Site icon Vistara News

Ram Charan; ಧೋನಿ ಜತೆ ಪೋಸ್‌ ಕೊಟ್ಟ ರಾಮ್‌ ಚರಣ್‌; ಸಿನಿಮಾ ಬಗ್ಗೆ ಮಾತುಕತೆನಾ?

Ram Charan with MS Dhoni

ಬೆಂಗಳೂರು: ಗ್ಲೋಬಲ್ ಸ್ಟಾರ್ ರಾಮ್ ಚರಣ್ (Ram Charan) ಶಬರಿಮಲೆ ಅಯ್ಯಪ್ಪ ಮಾಲೆ ಧರಿಸಿ ಅ.4ರಂದು ಮುಂಬೈನ ಶ್ರೀ ಸಿದ್ಧಿವಿನಾಯಕ ದೇವಸ್ಥಾನಕ್ಕೆ ಭೇಟಿ ಕೊಟ್ಟಿದ್ದರು. ಈ ಫೋಟೊಗಳು ವೈರಲ್‌ ಕೂಡ ಆಗಿತ್ತು. ಇದೀಗ ರಾಮ್ ಚರಣ್ ಅವರು ಭಾರತ ಕ್ರಿಕೆಟ್‌ ಟೀಮ್‌ನ ಮಾಜಿ ನಾಯಕ ಎಂಎಸ್ ಧೋನಿ ಜತೆಗಿರುವ ಫೋಟೊವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಇಬ್ಬರೂ ಕ್ಯೂಟ್‌ ಆಗಿ ಸ್ಮೈಲ್‌ ಕೊಟ್ಟಿದ್ದಾರೆ (Ram Charan Meets MS Dhoni). ರಾಮ್ ಚರಣ್ ಹಸಿರು ಬಣ್ಣದ ಶರ್ಟ್ ಧರಿಸಿದ್ದರೆ, ಎಂಎಸ್ ಧೋನಿ ನೀಲಿ ಬಣ್ಣದ ಟೀ ಶರ್ಟ್ ಧರಿಸಿದ್ದರು. “ಭಾರತದ ಹೆಮ್ಮೆ ಧೋನಿ ಅವರನ್ನು ಭೇಟಿಯಾಗಲು ತುಂಬಾ ಸಂತೋಷವಾಗಿದೆ” ಎಂದು ರಾಮ್ ಚರಣ್ ಶೀರ್ಷಿಕೆಯಲ್ಲಿ ಬರೆದಿದ್ದಾರೆ.

ಈ ಫೋಟೊ ವೈರಲ್‌ ಆಗುತ್ತಿದ್ದಂತೆ ಸೋಷಿಯಲ್‌ ಮೀಡಿಯಾದಲ್ಲಿ ಸಾಕಷ್ಟು ಚರ್ಚೆಗಳು ನಡೆದವು. ಒಬ್ಬ ಬಳಕೆದಾರರು “ಗೇಮ್ ಚೇಂಜರ್ಸ್” ಎಂದು ಬರೆದಿದ್ದಾರೆ. ಗೇಮ್ ಚೇಂಜರ್ (Game Changers) ಎಂಬುದು ರಾಮ್ ಚರಣ್ ಅವರ ಮುಂಬರುವ ಸಿನಿಮಾ. ಈ ಮೂಲಕ ಈ ಸಿನಿಮಾಗೆ ಧೋನಿ ಎಂಟ್ರಿ ಕೊಡುತ್ತಾರೆ ಎಂಬ ಚರ್ಚೆಗಳು ಆದವು. ಮತ್ತೊಬ್ಬರು “ಎರಡು ಸಿಂಹಗಳು ಭೇಟಿಯಾಗಿವೆ” ಎಂದು ಕಮೆಂಟ್‌ ಮಾಡಿದ್ದಾರೆ.

ಧೋನಿ ಅವರು ಇದೀಗ ಸಿನಿಮಾ ನಿರ್ಮಾಣ ಸಂಸ್ಥೆಯನ್ನು ಹೊಂದಿದ್ದಾರೆ. ‘ಧೋನಿ ಎಂಟರ್​ಟೇನ್​ಮೆಂಟ್’ ನಿರ್ಮಾಣ ಸಂಸ್ಥೆಯ ಮೂಲಕ ಅವರು ಸಿನಿಮಾ ನಿರ್ಮಾಣಕ್ಕೆ ಇಳಿದಿದ್ದಾರೆ. ‘ಲೆಟ್ಸ್ ಗೆಟ್ ಮ್ಯಾರೀಡ್’ ಹೆಸರಿನ ಚಿತ್ರವನ್ನೂ ಅವರು ನಿರ್ಮಾಣ ಮಾಡಿದ್ದಾರೆ. ಈಗ ಅವರು ರಾಮ್ ಚರಣ್ (Mumbai Siddhivinayak temple)​ ಅವರನ್ನು ಭೇಟಿ ಮಾಡಿದ್ದಾರೆ. ರಾಮ್ ಚರಣ್ ಅವರು ಮುಂದಿನ ದಿನಗಳಲ್ಲಿ ಧೋನಿ ಅವರ ಜೊತೆ ಕೈ ಜೋಡಿಸುತ್ತಾರಾ ಎಂಬ ಕುತೂಹಲ ಸಿನಿರಸಿಕರಿಗೆ ಇದೆ.

ಇದನ್ನೂ ಓದಿ: Ram Charan: ಅಯ್ಯಪ್ಪ ಮಾಲೆ ಧರಿಸಿ ಮುಂಬೈ ಸಿದ್ಧಿ ವಿನಾಯಕ ದೇಗುಲಕ್ಕೆ ಭೇಟಿ ಕೊಟ್ಟ ರಾಮ್‌ಚರಣ್‌!

ರಾಮ್‌ ಚರಣ್‌ ಪೋಸ್ಟ್‌

ತ್ರಿಬಲ್ ಆರ್ ಸೂಪರ್ ಡೂಪರ್ ಹಿಟ್ ಬಳಿಕ ರಾಮ್ ಚರಣ್ ಕೇವಲ ಒಂದೆರಡು ದಿನಗಳಿಗಾಗಿ ಮಾಲೆ ಧರಿಸಿರಲಿಲ್ಲ. ಬದಲಿಗೆ ಬರೋಬ್ಬರಿ 41 ದಿನಗಳ ಕಾಲ ಅವರು ಮಾಲಾಧಾರಿಯಾಗಿ ಅಯ್ಯಪ್ಪನ ಸ್ಮರಣೆ ಮಾಡಿದ್ದರು. ಮಾಲಾಧಾರಿ ಪಾಲಿಸಬೇಕಾದ ಕಠಿಣ ನಿಯಮಗಳನ್ನು 41 ದಿನಗಳ ವರೆಗೆ ಪಾಲಿಸಿದ್ದರು. ಮಗಳು ಹುಟ್ಟಿದ ಬಳಿಕ ಮಾಲೆ ಧರಿಸಿದ್ದ ರಾಮ್ ಚರಣ್ ಶ್ರೀ ಸಿದ್ಧಿವಿನಾಯಕ ದೇವಸ್ಥಾನಕ್ಕೆ ಭೇಟಿ ನೀಡಿ ದರ್ಶನದ ಬಳಿಕ ಅಯ್ಯಪ್ಪ ದೀಕ್ಷೆಯನ್ನು ಮುಗಿಸಿದ್ದಾರೆ. ದೇಗುಲಕ್ಕೆ ನಟ ಭೇಟಿ ನೀಡಿದ ಸಂದರ್ಭದಲ್ಲಿ ಅಭಿಮಾನಿಗಳು ಫೋಟೊಗಾಗಿ ಮುಗಿಬಿದ್ದರು. ಸದ್ಯ ರಾಮ್ ಚರಣ್, ಶಂಕರ್ ನಿರ್ದೆಶನದ ಗೇಮ್ ಚೇಂಜರ್ ಸಿನಿಮಾಗಾಗಿ ಎದುರು ನೋಡುತ್ತಿದ್ದಾರೆ.

ನಿರ್ದೇಶಕ ಶಂಕರ್‌ ಜತೆ ಸಿನಿಮಾ ಮಾಡುವಾಗಲೇ ಹೊಸ ಸಿನಿಮಾ ಅನೌನ್ಸ್‌ ಮಾಡಿದ್ದಾರೆ ನಟ ರಾಮ್‌ ಚರಣ್‌ (Ramcharan). ಇದೇ ಮೊದಲ ಬಾರಿಗೆ ʻಉಪ್ಪೇನʼ ಸಿನಿಮಾ ಖ್ಯಾತಿಯ ನಿರ್ದೇಶಕ ಬುಚ್ಚಿ ಬಾಬು (Buchi Babu film) ಸನಾ ಜತೆ ಕೈ ಜೋಡಿಸಿದ್ದಾರೆ. ಈ ಯೋಜನೆಯನ್ನು ಬಹಳ ಹಿಂದೆಯೇ ಘೋಷಿಸಲಾಗಿತ್ತು. ಇದೀಗ ರಾಮ್‌ಚರಣ್‌ ಜತೆ ನಾಯಕಿಯಾಗಿ ಯಾರು ಮಿಂಚಲಿದ್ದಾರೆ ಎಂಬ ಚರ್ಚೆಗಳು ಶುರುವಾಗಿವೆ. ವರದಿಗಳ ಪ್ರಕಾರ ಬಾಲಿವುಡ್‌ ಸ್ಟಾರ್‌ ಹೀರೋಯಿನ್‌ ರವೀನಾ ಟಂಡನ್ ಅವರ ಮಗಳು, ರಶಾ ಥಡಾನಿ (Rasha Thadani) ಜೋಡಿಯಾಲಿದ್ದಾರೆ ಎನ್ನಲಾಗುತ್ತಿದೆ.

Exit mobile version