್ದಾರ., ಜೆಕ್ ಗಣರಾಜ್ಯದ ಜಾಕುಬ್ ವಡ್ಲೆಜ್ಚ್ ಶನಿವಾರ ಟ್ರೋಫಿಯನ್ನು ತಮ್ಮದಾಗಿಸಿಕೊಂಡರು. ಜೆಕ್ ಸ್ಟಾರ್ ತಮ್ಮ ಅಂತಿಮ ಪ್ರಯತ್ನದಲ್ಲಿ 84.24 ಮೀಟರ್ ಅತ್ಯುತ್ತಮ ಎಸೆತವನ್ನು ದಾಖಲಿಸಿದರು. ಮೊದಲ ಎಸೆತದಲ್ಲಿಯೇ 84.01 ಮೀಟರ್ ಎಸೆಯುವ ಮೂಲಕ ಅವರು ಇತರಿಗಿಂತ ಮುಂದಿದ್ದರು. ಕೊನೆಗೆ ಅವರೇ ಚಿನ್ನದ ಪದಕ ಗೆದ್ದರು. ಫಿನ್ಲೆಂಡ್​ ಆಲಿವರ್ ಹೆಲಾಂಡರ್ 83.74 ಮೀಟರ್​ ಎಸೆದು ಮೂರನೇ ಸ್ಥಾನ ಪಡೆದರು. ಆಂಡ್ರಿಯನ್ ಮರ್ಡೇರ್ (81.79 ಮೀ), ಕರ್ಟಿಸ್ ಥಾಂಪ್ಸನ್ (77.01 ಮೀ) ಮತ್ತು ಆಂಡರ್ಸನ್ ಪೀಟರ್ಸ್ (74.71 ಮೀ) ಕ್ರಮವಾಗಿ ನಾಲ್ಕು, ಐದು ಮತ್ತು ಆರನೇ ಸ್ಥಾನ ಪಡೆದರು.

ಭಾರತೀಯ ತಾರೆ ಇಂದು ರಾತ್ರಿ ವಿಜಯಶಾಲಿಯಾಗಿ ಹೊರಹೊಮ್ಮಲಿಲ್ಲ. ಆದರೆ ಸವಾಲಿನ ಪರಿಸ್ಥಿತಿಗಳಲ್ಲಿ ಅವರು ಪ್ರಶಂಸನೀಯ ಪ್ರದರ್ಶನ ನೀಡಿದರು. ವಿಶ್ವ ಚಾಂಪಿಯನ್ ಈಗ ಏಷ್ಯನ್ ಕ್ರೀಡಾಕೂಟಕ್ಕೆ ಸಜ್ಜಾಗುವತ್ತ ಗಮನ ಹರಿಸಲಿದ್ದಾರ. ಚೀನಾದ ಹ್ಯಾಂಗ್ಝೌನಲ್ಲಿ ತಮ್ಮ ಪ್ರಶಸ್ತಿಯನ್ನು ಉಳಿಸಿಕೊಳ್ಳುವ ಗುರಿ ಹೊಂದಿದ್ದಾರೆ.

ಫೈನಲ್​ನಲ್ಲಿದ್ದ ಏಕೈಕ ಭಾರತೀಯ ಅಥ್ಲೀಟ್

89.94 ಮೀ. ರಾಷ್ಟ್ರೀಯ ದಾಖಲೆ ಹೊಂದಿರುವ ನೀರಜ್ ಚೋಪ್ರಾ ಅವರು 2023ರ ಡೈಮಂಡ್ ಲೀಗ್ ಫೈನಲ್‌ನಲ್ಲಿ ಸ್ಪರ್ಧಿಸುವ ಏಕೈಕ ಭಾರತೀಯ ಅಥ್ಲೀಟ್ ಆಗಿದ್ದಾರೆ. ಪುರುಷರ ಲಾಂಗ್ ಜಂಪಿಂಗ್​ನಲ್ಲಿ ಮುರಳಿ ಶ್ರೀಶಂಕರ್ ಮತ್ತು 3000 ಮೀ. ಸ್ಟೀಪಲ್‌ ಚೇಸ್​ನಲ್ಲಿ ಅವಿನಾಶ್‌ ಸಬ್ಲೆ ಫೈನಲ್‌ಗೆ ಅರ್ಹತೆ ಪಡೆದಿದ್ದರು. ಆದರೆ ಸೆಪ್ಟೆಂಬರ್ 23 ರಿಂದ ಚೀನಾದ ಹ್ಯಾಂಗ್‌ಝೌನಲ್ಲಿ ನಡೆಯಲಿರುವ ಪ್ರತಿಷ್ಠಿತ ಏಷ್ಯನ್ ಗೇಮ್ಸ್‌ನಲ್ಲಿ ಪಾಲ್ಗೊಳ್ಳುವ ನಿಟ್ಟಿನಲ್ಲಿ ಇದಕ್ಕೆ ಬೇಕಾದ ತಯಾರಿ ನಡೆಸಲು ಉಭಯ ಅಥ್ಲೀಟ್​ಗಳು ಫೈನಲ್​ ಸ್ಫರ್ದೆಯಿಂದ ಹಿಂದೆ ಸರಿದಿದ್ದಾರೆ.

ಚಿನ್ನ ಉಳಿಸಿಕೊಳ್ಳುವ ವಿಶ್ವಾಸ ಹೊಂದಿದ್ದರು

25 ವರ್ಷದ ನೀರಜ್ ಚೋಪ್ರಾ ಅವರು ಸದ್ಯ ಪ್ರಚಂಡ ಪ್ರದರ್ಶನ ತೋರುವ ಮೂಲಕ ಹಲವು ಕೂಟದಲ್ಲಿ ಚಿನ್ನದ ಪದಕ ಗೆದ್ದ ಸಾಧನೆ ಮಾಡಿದ್ದಾರೆ. ಇದಲ್ಲದೆ ಈ ಕೂಟದಲ್ಲಿ ಅವರು ಹಾಲಿ ಚಾಂಪಿಯನ್​ ಕೂಡ ಆಗಿದ್ದಾರೆ. ಕಳೆದ ವರ್ಷ ಚಿನ್ನದ ಪದಕಕ್ಕೆ ಮುತ್ತಿಕ್ಕಿದ್ದರು. ಈ ಬಾರಿಯೂ ಪದಕವನ್ನು ತಮ್ಮ ಬಳಿಯೇ ಉಳಿಸಿಕೊಳ್ಳುವ ವಿಶ್ವಾಸದಲ್ಲಿದ್ದಾರೆ. ಅಲ್ಲದೆ 90 ಮೀ. ದೂರ ಎಸೆಯುವ ಗುರಿಯನ್ನು ಹೊಂದಿದ್ದಾರೆ. ಆದರೆ, ಪರಿಸ್ಥಿತಿ ಅವರಿಗೆ ಪೂರಕವಾಗಿರಲಿಲ್ಲ.

ಇದನ್ನೂ ಓದಿ : ಏಷ್ಯನ್​ ಗೇಮ್ಸ್​ ಆರಂಭಕ್ಕೂ ಮುನ್ನವೇ ಭಾರತ ತಂಡದಿಂದ ಹೊರಬಿದ್ದ ಸ್ಟಾರ್​ ವೇಗಿ

ಚಿನ್ನ ಗೆದ್ದಿದ್ದರು

ನೀರಜ್​ ಚೋಪ್ರಾ ವಿಶ್ವ ಅಥ್ಲೆಟಿಕ್ಸ್​ ಚಾಂಪಿಯನ್‌ಶಿಪ್‌ನಲ್ಲಿ(World Athletics Championships) ಭಾರತದ ಸ್ಟಾರ್​ ಜಾವೆಲಿನ್​ ಎಸೆತಗಾರ ನೀರಜ್​ ಚೋಪ್ರಾ(Neeraj Chopra) ಅವರು ಚಿನ್ನದ ಪದಕ್ಕೆ ಗುರಿ ಇಟ್ಟಿದ್ದಾರೆ. 88.17 ಮೀ. ದೂರ ಜಾವೆಲಿನ್​ ಎಸೆದು(Javelin Throw) ಚೊಚ್ಚಲ ಮತ್ತು ಐತಿಹಾಸಿಕ ಚಿನ್ನ ಗೆದ್ದ ಸಾಧನೆ ಮಾಡಿದ್ದರು.. ಇದುವರೆಗೆ ದೇಶದ ಇತರ ಸ್ಪರ್ಧಿಗಳ ನಿರಾಶಾದಾಯಕ ಪ್ರದರ್ಶನದಿಂದ ಮಂಕು ಕವಿದಿದ್ದ ಭಾರತೀಯ ಪಾಳೆಯದಲ್ಲಿ ನೀರಜ್​ ಅವರ ಸಾಧನೆ ನವೋಲ್ಲಾಸ ಮೂಡಿಸಿತ್ತು.

ಕನ್ನಡಿಗ ಡಿ. ಮನು(84.14 ಮೀ.) 6ನೇ ಸ್ಥಾನ ಪಡೆದರೆ, ಮತ್ತೋರ್ವ ಭಾರತೀಯ ಜೇನಾ(84.77 ಮೀ.) 5ನೇ ಸ್ಥಾನಿಯಾದರು. ಪಾಕಿಸ್ತಾನದ ಅರ್ಷದ್ ನದೀಮ್(87.82 ಮೀ) ಬೆಳ್ಳಿ, ಜೆಕ್ ಗಣರಾಜ್ಯದ ಜಾಕುಬ್ ವಡ್ಲೆಜ್(86.67 ಮೀ) ಕಂಚಿನ ಪದಕ ಗೆದ್ದರು. ಜರ್ಮನಿಯ ಬಲಿಷ್ಠ ಆಟಗಾರ ಜೂಲಿಯನ್ ವೆಬರ್(85.79 ಮೀ) ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದರು.

Exit mobile version