ಮುಂಬಯಿ: ಟಿ20 ವಿಶ್ವಕಪ್ ಗೆದ್ದ ಬಳಿಕ ಟೀಮ್ ಇಂಡಿಯಾದ ಆಟಗಾರರು ತಮ್ಮ ಗೆಳೆಯರ, ಕುಟುಂಬದ ಜತೆ ದೇಶ-ವಿದೇಶಕ್ಕೆ ಪ್ರವಾಸ ಕೈಗೊಳ್ಳುತ್ತಾ ಎಂಜಾಯ್ ಮಾಡುತ್ತಿದ್ದಾರೆ. ವಿಶ್ವಕಪ್ ತಂಡದ ಭಾಗವಾಗಿದ್ದ, ಆತ್ಮೀಯ ಗೆಳೆಯರು ಆಗಿರುವ ರಿಷಭ್ ಪಂತ್(Rishabh Pant), ಅಕ್ಷರ್ ಪಟೇಲ್ ಮತ್ತು ಖಲೀಲ್ ಅಹ್ಮದ್(Khaleel Ahmed) ಕೂಡ ಪ್ರವಾಸ ಹೋಗಿದ್ದಾರೆ. ಈ ವೇಳೆ ಪಂತ್ ಖಲೀಲ್ ಅವರನ್ನು ಸ್ವಿಮ್ಮಿಂಗ್ ಪೂಲ್‌ಗೆ(Khaleel Ahmed in a swimming pool) ತಳ್ಳಿ ಹಾಕಿದ್ದಾರೆ. ಈ ವಿಡಿಯೊ ವೈರಲ್ ಆಗಿದೆ.
ಮೂರು ಆಟಗಾರರು ವಿದೇಶ ಪ್ರವಾಸದಲ್ಲಿ ಎಂಜಾಯ್ ಮಾಡುತ್ತಿದ್ದು, ಹೊಟೇಲ್ನಿಂದ ಬೀಚ್ಗೆ ನಡೆದುಕೊಂಡು ಹೋಗುವಾಗ ಪಂತ್ ಅವರು ಖಲೀಲ್ ಅವರನ್ನು ಮಾತನಾಡಿಸುವಂತೆ ಹತ್ತಿರಕ್ಕೆ ಬಂದು ಸ್ವಿಮ್ಮಿಂಗ್ ಪೂಲ್‌ಗೆ ದೂಡಿ ಹಾಕಿದ್ದಾರೆ. ನೀರಿಗೆ ಬೀಳುವ ಮುನ್ನವೇ ಖಲೀಲ್ ತಮ್ಮ ಕೈಯಲ್ಲಿದ್ದ ಮೊಬೈಲ್ ಮೇಲಕ್ಕೆ ಎಸೆದು ಮೊಬೈಲ್ ನೀರಿಗೆ ಬೀಳದಂತೆ ನೋಡಿಕೊಂಡಿದ್ದಾರೆ. ನೀರಿಗೆ ಬಿದ್ದ ಖಲೀಲ್ ಕಂಡು ಪಂತ್ ಮತ್ತು ಇಲ್ಲಿ ನೆರೆದಿದ್ದ ಇತರ ಪ್ರವಾಸಿಗರು ಜೋರಾಗಿ ನಕ್ಕಿದ್ದಾರೆ. ಸ್ವಿಮ್ಮಿಂಗ್ ಪೂಲ್‌ನಿಂದ ಮೇಲೆದ್ದು ಬಂದ ಬಳಿಕ ಪಂತ್ ಖಲೀಲ್ ಅವರನ್ನು ತಬ್ಬಿಕೊಂಡಿದ್ದಾರೆ.
ಪಂತ್, ಅಕ್ಷರ್ ಮತ್ತು ಖಲೀಲ್ ಉತ್ತಮ ಸ್ನೇಹಿತರಾಗಿದ್ದಾರೆ. ಐಪಿಎಲ್ನಲ್ಲಿಯೂ ಈ ಮೂರು ಆಟಗಾರರು ಡೆಲ್ಲಿ ಕ್ಯಾಪಿಟಲ್ಸ್ ಪರ ಆಡುತ್ತಾರೆ. ಪಂತ್ ತಮಾಷೆಗೆಂದೇ ಖಲೀಲ್ ಅವರನ್ನು ಸ್ವಿಮ್ಮಿಂಗ್ ಪೂಲ್‌ಗೆ ತಳ್ಳಿದ್ದು. ಸದ್ಯ ಗೆಳೆಯರ ಈ ಚೇಷ್ಟೆಯ ವಿಡಿಯೊ ವೈರಲ್ ಆಗಿದ್ದು ನೆಟ್ಟಿಗರು ಈ ವಿಡಿಯೊಗೆ ದೇಕೊ ಪಂತ್ನೇ ಏ ಕ್ಯಾ ಕಿಯಾ(ನೋಡಿ ಪಂತ್ ಏನು ಮಾಡಿದ್ದಾರೆ) ಎಂದು ಕಮೆಂಟ್ ಮಾಡಿದ್ದಾರೆ.
ಮುಂದಿನ ವರ್ಷ ಪಂತ್ ಅವರು ಡೆಲ್ಲಿ ತಂಡ ತೊರೆದು ಬೇರೆ ಫ್ರಾಂಷೈಸಿ ಪರ ಆಡಲಿದ್ದಾರೆ ಎಂದು ಹೇಳಲಾಗಿದೆ. ಮೂಲಗಳ ಪ್ರಕಾರ ಪಂತ್ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡುವ ಸಾಧ್ಯತೆ ಇದೆ ಎಂದು ವರದಿಯಾಗಿದೆ. ಮಹೇಂದ್ರ ಸಿಂಗ್ ಧೋನಿ ಮುಂದಿನ ವರ್ಷ ಐಪಿಎಲ್ ಆಡುವುದು ಖಚಿತತೆ ಇಲ್ಲ. ಇಂಪ್ಯಾಕ್ಟ್ ನಿಯಮ ಇದ್ದರೆ ಆಡುವುದಾಗಿ ಫ್ರಾಂಚೈಸಿ ಮೂಲಗಳು ಈಗಾಗಲೇ ಮಾಹಿತಿ ನೀಡಿದೆ. ಈ ಬಾರಿಯೇ ಧೋನಿ ನಿವೃತ್ತಿಯಾಗಬೇಕಿತ್ತು. ಆದರೆ ಅವರು ಇನ್ನೂ ನಿವೃತ್ತಿ ಪ್ರಕಟಿಸಿಲ್ಲ. ತಂಡದಲ್ಲಿ ಸೂಕ್ತ ವಿಕೆಟ್ ಕೀಪರ್ ಇಲ್ಲದ ಕಾರಣ ಧೋನಿ ತಮ್ಮ ಕಾಲು ನೋವಿನ ಮಧ್ಯೆಯೂ ಸಂಪೂರ್ಣವಾಗಿ ಕೀಪಿಂಗ್ ನಡೆಸಿದ್ದರು. ಧೋನಿ ಸ್ಥಾನಕ್ಕೆ ಪಂತ್ ಅವರನ್ನು ಆಯ್ಕೆ ಮಾಡುವ ಸಾಧ್ಯತೆಯೊಂದು ಕಂಡುಬಂದಿದೆ.
ಇದನ್ನೂ ಓದಿ Rishabh Pant: ಡೆಲ್ಲಿ ತೊರೆದು ಮುಂದಿನ ಐಪಿಎಲ್ನಲ್ಲಿ ಈ ಫ್ರಾಂಚೈಸಿ ಪರ ಆಡಲಿದ್ದಾರೆ ರಿಷಭ್ ಪಂತ್
ಧೋನಿ ಮನೆಯ ಯಾವುದೇ ವಿಶೇಷ ಕಾರ್ಯಕ್ರಮದಲ್ಲೂ, ರಿಷಭ್ ಪಂತ್ ಕಾಣಿಸಿಕೊಳ್ಳುವುದು ಸರ್ವೇ ಸಾಮಾನ್ಯ. ಅಣ್ಣನ ಸ್ಥಾನದಲ್ಲಿ ನಿಂತು ಧೋನಿ ಅವರು ಪಂತ್ಗೆ ಸಲಹೆ ನೀಡುತ್ತಾರೆ. ಪಂತ್ ಕೂಡ ಧೋನಿ ಪರಿವಾರದೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಹೀಗಾಗಿ ಧೋನಿಯೇ ಪಂತ್ ಅವರನ್ನು ಸಿಎಸ್ಕೆ ತಂಡಕ್ಕೆ ಆಹ್ವಾನಿಸಬಹುದು. ಪಂತ್ ಚೆನ್ನೈ ಸೇರಿದರೆ ಕೀಪಿಂಗ್ ನಡೆಸಬಹುದು. ಧೋನಿ ಇಂಪ್ಯಾಕ್ಟ್ ಆಟಗಾರನಾಗಿ ಬ್ಯಾಟಿಂಗ್ ಮಾತ್ರ ನಡೆಸುವ ಸಾಧ್ಯತೆ ಇದೆ.