Site icon Vistara News

ಗಂಗೂಲಿ ಅಲ್ಲ, ಸೆಹ್ವಾಗ್​ ಅಲ್ಲ; ಇವರೇ ಆಗಿದ್ದರು ಭಾರತದ ಸೆಕ್ಸಿಯೆಸ್ಟ್​ ಕ್ರಿಕೆಟರ್​

Rahul Dravid

ನವ ದೆಹಲಿ: ಶ್ರೇಷ್ಠ ಬ್ಯಾಟರ್​ ನಾಯಕ, ವಿಕೆಟ್ ಕೀಪರ್​ ಹಾಗೂ ವಿನಮ್ರ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದ ರಾಹುಲ್​​ ದ್ರಾವಿಡ್​ (Rahul Dravid) ಕೇವಲ ಅಷ್ಟೇ ಕಾರಣಕ್ಕೆ ಅಭಿಮಾನಿಗಳನ್ನು ಗಳಿಸಿಕೊಂಡಿರಲಿಲ್ಲ. ಬದಲಾಗಿ ಅವರು ಅಭಿಮಾನಿಗಳ ಆರಾಧ್ಯ ದೈವವಾಗಲು ಇನ್ನೊಂದು ಪ್ರಮುಖ ಕಾರಣವಿದೆ. ಅದುವೇ ಅವರು ಆ ಕಾಲದ ಸೆಕ್ಸಿಯೆಸ್ಟ್​​ ಕ್ರಿಕೆಟರ್ ಆಗಿದ್ದರು. ಗೌರವ್ ಕಪೂರ್ ಅವರ ‘ಬ್ರೇಕ್​ಫಾಸ್ಟ್​​ ವಿತ್ ಚಾಂಪಿಯನ್ಸ್’ ಕಾರ್ಯಕ್ರಮದಲ್ಲಿ ಈ ವಿಷಯ ಬಹಿರಂಗಗೊಂಡಿತ್ತು. ರಾಹುಲ್​ ದ್ರಾವಿಡ್​ 51ನೇ ವರ್ಷದ ಜನ್ಮದಿನ ಆಚರಿಸುವ ವೇಳೆ ಈ ವಿಷಯವನ್ನ ಮತ್ತೊಮ್ಮೆ ಸ್ಮರಿಸಲಾಗಿದೆ.

ಜನವರಿ 11, 2024 ರಾಹುಲ್ ದ್ರಾವಿಡ್ ಅವರ 51 ನೇ ಹುಟ್ಟುಹಬ್ಬವಾಗಿದ್ದು, ನಿರೂಪಕ ಗೌರವ್ ಕಪೂರ್ ಅವರು ದ್ರಾವಿಡ್ ಅವರ ಸಾಧನೆಗಳನ್ನು ಉಲ್ಲೇಖಿಸಿದ್ದಾರೆ. ವಿಕೆಟ್ ಕೀಪಿಂಗ್​ನಿಂದ ಹಿಡಿದು 2007 ರ ವಿಶ್ವಕಪ್​ನಲ್ಲಿ ತಂಡವನ್ನು ಮುನ್ನಡೆಸುವವರೆಗೆ ತಂಡಕ್ಕಾಗಿ ಎಲ್ಲವನ್ನೂ ಮಾಡಿದ ವ್ಯಕ್ತಿ. ಈ ವೇಳೆ ಅವರ ಅಪಾರ ಅಭಿಮಾನಿಗಳನ್ನು ಗಿಟ್ಟಿಸಿಕೊಂಡಿದ್ದರು. ಕ್ರಿಕೆಟ್​ ಜತೆಗೆ ಅವರು ಅತ್ಯಂತ ಸುಂದರ ಎಂಬುದು ಇನ್ನೊಂದು ಕಾರಣ.

ನಾಲ್ಕು ವರ್ಷಗಳ ಹಿಂದೆ ಗೌರವ್ ಕಪೂರ್ ತಮ್ಮ ‘ಬ್ರೇಕ್ ಫಾಸ್ಟ್ ವಿತ್ ಚಾಂಪಿಯನ್ಸ್’ ಕಾರ್ಯಕ್ರಮಕ್ಕೆ ರಾಹುಲ್ ದ್ರಾವಿಡ್ ಅವರನ್ನು ಆಹ್ವಾನಿಸಿದ್ದರು. ಅಲ್ಲಿ ದ್ರಾವಿಡ್ ಅವರ ಬಗ್ಗೆ ಕೇಳರಿಯದ ಕೆಲವು ಕಥೆಗಳು ಬಹಿರಂಗಗೊಂಡಿವೆ. ಅದರಲ್ಲಿ ಒಂದು 2005ರಲ್ಲಿ ರಾಹುಲ್ ದ್ರಾವಿಡ್ ಅವರನ್ನು ಭಾರತದ ಅತ್ಯಂತ ಸೆಕ್ಸಿಯೆಸ್ಟ್​ ಕ್ರೀಡಾಪಟು ಎಂದು ಘೋಷಣೆಗೊಂಡಿದ್ದ ವಿಷಯ. ಅಚ್ಚರಿಯೆಂದರೆ ಸ್ವತಃ ರಾಹುಲ್ ದ್ರಾವಿಡ್ ಅವರಿಗೂ ಇದು ತಿಳಿದಿರಲಿಲ್ಲ.

ಹಲವರ ಮಧ್ಯೆ ಗೆದ್ದಿದ್ದ ದ್ರಾವಿಡ್​

2005ರಲ್ಲಿ, ಭಾರತವು ಯುವರಾಜ್ ಸಿಂಗ್, ಸೌರವ್ ಗಂಗೂಲಿ ಮತ್ತು ಸಚಿನ್ ತೆಂಡೂಲ್ಕರ್ ಅವರಂತಹ ಸುಂದರಾಂಗ ಆಟಗಾರರನ್ನು ಹೊಂದಿತ್ತು. ಆದರೆ ಅತ್ಯಂತ ವಿನಮ್ರ ಕ್ರಿಕೆಟಿಗರಲ್ಲಿ ಒಬ್ಬರಾದ ದ್ರಾವಿಡ್, ಯುವರಾಜ್ ಸಿಂಗ್ ಸೇರಿದಂತೆ ಹಲವರನ್ನು ಸೋಲಿಸಿದ್ದರು.

ಇದನ್ನೂ ಓದಿ : VIRAL VIDEO: ವಿರಾಟ್ ಕೊಹ್ಲಿ ಯಾರು?; ರೊನಾಲ್ಡೊ ಪ್ರತಿಕ್ರಿಯೆಗೆ ದಂಗಾದ ಖ್ಯಾತ ಯೂಟ್ಯೂಬರ್

ಭಾರತದ ಅತ್ಯಂತ ಸೆಕ್ಸಿಯಸ್ಟ್ ಕ್ರೀಡಾಪಟು ಎಂದು ಹೆಸರಿಸಲ್ಪಟ್ಟಿರುವ ಬಗ್ಗೆ ಗೌರವ್ ಕಪೂರ್ ಅವರು ರಾಹುಲ್ ಗೆ ಹಲವು ಪ್ರಶ್ನೆಗಳನ್ನು ಕೇಳಿದ್ದರು. 10,000 ಏಕದಿನ ರನ್ ಅಥವಾ 300ಕ್ಕೂ ಹೆಚ್ಚು ಏಕದಿನ ಪಂದ್ಯಗಳನ್ನು ಆಡಿರುವ ಖುಷಿ ಇದೆಯೇ ಅಥವಾ ಯುವರಾಜ್ ಸಿಂಗ್ ಅವರಂತಹವರನ್ನು ಸೋಲಿಸಿ ಸೆಕ್ಸಿ ಕ್ರೀಡಾಪಟುವಾಗಿರುವ ಬಗ್ಗೆ ಖುಷಿಯಿದೆಯೇ ಎಂದು ಕೇಳಿದ್ದರು. ಇದಕ್ಕೆ ದ್ರಾವಿಡ್​ ಅವರು ಯುವರಾಜ್ ಸಿಂಗ್ ಸೋಲಿಸಿದಕ್ಕೆ ಪ್ರಮಾಣ ಪತ್ರ ಕೊಡುತ್ತೀರಾ ಎಂದು ಕೇಳಿದ್ದರು.

ದ್ರಾವಿಡ್ ಪ್ರಸ್ತುತ ಭಾರತ ತಂಡದ ಪ್ರಧಾನ ಕೋಚ್ ಆಗಿದ್ದಾರೆ. ಅಫ್ಘಾನಿಸ್ತಾನ ವಿರುದ್ಧದ ಟಿ20ಐ ಸರಣಿ ಸರಣಿಗೆ ಸಿದ್ದತೆ ನಡೆಸುತ್ತಿದ್ದಾರೆ.

Exit mobile version