ಕರಾಚಿ: ಪಾಕಿಸ್ತಾನ ಕ್ರಿಕೆಟ್ (Pakistan Cricket) ತಜ್ಞರೊಬ್ಬರು ಲೈವ್ ಸಂದರ್ಶನದಲ್ಲಿ ಮಾತನಾಡುತ್ತಿದ್ದರು. ಇದೇ ವೇಳೆ ಏಕಾಏಕಿ ಸಿಟ್ಟಿಗೆದ್ದ ಅವರು ತಮ್ಮ ಹೆಂಡತಿಗೆ ಹೊಡೆಯಲು ಪ್ರಯತ್ನಿಸಿದ್ದಾರೆ. ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್(Viral Video) ಆಗಿದೆ.
ಪಾಕಿಸ್ತಾನ ಕ್ರಿಕೆಟ್ ತಜ್ಞ ಮೊಹ್ಸಿನ್ ಅಲಿ ಅವರು ಸಂದರ್ಶನದಲ್ಲಿ ತೊಡಗಿದ್ದ ವೇಳೆ ಅವರ ಪತ್ನಿ ತಿಳಿಯದೆ ಕ್ಯಾಮೆರಾ ಮುಂದೆ ಬರುತ್ತಿದ್ದರು. ಇದನ್ನು ಸಮಧಾನನದಿಂದ ಅವರ ಗಮನಕ್ಕೆ ತರುವ ಬದಲು ಏಕಾಏಕಿ ಅವರ ಮೇಲೆ ಹಲ್ಲೆ ಮಾಡಲು ಯತ್ನಿಸಿದ್ದಾರೆ. ಈ ವಿಡಿಯೊ ಲೈವ್ನಲ್ಲೇ ಪ್ರಸಾರವಾಗಿದೆ. ಮೊಹ್ಸಿನ್ ಅಲಿ ಅವರ ಈ ವರ್ತನೆಗೆ ನೆಟ್ಟಿಗರು ಛೀಮಾರಿ ಹಾಕಿದ್ದಾರೆ. ಈ ಘಟನೆ ಹಾಸ್ಯಮಯವಾಗಿ ಕಂಡರೂ, ಕೌಟುಂಬಿಕ ಕಲಹಗಳ ಬಗ್ಗೆ ಸಾಕಷ್ಟು ಚರ್ಚೆ ಆಗುತ್ತಿದೆ.
Short Kalesh b/w Pakistani Cricket expert Mohsin Ali and His wife on You Tube live
— Ghar Ke Kalesh (@gharkekalesh) February 16, 2024
pic.twitter.com/YGFuZeTmKO
ಪಾಕಿಸ್ತಾನಿ ಕ್ರಿಕೆಟ್ ವಿಶ್ಲೇಷಕ ರಿಜ್ವಾನ್ ಹೈದರ್ ಜತೆ ಮಾತನಾಡುತ್ತಿದ್ದ ವೇಳೆ ಮೊಹ್ಸಿನ್ ಅಲಿ ಅವರ ಪತ್ನಿ ಜೋರಾಗಿ ಮಾತನಾಡುತ್ತಿದ್ದ ಕಾರಣ ಅವರ ಧ್ವನಿಯೂ ಕೇಳಿಬರುತ್ತಿತ್ತು. ಇದೇ ಕಾರಣದಿಂದ ಮೊಹ್ಸಿನ್ ಅಲಿ ಸಿಟ್ಟಾಗಿದ್ದಾರೆ. ಪಿತ್ತ ನೆತ್ತಿಗೇರಿ ಹೊಡೆಯಲು ಮುಂದಾಗಿದ್ದಾರೆ.
ಇದನ್ನೂ ಓದಿ Viral Video: ವಾಕಿಂಗ್ ಮಾಡುತ್ತ ಬರೋಬ್ಬರಿ 2 ಟ್ರಕ್ ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹ; ಅಧಿಕಾರಿಯ ವಿಡಿಯೊ ವೈರಲ್
ನಿರ್ದೇಶಕ ಸ್ಥಾನದಿಂದ ಹಫೀಜ್ ಕಿಕ್ ಔಟ್
ಕರಾಚಿ: ಪಾಕಿಸ್ತಾನದಲ್ಲಿ ರಾಜಕೀಯ ಅರಾಜಕತೆ ಮಾತ್ರವಲ್ಲದೆ ಕ್ರಿಕೆಟ್ ಮಂಡಳಿ (Pakistan Cricket Board)ಯಲ್ಲಿಯೂ ಈ ಸಮಸ್ಯೆ ಕಾಡಿದೆ. ಕೆಲವು ತಿಂಗಳ ಹಿಂದೆ ಪಾಕ್ ಮಂಡಳಿ ನಿರ್ದೇಶಕರಾಗಿ ಆಯ್ಕೆಯಾಗಿದ್ದ ಮೊಹಮ್ಮದ್ ಹಫೀಜ್ ಅವರನ್ನು (Mohammad Hafeez) ಇದೀಗ ಆ ಸ್ಥಾನದಿಂದ ತೆಗೆದುಹಾಕಲಾಗಿದೆ.
ಹಫೀಜ್ ಅವರ ಕಾರ್ಯಾವಧಿಯಲ್ಲಿ ಪಾಕಿಸ್ತಾನ ಆಡಿದ್ದು ಕೇವಲ 2 ಸರಣಿ ಮಾತ್ರ. ಈ ಎರಡು ಸರಣಿಯಲ್ಲಿಯೂ ಪಾಕಿಸ್ತಾನ ಸೋಲು ಕಂಡಿತ್ತು. ಇದೇ ಕಾರಣದಿಂದ ಹಫೀಜ್ ಅವರನ್ನು ಈ ಹುದ್ದೆಯಿಂದ ಕೆಳಗಿಳಿಸಲಾಗಿದೆ. ಮಾತ್ರವಲ್ಲದೆ ಹಫೀಜ್ ಹಾಗೂ ಆಟಗಾರರ ನಡುವೆ ವೈಮನಸ್ಸು ಕೂಡ ಇತ್ತು. ಇದು ಪಾಕ್ ಕ್ರಿಕೆಟ್ ಮೇಲೆ ಸಾಕಷ್ಟು ಪರಿಣಾಮ ಬೀರಿತ್ತು. ಹೀಗಾಗಿ ಹಫೀಜ್ ತಲೆದಂಡವಾಗಿದೆ.
ಹಫೀಜ್ ಅವರು ಸರಣಿ ಸೋತರೂ ಕೂಡ ಕಳಪೆ ಫಾರ್ಮ್ನಿಂದ ಬಳಲುತ್ತಿರುವ ಆಟಗಾರರಿಗೆ ಪದೇಪದೇ ಅವಕಾಶ ನೀಡುತ್ತಿದ್ದರು. ಇದು ಪಾಕ್ ಕ್ರಿಕೆಟ್ ಅಭಿಮಾನಿಗಳ ಹಾಗೂ ಮಾಜಿ ಆಟಗಾರರ ಆಕ್ರೋಶಕ್ಕೆ ಕಾರಣವಾಗಿತ್ತು. ಅಂತಿಮವಾಗಿ ಇದೀಗ ಅವರನ್ನು ಈ ಹುದ್ದೆಯಿಂದ ಕೆಳಗಿಳಿಸಲಾಗಿದೆ.
ಮೊಹಮ್ಮದ್ ಹಫೀಜ್ ಅವರನ್ನು ತಂಡದ ನಿರ್ದೇಶಕ ಸ್ಥಾನದಿಂದ ತೆಗೆದುಹಾಕಿರುವ ಬಗ್ಗೆ ಪಾಕ್ ಕ್ರಿಕೆಟ್ ಮಂಡಳಿ ಟ್ವೀಟ್ ಮೂಲಕ ಮಾಹಿತಿಯನ್ನು ನೀಡಿದ್ದು, ‘ನಿರ್ದೇಶಕರಾಗಿ ಮೊಹಮ್ಮದ್ ಹಫೀಜ್ ಅವರ ಕಾರ್ಯವೈಖರಿಗಾಗಿ ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ಧನ್ಯವಾದಗಳನ್ನು ತಿಳಿಸುತ್ತದೆ. ಹಫೀಜ್ ಅವರ ಕಠಿಣ ಪರಿಶ್ರಮ ಎಲ್ಲಾ ಆಟಗಾರರಿಗೆ ಸ್ಫೂರ್ತಿ ನೀಡಿದೆ. ಹಫೀಜ್ ಅವರ ಮುಂದಿನ ಭವಿಷ್ಯಕ್ಕಾಗಿ ಮಂಡಳಿಯು ಶುಭ ಹಾರೈಸುತ್ತದೆ” ಎಂದು ಬರೆದುಕೊಂಡಿದೆ.