ಬೆಂಗಳೂರು: ಪ್ಯಾರಿಸ್ ಒಲಿಂಪಿಕ್ಸ್ 2024 (Paris Olympics 2024) ಆರಂಭಕ್ಕೆ ಇನ್ನು ಕೆಲವೇ ದಿನಗಳ ಬಾಕಿ ಉಳಿದಿವೆ. ಯಾರೆಲ್ಲ ಪದಕ ಗೆಲ್ಲಬಹುದು, ಯಾರೆಲ್ಲ ಚಾಂಪಿಯನ್ ಆಗಬಹುದು ಎಂಬೆಲ್ಲ ಚರ್ಚೆಗಳು ಜೋರಾಗಿ ನಡೆಯುತ್ತಿವೆ. ಈ ಎಲ್ಲದರ ನಡುವೆ ಕ್ರೀಡಾಕೂಟದಲ್ಲಿರುವ ಸ್ಟಾರ್ ಅಥ್ಲೀಟ್ಗಳ ಸಾಧನೆಗಳ ಕುರಿತು ಚರ್ಚೆಗಳು ನಡೆಯುತ್ತಿವೆ. ಆದಾಗ್ಯೂ ಈ ಬಾರಿ ಸ್ಪರ್ಧೆಯಲ್ಲಿರುವ ಚೀನಾದ ಮಹಿಳಾ ಸ್ಕೇಟ್ ಬೋರ್ಡರ್ ಹೆಚ್ಚು ಚರ್ಚೆಗೆ ಕಾರಣರಾಗಿದ್ದಾರೆ. ಅವರೇ ಜೆಂಗ್ ಹಾವೊಹಾವೊ. ಯಾಕೆಂದರೆ ವಿಶ್ವದ ಅತ್ಯುನ್ನತ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲಿರುವ ಈ ಸ್ಪರ್ಧಿಯ ವಯಸ್ಸು ಕೇವಲ 11 ವರ್ಷ. ಈಕೆ ತನ್ನ ದೇಶದ ಅತ್ಯಂತ ಕಿರಿಯ ಒಲಿಂಪಿಯನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಆದಾಗ್ಯೂ ಸಾರ್ವಕಾಲಿಕ ದಾಖಲೆ ಅವರ ಹೆಸರಿಲ್ಲ. ಯಾಕೆಂದರೆ 1896 ರಲ್ಲಿ 10 ವರ್ಷ ಮತ್ತು 218 ದಿನಗಳ ಡಿಮಿಟ್ರಿಯೋಸ್ ಲೌಂಡ್ರಾಸ್ ಈ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದ್ದಾರೆ.
ಬುಡಾಪೆಸ್ಟ್ ಮತ್ತು ಶಾಂಘೈನಲ್ಲಿ ನಡೆದ ಅರ್ಹತಾ ಸರಣಿಯ ನಂತರ ಜೆಂಗ್ ಸ್ಪರ್ಧೆಗೆ ಅರ್ಹತೆ ಪಡೆದುಕೊಂಡಿದ್ದಾರೆ. 11 ವರ್ಷದ ಜೆಂಗ್ ಒಲಿಂಪಿಕ್ನಲ್ಲಿ ಅಮೆರಿಕದ ಕ್ವಿನ್ಸಿ ವಿಲ್ಸನ್ ಮತ್ತು ಹೆಜ್ಲಿ ರಿವೇರಾ, ಗ್ರೇಟ್ ಬ್ರಿಟನ್ ಲೋಲಾ ಟ್ಯಾಂಬ್ಲಿಂಗ್ ಮತ್ತು ಸ್ಕೈ ಬ್ರೌನ್ ವಿರುದ್ಧ ಸ್ಪರ್ಧಿಸಲಿದ್ದಾರೆ. ಅವರೆಲ್ಲರೂ 16 ವರ್ಷದವರು. ಈ ಮೂಲಕ ಈ ಸ್ಪರ್ಧೆಯಲ್ಲಿ ಇನ್ನಷ್ಟು ಬಾಲಕಿಯರು ಇದ್ದಾರೆ ಎಂಬುದನ್ನು ಗಮನಿಸಬೇಕಾಗಿದೆ.
China's youngest Olympian, 11-year-old skateboarder Zheng Haohao, is heading to Paris with a relaxed mindset https://t.co/jJmEcXtmvI#Paris2024 pic.twitter.com/ApzKHPoiz7
— Xinhua Sports (@XHSports) July 17, 2024
ಈ ಮಧ್ಯೆ, ಜೆಂಗ್ ದೊಡ್ಡ ದಾಖಲೆಯ ಅವಕಾಶ ಹೊಂದಿದ್ದಾರೆ. 86 ವರ್ಷಗಳ ಹಿಂದಿನ ಸಾಧನೆ ಮುರಿಯುವ ಮೂಲಕ ಅತ್ಯಂತ ಕಿರಿಯ ಒಲಿಂಪಿಕ್ ಚಾಂಪಿಯನ್ ಆಗುವ ಭಾರಿ ಅವಕಾಶ ಅವರ ಮುಂದಿದೆ. 1938ರಲ್ಲಿ ಡೆನ್ಮಾರ್ಕ್ನ ಇಂಗೆ ಸೊರೆನ್ಸೆನ್ 200 ಮೀಟರ್ ಬ್ರೆಸ್ಟ್ಸ್ಟ್ರೋಕ್ ಈಜಿನಲ್ಲಿ ಚಿನ್ನದ ಪದಕ ಗೆದ್ದಿದ್ದರು. ಆಗ ಅವರಿಗೆ 12 ವರ್ಷ 24 ದಿನಗಳು.
ಜೆಂಗ್ ತನ್ನ ಏಳನೇ ವಯಸ್ಸಿನಲ್ಲಿ ಸ್ಕೇಟ್ಬೋರ್ಡಿಂಗ್ ಪ್ರಾರಂಭಿಸಿದನು. ಏಷ್ಯನ್ ಗೇಮ್ಸ್ ಚಾಂಪಿಯನ್ ಚೆನ್ ಯೆ ಅವರ ತಂದೆ ಚೆನ್ ವಾಂಕಿನ್ ನಡೆಸುತ್ತಿರುವ ಕ್ಲಬ್ನಲ್ಲಿ ಅವರು ಅಭ್ಯಾಸ ಮಾಡಲು ಪ್ರಾರಂಭಿಸಿದ್ದರು. ಜೆಂಗ್ ಅವರ ಮಾಜಿ ತರಬೇತುದಾರ ವೀ ನೈಜಾಂಗ್ ಮೂಲಕ ಸ್ಕೇಟ್ ಬೋರ್ಡಿಂಗ್ ಕಲಿತಿದ್ದರು.
“ಅವಳು ಮಗುವಾಗಿದ್ದಾಗಲೇ ಸ್ಕೇಟ್ಬೋರ್ಡಿಂಗ್ ಮೇಲೆ ಹೆಚ್ಚು ಗಮನ ಹರಿಸಿದ್ದಳು. ಆಕೆಗೆ ಸಮಸ್ಯೆ ಆದರೆ ತಕ್ಷಣ ಸಮಸ್ಯೆ ಗುರುತಿಸಿ ಅದನ್ನು ತ್ವರಿತವಾಗಿ ಸರಿಪಡಿಸುತ್ತಿದ್ದಳು” ಎಂದು ವೀ ಹೇಳಿದ್ದಾರೆ.
ಬುಡಾಪೆಸ್ಟ್ ಒಲಿಂಪಿಕ್ ಕ್ವಾಲಿಫೈಯರ್ ಸರಣಿಯಲ್ಲಿ ಜೆಂಗ್ ಉತ್ತಮ ಪ್ರದರ್ಶನ ನೀಡಿದ್ದರು. ಅಲ್ಲಿ ಅವರು 72.6 ಅಂಕಗಳೊಂದಿಗೆ ಸ್ಪರ್ಧೆ ಮುಗಿಸಿದ್ದರು. ಈ ಮೂಲಕ ಅಂತಿಮ ಸುತ್ತಿನಲ್ಲಿ ಕನಿಷ್ಠ ಅರ್ಹತಾ ಅಂಕವಾದ 67.34 ಅಂಕಗಳನ್ನು ದಾಟಿದ್ದರು.
ಹವ್ಯಾಸವೇ ಇತಿಹಾಸ
ಜೆಂಗ್ ಕೇವಲ ‘ಮೋಜಿಗಾಗಿ’ ಕ್ರೀಡೆಯನ್ನು ಆಯ್ಕೆ ಮಾಡಿಕೊಂಡಾಕೆ. ಸ್ಕೇಟ್ಬೋರ್ಡಿಂಗ್ ಮೋಜು ಎಂದು ಯಾರೋ ನನಗೆ ಹೇಳಿದರು ಮತ್ತು ನಾನೂ ಒಂದು ಖರೀದಿಸಿದೆ. ಇದು ನಿಜಕ್ಕೂ ಮೋಜಿನ ಸಂಗತಿಯಾಗಿದೆ” ಎಂದು ಜೆಂಗ್ ಹೇಳಿದ್ದಾಳೆ. ಒಂಬತ್ತು ವರ್ಷದವಳಿದ್ದಾಗ ಆಕೆ 2021 ರ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಗುವಾಂಗ್ಡಾಂಗ್ ಅನ್ನು ಪ್ರತಿನಿಧಿಸಿ 14 ನೇ ಸ್ಥಾನ ಪಡೆದಿದ್ದರು.
2022 ರಲ್ಲಿ, ಜೆಂಗ್ ಗುವಾಂಗ್ಡಾಂಗ್ ಪ್ರಾಂತೀಯ ಕ್ರೀಡಾಕೂಟದಲ್ಲಿ ಮಹಿಳಾ ಪಾರ್ಕ್ ಸ್ಕೇಟ್ಬೋರ್ಡಿಂಗ್ ಸ್ಪರ್ಧೆಯಲ್ಲಿ ಅವರು ಗೆದ್ದಿದ್ದರು. ದೊಡ್ಡ ಹುಡುಗಿಯರು ಮಾಡಬೇಕಾದ ಕೌಶಲಗಳನ್ನು ಆಕೆ ಮಾಡಿರುವುದು ಗಮನಿಸಬೇಕಾದ ಸಂಗತಿಯಾಗಿದೆ ಎಂದು ಆಕೆಯ ಕೋಚ್ ಹೇಳಿದ್ದಾರೆ.