ಬೆಂಗಳೂರು ಖ್ಯಾತ ಕ್ರಿಕೆಟ್ ಆಟಗಾರ್ತಿ ಹಾಗೂ ಭಾರತ ತಂಡದ ಆರಂಭಿಕ ಬ್ಯಾಟರ್ ಸ್ಮೃತಿ ಮಂದಾನ (Smriti Mandhana ) ಮತ್ತು ಸಂಗೀತ ಸಂಯೋಜಕ ಪಲಾಶ್ ಮುಚಲ್ ಇತ್ತೀಚೆಗೆ ಐದು ವರ್ಷಗಳ ಬಾಂಧವ್ಯವನ್ನು ಒಟ್ಟಾಗಿ ಸಂಭ್ರಮಿಸಿದ್ದಾರೆ. ಈ ಜೋಡಿ ಕೇಕ್ ಕತ್ತರಿಸಿ ಫೋಟೋಗಳಿಗೆ ಪೋಸ್ ನೀಡುವ ಮೂಲಕ ಖುಷಿ ಪಟ್ಟಿದ್ದಾರೆ. ಪಲಾಶ್ ತನ್ನ ಇನ್ಸ್ಟಾಗ್ರಅಮ್ ಹ್ಯಾಂಡಲ್ನಲ್ಲಿ ಸಂಭ್ರಮದ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಪಲಾಶ್ ಅವರು ಅದಕ್ಕೆ ಸರಳ ಶೀರ್ಷಿಕೆ ಕೊಟ್ಟಿದ್ದು, ಕೇವಲ ‘ಐದು’ ಎಂದು ಬರೆದಿದ್ದಾರೆ. ಅವರು ಕ್ರೀಡಾಪಟುವಿನೊಂದಿಗೆ ಅವರು ಎಷ್ಟು ವರ್ಷಗಳ ಸಂಬಂಧ ಹೊಂದಿದ್ದಾರೆ ಎಂಬುದನ್ನು ಸೂಚಿಸುತ್ತದೆ.
ನಟರಾದ ರುಬಿನಾ ದಿಲೈಕ್, ಅವಿಕಾ ಗೋರ್ ಮತ್ತಿರರರು ಈ ಪೋಸ್ಟ್ಗೆ ಹೃದಯದ ಎಮೋಜಿಳನ್ನು ಹಾಕಿ ಪ್ರತಿಕ್ರಿಯಿಸಿದ್ದಾರೆ. ರುಬಿನಾ ದಿಲೈಕ್ “ನೀವಿಬ್ಬರೂ” ಎಂದು ಬರೆದಿದ್ದರೆ, ನಟ ಪಾರ್ಥ್ ಸಮಥಾನ್ ಮತ್ತು ಅವಿಕಾ ಗೋರ್ ಕೂಡ ಹೃದಯದ ಎಮೋಜಿಯನ್ನು ಪೋಸ್ಟ್ ಮಾಡಿದ್ದಾರೆ.
ಅಭಿಮಾನಿಗಳು ಸಹ ಯುವ ಜೋಡಿಗೆ ಅಭಿನಂದನಾ ಸಂದೇಶಗಳನ್ನು ಕಳುಹಿಸಿದ್ದಾರೆ. . “5 ವರ್ಷಗಳು ಪೂರ್ಣಗೊಂಡಿವೆ” ಎಂದು ಅಭಿಮಾನಿಯೊಬ್ಬರು ಬರೆದಿದ್ದಾರೆ. ಇನ್ನೊಬ್ಬರು “ಸ್ಮೃತಿ ಮಂದಾನಗೆ ಗೌರವ ತೋರಿದ್ದಾರೆ. “ಅಭಿನಂದನೆಗಳು, ಸುಂದರ ಜೋಡಿ , ಮತ್ತೊಂದು ಪಾಲುದಾರಿಕೆಗಾಗಿ” ಎಂದೆಲ್ಲ ಕಾಮೆಂಟ್ಗಳು ಬಂದಿವೆ.
ಇದನ್ನೂ ಓದಿ: Yuzvendra Chahal : ಪತ್ನಿ ಧನಶ್ರೀ ವರ್ಮಾಗೆ ವಿಶ್ವ ಕಪ್ ಪದಕ ಅರ್ಪಿಸಿದ ಯಜ್ವೇಂದ್ರ ಚಹಲ್
ಸಂಗೀತ ಸಂಯೋಜಕ ಪಲಾಶ್ ಮುಚಲ್ ಇತ್ತೀಚೆಗೆ ರಾಜ್ಪಾಲ್ ಯಾದವ್ ಅಭಿನಯದ ಅರ್ಧ್ ಚಿತ್ರದಲ್ಲಿ ಕೆಲಸ ಮಾಡಿದ್ದಾರೆ. ಅವರು ‘ಡಿಶ್ಕಿಯೂನ್’ ಮತ್ತು ‘ಸ್ವೀಟಿ ವೆಡ್ಸ್ ಎನ್ಆರ್ಐ ‘ ನಂತಹ ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಸ್ಮೃತಿ ಮಂದಾನ ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಎಡಗೈ ಆರಂಭಿಕ ಬ್ಯಾಟ್ಸ್ಮನ್. ಅವರು ದಕ್ಷಿಣ ಆಫ್ರಿಕಾ ವಿರುದ್ಧದ ಏಕ ದಿನ ಸರಣಿಯ ವೇಳೆ ಸತತ ಎರಡು ಶತಕ ಹಾಗೂ ಒಂದು ಅರ್ಧ ಶತಕ ಬಾರಿಸಿ ಮಿಂಚಿದ್ದಾರೆ.
ಸ್ಮೃತಿ ಮಂದಾನ ಅವರು ಭಾರತ ಕ್ರಿಕೆಟ್ ತಂಡದ ಅತ್ಯಂತ ನೆಚ್ಚಿನ ಆಟಗಾರ್ತಿಯಾಗಿದ್ದಾರೆ. ಮಹಿಳೆಯ ಕ್ರಿಕೆಟ್ ತಂಡದಲ್ಲಿ ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿದ್ದಾರೆ. ಅವರ ಬ್ಯಾಟಿಂಗ್ ಪ್ರದರ್ಶನವೂ ಅದಕ್ಕೆ ಪೂರಕವಾಗಿದೆ. 2024ರ ಆವೃತ್ತಿಯ ಮಹಿಳೆಯರ ಪ್ರೀಮಿಯರ್ ಲೀಗ್ನಲ್ಲಿ ಅವರು ಆರ್ಸಿಬಿ ತಂಡವನ್ನು ಪ್ರಶಸ್ತಿಯ ಕಡೆಗೆ ಮುನ್ನಡೆಸಿದ್ದು ಅವರು ದೊಡ್ಡ ಸಾಧನೆಯಾಗಿದೆ.
ಮಂಧಾನ ದಕ್ಷಿಣ ಆಫ್ರಿಕಾ ವಿರುದ್ಧದ ಏಕೈಕ ಟೆಸ್ಟ್ ಪಂದ್ಯದಲ್ಲೂ ಶತಕ ಬಾರಿಸಿದ್ದಾರೆ. ಇದೀಗ ನಡೆಯುತ್ತಿರುವ ಟಿ20 ಸರಣಿಯ ಪಂದ್ಯದಲ್ಲೂ ಆಡುತ್ತಿದ್ದಾರೆ.