Site icon Vistara News

Rohit Sharma: ತಂಡ ಫೈನಲ್​ ಪ್ರವೇಶಿಸಿದ ಖುಷಿಯಲ್ಲಿ ಕಣ್ಣೀರು ಹಾಕಿದ ರೋಹಿತ್​; ವಿಡಿಯೊ ವೈರಲ್​

Rohit Sharma: Rohit Sharma almost in tears in India dressing room, gets comforted by Virat Kohli; Shastri sums up emotional moment

ಪ್ರೊವಿಡೆನ್ಸ್‌: ಮಳೆಯಿಂದ ಅಡಚಣೆಯಾದ ಗುರುವಾರ ತಡರಾತ್ರಿ ನಡೆದ ಟಿ20 ವಿಶ್ವಕಪ್​ನ ದ್ವಿತೀಯ ಸೆಮಿಫೈನಲ್​ ಪಂದ್ಯದಲ್ಲಿ ಭಾರತ ತಂಡ ಇಂಗ್ಲೆಂಡ್​ ತಂಡವನ್ನು 68 ರನ್​ಗಳಿಂದ ಬಗ್ಗುಬಡಿದು ಫೈನಲ್​ ಪ್ರವೇಶಿಸಿತು. ತಂಡ ಫೈನಲ್​ ಪ್ರವೇಶಿಸುತ್ತಿದ್ದಂತೆ ನಾಯಕ ರೋಹಿತ್​ ಶರ್ಮ(Rohit Sharma) ಅವರು ಈ ಸಂತಸದಲ್ಲಿ ಆನಂದಭಾಷ್ಪ ಸುರಿಸಿದರು. ಈ ವಿಡಿಯೊ ವೈರಲ್​ ಆಗಿದೆ.

2007ರಿಂದ ಎಲ್ಲ ಟಿ20 ವಿಶ್ವಕಪ್ ಆಡಿರುವ ರೋಹಿತ್​ ಶರ್ಮ ತಮ್ಮ ನಾಯಕತ್ವದಲ್ಲಿ ಇದೇ ಮೊದಲ ಬಾರಿಗೆ ತಂಡ ಫೈನಲ್​ ಪ್ರವೇಶಿಸಿತು. ಜತೆಗೆ 10 ವರ್ಷಗಳ ಬಳಿಕ ಭಾರತ ತಂಡ ಈ ಟೂರ್ನಿಯಲ್ಲಿ ಪ್ರಶಸ್ತಿ ಸುತ್ತಿಗೇರಿತು. ಈ ಎಲ್ಲ ಖುಷಿಯಿಂದ ರೋಹಿತ್​ ಕಣ್ಣೀರು ಸುರಿಸಿದರು. ರೋಹಿತ್​ ಕಣ್ಣೀರು ಹಾಕುತ್ತಿದ್ದ ವೇಳೆ ಸಹ ಆಟಗಾರ ವಿರಾಟ್​ ಬೆನ್ನು ತಟ್ಟಿ ಬೆಂಬಲ ಸೂಚಿಸಿದ್ದು ಕೂಡ ಈ ವಿಡಿಯೊದಲ್ಲಿ ನೋಡಬಹುದಾಗಿದೆ. ರೋಹಿತ್​ ಅವರಿಗೆ ಈ ಬಾರಿಯ ಟಿ20 ವಿಶ್ವಕಪ್​ ಬಹುತೇಕ ವಿದಾಯದ ಟೂರ್ನಿಯಾಗಿದೆ. ಅಂತಿಮ ಹಂತದ ಅವಕಾಶದಲ್ಲಿ ಕಪ್​ ಗೆಲ್ಲಲಿದ್ದಾರಾ ಎಂದು ಕಾದು ನೋಡಬೇಕಿದೆ. ಶನಿವಾರ ಬಾರ್ಬಡೋಸ್​ನಲ್ಲಿ ನಡೆಯುವ ಫೈನಲ್​ ಪಂದ್ಯದಲ್ಲಿ ರೋಹಿತ್​ ಪಡೆ ದಕ್ಷಿಣ ಆಫ್ರಿಕಾದ ಸವಾಲು ಎದುರಿಸಲಿದೆ. ಕೂಟದ ಅಜೇಯ ತಂಡಗಳ ನಡುವಣ ಈ ಪ್ರಶಸ್ತಿ ಸಮರ ತೀವ್ರ ಕುತೂಹಲ, ರೋಮಾಂಚನ ಸೃಷ್ಟಿಸುವುದರಲ್ಲಿ ಅನುಮಾನವಿಲ್ಲ.

ಇದನ್ನೂ ಓದಿ Rohit Sharma: ಟಿ20 ವಿಶ್ವಕಪ್​ ಟೂರ್ನಿಯಲ್ಲಿ ವಿಶ್ವ ದಾಖಲೆ ಬರೆದ ಹಿಟ್​ಮ್ಯಾನ್ ರೋಹಿತ್

ದಾಖಲೆ ಬರೆದ ರೋಹಿತ್​


ಹಿಟ್​ಮ್ಯಾನ್​ ಖ್ಯಾತಿಯ ರೋಹಿತ್​ ಶರ್ಮ(Rohit Sharma) ಅವರು ಈ ಪಂದ್ಯದಲ್ಲಿ 4 ಬೌಂಡರಿ ಬಾರಿಸುತ್ತಿದ್ದಂತೆ ಟಿ20 ವಿಶ್ವಕಪ್​ ಟೂರ್ನಿಯಲ್ಲಿ ಅತ್ಯಧಿಕ ಬೌಂಡರಿ ಬಾರಿಸಿದ ದಾಖಲೆ ನಿರ್ಮಿಸಿದರು. ಇದಕ್ಕೂ ಮುನ್ನ ಈ ದಾಖಲೆ ಶ್ರೀಲಂಕಾದ ಮಾಜಿ ಆಟಗಾರ ಮಹೇಲ ಜಯವರ್ಧನೆ(111 ಬೌಂಡರಿ) ಹೆಸರಿನಲ್ಲಿತ್ತು. 37 ರನ್​ ಪೂರ್ತಿಗೊಳಿಸುತ್ತಿದ್ದಂತೆ ಭಾರತ ತಂಡದ ನಾಯಕನಾಗಿ ಎಲ್ಲ ಮಾದರಿಯ ಕ್ರಿಕೆಟ್​ ಸೇರಿ 5 ಸಾವಿರ ರನ್​ ಪೂರೈಸಿದರು. ಈ ಸಾಧನೆ ಮಾಡಿದ ಭಾರತದ 5ನೇ ನಾಯಕ ಎನಿಸಿಕೊಂಡರು. ವಿರಾಟ್​ ಕೊಹ್ಲಿ(12883) ಮೊದಲ ಸ್ಥಾನದಲ್ಲಿದ್ದಾರೆ. ಮಾಜಿ ನಾಯಕ ಮಹೇಂದ್ರ ಸಿಂಗ್​(11207) ದ್ವಿತೀಯ ಸ್ಥಾನಿಯಾಗಿದ್ದಾರೆ.  

ಸೇಡು ತೀರಿಸಿಕೊಂಡ ಭಾರತ


ಈ ಪಂದ್ಯವನ್ನು ಗೆಲ್ಲುವ ಮೂಲಕ ಭಾರತ 2022ರ ಟಿ20 ವಿಶ್ವಕಪ್‌ ಸೆಮಿಫೈನಲ್‌ ಸೋಲಿನ ಸೇಡನ್ನು ತೀರಿಸಿಕೊಂಡಿತು. ಅಂದು ಅಡಿಲೇಡ್‌ ಓವಲ್‌ನಲ್ಲಿ ನಡೆದಿದ್ದ ಸೆಮಿ ಪಂದ್ಯದಲ್ಲಿ ಇಂಗ್ಲೆಂಡ್‌ 10 ವಿಕೆಟ್‌ಗಳಿಂದ ಭರ್ಜರಿಯಾಗಿ ರೋಹಿತ್‌ ಪಡೆಯನ್ನು ಮಗುಚಿ ಫೈನಲ್​ ಪ್ರವೇಶಿಸಿತ್ತು. ಈ ಬಾರಿ ಭಾರತ ತಂಡ ಇಂಗ್ಲೆಂಡ್​ ಮಣಿಸಿ ಫೈನಲ್​ ಪ್ರವೇಶಿಸಿತು. ಅಲ್ಲಿಗೆ ಲೆಕ್ಕ ಚುಕ್ತಾ ಗೊಂಡಿತು.

ಇಲ್ಲಿನ ಪ್ರೊವಿಡೆನ್ಸ್‌ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್​ ಸೋತು ಬ್ಯಾಟಿಂಗ್​ಗೆ ಇಳಿಸಲ್ಪಟ್ಟ ಭಾರತ, ರೋಹಿತ್​ ಶರ್ಮ ಅವರ ಅರ್ಧಶತಕದ ನೆರವಿನಿಂದ ನಿಗದಿತ 20 ಓವರ್​ಗಳಲ್ಲಿ 7 ವಿಕೆಟ್​ಗೆ 171 ರನ್​ ಬಾರಿಸಿ ಸವಾಲೊಡ್ಡಿತು. ಜವಾಬಿತ್ತ ಇಂಗ್ಲೆಂಡ್​ ನಾಟಕೀಯ ಕುಸಿತ ಕಂಡು 16.4 ಓವರ್​ಗಳಲ್ಲಿ 103 ರನ್​ಗೆ ಸರ್ವಪತನ ಕಂಡಿತು.

Exit mobile version