Site icon Vistara News

T20 World Cup 2024: ಟಿ20 ವಿಶ್ವಕಪ್​ನ ಅಧಿಕೃತ ಹಾಡು ಬಿಡುಗಡೆ; ಕುಣಿದು ಕುಪ್ಪಳಿಸಿದ ಕ್ರಿಸ್​ ಗೇಲ್​, ಉಸೇನ್‌ ಬೋಲ್ಟ್

T20 World Cup 2024

ನವದೆಹಲಿ: ಅಮೆರಿಕ ಮತ್ತು ವೆಸ್ಟ್​ ಇಂಡೀಸ್​ ಜಂಟಿ ಆತಿಥ್ಯದಲ್ಲಿ ನಡೆಯುವ ಐಸಿಸಿ(ICC) ಪುರುಷರ ಟಿ20 ವಿಶ್ವಕಪ್​ ಟೂರ್ನಿ(T20 World Cup 2024) ಆರಂಭಕ್ಕೆ ಇನ್ನು ಕೇವಲ ಬೆರಳೆಣಿಕೆಯ ದಿನಗಳು ಮಾತ್ರ ಬಾಕಿ ಉಳಿದಿವೆ. ವಿಶ್ವಕಪ್​ ಪಂದ್ಯವಾವಳಿಗಳು ಜೂನ್​ 1ರಿಂದ ಆರಂಭವಾಗಿ ಜೂನ್​ 29ಕ್ಕೆ ಮುಕ್ತಾಯ ಕಾಣಲಿದೆ. ಒಟ್ಟು 55 ಪಂದ್ಯಗಳು ಇರಲಿದೆ. ಟೂರ್ನಿ ಆರಂಭಕ್ಕೆ ಕೆಲವೇ ದಿನಗಳು ಬಾಕಿ ಇರುವಂತೆಯೇ ಐಸಿಸಿ ಪಂದ್ಯಾವಳಿಯ ಅಧಿಕೃತ ಗೀತೆಯನ್ನು ಅನಾವರಣಗೊಳಿಸಿದೆ.

ಗ್ರ್ಯಾಮಿ ಪ್ರಶಸ್ತಿ ವಿಜೇತ ಕಲಾವಿದ ಸೀನ್ ಪಾಲ್ ಮತ್ತು ಸೋಕಾ ಸೂಪರ್‌ಸ್ಟಾರ್ ಕೇಸ್ ಅವರು ‘ಔಟ್ ಆಫ್ ದಿಸ್ ವರ್ಲ್ಡ್’ ಎಂಬ ಶೀರ್ಷಿಕೆಯ ಗೀತೆಯನ್ನು ರಚಿಸಿದ್ದಾರೆ. ಇದು ಸಂಗೀತ ಮತ್ತು ಕ್ರೀಡೆಗಳೆರಡರಲ್ಲೂ ಕೆಲವು ಪ್ರಮುಖ ವ್ಯಕ್ತಿಗಳ ನಡುವಿನ ಸಹಯೋಗವನ್ನು ಇದು ಒಳಗೊಂಡಿದೆ. ಅಮೆರಿಕದ ಈ ಮೂರು ಕ್ರೀಡಾಂಗಣಗಳಲ್ಲಿ 16 ಪಂದ್ಯಗಳು ನಡೆಯಲಿದೆ. ಉಳಿದ 39 ಪಂದ್ಯಗಳಿಗೆ ವೆಸ್ಟ್ ಇಂಡೀಸ್ ಆತಿಥ್ಯ ವಹಿಸಿದೆ. 

ಎಂಟು ಬಾರಿಯ ಒಲಂಪಿಕ್ ಚಿನ್ನದ ಪದಕ ವಿಜೇತ ಉಸೇನ್ ಬೋಲ್ಟ್, ವೆಸ್ಟ್ ಇಂಡೀಸ್ ಕ್ರಿಕೆಟ್ ಐಕಾನ್‌ಗಳಾದ ಕ್ರಿಸ್ ಗೇಲ್, ಶಿವನಾರಾಯಣ್ ಚಂದ್ರಪಾಲ್ ಮತ್ತು ಮಹಿಳಾ ಆಟಗಾರ್ತಿ ಸ್ಟಾಫಾನಿ ಟೇಲರ್, ಅಮೆರಿಕದ ಬೌಲರ್ ಅಲಿ ಖಾನ್ ಸೇರಿದಂತೆ ಇತರ ಪ್ರಮುಖ ಕೆರಿಬಿಯನ್ ವ್ಯಕ್ತಿಗಳು ಈ ಗೀತೆಯಲ್ಲಿ ಕಾಣಿಸಿಕೊಂಡಿದ್ದಾರೆ. ಬೀಚ್​ ಒಂದರಲ್ಲಿ ಟಿ20 ವಿಶ್ವಕಪ್​ ಎಂದು ಬರೆದಿರುವ ಚೆಂಡೊಂದು ಬಿದ್ದಿರುತ್ತದೆ. ಇದನ್ನು ಹೆಕ್ಕುವ ಮೂಲಕ ಗೀತೆ ಆರಂಭೊಂಡಿದೆ. ವಿರಾಟ್​ ಕೊಹ್ಲಿ, ರೋಹಿತ್​ ಶರ್ಮ, ಜಾಸ್​ ಬಟ್ಲರ್​, ಗ್ಲೆನ್​ ಮ್ಯಾಕ್ಸ್​ವೆಲ್ ಅವರ ಕ್ರಿಕೆಟ್​ ಶಾಟ್​ಗಳ ಶೈಲಿಯಲ್ಲಿ ನೃತ್ಯ ಮಾಡಿದ್ದು ಕೂಡ ಈ ದೃಶ್ಯದಲ್ಲಿ ನೋಡಬಹುದಾಗಿದೆ.

ಇದನ್ನೂ ಓದಿ T20 World Cup 2024: ಟಿ20 ವಿಶ್ವಕಪ್​ಗೆ ಪಾಕಿಸ್ತಾನ ತಂಡ ಪ್ರಕಟಿಸಲು ಹೆದರುತ್ತಿರುವುದಕ್ಕೆ ಇದುವೇ ಅಸಲಿ ಕಾರಣ

ಕ್ರಿಕೆಟ್ ಯಾವಾಗಲೂ ಕೆರಿಬಿಯನ್ ಸಂಸ್ಕೃತಿಯ ಪ್ರಮುಖ ಭಾಗವಾಗಿದೆ. ಆದ್ದರಿಂದ ಟಿ20 ವಿಶ್ವಕಪ್‌ಗಾಗಿ ಅಧಿಕೃತ ಗೀತೆಯನ್ನು ಬರೆಯಲು ಮತ್ತು ರೆಕಾರ್ಡ್ ಮಾಡಲು ನನಗೆ ಗೌರವವಿದೆ. ಈ ಗೀತೆಗೆ ಸ್ಫೂರ್ತಿ ನೀಡಿದ ಸೃಜನಾತ್ಮಕ ಇನ್‌ಪುಟ್‌ನ ಸಂಪೂರ್ಣ ಸಿಬ್ಬಂದಿಗೆ ಗೌರವವು ಸಲ್ಲುತ್ತದೆ ಎಂದು ಸೋಕಾ ಸೂಪರ್‌ಸ್ಟಾರ್ ಕೆಸ್ ಹೇಳಿದ್ದಾರೆ.

ವಿಶ್ವಕಪ್​ಗೆ ಮುನ್ನ ಎಲ್ಲ 20 ತಂಡಗಳು ತಮ್ಮ ಆಗಮನಕ್ಕೆ ತಕ್ಕಂತೆ ತಲಾ 2 ಅಭ್ಯಾಸ ಪಂದ್ಯಗಳನ್ನು ಆಡಲಿವೆ. ಟೂರ್ನಿಯ ಲೀಗ್​ ಮತ್ತು ಸೂಪರ್​ 8 ಪಂದ್ಯಗಳಿಗೆ ಯಾವುದೇ ಮೀಸಲು ದಿನ ಇಲ್ಲ. ಈ ಪಂದ್ಯಗಳಿಗೆ ಮಳೆ ಬಂದು ಪಂದ್ಯ ರದ್ದಾದರೆ ಸಮಾನ ಅಂಕ ನೀಡಲಾಗುತ್ತದೆ. ಆದರೆ, ಸೆಮಿಫೈನಲ್​ ಮತ್ತು ಫೈನಲ್​ ಪಂದ್ಯಗಳಿಗೆ ಮೀಸಲು ದಿನ ಇರಲಿದೆ. ಒಂದೊಮ್ಮೆ ಸೆಮಿ ಮತ್ತು ಫೈನಲ್​ ಫೈನಲ್​ ಪಂದ್ಯಗಳು ಕೂಡ ಮೀಸಲು ದಿನವೂ ನಡೆಯದಿದ್ದರೆ ಆಗ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದ ತಂಡಕ್ಕೆ ಲಾಭ ಸಿಗಲಿದೆ.

Exit mobile version