Site icon Vistara News

T20 World Cup 2024: ಟಿ20 ವಿಶ್ವಕಪ್​ ಪಂದ್ಯ ನಡೆಯುವ ತಾಣ,ಭಾರತದ ಪಂದ್ಯಗಳ ಪ್ರಸಾರದ ಮಾಹಿತಿ ಹೀಗಿದೆ

T20 World Cup 2024

t20-world-cup-2024-check-dates-venues-timing-livestreaming-details-and-more

ನ್ಯೂಯಾರ್ಕ್​: ಒಂಬತ್ತನೇ ಆವೃತ್ತಿಯ ಟಿ20 ವಿಶ್ವಕಪ್‌ ಟೂರ್ನಿ(T20 World Cup 2024) ಆರಂಭಕ್ಕೆ ಅಮೆರಿಕ ಮತ್ತು ವಿಂಡೀಸ್​ ಸಜ್ಜಾಗಿದೆ. ಉಭಯ ದೇಶಗಳು ಟೂರ್ನಿಯ ಜಂಟಿ ಆತಿಥ್ಯವಹಿಸಿಕೊಂಡಿದೆ. ನಾಳೆ(ಜೂನ್​ 1) ನಡೆಯುವ ಉದ್ಘಾಟನ ಪಂದ್ಯದಲ್ಲಿ ಅಮೆರಿಕ ತಂಡ ಕೆನಡಾ ತಂಡದ ಸವಾಲು ಎದುರಿಸಲಿದೆ. ಅಮೆರಿಕ ಇದೇ ಮೊದಲ ಬಾರಿಗೆ ಐಸಿಸಿ ಕ್ರಿಕೆಟ್​ ಟೂರ್ನಿಯ ಆತಿಥ್ಯವಹಿಸಿಕೊಂಡಿ​ದೆ. ವೆಸ್ಟ್‌ ಇಂಡೀಸ್‌ನಲ್ಲಿ ಆರು ಹಾಗೂ ಅಮೆರಿಕದ ಮೂರು ಸೇರಿದಂತೆ ಒಟ್ಟು ಒಂಬತ್ತು ತಾಣಗಳಲ್ಲಿ ವಿಶ್ವಕಪ್ ಆಯೋಜನೆಯಾಗಲಿದೆ.

ಭಾಗವಹಿಸುವ ತಂಡಗಳು


ಭಾರತ, ವೆಸ್ಟ್‌ ಇಂಡೀಸ್, ಅಮೆರಿಕ, ಆಸ್ಟ್ರೇಲಿಯಾ, ಇಂಗ್ಲೆಂಡ್, ಪಾಕಿಸ್ತಾನ, ನ್ಯೂಜಿಲ್ಯಾಂಡ್, ದಕ್ಷಿಣ ಆಫ್ರಿಕಾ, ಶ್ರೀಲಂಕಾ, ನೆದರ್ಲೆಂಡ್ಸ್, ಅಫಘಾನಿಸ್ತಾನ, ಬಾಂಗ್ಲಾದೇಶ, ಐರ್ಲೆಂಡ್, ಸ್ಕಾಟ್ಲೆಂಡ್, ಕೆನಡಾ, ನೇಪಾಳ, ಒಮಾನ್, ನಮೀಬಿಯಾ, ಉಗಾಂಡ ಮತ್ತು ಪಪುವಾ ನ್ಯೂಗಿನಿ.

ಟಿ20 ವಿಶ್ವಕಪ್ ವಿಜೇತ ತಂಡಗಳು

ದೇಶವರ್ಷ
ಭಾರತ2007
ಪಾಕಿಸ್ತಾನ2009
ಇಂಗ್ಲೆಂಡ್2010
ವೆಸ್ಟ್‌ಇಂಡೀಸ್2012
ಶ್ರೀಲಂಕಾ2014
ವೆಸ್ಟ್‌ಇಂಡೀಸ್2016
ಆಸ್ಟ್ರೇಲಿಯಾ2021
ಇಂಗ್ಲೆಂಡ್2022

ಪಂದ್ಯ ನಡೆಯುವ ತಾಣ

ವೆಸ್ಟ್‌ಇಂಡೀಸ್ಅಮೆರಿಕ
ನೌರ್ತ್ ಸೌಂಡ್ (ಆಯಂಟಿಗುವಾ ಮತ್ತು ಬಾರ್ಬುಡಾ)ಫ್ಲೋರಿಡಾ (ಲೌಂಡರ್‌ಹಿಲ್ )
ಬ್ರಿಡ್ಜ್‌ಟೌನ್ (ಬಾರ್ಬಡೋಸ್)ನ್ಯೂಯಾರ್ಕ್
ಜಾರ್ಜ್‌ಟೌನ್ (ಗಯಾನ)ಟೆಕ್ಸಾಸ್ (ಡಲ್ಲಾಸ್)
ಗ್ರಾಸ್‌ ಐಲ್ (ಸೇಂಟ್ ಲೂಸಿಯಾ)
ಕಿಂಗ್ಸ್‌ಟೌನ್ (ಸೇಂಟ್ ವಿನ್ಸೆಂಟ್)
ತರೌಬಾ (ಟ್ರಿನಿಡಾಡ್‌ ಆಯಂಡ್‌ ಟೊಬಾಗೊ).

ನಾಲ್ಕು ಗುಂಪುಗಳು


‘ಎ’ ಗುಂಪು: ಭಾರತ, ಪಾಕಿಸ್ತಾನ, ಅಮೆರಿಕ, ಕೆನಡಾ, ಐರ್ಲೆಂಡ್

‘ಬಿ’ ಗುಂಪು: ಆಸ್ಟ್ರೇಲಿಯಾ, ನಮೀಬಿಯಾ, ಸ್ಕಾಟ್ಲೆಂಡ್, ಒಮಾನ್, ಇಂಗ್ಲೆಂಡ್

‘ಸಿ’ ಗುಂಪು: ವೆಸ್ಟ್‌ಇಂಡೀಸ್, ಅಫಘಾನಿಸ್ತಾನ, ಉಗಾಂಡ, ಪಪುವಾ ನ್ಯೂಗಿನಿ, ನ್ಯೂಜಿಲೆಂಡ್.

‘ಡಿ’ ಗುಂಪು: ನೆದರ್ಲೆಂಡ್ಸ್, ನೇಪಾಳ, ದಕ್ಷಿಣ ಆಫ್ರಿಕಾ, ಶ್ರೀಲಂಕಾ, ಬಾಂಗ್ಲಾದೇಶ.

ಭಾರತದ ಪಂದ್ಯಗಳ ಪ್ರಸಾರ

ಟೀಮ್​ ಇಂಡಿಯಾದ ಪಂದ್ಯಗಳು ಭಾರತೀಯ ಕಾಲಮಾನ ರಾತ್ರಿ 8ಗಂಟೆಗೆ ಆರಂಭವಾಗಲಿದೆ. ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್ ಹಾಗೂ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ನೇರ ಪ್ರಸಾರದ ಹಕ್ಕನ್ನು ಹೊಂದಿದೆ. ಭಾರತದಲ್ಲಿನ ಸ್ಮಾರ್ಟ್‌ಫೋನ್ ಬಳಕೆದಾರರು ಈ ವರ್ಷದ ಐಸಿಸಿ ಪುರುಷರ ಟಿ20 ಕ್ರಿಕೆಟ್ ವಿಶ್ವಕಪ್ ಅನ್ನು OTT ಪ್ಲಾಟ್‌ಫಾರ್ಮ್‌ನಲ್ಲಿ ಉಚಿತವಾಗಿ ವೀಕ್ಷಿಸಬಹುದು. ಡಿಸ್ನಿ + ಹಾಟ್‌ಸ್ಟಾರ್​ನಲ್ಲಿ ಪ್ರಸಾರಗೊಳ್ಳಲಿದೆ. 

ಇದನ್ನೂ ಓದಿ T20 World Cup 2024: ಟಿ20 ವಿಶ್ವಕಪ್​ಗೆ ಕ್ಷಣಗಣನೆ; ಭಾರತ ಸೇರಿ ಬಲಿಷ್ಠ ತಂಡಗಳ ಪಂದ್ಯದ ವೇಳಾಪಟ್ಟಿ ಇಲ್ಲಿದೆ

20 ತಂಡಗಳು ಭಾಗಿ


ಈ ಬಾರಿ ಟೂರ್ನಿಯಲ್ಲಿ ಗರಿಷ್ಠ 20 ತಂಡಗಳು ಕಣಕ್ಕಿಳಿಯಲಿವೆ. 2022ರ ಆವೃತ್ತಿಯಲ್ಲಿ 12 ತಂಡಗಳು ಭಾಗಿಯಾಗಿದ್ದವು. ಟೂರ್ನಿಯಲ್ಲೂ ವಿಭಿನ್ನ ಸ್ವರೂಪವಿದೆ. 20 ತಂಡಗಳನ್ನು ತಲಾ ಐದು ತಂಡಗಳಂತೆ ನಾಲ್ಕು ಗುಂಪುಗಳಲ್ಲಿ ವಿಂಗಡಿಸಲಾಗಿದೆ. ಗುಂಪು ವಿಭಾಗದಲ್ಲಿ ಪ್ರತಿ ತಂಡಗಳು ತಲಾ ನಾಲ್ಕು ಪಂದ್ಯಗಳನ್ನು ಆಡಲಿವೆ. ಪ್ರತಿ ಗುಂಪಿನಿಂದ ತಲಾ ಎರಡು ತಂಡಗಳು ಸೂಪರ್ ಎಂಟರ ಹಂತಕ್ಕೆ ತೇರ್ಗಡೆ ಪಡೆಯಲಿವೆ. ಅಲ್ಲೂ ತಲಾ ನಾಲ್ಕು ತಂಡಗಳ ಎರಡು ಗುಂಪುಗಳು ಇದ್ದು, ಪ್ರತಿ ಗುಂಪಿನ ಅಗ್ರ ಎರಡು ತಂಡಗಳು ಸೆಮಿಫೈನಲ್‌ಗೆ ಲಗ್ಗೆ ಇಡಲಿವೆ.

Exit mobile version