Site icon Vistara News

Virat Kohli : ವಿರಾಟ್​ ಕೊಹ್ಲಿ ಟೀಕಿಸಿದ ನ್ಯೂಜಿಲ್ಯಾಂಡ್​ ಮಾಜಿ ಆಟಗಾರನಿಗೆ ಕೊಲೆ ಬೆದರಿಕೆ!

Virat kohli

ಬೆಂಗಳೂರು: ವಿರಾಟ್ ಕೊಹ್ಲಿ (Virat Kohli) ವಿಶ್ವದ ಅತ್ಯಂತ ಪ್ರಸಿದ್ಧ ಕ್ರಿಕೆಟಿಗರಲ್ಲಿ ಒಬ್ಬರು. ಅವರಿಗೆ ಕೋಟ್ಯಂತರ ಅಭಿಮಾನಿಗಳು ಇದ್ದಾರೆ. ಹೀಗಾಗಿ ವಿರಾಟ್ ಕೊಹ್ಲಿಯ ಬಗ್ಗೆ ಟೀಕೆ ಟಿಪ್ಪಣಿಗಳನ್ನು ಮಾಡುವಾಗ ಎಚ್ಚರಿಕೆಯಿಂದ ಇರುವುದು ಮುಖ್ಯವಾಗುತ್ತದೆ. ಆದಾಗ್ಯೂ ಅವರನ್ನು ಹೊಗಳಿದರೆ ಸಿಕ್ಕಾಪಟ್ಟೆ ಪ್ರೀತಿ ಸಿಗುವುದು ಖಾತರಿ. ಹಲವಾರು ಬಾರಿ ನೋಡಿದಂತೆ ವಿರಾಟ್​ ಕೊಹ್ಲಿಯ ಅಭಿಮಾನಿ ಬಳಗವು ಆಗಾಗ್ಗೆ ಅವರನ್ನು ಟೀಕಿಸಿರುವರ ನಿದ್ದೆಗೆಡಿಸಿದ್ದಾರೆ. ಇದೀಗ ಕೊಹ್ಲಿಯ ಅಭಿಮಾನಿಗಳಿಗೆ ಹೆದರಿದವರು ನ್ಯೂಜಿಲ್ಯಾಂಡ್​ ಮಾಜಿ ಆಟಗಾರ ಸೈಮನ್ ಡೌಲ್ಐ. ಪಿಎಲ್ 2024 ರ ಋತುವಿನಲ್ಲಿ ವಿರಾಟ್ ಕೊಹ್ಲಿ ಅವರ ಸ್ಟ್ರೈಕ್ ರೇಟ್ ಬಗ್ಗೆ ಅವರು ಹೇಳಿಕೆ ನೀಡಿದ್ದರು. ಅಲ್ಲಿಂದ ಅವರಿಗೆ ಕೊಹ್ಲಿ ಅಭಿಮಾನಿಗಳು ಸರಿಯಾಗಿ ನಿದ್ದೆ ಮಾಡಲೂ ಬಿಟ್ಟಿಲ್ಲ. ನ್ಯೂಜಿಲೆಂಡ್​​ನ ಮಾಜಿ ಕ್ರಿಕೆಟಿಗನಿಗೆ ಕೊಲೆ ಬೆದರಿಕೆಗಳನ್ನೂ ಹಾಕಿದ್ದಾರೆ.

ಕ್ರಿಕೆಟ್​ಬಜ್​ನಲ್ಲಿ ದಿನೇಶ್ ಕಾರ್ತಿಕ್ ಅವರೊಂದಿಗಿನ ಇತ್ತೀಚಿನ ಮಾತುಕತೆ ವೇಳೆ ಡೌಲ್ ತಮಗಾದ ಕಹಿ ಅನುಭವವನ್ನು ಹಂಚಿಕೊಂಡಿದ್ದಾರೆ. ಬಲಗೈ ಬ್ಯಾಟರ್ ಕೊಹ್ಲಿ ಬಗ್ಗೆ ಹಲವಾರು ಒಳ್ಳೆಯ ವಿಷಯಗಳನ್ನು ಹೇಳಿದ್ದರೂ, ಅವರ ಒಂದು ನಕಾರಾತ್ಮಕ ಹೇಳಿಕೆಯ ಪರಿಣಾಮವಾಗಿ ತಮ್ಮ ಜೀವಕ್ಕೆ ಬೆದರಿಕೆ ಬಂದಿತ್ತು ಎಂದು ಬಹಿರಂಗಪಡಿಸಿದರು.

ಇದನ್ನೂ ಓದಿ: IPL 2024 : ಜಿಯೋಸಿನಿಮಾದಲ್ಲಿ ದಾಖಲೆಯ 62 ಕೋಟಿಗೂ ಅಧಿಕ ವೀಕ್ಷಣೆ ಕಂಡ ಐಪಿಎಲ್​

ವಿರಾಟ್​ ಕೊಹ್ಲಿ ತುಂಬಾ ಒಳ್ಳೆಯ ಆಟಗಾರ. ಅದು ಯಾವಾಗಲೂ ಅವರ ಸ್ಟ್ರೈಕ್​ರೇಟ್​ ಸುತ್ತ ನನ್ನ ವಿಚಾರಗಳು ಇದ್ದವು. ನಾನು ವಿರಾಟ್ ಕೊಹ್ಲಿ ಬಗ್ಗೆ ಸಾವಿರ ಉತ್ತಮ ವಿಷಯಗಳನ್ನು ಹೇಳಿದ್ದೇನೆ. ಆದರೆ ನಾನು ಸ್ಟ್ರೈಕ್​ ರೇಟ್​ ಬಗ್ಗೆ ಮಾತನಾಡಿದೆ. ಅದು ಸ್ವಲ್ಪ ನಕಾರಾತ್ಮಕವಾಗಿರಬಹುದು ಅಥವಾ ನಕಾರಾತ್ಮಕವಾಗಿದ್ದವು. ಅದಕ್ಕಾಗಿ ನನಗೆ ಕೊಲೆ ಬೆದರಿಕೆಗಳು ಬಂದವು ಎಂದು ಹೇಳಿದ್ದಾರೆ.

ವಿದೇಶಿ ಆಟಗಾರರ ಟೀಕೆ

ಕೊಹ್ಲಿಯ ಸ್ಟ್ರೈಕ್​ ರೇಟ್​ ಬಗ್ಗೆ ಟೀಕೆ ಸೈಮನ್ ಡೌಲ್​ ಅವರದ್ದೇ ಮೊದಲಲ್ಲ. ಹಲವಾರು ಭಾರತೀಯ ಕ್ರಿಕೆಟ್​ ದೈತ್ಯದು ಅವರ ಸ್ಟ್ರೈಕ್ ರೇಟ್ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹೇಳಿದ್ದಾರೆ. ಪಂದ್ಯದ ನಂತರದ ಸಂದರ್ಶನದಲ್ಲಿ, ವಿರಾಟ್ ಕೊಹ್ಲಿ ತಮ್ಮ ಟೀಕೆಗಳಿಗೆ ಉತ್ತರಿಸಿದ್ದರು. ಅದು ತಮ್ಮ ಆದ್ಯತೆ ಎಂದು ಹೇಳಿದ್ದರು.

“ಎಲ್ಲರೂ ನನ್ನ ಸ್ಟ್ರೈಕ್ ರೇಟ್ ಬಗ್ಗೆ ಎಲ್ಲರೂ ಮಾತನಾಡುತ್ತಿದ್ದಾರೆ. ನಾನು ಸ್ಪಿನ್ ಬೌಲಿಂಗ್​ಗೆ ಸರಿಯಾಗಿ ಆಡದಿರುವ ಬಗ್ಗೆ (ಅಂಕಿಅಂಶಗಳು) ಮಾತನಾಡುತ್ತಾರೆ. ಆದರೆ ನನಗೆ ನನ್ನ ಕೆಲಸವನ್ನು ಮಾಡುವ ಬಗ್ಗೆ ಮಾತ್ರ ಯೋಚನೆಯಿದೆ. ಅವರು ಏನು ಬೇಕಾದರೂ ಮಾತನಾಡಬಹುದು. ಇದು ಈಗ ನನಗೆ ಒಂದು ರೀತಿಯ ಸ್ಮರಣೆಯಾಗಿದೆ ಎಂದು ಹೇಳಿದ್ದರು.

ಕೊಹ್ಲಿ ಈ ಋತುವಿನಲ್ಲಿ 15 ಇನಿಂಗ್ಸ್​ಗಳಿಂದ 154.70 ಸ್ಟ್ರೈಕ್ ರೇಟ್​​ನಲ್ಲಿ 741 ರನ್ ಗಳಿಸಿದ್ದದ್ದರು. ಅದಕ್ಕಾಗಿ ಅವರು ಆರೆಂಜ್ ಕ್ಯಾಪ್ ಪಡೆದಿದ್ದರು. ಪಂದ್ಯಾವಳಿಯ ಅವಧಿಯಲ್ಲಿ ಅವರು ಐದು ಅರ್ಧಶತಕಗಳೊಂದಿಗೆ 1 ಶತಕವನ್ನು ಬಾರಿಸಿದ್ದರು.

Exit mobile version