ನವದೆಹಲಿ: ಟೀಮ್ ಇಂಡಿಯಾದ ವಿಕೆಟ್ ಕೀಪರ್ ಕಮ್ ಬ್ಯಾಟರ್ ರಿಷಭ್ ಪಂತ್(Rishabh Pant) ಅವರು ದೆಹಲಿ ಪ್ರೀಮಿಯರ್ ಲೀಗ್ 2024 ರ(Delhi Premier League T20 2024) ಉದ್ಘಾಟನಾ ಆವೃತ್ತಿಯ ಪಂದ್ಯದಲ್ಲಿ ಬೌಲಿಂಗ್(rishabh pant bowling) ನಡೆಸುವ ಮೂಲಕ ಗಮನಸೆಳೆದಿದ್ದಾರೆ. ಪಂತ್ ಬೌಲಿಂಗ್ ನಡೆಸುವ ವಿಡಿಯೊ ವೈರಲ್(viral video) ಆಗಿದ್ದು, ಇದು ನೂತನ ಕೋಚ್ ಗೌತಮ್ ಗಂಭೀರ್(gautam gambhir) ಪ್ರಭಾವ ಎಂದು ನಟ್ಟಿಗರು ಕಮೆಂಟ್ ಮಾಡಿದ್ದಾರೆ.
ಪಂತ್ ಪಂದ್ಯದ ಅಂತಿಮ ಓವರ್ ಬೌಲಿಂಗ್ ನಡೆಸಿದರು. ಎದುರಾಳಿ ಸೌತ್ ಡೆಲ್ಲಿ ತಂಡಕ್ಕೆ 6 ಎಸೆತಗಳಲ್ಲಿ ಗೆಲುವಿಗೆ ಒಂದು ರನ್ ಬೇಕಿದ್ದಾಗ ಪಂತ್ ಸ್ಪಿನ್ ಬೌಲಿಂಗ್ ನಡೆಸಿದರು. ಈ ಪಂದ್ಯದಲ್ಲಿ ಪಂತ್ ತಂಡ 3 ವಿಕೆಟ್ ಅಂತರದ ಸೋಲು ಕಂಡಿತು. ಮೊದಲು ಬ್ಯಾಟಿಂಗ್ ನಡೆಸಿದ ಪಂತ್ ಸಾರಥ್ಯದ ಪುರಾಣಿ ದಿಲ್ಲಿ ಸಿಕ್ಸ್ ತಂಡ 197 ರನ್ ಬಾರಿಸಿತು. ಈ ಮೊತ್ತವನ್ನು ಬೆನ್ನಟ್ಟಿದ ಸೌತ್ ಡೆಲ್ಲಿ ತಂಡ 7 ವಿಕೆಟ್ಗೆ 198 ರನ್ ಬಾರಿಸಿ ಗೆಲುವು ಸಾಧಿಸಿತು.
ಪಂತ್ ಅವರ ಬೌಲಿಂಗ್ ಕಂಡ ನೆಟ್ಟಿಗರು ಇದು ನೂತನ ಕೋಚ್ ಗಂಭೀರ್ ಅವರ ಪ್ರಭಾವ ಎಂದು ಹೇಳಿದ್ದಾರೆ. ಹೌದು, ಗಂಭೀರ್ ಭಾರತ ತಂಡದ ಕೋಚ್ ಆದಾಗಿನಿಂದ ತಂಡ ಆಟಗಾರರು ಕೇಲವ ಬ್ಯಾಟಿಂಗ್ ಮತ್ತು ಬೌಲಿಂಗ್ಗೆ ಸೀಮಿತರಲ್ಲ ಎಲ್ಲ ಪಾತ್ರವನ್ನು ನಿಭಾಯಿಸಬೇಕು ಎಂಬ ನಿಯಮ ಜಾರಿಗೆ ತಂದಿದ್ದಾರೆ. ಇದೇ ಕಾರಣಕ್ಕೆ ಶ್ರೀಲಂಕಾ ವಿರುದ್ಧದ ಟಿ20 ಸರಣಿಯಲ್ಲಿ ರಿಂಕು ಸಿಂಗ್, ನಾಯಕ ಸೂರ್ಯಕುಮಾರ್ ಯಾದವ್ ಕೇವಲ ಬ್ಯಾಟಿಂಗ್ ಮಾತ್ರವಲ್ಲದೆ ಬೌಲಿಂಗ್ ಕೂಡ ನಡೆಸಿದ್ದರು. ಏಕದಿನ ಸರಣಿಯಲ್ಲಿ ನಾಯಕ ರೋಹಿತ್ ಶರ್ಮ ಕೂಡ ಬೌಲಿಂಗ್ ನಡೆಸಿದ್ದರು. ಇದೀಗ ಪಂತ್ ಕೂಡ ಬೌಲಿಂಗ್ ಕಡೆ ಗಮನಹರಿಸಿದಂತಿದೆ.
ಇದನ್ನೂ ಓದಿ Rishabh Pant : ರಿಷಭ್ ಪಂತ್ಗೆ ವಿಶೇಷ ಸನ್ಮಾನ ಮಾಡಿದ ಡೆಲ್ಲಿ ಕ್ರಿಕೆಟ್ ಸಂಸ್ಥೆ
ಬ್ಯಾಟಿಂಗ್ನಲ್ಲಿ ವಿಫಲವಾದ ಪಂತ್
ಪಂತ್ ಈ ಪಂದ್ಯದಲ್ಲಿ ಅತ್ಯಂತ ನಿಧಾನಗತಿಯ ಬ್ಯಾಟಿಂಗ್ ಪ್ರದರ್ಶನ ತೋರಿದರು. 32 ಎಸೆತಗಳಲ್ಲಿ ಕೇವಲ 35 ರನ್ ಗಳಿಸಲಷ್ಟೇ ಶಕ್ತರಾದರು. ರಿಷಭ್ ಪಂತ್ ಅವರನ್ನು ಡಿಡಿಸಿಎ ಅಧ್ಯಕ್ಷ ಮತ್ತು ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ಸನ್ಮಾನಿಸಿದರು. 2024ರ ಟಿ 20 ವಿಶ್ವಕಪ್ ಗೆಲುವಿನಲ್ಲಿ ಪಂತ್ ನೀಡಿದ ಕೊಡುಗೆಗಳಿಗಾಗಿ ಅವರನ್ನು ಗೌರವಿಸಲಾಯಿತು.
ಮುಂದಿನ ವರ್ಷ ನಡೆಯುವ ಐಪಿಎಲ್ ಟರ್ನಿಯಲ್ಲಿ ಪಂತ್ ಡೆಲ್ಲಿ ತಂಡದ ಬದಲು ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ ಆಡಲಿದ್ದಾರೆ ಎನ್ನಲಾಗಿದೆ. ಪಂತ್ ಡೆಲ್ಲಿ ತಂಡದ ಪರ ರಿಟೈನ್ ಆಸಕ್ತಿ ಹೊಂದಿಲ್ಲ ಎಂದು ಹೇಳಲಾಗಿದೆ. ಆದರೆ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ.
ಮಹೇಂದ್ರ ಸಿಂಗ್ ಧೋನಿ ಮುಂದಿನ ವರ್ಷ ಐಪಿಎಲ್ ಆಡುವುದು ಖಚಿತತೆ ಇಲ್ಲ. ಇಂಪ್ಯಾಕ್ಟ್ ನಿಯಮ ಇದ್ದರೆ ಆಡುವುದಾಗಿ ಫ್ರಾಂಚೈಸಿ ಮೂಲಗಳು ಈಗಾಗಲೇ ಮಾಹಿತಿ ನೀಡಿದೆ. ಈ ಬಾರಿಯೇ ಧೋನಿ ನಿವೃತ್ತಿಯಾಗಬೇಕಿತ್ತು. ಆದರೆ ಅವರು ಇನ್ನೂ ನಿವೃತ್ತಿ ಪ್ರಕಟಿಸಿಲ್ಲ. ತಂಡದಲ್ಲಿ ಸೂಕ್ತ ವಿಕೆಟ್ ಕೀಪರ್ ಇಲ್ಲದ ಕಾರಣ ಧೋನಿ ತಮ್ಮ ಕಾಲು ನೋವಿನ ಮಧ್ಯೆಯೂ ಸಂಪೂರ್ಣವಾಗಿ ಕೀಪಿಂಗ್ ನಡೆಸಿದ್ದರು. ಧೋನಿ ಸ್ಥಾನಕ್ಕೆ ಪಂತ್ ಅವರನ್ನು ಆಯ್ಕೆ ಮಾಡುವ ಸಾಧ್ಯತೆಯೊಂದು ಕಂಡುಬಂದಿದೆ.