Site icon Vistara News

RCB vs CSK: ಧೋನಿ ವರ್ತನೆಗೆ ‘ಇಟ್‌ ಹರ್ಟ್ಸ್‌​’ ಎಂದ ಆರ್​ಸಿಬಿ ಅಭಿಮಾನಿಗಳು; ಧೋನಿ ಮಾಡಿದ ತಪ್ಪೇನು?

RCB vs CSK

angry MS Dhoni leaves without shaking hands with players

ಬೆಂಗಳೂರು: ಮಹೇಂದ್ರ ಸಿಂಗ್‌ ಧೋನಿ(MS Dhoni) ಕ್ರಿಕೆಟ್‌ ಮೈದಾನದಲ್ಲಿ ಶಾಂತಿಯಿಂದ ವ‌ರ್ತಿಸುತ್ತಾರೆ. ಬ್ಯಾಟಿಂಗ್‌, ವಿಕೆಟ್‌ ಕೀಪಿಂಗ್‌ ಅಥವಾ ನಾಯಕನಾಗೇ ಇರಲಿ ಶಾಂತಚಿತ್ತ ಅವರ ಮುಖ್ಯ ಗುಣ. ಎಂತಹ ಸನ್ನಿವೇಶವಿದ್ದರೂ ಧೋನಿ(MS Dhoni leaves without shaking hands) ತಾಳ್ಮೆ ಕಳೆದುಕೊಳ್ಳುವುದು ವಿರಳ. ಇದೇ ಕಾರಣಕ್ಕೆ ಅವರಿಗೆ ಕ್ಯಾಪ್ಟನ್‌ ಕೂಲ್‌ ಎಂಬ ಹೆಸರು ಕೂಡ ಇದೆ. ಆದರೆ ನಿನ್ನೆ(ಶನಿವಾರ) ನಡೆದ ಆರ್​ಸಿಬಿ(RCB vs CSK) ವಿರುದ್ಧದ ಪಂದ್ಯದಲ್ಲಿ ಧೋನಿ ತೋರಿದ ವರ್ತನೆಗೆ ಎದುರಾಳಿ ತಂಡದ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ.

ಚಿನ್ನಸ್ವಾಮಿ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆದ ಮಳೆ ಪೀಡಿತ ಪಂದ್ಯದಲ್ಲಿ ಟಾಸ್​ ಸೋತು ಬ್ಯಾಟಿಂಗ್​ ಆಹ್ವಾನ ಪಡೆದ ಆರ್​ಸಿಬಿ ನಿಗದಿತ 20 ಓವರ್​ಗಳಲ್ಲಿ 5 ವಿಕೆಟ್​ ನಷ್ಟಕ್ಕೆ 218 ರನ್​ ಬಾರಿಸಿತು. ಜವಾಬಿತ್ತ ಚೆನ್ನೈ ಈ ಬೃಹತ್​ ಮೊತ್ತವನ್ನು ಬೆನ್ನಟ್ಟಿದ ಚೆನ್ನೈ ಹಲವು ಏರಿಳಿತ ಕಂಡು ಕೊನೆಗೆ ತನ್ನ ಪಾಲಿನ ಆಟದಲ್ಲಿ 7 ವಿಕೆಟ್​ಗೆ 191 ರನ್​ ಗಳಿಸಲಷ್ಟೇ ಶಕ್ತವಾಗಿ ಸೋಲಿಗೆ ಶರಣಾಯಿತು. ಜತೆಗೆ ಟೂರ್ನಿಯಿಂದಲೂ ಹೊರಬಿದ್ದು ಮಾಜಿ ಚಾಂಪಿಯನ್​ ಎನಿಸಿಕೊಂಡಿತು.

ಇದನ್ನೂ ಓದಿ RCB vs CSK: ಚೆನ್ನೈ ಸೋಲಿಗೆ ಧೋನಿ ಬಾರಿಸಿದ ಔಟ್​ ಆಫ್​ದಿ ಸ್ಟೇಡಿಯಂ ಸಿಕ್ಸರ್​ ಕಾರಣ

ಪಂದ್ಯದ ಮುಕ್ತಾಯದ ಬಳಿಕ ವಾಡಿಕೆಯಂತೆ ಉಭಯ ತಂಡಗಳ ಆಟಗಾರರು ಪರಸ್ಪರ ಹಸ್ತಲಾಘವ ಮಾಡಬೇಕು. ಅದರಂತೆ ಚೆನ್ನೈ ತಂಡದ ಆಟಗಾರರೆಲ್ಲ ಸರದಿ ಸಾಲಿನಲ್ಲಿ ನಿಂತು ಸಿದ್ಧರಾಗಿದ್ದರು. ಆದರೆ ಆರ್​ಸಿಬಿ ಆಟಗಾರರು ಮೈದಾನದಲ್ಲೇ ಗೆಲುವಿನ ಸಂಭ್ರಮಾಚರಣೆ ಮಾಡುತ್ತಿದ್ದರು. ಕೆಲ ಕಾಲ ಕಾದ ಧೋನಿ ಆರ್​ಸಿಬಿ ಆಟಗಾರರು ಬರದೇ ಇದದ್ದನ್ನು ನೋಡಿ ಪೆವಿಲಿಯನ್​ನತ್ತ ಮರಳಿದ್ದಾರೆ. ಈ ವಿಡಿಯೊ ವೈರಲ್​ ಆಗಿದೆ.

ಆರ್​ಸಿಬಿ ಅಭಿಮಾನಿಗಳು ಚೆನ್ನೈ ವಿರೋದಿಯಾಗಿದ್ದರೂ ಕೂಡ ನಿನ್ನೆ ಧೋನಿಗೆ ಸಂಪೂರ್ಣ ಬೆಂಬಲ ಸೂಚಿಸಿದ್ದರು. ಅಲ್ಲದೆ ಧೋನಿಯ ಜೆರ್ಸಿ ತೊಟ್ಟು, ದೊಡ್ಡ ಬ್ಯಾನರ್​ ಮೂಲಕ ನೀವು ವಿದಾಯ ಹೇಳಬೇಡಿ ಇದು ಆರ್​ಸಿಬಿ ಮತ್ತು ಕೊಹ್ಲಿ ಅಭಿಮಾನಿಗಳ ಬೇಡಿಕೆ ಎಂದು ಮನವಿ ಮಾಡಿದ್ದರು. ಈ ಮೂಲಕ ಧೋನಿಗೆ ಸಪೋರ್ಟ್​ ಮಾಡಿದ್ದರು. ಆದರೆ ಧೋನಿ ಆರ್​ಸಿಬಿ ಆಟಗಾರರಿಗೆ ಹಸ್ತಲಾಘವ ಮಾಡದೆ ತೆರಳಿದ್ದು ಮಾತ್ರ ಬೇಸರ ತಂದಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ‘ಇಟ್‌ ಹರ್ಟ್ಸ್‌​’ ಎಂದ ಹ್ಯಾಶ್​ ಟ್ಯಾಗ್​ನೊಂದಿಗೆ ಬರೆದುಕೊಂಡಿದ್ದಾರೆ.

ಧೋನಿ ಮೈದಾನದಲ್ಲಿದ ಆರ್​ಸಿಬಿ ಆಟಗಾರರಿಗೆ ಹಸ್ತಲಾಘವ ಮಾಡದಿದ್ದರೂ ಕೂಡ ತಾವು ಪೆವಿಲಿಯನ್​ ಕಡೆಗೆ ಹೋಗುವಾಗ ಎದುರಿಗೆ ಸಿಕ್ಕ ಆರ್​ಸಿಬಿ ಸಿಬ್ಬಂದಿಗಳಿಗೆ ಹಸ್ತಲಾಘವ ನೀಡಿದ್ದಾರೆ. ಯಶ್​ ದಯಾಳ್​ ಎಸೆತ ಅಂತಿಮ ಓವರ್​ನ ಮೊದಲ ಎಸೆತವನ್ನೇ ಧೋನಿ ಔಟ್​ ಆಫ್​ದಿ ಸ್ಟೇಡಿಯಂಗೆ ಸಿಕ್ಸರ್ ಬಾರಿಸಿದರು. ಈ ಸಿಕ್ಸರ್​ 110 ಮೀ. ದೂರ ಚಿಮ್ಮಿತು. ಮುಂದಿನ ಎಸೆತದಲ್ಲಿಯೂ ಧೋನಿ ಸಿಕ್ಸರ್​ ಬಾರಿಸುವ ಪ್ರಯತ್ನದಲ್ಲಿ ಬೌಂಡರಿ ಲೈನ್​ನಲ್ಲಿ ಕ್ಯಾಚ್​ ನೀಡಿ ವಿಕೆಟ್​ ಕಳೆದುಕೊಂಡರು. ಧೋನಿ ವಿಕೆಟ್​ ಪತನಗೊಳ್ಳುತ್ತಿದ್ದಂತೆ ಚೆನ್ನೈ ಸೋಲು ಕೂಡ ಖಚಿತಗೊಂಡಿತು.

Exit mobile version