Site icon Vistara News

Richest Cricketers: ವಿಶ್ವದ ಟಾಪ್‌ 5 ಶ್ರೀಮಂತ ಕ್ರಿಕೆಟಿಗರಿವರು! ಎಷ್ಟಿದೆ ಇವರ ಆಸ್ತಿ?

Richest Cricketers

ವಿಶ್ವದ ಅತ್ಯಂತ ಜನಪ್ರಿಯ ಕ್ರೀಡೆಗಳಲ್ಲಿ (most popular sports) ಒಂದಾಗಿರುವ ಕ್ರಿಕೆಟ್ (cricket) ತನ್ನ ಅಪಾರ ಅಭಿಮಾನಿಗಳ ಕಾರಣದಿಂದಾಗಿ ವರ್ಷದಿಂದ ವರ್ಷಕ್ಕೆ ಹೆಚ್ಚಿನ ಆದಾಯ ಗಳಿಸುವ ಕ್ಷೇತ್ರವಾಗಿ ಬೆಳೆದಿದೆ. ಇದರಲ್ಲಿ ಕೆಲವು ಆಟಗಾರರು (Richest Cricketers) ಸಾಕಷ್ಟು ಹೆಸರು ಮಾತ್ರವಲ್ಲ ಸಂಪತ್ತನ್ನು ಗಳಿಸಿದ್ದಾರೆ. ಪ್ರಪಂಚದಾದ್ಯಂತದ ಅಭಿಮಾನಿಗಳಲ್ಲಿ ಅಪಾರ ಜನಪ್ರಿಯತೆಯನ್ನು ಹೊಂದಿರುವ ಹಲವಾರು ಕ್ರಿಕೆಟಿಗರಲ್ಲಿ ಕೆಲವರು ಮಾತ್ರ ವಿಶ್ವದ ಶ್ರೀಮಂತ ಕ್ರಿಕೆಟಿಗರಿಗಾಗಿ (Cricketers) ಗುರುತಿಸಿಕೊಂಡಿದ್ದಾರೆ.

ಕ್ರಿಕೆಟ್ ಆಡುವುದರ ಹೊರತಾಗಿ ವಿಶ್ವದ ಶ್ರೀಮಂತ ಕ್ರಿಕೆಟಿಗರು ಕೆಲವು ಬ್ರ್ಯಾಂಡ್‌ಗಳಲ್ಲಿ ಪ್ರಮುಖ ಹೆಸರು ಮತ್ತು ಹೆಚ್ಚುವರಿ ಆದಾಯವನ್ನೂ ಗಳಿಸುತ್ತಾರೆ. ಅದು ಅವರ ನಿವ್ವಳ ಮೌಲ್ಯವನ್ನು ಹೆಚ್ಚಿಸುತ್ತದೆ. ವಿಶ್ವದ ಶ್ರೀಮಂತ ಕ್ರಿಕೆಟಿಗರಲ್ಲಿ ಭಾರತದ ಮೂವರು ಕ್ರಿಕೆಟಿಗರೂ ಸೇರಿದ್ದಾರೆ.

ಕೆಲವು ಕ್ರಿಕೆಟ್ ಆಟಗಾರರು ಫ್ರಾಂಚೈಸಿ ಕ್ರಿಕೆಟ್‌ನಲ್ಲಿ ದೊಡ್ಡ ಹೆಸರು, ಆದಾಯ ಗಳಿಸಿದ್ದರೆ ಇನ್ನು ಕೆಲವರು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್), ಬಿಗ್ ಬ್ಯಾಷ್ ಲೀಗ್ (ಬಿಬಿಎಲ್), ಕೆರಿಬಿಯನ್ ಪ್ರೀಮಿಯರ್ ಲೀಗ್ (ಸಿಪಿಎಲ್) ಮತ್ತು ಮತ್ತೆ ಅನೇಕರು ಕ್ರಿಕೆಟ್ ಲೀಗ್‌ಗಳಲ್ಲಿ ದುಬಾರಿ ಆಟಗಾರರಾಗಿ ಗುರುತಿಸಿಕೊಂಡಿದ್ದಾರೆ. ಇದರಲ್ಲಿ ವಿಶ್ವದ ಅಗ್ರ ಐದು ಶ್ರೀಮಂತ ಕ್ರಿಕೆಟಿಗರಾಗಿ ಗುರುತಿಸಿಕೊಂಡಿದ್ದಾರೆ. ಅವರು ಯಾರು, ಅವರ ಸಂಪತ್ತು ಎಷ್ಟಿದೆ ಗೊತ್ತೇ?

ವಿಶ್ವದ ಶ್ರೀಮಂತ ಕ್ರಿಕೆಟಿಗರ ಪಟ್ಟಿಯಲ್ಲಿ ಭಾರತದ ಮೂವರು ಕ್ರಿಕೆಟಿಗರು ಮೊದಲನೇ ಸ್ಥಾನದಲ್ಲಿದ್ದಾರೆ. ಅದರಲ್ಲೂ ಕ್ರಿಕೆಟ್ ದೇವರು ಸಚ್ಚಿನ್ ತೆಂಡೂಲ್ಕರ್ ವಿಶ್ವದ ಅತಿ ಹೆಚ್ಚು ಶ್ರೀಮಂತ ಕ್ರಿಕೆಟಿಗರಾಗಿದ್ದಾರೆ.

Richest Cricketers


1. ಸಚಿನ್ ತೆಂಡೂಲ್ಕರ್

ಭಾರತದ ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ವಿಶ್ವದ ಸಾರ್ವಕಾಲಿಕ ಶ್ರೀಮಂತ ಕ್ರಿಕೆಟಿಗ. ಭಾರತೀಯ ಶ್ರೇಷ್ಠ ಕ್ರಿಕೆಟಿಗರಾಗಿರುವ ಇವರು ಸುಮಾರು 172 ಮಿಲಿಯನ್ ಡಾಲರ್ ನಿವ್ವಳ ಮೌಲ್ಯವನ್ನು ಹೊಂದಿದ್ದಾರೆ. ಇವರ ಸಂಪತ್ತಿನ ಮೌಲ್ಯ ಸುಮಾರು 1,440 ಕೋಟಿ ರೂ.

Richest Cricketers


2. ಎಂ.ಎಸ್. ಧೋನಿ

ಭಾರತದ ಮಾಜಿ ನಾಯಕ ಎಂ.ಎಸ್. ಧೋನಿ ವಿಶ್ವದ ಎರಡನೇ ಶ್ರೀಮಂತ ಕ್ರಿಕೆಟಿಗರಾಗಿದ್ದಾರೆ. ಹಲವು ದೊಡ್ಡ ಬ್ರ್ಯಾಂಡ್‌ಗಳಲ್ಲಿ ಪ್ರಮುಖ ಹೆಸರು ಗಳಿಸಿದ್ದಾರೆ. ವಿಕೆಟ್‌ಕೀಪರ್-ಬ್ಯಾಟರ್ ಆಗಿ ಸುಮಾರು 127 ಮಿಲಿಯನ್ ಡಾಲರ್ ನಿವ್ವಳ ಮೌಲ್ಯವನ್ನು ಹೊಂದಿದ್ದು, ಇವರ ಸಂಪತ್ತಿನ ಮೌಲ್ಯ 1,063 ಕೋಟಿ ರೂ.

Richest Cricketers


3. ವಿರಾಟ್ ಕೊಹ್ಲಿ

ಸಕ್ರಿಯ ಆಟಗಾರರ ಪೈಕಿ ಶ್ರೀಮಂತ ಕ್ರಿಕೆಟಿಗ, ಸ್ಟಾರ್ ಭಾರತೀಯ ಬ್ಯಾಟರ್ ವಿರಾಟ್ ಕೊಹ್ಲಿ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ಕ್ರಿಕೆಟ್ ಆಡುವುದರ ಹೊರತಾಗಿ ಕೊಹ್ಲಿ ಹಲವು ಬ್ರ್ಯಾಂಡ್‌ಗಳಲ್ಲಿ ಹೆಸರನ್ನು ಮಾಡಿದ್ದಾರೆ. ಸುಮಾರು 122 ಮಿಲಿಯನ್ ನಿವ್ವಳ ಮೌಲ್ಯವನ್ನು ಹೊಂದಿರುವ ಇವರ ಸಂಪತ್ತಿನ ಮೌಲ್ಯ 1,021 ಕೋಟಿ ರೂ.

Richest Cricketers


4. ರಿಕಿ ಪಾಂಟಿಂಗ್

ರಿಕಿ ಪಾಂಟಿಂಗ್ ಅಂತಾರಾಷ್ಟ್ರೀಯ ಕ್ರಿಕೆಟ್‌ನ ಶ್ರೇಷ್ಠ ನಾಯಕರಲ್ಲಿ ಒಬ್ಬರು. ಇವರು ಆಸ್ಟ್ರೇಲಿಯಾ ತಂಡಕ್ಕೆ ಎರಡು ಒಡಿಐ ವಿಶ್ವಕಪ್ ಪ್ರಶಸ್ತಿಗಳು ಮತ್ತು ಎರಡು ಚಾಂಪಿಯನ್ಸ್ ಟ್ರೋಫಿ ಪ್ರಶಸ್ತಿ ಗೆಲ್ಲುವಲ್ಲಿ ಕಾರಣರಾದರು. ಸುಮಾರು 100 ಮಿಲಿಯನ್ ಡಾಲರ್ ನಿವ್ವಳ ಮೌಲ್ಯದೊಂದಿಗೆ ವಿಶ್ವದ ನಾಲ್ಕನೇ ಶ್ರೀಮಂತ ಕ್ರಿಕೆಟಿಗರಾಗಿದ್ದಾರೆ. ಇವರ ಸಂಪತ್ತಿನ ಮೌಲ್ಯ ಸುಮಾರು 837 ಕೋಟಿ ರೂ.

ಇದನ್ನೂ ಓದಿ: Paris Olympics 2024 : ಕ್ರಿಕೆಟ್ ಕೆಲಸದಿಂದ ನಿರಾಳ; ಒಲಿಂಪಿಕ್ಸ್​​ವೀಕ್ಷಿಸಲು ತೆರಳಿದ ರಾಹುಲ್ ದ್ರಾವಿಡ್​

Richest Cricketers


5. ಜಾಕ್ವೆಸ್ ಕಾಲಿಸ್

ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ, ವಿಶ್ವದ ಶ್ರೇಷ್ಠ ಆಲ್‌ರೌಂಡರ್‌ಗಳಲ್ಲಿ ಒಬ್ಬರಾದ ಜಾಕ್ವೆಸ್ ಕಾಲಿಸ್ ವಿಶ್ವದ ಶ್ರೀಮಂತ ಕ್ರಿಕೆಟಿಗರಲ್ಲಿ ಒಬ್ಬರಾಗಿದ್ದಾರೆ. ಇವರು ಸುಮಾರು 586 ಕೋಟಿ ಮೊತ್ತದ ಸಂಪತ್ತನ್ನು ಹೊಂದಿದ್ದು, ಸುಮಾರು 70 ಮಿಲಿಯನ್ ಡಾಲರ್ ನಿವ್ವಳ ಮೌಲ್ಯವನ್ನು ಹೊಂದಿದ್ದಾರೆ.

Exit mobile version