Site icon Vistara News

IPL 2024 : ಸನ್​ರೈಸರ್ಸ್​​ ಬಳಗಕ್ಕೆ ವಿಜಯ, ಪಂಜಾಬ್​ ತಂಡಕ್ಕೆ ಸೋಲು

IPL 2024

ಮಲ್ಲಾನ್​​ಪುರ: ನಿತಿಶ್​ ಕುಮಾರ್​ ರೆಡ್ಡಿ (37 ಎಸೆತ 64 ರನ್​) ಅವರ ಉಪಯುಕ್ತ ಅರ್ಧ ಶತಕ ಹಾಗೂ ಬೌಲರ್​ಗಳ ಸಂಘಟಿತ ಹೋರಾಟದ ಫಲವಾಗಿ ಸನ್​ರೈಸರ್ಸ್​ ಹೈದರಾಬಾದ್ ತಂಡ ಐಪಿಎಲ್​ನ 14ನೇ ಆವೃತ್ತಿಯ (IPL 2024) 23ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ರೋಚಕ 2 ರನ್​ ಗೆಲುವು ಸಾಧಿಸಿದೆ. ಈ ಮೂಲಕ ಹೈದರಾಬಾದ್ ತಂಡ ಗೆಲುವಿನ ಹಳಿಗೆ ಮರಳಿದರೆ ಪಂಜಾಬ್​ ತಂಡ ಸೋಲಿನ ಸುಳಿಗೆ ಸಿಲುಕಿತು. ಹೈದರಾಬಾದ್ ತಂಡಕ್ಕೆ ಇದು ಹಾಲಿ ಆವೃತ್ತಿಯಲ್ಲಿ ಆಡಿರುವ ಐದು ಪಂದ್ಯಗಳಲ್ಲಿ ಮೂರನೇ ಗೆಲುವಾಗಿದ್ದರೆ ಪಂಜಾಬ್ ತಂಡಕ್ಕ ಅಷ್ಟೇ ಸಂಖ್ಯೆಯ ಪಂದ್ಯಗಳಲ್ಲಿ ಮೂರನೇ ಸೋಲಾಗಿದೆ.

ಇಲ್ಲಿನ ಮಹಾರಾಜ ಯಾದವೀಂದ್ರ ಸಿಂಗ್ ಕ್ರಿಕೆಟ್ ಸ್ಟೇಡಿಯಮ್​ನಲ್ಲಿ ನಡೆದ ಪಂದ್ಯದಲ್ಲಿ ಪಂದ್ಯದಲ್ಲಿ ಟಾಸ್​ ಸೋತು ಮೊದಲು ಬ್ಯಾಟ್ ಮಾಡಿದ ಸನ್​ ರೈಸರ್ಸ್​ ಹೈದರಾಬಾದ್ ತಂಡ ನಿಗದಿತ 20 ಓವರ್​ಗಳಲ್ಲಿ 9 ವಿಕೆಟ್ ನಷ್ಟಕ್ಕೆ 182 ರನ್​ ಬಾರಿಸಿತು. ಪ್ರತಿಯಾಗಿ ಬ್ಯಾಟ್ ಮಾಡಿದ ಪಂಜಾಬ್ ಕಿಂಗ್ಸ್​ ತಂಡ ತನ್ನ ಪಾಲಿನ ಓವರ್​ಗಳು ಮುಕ್ತಾಯಗೊಂಡಾಗ 6 ವಿಕೆಟ್ ನಷ್ಟಕ್ಕೆ 180 ರನ್ ಬಾರಿಸಿ ಕೇವಲ 2 ರನ್​ಗಳಿಂದ ಸೋಲೊಪ್ಪಿಕೊಂಡಿತು. ಮತ್ತೊಂದು ವಿರೋಚಿತ ಹೋರಾಟ ಸಂಘಟಿಸಿದ ಶಶಾಂಕ್​ ಸಿಂಗ್​ (46) ಅವರ ಪ್ರಯತ್ನ ವ್ಯರ್ಥಗೊಂಡಿತು.

ಸ್ಪರ್ಧಾತ್ಮಕ ಗುರಿಯನ್ನು ಬೆನ್ನಟ್ಟಲು ಹೊರಟ ಪಂಜಾಬ್ ತಂಡಕ್ಕೆ ಉತ್ತಮ ಆರಂಭ ದೊರಕಲಿಲ್ಲ. ಶಿಖರ್​ ಧವನ್​ 14 ರನ್​ಗೆ ಔಟಾದರೆ ಜಾನಿ ಬೈರ್​ಸ್ಟೋವ್ ಮತ್ತೆ ಶೂನ್ಯ ಸುತ್ತಿದರು. ಪ್ರಭ್​ಸಿಮ್ರಾನ್​ ಸಿಂಗ್ 4 ರನ್​ಗೆ ವಿಕೆಟ್​ ಒಪ್ಪಿಸಿದರು. 20 ರನ್​ಗೆ 3 ವಿಕೆಟ್ ಕಳೆದುಕೊಂಡ ಪಂಜಾಬ್ ಬಹುತೇಕ ಸೋಲಿನ ಸುಳಿಗೆ ಸಿಲುಕಿತು. ಬಳಿಕ ಸ್ಯಾಮ್ ಕರ್ರನ್ 29 ರನ್ ಬಾರಿಸಿದರೆ ಸಿಕಂದರ್​ ರಾಜಾ 2 ರನ್ ಕೊಡುಗೆ ಕೊಟ್ಟರು. ಮಧ್ಯದಲ್ಲಿ ಜಿತೇಶ್ ಶರ್ಮಾ 19 ರನ್ ಬಾರಿಸಿ ಔಟಾದರು. ಪಂಜಾಬ್ ತಂಡದ ಹಿಂದನ ಪಂದ್ಯದಂತೆಯೇ ಈ ಬಾರಿಯೂ ಶಶಾಂಕ್ ಸಿಂಗ್​ (25 ಎಸೆತ 46 ರನ್​), ಅಶುತೋಶ್ ಶರ್ಮಾ 15 ಎಸೆತಕ್ಕೆ 33 ರನ್​ ಬಾರಿಸಿ ಪ್ರತಿರೋಧ ಒಡ್ಡಿದರು.

ಕೊನೇ ಓವರ್​ನಲ್ಲಿ ಪಂಜಾಬ್ ಗೆಲುವಿಗೆ 29 ರನ್​ ಬೇಕಾಗಿತ್ತು. ಅಶೋತೋಷ್ ಹಾಗೂ ಶಶಾಂಕ್ ಸೇರಿಕೊಂಡು 26 ರನ್ ಬಾರಿಸಿದರು. ಆದರೆ, ಎರಡು ರನ್​ಗಳಿಗೆ ಸೋಲು ಉಂಟಾಯಿತು.

ನಿತಿಶ್​ ರೆಡ್ಡಿ ನೆರವು

ಮೊದಲು ಬ್ಯಾಟ್​ ಮಾಡಿದ ಹೈದರಾಬಾದ್ ತಂಡ ಉತ್ತಮ ಆರಂಭ ಪಡೆಯಲಿಲ್ಲ. ಅಭಿಷೇಕ್ ಶರ್ಮಾ 16 ರನ್​ಗೆ ಔಟಾಗುವ ಮೂಲಕ 27 ರನ್​ಗೆ ಮೊದಲ ವಿಕೆಟ್​ 27 ರನ್​ಗೆ ಕಳೆದುಕೊಂಡಿತು. ಟ್ರಾವಿಡ್ ಹೆಡ್​ ಕೂಡ 21 ರನ್​ಗೆ ಔಟಾದರು. ಏಡೆನ್​ ಮಾರ್ಕ್ರಮ್​ ಶೂನ್ಯಕ್ಕೆ ಔಟಾಗುವ ಮೂಲಕ ಹೈದರಾಬಾದ್ ತಂಡಕ್ಕೆ ಭಾರೀ ಹಿನ್ನಡೆ ಉಂಟಾಯಿತು. ಈ ವೇಳೆ ಕ್ರೀಸ್​ಗೆ ಬಂದ ನಿತಿಶ್ ಕುಮಾರ್​ ರೆಡ್ಡಿ ಆರಂಭದಲ್ಲಿ ನಿಧಾನವಾಗಿ ಬಳಿಕ ಅಬ್ಬರಿಸಿದರು. ಅವರು 37 ಎಸೆತದಲ್ಲಿ 4 ಫೋರ್​ ಹಾಗೂ 5 ಸಿಕ್ಸರ್ ಸಮೇತ 67 ರನ್ ಬಾರಿಸಿ ಮಿಂಚಿದರು .ಅವರ ಅಮೋಘ ಪ್ರಯತ್ನದಿಂದಾಗಿ ತಂಡ ಚೈತನ್ಯ ಪಡೆಯಿತು.

ಇದನ್ನೂ ಓದಿ: Hardik Pandya : ಮೊದಲ ಪಂದ್ಯ ಗೆದ್ದ ಖುಷಿ, ಕೃಷ್ಣನ ಸ್ತುತಿಸುತ್ತಾ ಕುಣಿದ ಹಾರ್ದಿಕ್ ಪಾಂಡ್ಯ; ಇಲ್ಲಿದೆ ವಿಡಿಯೊ

ಬಳಿಕ ರಾಹುಲ್​ ತ್ರಿಪಾಠಿ 11 ರನ್ ಬಾರಿಸಿದರೆ ಕ್ಲಾಸೆನ್​ 9 ರನ್​ಗೆ ಸೀಮಿತಗೊಂಡರು. ಆದರೆ ಅಬ್ದುಲ್ ಸಮದ್ ಹಾಗೂ ಶಹಬಾಜ್ ಅಹಮದ್ ಕೊನೇ ಹಂತದಲ್ಲಿ ಭರ್ಜರಿಯಾಗಿ ಬ್ಯಾಟ್​ ಬೀಸಿ ಅನುಕ್ರಮವಾಗಿ 25 ಹಾಗೂ 14 ರನ್ ಬಾರಿಸಿದರು.

Exit mobile version