Site icon Vistara News

Sachin Birthday: ಸಚಿನ್ ತೆಂಡೂಲ್ಕರ್ ಬಳಿ ಇರುವ ಅತ್ಯಂತ ದುಬಾರಿ ಆಸ್ತಿಗಳಿವು!

Sachin Tendulkar Net Worth Assets Owned

ಬೆಂಗಳೂರು: ಕ್ರಿಕೆಟ್ ಜಗತ್ತಿನ ದಂತಕತೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ (Sachin Tendulkar) ಅವರಿಗೆ ಇಂದು (ಏ.24) ಜನುಮದಿನದ (Sachin Birthday) ಸಂಭ್ರಮ. ಸಚಿನ್ ತೆಂಡೂಲ್ಕರ್ (Sachin Tendulkar’s Net Worth) ಇಂದು 51ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಸಚಿನ್‌ ಶ್ರೇಷ್ಠ ಬ್ಯಾಟರ್‌ ಮಾತ್ರವಲ್ಲದೇ ದೇಶದ ಶ್ರೀಮಂತ ಕ್ರೀಡಾಪಟುಗಳಲ್ಲಿ ಒಬ್ಬರಾಗಿದ್ದಾರೆ. ಸಚಿನ್‌ ನಿವೃತ್ತಿ ಪಡೆದು ಹತ್ತು ವರ್ಷಗಳು ಕಳೆದರೂ ಇಂದಿಗೂ ಮಾರುಕಟ್ಟೆಯಲ್ಲಿ ಇರುವ ಬಹು ಬೇಡಿಕೆಯ ವ್ಯಕ್ತಿ. ಜಾಹೀರಾತು ಕ್ಷೇತ್ರಗಳಲ್ಲಿಯೂ ಸಚಿನ್‌ಗೆ ಇಂದಿಗೂ ಭಾರಿ ಬೇಡಿಕೆ ಇದೆ.

ಕ್ರೀಡೆಯಿಂದ ನಿವೃತ್ತರಾದ ನಂತರ, ಸಚಿನ್ ತೆಂಡೂಲ್ಕರ್ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಮುಂಬೈ ಇಂಡಿಯನ್ಸ್‌ನ (MI) ಮಾರ್ಗದರ್ಶಕರು ಆಗಿದ್ದರು. ತೆಂಡೂಲ್ಕರ್ ಅನೇಕ ಸ್ಟಾರ್ಟ್‌ಅಪ್‌ಗಳಲ್ಲಿ ಹೂಡಿಕೆ ಮಾಡಿದ್ದಾರೆ. ಅವುಗಳಲ್ಲಿ ಸ್ಮಾರ್ಟ್‌ಟ್ರೋನ್‌ಇಂಡಿಯಾ (SmartronIndia) ಸ್ಮ್ಯಾಷ್‌ ಎಂಟರ್‌ಟೈನ್‌ಮೆಂಟ್‌ (Smaaash Entertainment ), ಸ್ಪಿನ್ನಿ, ಇಂಟರ್ನ್ಯಾಷನಲ್ ಟೆನ್ನಿಸ್ ಪ್ರೀಮಿಯರ್ ಲೀಗ್ ಸೇರಿದಂತೆ ಅನೇಕ ವಿವಿಧ ಉದ್ಯಮಗಳಿಗೆ ಹೂಡಿಕೆ ಮಾಡಿದ್ದಾರೆ.

ಬರೋಬ್ಬರಿ 1354 ಕೋಟಿ ರೂ. ಒಡೆಯ ಸಚಿನ್‌ ತೆಂಡೂಲ್ಕರ್. ಭಾರತವಲ್ಲದೆ ವಿಶ್ವದ ಶ್ರೀಮಂತ ಕ್ರಿಕೆಟಿಗರಲ್ಲಿ ಒಬ್ಬರಾಗಿದ್ದಾರೆ. ತೆಂಡೂಲ್ಕರ್ ಅವರು ಮುಂಬೈನಲ್ಲಿ ಐಷಾರಾಮಿ ಬಂಗಲೆಯನ್ನು ಹೊಂದಿದ್ದಾರೆ. ಅಲ್ಲಿ ತಮ್ಮ ಕುಟುಂಬದೊಂದಿಗೆ ವಾಸಿಸುತ್ತಿದ್ದಾರೆ. ಸಚಿನ್‌ ಇನ್ನಿತರ ದುಬಾರಿ ಆಸ್ತಿಗಳನ್ನು ಹೊಂದಿದ್ದಾರೆ. ಅವುಗಳು ಯಾವುವು ಎಂಬುದು ನೋಡೋಣ.

ಇದನ್ನೂ ಓದಿ: Sachin Tendulkar : ಸೋಲಿನ ಹತಾಶೆಯಲ್ಲಿದ್ದ ಕೊಹ್ಲಿಯನ್ನು ತಬ್ಬಿ ಸಂತೈಸಿದ ಸಚಿನ್; ಇಲ್ಲಿದೆ ವಿಡಿಯೊ

  1. – ಬಾಂದ್ರಾ-ಕುರ್ಲಾ ಕಾಂಪ್ಲೆಕ್ಸ್‌ನಲ್ಲಿ (Bandra-Kurla complex) ಸಚಿನ್ ಅಲ್ಟ್ರಾ ಐಷಾರಾಮಿ ಫ್ಲ್ಯಾಟ್ ಹೊಂದಿದ್ದಾರೆ. 2018ರಲ್ಲಿ ಈ ಫ್ಲ್ಯಾಟ್ ಖರೀದಿಸಿದರು. ವರದಿಗಳ ಪ್ರಕಾರ, ಈ ಫ್ಲ್ಯಾಟ್ ಮೌಲ್ಯ 7.15 ಕೋಟಿ ರೂ.
  2. – ಸಚಿನ್ ಅವರು ಪಲಾಟಿಯಲ್ ಬಾಂದ್ರಾದಲ್ಲಿನ (Palatial Bandra) ಬಂಗಲೆಯ ಮಾಲೀಕರಾಗಿದ್ದಾರೆ. ಈ ಬಂಗಲೆಯ ಈಗಿನ ಮೌಲ್ಯ 39 ಕೋಟಿ ರೂಪಾಯಿ. ವರದಿಯ ಪ್ರಕಾರ, ತೆಂಡೂಲ್ಕರ್ ಅದನ್ನು ಖರೀದಿಸಿದಾಗ ಆ ಬಂಗಲೆ ಶಿಥಿಲಗೊಂಡಿತ್ತು. ಅದಾದ ಬಳಿಕ 45 ಕೋಟಿ ರೂ. ವೆಚ್ಚದಲ್ಲಿ ನವೀಕರಣಗೊಳಿಸಿದರು.
  3. – ಸಚಿನ್‌ 2021ರಲ್ಲಿ ಮಾರಾಟ ಮಾಡಿದ ಐಷಾರಾಮಿ BMW X5 M50d ಕಾರಿನ ಬೆಲೆ 1.78 ಕೋಟಿ ರೂ.
  4. – ಸಚಿನ್ 2.62 ಕೋಟಿ ರೂಪಾಯಿಗೆ ಬಿಎಂಡಬ್ಲ್ಯು ಐ8 ಕಾರನ್ನು ಖರೀದಿಸಿದ್ದರು.
  5. – BMW M5”30 Jahre MS” Limited Edition ದುಬಾರಿ ಕಾರನ್ನು ಸಚಿನ್‌ ಸಹ ಹೊಂದಿದ್ದಾರೆ. ಇದರ ಬೆಲೆ 1.50 ಕೋಟಿ ರೂ.
  6. – ಸಚಿನ್ 2015ರಲ್ಲಿ 1.73 ಕೋಟಿ ರೂ. ಮೌಲ್ಯದ BMW 750 Li M ದುಬಾರಿ ಸ್ಪೋರ್ಟ್ಸ್‌ ಕಾರು ಖರೀದಿಸಿದ್ದರು.
  7. – ಸಚಿನ್ ಅವರಿಗೆ ವಾಚ್‌ಗಳೆಂದರೆ ತುಂಬ ಪ್ರೀತಿ. ಸಚಿನ್‌ ಬಳಿ ಅದೆಷ್ಟೋ ದುಬಾರಿ ವಾಚ್‌ ಕಲೆಕ್ಷನ್‌ಗಳು ಇವೆ. ಆಡೆಮಾರ್ಸ್ ಪಿಕ್ವೆಟ್ (Audemars Piquet) ತಯಾರಿಸಿದ ರಾಯಲ್ ಓಕ್ ಪರ್ಪೆಚುಯಲ್ ಕ್ಯಾಲೆಂಡರ್ (Royal Oak Perpetual Calendar) ವಾಚ್‌ ಬ್ರ್ಯಾಂಡ್‌ ಮಾಲೀಕರಾಗಿದ್ದಾರೆ.
  8. – BMW M6 ಗ್ರ್ಯಾನ್ ಕಪಲ್ ಐಷಾರಾಮಿ ಕಾರು ಕೂಡ ತೆಂಡೂಲ್ಕರ್ ಬಳಿ ಇದೆ. ಈ ಕಾರನ್ನು 2020ರಲ್ಲಿ ಖರೀದಿಸಿದರು ಮತ್ತು ಅದರ ಮೌಲ್ಯ 1.8 ಕೋಟಿ ರೂ. ಈ ಕಾರು ಭಾರತದಲ್ಲಿ ಸಚಿನ್ ಬಳಿ ಮಾತ್ರ ಇದೆ ಎಂಬುದೇ ವಿಶೇಷ.
  9. – ಸಚಿನ್ ಪೋರ್ಷೆ ಕಯೆನ್ನೆ (Porsche Cayenne) ಕಾರು ಹೊಂದಿದ್ದಾರೆ. ಇದರ ಬೆಲೆ 1.93 ಕೋಟಿ ರೂ.
  10. – ಫೆರಾರಿ 360: ಫೆರಾರಿ ( Ferrari 360: Ferrar) ಕಾರ್‌ ಕೂಡ ಸಚಿನ್‌ ಬಳಿ ಇದೆ. 29ನೇ ಟೆಸ್ಟ್ ಶತಕ ಬಾರಿಸಿ ಸರ್ ಡಾನ್ ಬ್ರಾಡ್ಮನ್ ಅವರ ದಾಖಲೆಯನ್ನು (Sir Don Bradman’s) ಸರಿಗಟ್ಟಿದ್ದರು. ಹೀಗಾಗಿ ಫೆರಾರಿ 360: ಫೆರಾರಿ ಕಾರು ಸಚಿನ್‌ ಅವರಿಗೆ ಉಡುಗೊರೆಯಾಗಿ ಬಂದಿತ್ತು. ಆಗ ಫೆರಾರಿ 360: ಫೆರಾರಿ ಕಾರಿನ ಬೆಲೆ 75 ಲಕ್ಷ ರೂಪಾಯಿ. ಬಳಿಕ ಈ ಕಾರನ್ನು 11 ಕೋಟಿ ರೂ. ಗೆ ಸಚಿನ್ ಮಾರಾಟ ಮಾಡಿದರು.

ಇದನ್ನೂ ಓದಿ: Sachin Tendulkar: ಮಹಿಳಾ ದಿನಾಚರಣೆಯಂದು ಭಾವುಕ ಕ್ಷಣದ ಫೋಟೊ ಹಂಚಿಕೊಂಡ ಸಚಿನ್‌

Exit mobile version