Site icon Vistara News

Rishabh Pant: ಗೋಲಿ ಆಡಿ, ಒಂದೇ ಕೈಯಿಂದ ಸಿಕ್ಸರ್​ ಬಾರಿಸಿದ ರಿಷಭ್​ ಪಂತ್​; ವಿಡಿಯೊ ವೈರಲ್​

Rishabh Pant Plays 'Golli'

ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್‌ನ 17ನೇ ಆವೃತ್ತಿ(IPL 2024) ಆರಂಭಕ್ಕೆ ಇನ್ನು ಕೇವಲ ಎರಡು ವಾರಗಳು ಮಾತ್ರ ಬಾಕಿ ಉಳಿದಿವೆ. ಕಾರು ಅಪಘಾತದಿಂದ ಚೇತರಿಕೆ ಕಂಡು ಕ್ರಿಕೆಟ್‌ಗೆ ಮರಳುವ ಸಿದ್ಧತೆಯಲ್ಲಿರುವ ರಿಷಭ್​ ಪಂತ್​(Rishabh Pant) ಅವರು ಬೆಂಗಳೂರಿನ ಗಲ್ಲಿಯೊಂದರಲ್ಲಿ ಮಕ್ಕಳೊಂದಿಗೆ ಗೋಲಿ(Rishabh Pant Plays ‘Golli) ಆಡಿದ್ದಾರೆ. ಈ ವಿಡಿಯೊ ವೈರಲ್​ ಆಗಿದೆ.

ಬೆಂಗಳೂರಿನ ಎನ್​ಸಿಎಯಲ್ಲಿ ಫಿಟ್​ನೆಸ್​ ತರಬೇತಿ ಪಡೆಯುತ್ತಿರುವ ಪಂತ್​ ಅವರು ಬಿಡುವಿನ ವೇಳೆ ಇಲ್ಲಿನ ಸ್ಥಳೀಯ ಮಕ್ಕಳೊಂದಿಗೆ ಗೋಲಿ ಆಡಿದ್ದಾರೆ. ತಮ್ಮನ್ನು ಯಾರು ಗುರುತಿಸಬಾರದೆಂದು ಮಾಸ್ಕ್​ ಧರಿಸಿ ಪಂತ್​ ಗೋಲಿ ಆಡಿದ್ದಾರೆ. ಮಕ್ಕಳು ಕೂಡ ಪಂತ್​ ಜತೆ ಜೋಶ್​ನಲ್ಲಿ ಗೋಲಿ ಆಡಿದ್ದಾರೆ.

ಪಂತ್​ ಗೋಲಿ ಆಡುತ್ತಿರುವ ವಿಡಿಯೊ


ಒಂದೇ ಕೈಯಲ್ಲಿ ಸಿಕ್ಸರ್​ ಬಾರಿಸಿದ ಪಂತ್​


ಐಪಿಎಲ್​ಗಾಗಿ ಸಿದ್ಧತೆ ನಡೆಸುತ್ತಿರುವ ಪಂತ್​ ಅವರು ಅಭ್ಯಾಸ ಪಂದ್ಯದಲ್ಲಿ ತಮ್ಮ ಸಿಗ್ನೇಚರ್‌ ಶೈಲಿಯಾದ ಒಂದೇ ಕೈಯಲ್ಲಿ ಸಿಕ್ಸರ್​ ಬಾರಿಸಿ ಗಮನಸೆಳೆದರು. ಈ ವಿಡಿಯೊ ಕೂಡ ವೈರಲ್​ ಆಗಿದ್ದು ಪಂತ್​ ಅಭಿಮಾನಿಗಳು ಸಂತಸಗೊಂಡಿದ್ದಾರೆ.

ವೈರಲ್ ಕ್ಲಿಪ್ ಇಲ್ಲಿದೆ

ನಾಳೆ ಫಿಟ್​ನೆಸ್​ ವರದಿ ಪ್ರಕಟ


ಮಾರ್ಚ್‌ 5ರಂದು ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್‌ ಅಕಾಡೆಮಿಯು(NCA) ಪಂತ್​ ಅವರ ಫಿಟ್​ನೆಸ್​ ವರದಿಯನ್ನು ಘೋಷಿಸಲಿದೆ ಎಂದು ಡೆಲ್ಲಿ ಕ್ಯಾಪಿಟಲ್ಸ್‌ನ ಕ್ರಿಕೆಟ್‌ ನಿರ್ದೇಶಕ ಸೌರವ್‌ ಗಂಗೂಲಿ 2 ದಿನಗಳ ಹಿಂದೆ ಹೇಳಿದ್ದರು. ಪಂತ್‌ ಚೇತರಿಕೆ ಬಗ್ಗೆ ಮಾತನಾಡಿದ್ದ ಗಂಗೂಲಿ, “ಪಂತ್​ ಅವರು ಈಗಾಗಲೇ ಹಲವು ಫಿಟ್​ನೆಸ್​ ತರಬೇತಿ ನಡೆಸಿ ಕ್ರಿಕೆಟ್​ ಆಡಲು ಸಂಪೂರ್ಣ ಸಿದ್ಧರಾಗಿದ್ದಾರೆ. ಹೀಗಾಗಿ ರಿಷಭ್‌ ಅವರು ಫುಲ್​ ಫಿಟ್‌ ಆಗಿದ್ದಾರೆ ಎಂದು ಎನ್‌ಸಿಎ ಮಾರ್ಚ್​ 5ರಂದು ಘೋಷಿಸಲಿದೆ’ ಎಂದು ಮಾಹಿತಿ ನೀಡಿದ್ದರು.

ಇದನ್ನು ಓದಿ IPL 2024: ಅಭಿಮಾನಿಗಳಿಗೆ ಸಿಹಿ ಸುದ್ದಿ; ಸಂಪೂರ್ಣ ಐಪಿಎಲ್ ಆಡಲಿದ್ದಾರೆ ಈ ಸ್ಟಾರ್​ ಆಟಗಾರ

ಇದೇ ವೇಳೆ ಈ ಬಾರಿಯ ಆವೃತ್ತಿಯಲ್ಲಿ ಡೆಲ್ಲಿ ತಂಡವನ್ನು ಯಾರು ಮುನ್ನಡೆಸಲಿದ್ದಾರೆ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಗಂಗೂಲಿ, “ಪಂತ್‌ ಸಂಪೂರ್ಣ ಫಿಟ್‌ ಎಂದು ಎನ್‌ಸಿಎ ಘೋಷಿಸುವವರೆಗೂ ಕಾಯಿರಿ. ಬಳಿಕ ನಾವು, ನಾಯಕತ್ವದ ಬಗ್ಗೆ ಅಧಿಕೃತ ಮಾಹಿತಿ ನೀಡುತ್ತೇವೆ ಎಂದಿದ್ದರು. ಕಳೆದ ಬಾರಿ ಪಂತ್​ ಅನುಪಸ್ಥಿತಿಯಲ್ಲಿ ಡೇವಿಡ್​ ವಾರ್ನರ್​ ಅವರು ಡೆಲ್ಲಿ ತಂಡವನ್ನು ಮುನ್ನಡೆಸಿದ್ದರು. ಆದರೆ ತಂಡ ಅತ್ಯಂತ ಕಳಪೆ ಪ್ರದರ್ಶನ ತೋರಿ ಲೀಗ್​ನಿಂದ ಮೊದಲ ತಂಡವಾಗಿ ಹೊರಬಿದ್ದಿತ್ತು.

2022ರ ಡಿಸೆಂಬರ್​ 30ರಂದು(rishabh pant accident date) ರಿಷಭ್​ ಪಂತ್ ಅವರು ಚಲಾಯಿಸಿಕೊಂಡು ಹೋಗುತ್ತಿದ್ದ ಕಾರು ಡಿವೈಡರ್​ಗೆ ಡಿಕ್ಕಿ(rishabh pant accident) ಹೊಡೆದಿತ್ತು. ಈ ಭೀಕರ ಅಪಘಾತದಲ್ಲಿ ಅವರ ಕಾರು ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗಿತ್ತು. ಆದರೆ, ಪಂತ್​ ಪವಾಡ ಸದೃಶ ರೀತಿಯಲ್ಲಿ ಪಾರಾಗಿದ್ದರು.

Exit mobile version