ಲಖನೌ: ಡೆಲ್ಲಿ ಕ್ಯಾಪಿಟಲ್ಸ್ ನಾಯಕ ರಿಷಭ್ ಪಂತ್ (Rishabh Pant) ಐಪಿಎಲ್ನಲ್ಲಿ 3000 ರನ್ ಗಡಿ ದಾಟಿದ ಸಾಧನೆ ಮಾಡಿದ್ದಾರೆ. ಲಕ್ನೋದ ಏಕನಾ ಕ್ರೀಡಾಂಗಣದಲ್ಲಿ ಲಕ್ನೊ ಸೂಪರ್ ಜೈಂಟ್ಸ್ ವಿರುದ್ದದ ಪಂದ್ಯದಲ್ಲಿ ಈ ಸಾಧನೆ ಮಾಡಿದ್ದಾರೆ. ‘ಮಿರಾಕಲ್ ಮ್ಯಾನ್’ 104 ಐಪಿಎಲ್ ಪಂದ್ಯಗಳನ್ನು ಆಡಿದ್ದು, 34.61 ಸರಾಸರಿಯಲ್ಲಿ 3000 ರನ್ ಗಡಿ ದಾಟಿದ್ದಾರೆ. ಈ ಮೂಲಕ ಅವರು ಮತ್ತೊಂದು ಸಾಧನೆ ಮಾಡಿದ್ದಾರೆ. ಪಂದ್ಯದಲ್ಲಿ ಅವರು ಸ್ಫೋಟಕ 41 ರನ್ ಬಾರಿಸಿದ್ದಾರೆ. ಈ ಮೂಲಕ ಅವರ ನೇತೃತ್ವದ ತಂಡವು ಹಾಲಿ ಐಪಿಎಲ್ನಲ್ಲಿ 2ನೇ ಗೆಲವು ದಾಖಲಿಸಿದೆ.
𝐎𝐮𝐫 𝐥𝐞𝐚𝐝𝐢𝐧𝐠 𝐫𝐮𝐧-𝐬𝐜𝐨𝐫𝐞𝐫. 𝐎𝐮𝐫 𝐩𝐫𝐢𝐝𝐞 😎🔥
— Delhi Capitals (@DelhiCapitals) April 12, 2024
We love you 3️⃣0️⃣0️⃣0️⃣, Rishabh ❤️💙#YehHaiNayiDilli #IPL2024 #LSGvDC pic.twitter.com/WZ4dXSGqny
ರಿಷಭ್ ಪಂತ್ ಕಾರು ಅವಘಡದಿಂದ ಉಂಟಾದ ಗಾಯಗಳಿಂದಾಗಿ 2023ನೇ ಆವೃತ್ತಿಯ ಐಪಿಎಲ್ನಲ್ಲಿ ಆಡಿರಲಿಲ್ಲ. ಸುಮಾರು ಒಂದೂವರೆ ವರ್ಷದ ಬಳಿಕ ವೃತ್ತಿಪರ ಕ್ರಿಕೆಟ್ಗೆ ಮರಳಿದ ಅವರು ಅಬ್ಬರಿಸಲು ಆರಂಭಿಸಿದ್ದಾರೆ. ಏತನ್ಮಧ್ಯೆ ಅವರು ಈ ಮಹತ್ಸಾಧನೆ ಮಾಡಿದ್ದಾರೆ.
ಐಪಿಎಲ್ನಲ್ಲಿ 3,000 ರನ್ ಪೂರೈಸಿದ ಅತ್ಯಂತ ಕಿರಿಯ ಆಟಗಾರು ಇವರು
- 24y, 215d – ಶುಬ್ಮನ್ ಗಿಲ್
- 26y, 186d – ವಿರಾಟ್ ಕೊಹ್ಲಿ
- 26y, 191d – ರಿಷಭ್ ಪಂತ್
- 26y, 320d – ಸಂಜು ಸ್ಯಾಮ್ಸನ್
- 27y, 161d – ಸುರೇಶ್ ರೈನಾ
ಡೆಲ್ಲಿ 6 ವಿಕೆಟ್ ವಿಜಯ
ಲಖನೌ: ಕುಲ್ದೀಪ್ ಯಾದವ್ (20 ರನ್ಗೆ 3 ವಿಕೆಟ್) ಮಾರಕ ಬೌಲಿಂಗ್ ಹಾಗೂ ಜೇಕ್ ಫ್ರೇಸರ್-ಮೆಕ್ಗುರ್ಕ್ (55 ರನ್) ಅರ್ಧ ಶತಕದ ನೆರವು ಪಡೆದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಐಪಿಎಲ್ 2024ರ (IPL 2024) 26ನೇ ಪಂದ್ಯದಲ್ಲಿ ಲಖನೌ ಸೂಪರ್ ಜೈಂಟ್ಸ್ ವಿರುದ್ಧ 6 ವಿಕೆಟ್ಗಳ ಗೆಲುವು ಸಾಧಿಸಿದೆ. ಇದು ಡೆಲ್ಲಿ ತಂಡಕ್ಕೆ ಹಾಲಿ ಆವೃತ್ತಿಯಲ್ಲಿ ಲಭಿಸಿದ ಎರಡನೇ ಗೆಲುವಾಗಿದೆ. ಇದರೊಂದಿಗೆ ಅಂಕಪಟ್ಟಿಯಲ್ಲಿ ಆರ್ಸಿಬಿಯನ್ನು ಒಂದು ಸ್ಥಾನ ಕೆಳಕ್ಕೆ ತಳ್ಳಿ 9ನೇ ಸ್ಥಾನಕ್ಕೆ ಏರಿದೆ. ಸೋಲಿನ ಹೊರತಾಗಿಯೂ ಲಕ್ನೊ ತಂಡ ನಾಲ್ಕನೇ ಸ್ಥಾನದಲ್ಲಿ ಉಳಿದಿದೆ.
ಇಲ್ಲಿನ ಅಟಲ್ಬಿಹಾರಿ ವಾಜಪೇಯಿ ಏಕನಾ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಲಕ್ನೊ ತಂಡ ನಿಗದಿತ 20 ಓವರ್ಗಳಲ್ಲಿ 7 ವಿಕೆಟ್ಗೆ 167 ರನ್ ಬಾರಿಸಿತು. ಪ್ರತಿಯಾಗಿ ಬ್ಯಾಟ್ ಮಾಡಿದ ಡೆಲ್ಲಿ ತಂಡ ಇನ್ನೂ 11 ಎಸೆತಗಳು ಬಾಕಿ ಇರುವಂತೆಯೇ 4 ವಿಕೆಟ್ಗೆ 170 ರನ್ ಬಾರಿಸಿ ಗೆಲುವು ಸಾಧಿಸಿತು. ಈ ಮೂಲಕ ತವರಿನ ತಂಡಕ್ಕೆ ಸೋಲುಣಿಸಿ ಗೆಲುವಿನ ಹಳಿಗೆ ಮರಳಿತು. ರಿಷಭ್ ಪಂತ್ ಕೂಡ ಬ್ಯಾಟಿಂಗ್ನಲ್ಲಿ ಅಮೋಘ ಪ್ರದರ್ಶನ ನೀಡಿದರು. ಅವರು 24 ಎಸೆತಕ್ಕೆ 41 ರನ್ ಬಾರಿಸಿತು.
ಇದನ್ನೂ ಓದಿ: IPL 2024 : ಆನ್ಫೀಲ್ಡ್ ಅಂಪೈರ್ ಜತೆ ವಾಗ್ವಾದ ನಡೆಸಿದ ರಿಷಭ್ ಪಂತ್; ಏನಾಯಿತು ಅವರಿಗೆ?
ಮೊದಲು ಬ್ಯಾಟ್ ಮಾಡಿದ ಲಕ್ನೊ ತಂಡ ಹೆಚ್ಚು ಪರಿಣಾಮಕಾರಿಯಾಗಿ ಬ್ಯಾಟ್ ಮಾಡಲಿಲ್ಲ. ಕ್ವಿಂಟನ್ ಡಿ ಕಾಕ್ 19 ರನ್ಗೆ ಔಟಾದರೆ ರಾಹುಲ್ 22 ಎಸೆತಕ್ಕೆ 39 ರನ್ ಬಾರಿಸಿ ಔಟಾದರು. ನಂತರದಲ್ಲಿ ಲಕ್ನೊ ಬ್ಯಾಟಿಂಗ್ ಬಲ ಕುಸಿಯಿತು. ದೇವದತ್ ಪಡಿಕ್ಕಲ್ 3, ಸ್ಟೊಯ್ನಿಸ್ 8 ರನ್, ಪೂರನ್ ಶೂನ್ಯಕ್ಕೆ ಔಟಾದರು. 89 ರನ್ಗೆ 6 ವಿಕೆಟ್ ಕಳೆದುಕೊಂಡ ಲಖನೌ ಚಿಂತೆಗೆ ಬಿತ್ತು. ಈ ವೇಳೆ ಆಪದ್ಭಾಂದವ ಆಯುಷ್ ಬದೋನಿ 35 ಎಸೆತಕ್ಕೆ 55 ರನ್ ಬಾರಿಸಿ ತಂಡದ ಮರ್ಯಾದೆ ಉಳಿಸಿದರು. ಕೊನೆಯಲ್ಲಿ ಅರ್ಶದ್ ಖಾನ್ 20 ರನ್ ಬಾರಿಸಿ ತಮ್ಮ ನೆರವು ಕೊಟ್ಟರು. ಡೆಲ್ಲಿ ಪರ ಖಲೀಲ್ ಅಹ್ಮದ್ ಕೂಡ 2 ವಿಕೆಟ್ ಉರುಳಿಸಿದರು.