Site icon Vistara News

Rohit Sharma : ಟಿ20 ಕ್ರಿಕೆಟ್​ನಲ್ಲಿ ಸಿಕ್ಸರ್​ಗಳ ವಿಶೇಷ ದಾಖಲೆ ಬರೆದ ರೋಹಿತ್ ಶರ್ಮಾ; ಇಲ್ಲಿದೆ ವಿವರ

Rohit Sharma

ಮುಂಬೈ: ಐಪಿಎಲ್ 2024 ರಲ್ಲಿ (IPL 2024) ಮುಂಬೈ ಇಂಡಿಯನ್ಸ್ (Mumbai Indians) ಮತ್ತು ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ನಡುವಿನ ಮೆಗಾ ಪಂದ್ಯವು ಹಲವು ದಾಖಲೆಗಳಿಗೆ ಕಾರಣವಾದವು. ಅವುಗಳಲ್ಲಿ ಒಂದು ರೋಹಿತ್ ಶರ್ಮಾ (Rohit Sharma) ಬಾರಿಸಿದ ಅಮೋಘ ಶತಕ. ಇದೇ ವೇಳೆ ಅವರು ಟಿ20 ಕ್ರಿಕೆಟ್​ನಲ್ಲಿ ಅಮೋಘ ಸಾಧನೆಯೊಂದನ್ನು ಮಾಡಿದ್ದಾರೆ. ಟಿ20 ಕ್ರಿಕೆಟ್​​ನಲ್ಲಿ 500 ಸಿಕ್ಸರ್​ಗಳನ್ನು ಬಾರಿಸಿದ ಮೊದಲ ಭಾರತೀಯ ಬ್ಯಾಟ್ಸ್ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅವರು ಇನಿಂಗ್ಸ್​ನಲ್ಲಿ ಐದು ಸಿಕ್ಸರ್ ಬಾರಿಸುವ ಮೂಲಕ ಈ ಗಡಿಯನ್ನು ದಾಟಿದ್ದಾರೆ. ರವೀಂದ್ರ ಜಡೇಜಾ ಅವರ ಬೌಲಿಂಗ್​ನಲ್ಲಿ ಬಂದ ಮೂರನೇ ಸಿಕ್ಸರ್​ಗಳೊಂದಿಗೆ ರೋಹಿತ್ 500 ಟಿ 20 ಸಿಕ್ಸರ್​​ ಪೂರೈಸಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ಈ ಮೈಲಿಗಲ್ಲು ಅವರ ಪವರ್-ಹಿಟ್ಟಿಂಗ್ ಪರಾಕ್ರಮಕ್ಕೆ ಸಾಕ್ಷಿಯಾಗಿದೆ. ಅದಕ್ಕಾಗಿಯೇ ಅವರಿಗೆ ಹಿಟ್​ಮ್ಯಾನ್​ ಎಂಬ ಅಡ್ಡ ಹೆಸರು ಬಂದಿರುವುದು. ಟಿ20 ಕ್ರಿಕೆಟ್​ನಲ್ಲಿ ರೋಹಿತ್ ಶರ್ಮಾ 11,387 ರನ್ ಗಳಿಸಿದ್ದಾರೆ. ಈ ಮಾದರಿಯಲ್ಲಿ ಅವರ ಪಾಂಡಿತ್ಯವು ಅಪಾರ. ಒಟ್ಟು 1025 ಬೌಂಡರಿಗಳು ಮತ್ತು 502 ಸಿಕ್ಸರ್​​ಗಳನ್ನು ಹೊಂದಿದ್ದಾರೆ. ಈ ಋತುವಿನ ಐಪಿಎಲ್ ಭಿನ್ನವಾಗಿಲ್ಲ, ರೋಹಿತ್ 167.74 ರ ಅದ್ಭುತ ಸ್ಟ್ರೈಕ್ ರೇಟ್​ನಲ್ಲಿ ಆಡುತ್ತಿದ್ದಾರೆ.

ಪಂದ್ಯದಲ್ಲಿ ಮುಂಬಯಿಗೆ ಸೋಲು

ಮತೀಶ್​ ಪತಿರಾಣಾ (4 ವಿಕೆಟ್​, 28 ರನ್​​) ಅವರ ಮಾರಕ ಬೌಲಿಂಗ್ ಹಾಗೂ ಋತುರಾಜ್ ಗಾಯಕ್ವಾಡ್​ (69 ರನ್​, 40 ಎಸೆತ, 5 ಫೋರ್, 5 ಸಿಕ್ಸರ್​) , ಶಿವಂ ದುಬೆ (66 ರನ್​, 38 ರನ್​,10 ಫೋರ್​, 2 ಸಿಕ್ಸರ್​ ) ಅವರ ಅರ್ಧ ಶತಕಗಳ ನೆರವಿನಿಂದ ಮಿಂಚಿದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಐಪಿಎಲ್​ 2024ನೇ (IPL 2024) 29ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ 20 ರನ್​ಗಳ ಅಂತರದಿಂದ ಗೆಲುವು ಸಾಧಿಸಿದೆ. ಅಂದ ಹಾಗೆ ಚೆನ್ನೈ ಪರ ಕೊನೇ ನಾಲ್ಕು ಎಸೆತಗಳನ್ನು ಎದುರಿಸಿದ್ದ ಮಾಜಿ ನಾಯಕ ಮಹೇಂದ್ರ ಸಿಂಗ್​ ಧೋನಿ​ 20 ರನ್​ಗಳನ್ನು ಬಾರಿಸಿದ್ದರು. ಅದರಲ್ಲಿ 3 ಸಿಕ್ಸರ್​ಗಳಿದ್ದವು. ಅದೇ ರನ್​ಗಳ ಅಂತರದಿಂದ ಚೆನ್ನೈ ಗೆದ್ದು ಬೀಗಿದ್ದು ವಿಶೇಷ. ಆಧರೆ, ಮುಂಬಯಿ ಪರ ಏಕಾಂಗಿ ಹೋರಾಟ ನಡೆಸಿ ಅಮೋಘ 105 ರನ್ ಬಾರಿಸಿದ ರೋಹಿತ್ ಶರ್ಮಾ ಅವರ ಶತಕದ ಹೋರಾಟ ವ್ಯರ್ಥಗೊಂಡಿತು.

ಇದನ್ನೂ ಓದಿ: Hardik Pandya : ಕೊಹ್ಲಿ ಮನವಿಗೆ ಕಿಮ್ಮತ್ತಿಲ್ಲ; ಪಾಂಡ್ಯನನ್ನು ಮತ್ತೆ ಗೇಲಿ ಮಾಡಿದ ಮುಂಬೈ ಅಭಿಮಾನಿಗಳು

ಈ ಗೆಲುವು ಚೆನ್ನೈ ತಂಡಕ್ಕೆ ಹಾಲಿ ಆವೃತ್ತಿಯಲ್ಲಿ ನಾಲ್ಕನೆಯದ್ದು. ಅದೇ ರೀತಿ ಮುಂಬೈ ಇಂಡಿಯನ್ಸ್​ ತಂಡಕ್ಕೆ ನಾಲ್ಕನೇ ಸೋಲು. ಹಾರ್ದಿಕ್ ಪಾಂಡ್ಯ ಬಳಗ ತವರಿನಲ್ಲಿ ನಡೆದ ಈ ಹಿಂದಿನ ಎರಡು ಪಂದ್ಯಗಳನ್ನು ಗೆದಿದ್ದರೆ ಮೂರನೇ ಪಂದ್ಯದಲ್ಲಿ ಸೋಲು ಕಂಡಿತು. ಅಲ್ಲದೆ ಪ್ಲೇ ಆಫ್ ಹಾದಿಯನ್ನು ಕಠಿಣಗೊಳಿಸಿತು. ಈ ಗೆಲುವಿನೊಂದಿಗೆ ಮುಂಬೈ ಇಂಡಿಯನ್ಸ್ ತಂಡದ ಚೆನ್ನೈ ಸೂಪರ್ ಕಿಂಗ್ಸ್ ಮೇಲಿನ ಗೆಲುವಿನ ಪಾರಮ್ಯದ ಅಂತರ ಕಡಿಮೆಯಾಯಿತು ಒಟ್ಟು 36 ಪಂದ್ಯಗಳಲ್ಲಿ ಮುಂಬೈ 20 ರಲ್ಲಿ ಗೆದ್ದಿದ್ದರೆ, ಚೆನ್ನೈ 17 ಪಂದ್ಯಗಳಲ್ಲಿ ಗೆದ್ದಂತಾಯಿತು.

ಇಲ್ಲಿನ ಐತಿಹಾಸಿಕ ವಾಂಖೆಡೆ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ ಪಂದ್ಯದಲ್ಲಿ ಟಾಸ್​ ಸೋತು ಮೊದಲು ಬ್ಯಾಟಿಂಗ್​ ಮಾಡಲು ಆಹ್ವಾನ ಪಡೆದ ಚೆನ್ನೈ ತಂಡದ ಅತ್ಯುತ್ತಮವಾಗಿ ಬ್ಯಾಟ್ ಮಾಡಿತು. ಅಂತೆಯೇ ನಿಗದಿತ 20 ಓವರ್​ಗಳಲ್ಲಿ 4 ವಿಕೆಟ್ ನಷ್ಟ ಮಾಡಿಕೊಂಡು 206 ರನ್ ಬಾರಿಸಿತು. ಪ್ರತಿಯಾಗಿ ಬ್ಯಾಟ್ ಮಾಡಿದ ಮುಂಬಯಿ ತಂಡ ತನ್ನ ಪಾಲಿನ ಓವರ್​ಗಳು ಮುಕ್ತಾಯಗೊಳ್ಳುವಾಗ 6 ವಿಕೆಟ್​ ನಷ್ಟಕ್ಕೆ 186 ರನ್ ಬಾರಿಸಿ ಸೋಲೊಪ್ಪಿಕೊಂಡಿತು.

Exit mobile version