T20 World Cup 2024: ಟಿ20 ವಿಶ್ವಕಪ್​ನ ಅಧಿಕೃತ ಹಾಡು ಬಿಡುಗಡೆ; ಕುಣಿದು ಕುಪ್ಪಳಿಸಿದ ಕ್ರಿಸ್​ ಗೇಲ್​, ಉಸೇನ್‌ ಬೋಲ್ಟ್ - Vistara News

ಕ್ರಿಕೆಟ್

T20 World Cup 2024: ಟಿ20 ವಿಶ್ವಕಪ್​ನ ಅಧಿಕೃತ ಹಾಡು ಬಿಡುಗಡೆ; ಕುಣಿದು ಕುಪ್ಪಳಿಸಿದ ಕ್ರಿಸ್​ ಗೇಲ್​, ಉಸೇನ್‌ ಬೋಲ್ಟ್

T20 World Cup 2024: ಎಂಟು ಬಾರಿಯ ಒಲಂಪಿಕ್ ಚಿನ್ನದ ಪದಕ ವಿಜೇತ ಉಸೇನ್ ಬೋಲ್ಟ್, ವೆಸ್ಟ್ ಇಂಡೀಸ್ ಕ್ರಿಕೆಟ್ ಐಕಾನ್‌ಗಳಾದ ಕ್ರಿಸ್ ಗೇಲ್, ಶಿವನಾರಾಯಣ್ ಚಂದ್ರಪಾಲ್ ಮತ್ತು ಮಹಿಳಾ ಆಟಗಾರ್ತಿ ಸ್ಟಾಫಾನಿ ಟೇಲರ್, ಅಮೆರಿಕದ ಬೌಲರ್ ಅಲಿ ಖಾನ್ ಸೇರಿದಂತೆ ಇತರ ಪ್ರಮುಖ ಕೆರಿಬಿಯನ್ ವ್ಯಕ್ತಿಗಳು ಈ ಗೀತೆಯಲ್ಲಿ ಕಾಣಿಸಿಕೊಂಡಿದ್ದಾರೆ.

VISTARANEWS.COM


on

T20 World Cup 2024
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವದೆಹಲಿ: ಅಮೆರಿಕ ಮತ್ತು ವೆಸ್ಟ್​ ಇಂಡೀಸ್​ ಜಂಟಿ ಆತಿಥ್ಯದಲ್ಲಿ ನಡೆಯುವ ಐಸಿಸಿ(ICC) ಪುರುಷರ ಟಿ20 ವಿಶ್ವಕಪ್​ ಟೂರ್ನಿ(T20 World Cup 2024) ಆರಂಭಕ್ಕೆ ಇನ್ನು ಕೇವಲ ಬೆರಳೆಣಿಕೆಯ ದಿನಗಳು ಮಾತ್ರ ಬಾಕಿ ಉಳಿದಿವೆ. ವಿಶ್ವಕಪ್​ ಪಂದ್ಯವಾವಳಿಗಳು ಜೂನ್​ 1ರಿಂದ ಆರಂಭವಾಗಿ ಜೂನ್​ 29ಕ್ಕೆ ಮುಕ್ತಾಯ ಕಾಣಲಿದೆ. ಒಟ್ಟು 55 ಪಂದ್ಯಗಳು ಇರಲಿದೆ. ಟೂರ್ನಿ ಆರಂಭಕ್ಕೆ ಕೆಲವೇ ದಿನಗಳು ಬಾಕಿ ಇರುವಂತೆಯೇ ಐಸಿಸಿ ಪಂದ್ಯಾವಳಿಯ ಅಧಿಕೃತ ಗೀತೆಯನ್ನು ಅನಾವರಣಗೊಳಿಸಿದೆ.

ಗ್ರ್ಯಾಮಿ ಪ್ರಶಸ್ತಿ ವಿಜೇತ ಕಲಾವಿದ ಸೀನ್ ಪಾಲ್ ಮತ್ತು ಸೋಕಾ ಸೂಪರ್‌ಸ್ಟಾರ್ ಕೇಸ್ ಅವರು ‘ಔಟ್ ಆಫ್ ದಿಸ್ ವರ್ಲ್ಡ್’ ಎಂಬ ಶೀರ್ಷಿಕೆಯ ಗೀತೆಯನ್ನು ರಚಿಸಿದ್ದಾರೆ. ಇದು ಸಂಗೀತ ಮತ್ತು ಕ್ರೀಡೆಗಳೆರಡರಲ್ಲೂ ಕೆಲವು ಪ್ರಮುಖ ವ್ಯಕ್ತಿಗಳ ನಡುವಿನ ಸಹಯೋಗವನ್ನು ಇದು ಒಳಗೊಂಡಿದೆ. ಅಮೆರಿಕದ ಈ ಮೂರು ಕ್ರೀಡಾಂಗಣಗಳಲ್ಲಿ 16 ಪಂದ್ಯಗಳು ನಡೆಯಲಿದೆ. ಉಳಿದ 39 ಪಂದ್ಯಗಳಿಗೆ ವೆಸ್ಟ್ ಇಂಡೀಸ್ ಆತಿಥ್ಯ ವಹಿಸಿದೆ. 

ಎಂಟು ಬಾರಿಯ ಒಲಂಪಿಕ್ ಚಿನ್ನದ ಪದಕ ವಿಜೇತ ಉಸೇನ್ ಬೋಲ್ಟ್, ವೆಸ್ಟ್ ಇಂಡೀಸ್ ಕ್ರಿಕೆಟ್ ಐಕಾನ್‌ಗಳಾದ ಕ್ರಿಸ್ ಗೇಲ್, ಶಿವನಾರಾಯಣ್ ಚಂದ್ರಪಾಲ್ ಮತ್ತು ಮಹಿಳಾ ಆಟಗಾರ್ತಿ ಸ್ಟಾಫಾನಿ ಟೇಲರ್, ಅಮೆರಿಕದ ಬೌಲರ್ ಅಲಿ ಖಾನ್ ಸೇರಿದಂತೆ ಇತರ ಪ್ರಮುಖ ಕೆರಿಬಿಯನ್ ವ್ಯಕ್ತಿಗಳು ಈ ಗೀತೆಯಲ್ಲಿ ಕಾಣಿಸಿಕೊಂಡಿದ್ದಾರೆ. ಬೀಚ್​ ಒಂದರಲ್ಲಿ ಟಿ20 ವಿಶ್ವಕಪ್​ ಎಂದು ಬರೆದಿರುವ ಚೆಂಡೊಂದು ಬಿದ್ದಿರುತ್ತದೆ. ಇದನ್ನು ಹೆಕ್ಕುವ ಮೂಲಕ ಗೀತೆ ಆರಂಭೊಂಡಿದೆ. ವಿರಾಟ್​ ಕೊಹ್ಲಿ, ರೋಹಿತ್​ ಶರ್ಮ, ಜಾಸ್​ ಬಟ್ಲರ್​, ಗ್ಲೆನ್​ ಮ್ಯಾಕ್ಸ್​ವೆಲ್ ಅವರ ಕ್ರಿಕೆಟ್​ ಶಾಟ್​ಗಳ ಶೈಲಿಯಲ್ಲಿ ನೃತ್ಯ ಮಾಡಿದ್ದು ಕೂಡ ಈ ದೃಶ್ಯದಲ್ಲಿ ನೋಡಬಹುದಾಗಿದೆ.

ಇದನ್ನೂ ಓದಿ T20 World Cup 2024: ಟಿ20 ವಿಶ್ವಕಪ್​ಗೆ ಪಾಕಿಸ್ತಾನ ತಂಡ ಪ್ರಕಟಿಸಲು ಹೆದರುತ್ತಿರುವುದಕ್ಕೆ ಇದುವೇ ಅಸಲಿ ಕಾರಣ

ಕ್ರಿಕೆಟ್ ಯಾವಾಗಲೂ ಕೆರಿಬಿಯನ್ ಸಂಸ್ಕೃತಿಯ ಪ್ರಮುಖ ಭಾಗವಾಗಿದೆ. ಆದ್ದರಿಂದ ಟಿ20 ವಿಶ್ವಕಪ್‌ಗಾಗಿ ಅಧಿಕೃತ ಗೀತೆಯನ್ನು ಬರೆಯಲು ಮತ್ತು ರೆಕಾರ್ಡ್ ಮಾಡಲು ನನಗೆ ಗೌರವವಿದೆ. ಈ ಗೀತೆಗೆ ಸ್ಫೂರ್ತಿ ನೀಡಿದ ಸೃಜನಾತ್ಮಕ ಇನ್‌ಪುಟ್‌ನ ಸಂಪೂರ್ಣ ಸಿಬ್ಬಂದಿಗೆ ಗೌರವವು ಸಲ್ಲುತ್ತದೆ ಎಂದು ಸೋಕಾ ಸೂಪರ್‌ಸ್ಟಾರ್ ಕೆಸ್ ಹೇಳಿದ್ದಾರೆ.

ವಿಶ್ವಕಪ್​ಗೆ ಮುನ್ನ ಎಲ್ಲ 20 ತಂಡಗಳು ತಮ್ಮ ಆಗಮನಕ್ಕೆ ತಕ್ಕಂತೆ ತಲಾ 2 ಅಭ್ಯಾಸ ಪಂದ್ಯಗಳನ್ನು ಆಡಲಿವೆ. ಟೂರ್ನಿಯ ಲೀಗ್​ ಮತ್ತು ಸೂಪರ್​ 8 ಪಂದ್ಯಗಳಿಗೆ ಯಾವುದೇ ಮೀಸಲು ದಿನ ಇಲ್ಲ. ಈ ಪಂದ್ಯಗಳಿಗೆ ಮಳೆ ಬಂದು ಪಂದ್ಯ ರದ್ದಾದರೆ ಸಮಾನ ಅಂಕ ನೀಡಲಾಗುತ್ತದೆ. ಆದರೆ, ಸೆಮಿಫೈನಲ್​ ಮತ್ತು ಫೈನಲ್​ ಪಂದ್ಯಗಳಿಗೆ ಮೀಸಲು ದಿನ ಇರಲಿದೆ. ಒಂದೊಮ್ಮೆ ಸೆಮಿ ಮತ್ತು ಫೈನಲ್​ ಫೈನಲ್​ ಪಂದ್ಯಗಳು ಕೂಡ ಮೀಸಲು ದಿನವೂ ನಡೆಯದಿದ್ದರೆ ಆಗ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದ ತಂಡಕ್ಕೆ ಲಾಭ ಸಿಗಲಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರೀಡೆ

SA vs USA: ಮಿಂಚಿದ ಡಿಕಾಕ್; ಯುಎಸ್‌ಎ ವಿರುದ್ಧ ದಕ್ಷಿಣ ಆಫ್ರಿಕಾಕ್ಕೆ 18 ರನ್‌ಗಳ ಜಯ

SA vs USA: ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಟಿ-20 ವಿಶ್ವಕಪ್‌ ಟೂರ್ನಿಯ ಸೂಪರ್‌ 8 ಹಂತದ ಮೊದಲ ಪಂದ್ಯದಲ್ಲಿ ಅಮೆರಿಕ ತಂಡವು 18 ರನ್‌ಗಳಿಂದ ಸೋಲನುಭವಿಸಿದೆ. ಗ್ರೂಪ್‌ ಹಂತದಲ್ಲಿ ಪಾಕಿಸ್ತಾನವನ್ನು ಕೂಡ ಅಮೆರಿಕ ತಂಡವು ಸೋಲಿಸುವ ಮೂಲಕ ಆ ತಂಡವನ್ನು ಮನೆಗೆ ಕಳುಹಿಸಿತ್ತು. ಈಗ ದಕ್ಷಿಣ ಆಫ್ರಿಕಾ ವಿರುದ್ಧವೂ ಯುಎಸ್‌ಎ ತಂಡವು ಉತ್ತಮ ಸ್ಪರ್ಧೆಯೊಡ್ಡಿತು.

VISTARANEWS.COM


on

RSA vs USA
Koo

ಆ್ಯಂಟಿಗುವಾ: ಐಸಿಸಿ ಟಿ-20 ವಿಶ್ವಕಪ್‌ ಟೂರ್ನಿಯ (T20 World Cup 2024) ಸೂಪರ್‌ 8 ಹಂತದ ಮೊದಲ ಪಂದ್ಯದಲ್ಲಿಯೇ ದಕ್ಷಿಣ ಆಫ್ರಿಕಾ ತಂಡವು ಕ್ರಿಕೆಟ್‌ ಶಿಶು ಅಮೆರಿಕ ತಂಡವನ್ನು (SA vs USA) 18 ರನ್‌ಗಳಿಂದ ಸೋಲಿಸುವ ಮೂಲಕ ಶುಭಾರಂಭ ಮಾಡಿದೆ. ಮತ್ತೊಂದೆಡೆ, ಗ್ರೂಪ್‌ ಹಂತದಲ್ಲಿಯೇ ಬಲಿಷ್ಠ ಪಾಕಿಸ್ತಾನ ತಂಡವನ್ನು ಸೋಲಿಸಿದ್ದ ಅಮೆರಿಕ ತಂಡವು ದಕ್ಷಿಣ ಆಫ್ರಿಕಾ ತಂಡಕ್ಕೂ ಸ್ಪರ್ಧೆಯೊಡ್ಡಿ, ಹೋರಾಡಿ ಸೋತಿತು ಎಂಬುದು ಗಮನಾರ್ಹವಾಗಿದೆ.

ವೆಸ್ಟ್‌ ಇಂಡೀಸ್‌ನ ಆ್ಯಂಟಿಗುವಾದ ಸರ್‌ ವಿವಿಯನ್‌ ರಿಚರ್ಡ್ಸ್‌ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್‌ ಗೆದ್ದ ಅಮೆರಿಕ ತಂಡವು ಮೊದಲು ಬೌಲಿಂಗ್‌ ಆಯ್ಕೆ ಮಾಡಿಕೊಂಡ ಕಾರಣ ಐಡೆನ್‌ ಮಾರ್ಕ್ರಮ್‌ ನೇತೃತ್ವದ ತಂಡವು ಮೊದಲು ಬ್ಯಾಟಿಂಗ್‌ಗೆ ಇಳಿಯಿತು. ಕ್ವಿಂಟನ್‌ ಡಿಕಾಕ್‌ 40 ಎಸೆತಗಳಲ್ಲಿ 7 ಬೌಂಡರಿ ಹಾಗೂ 5 ಸಿಕ್ಸರ್‌ ನೆರವಿನಿಂದ ಸಿಡಿಲಬ್ಬರದ ಬ್ಯಾಟಿಂಗ್‌ ನಡೆಸಿ 74 ರನ್‌ ಹಾಗೂ ನಾಯಕ ಐಡೆನ್‌ ಮಾರ್ಕ್ರಮ್‌ ಅವರ ಸಮಯೋಚಿತ 46 ರನ್‌ಗಳ ನೆರವಿನಿಂದ 20 ಓವರ್‌ಗಳಲ್ಲಿ 4 ವಿಕೆಟ್‌ ಕಳೆದುಕೊಂಡು 194 ರನ್‌ ಗಳಿಸಿತು.

ದಕ್ಷಿಣ ಆಫ್ರಿಕಾ ನೀಡಿದ 195 ರನ್‌ಗಳ ಬೃಹತ್‌ ಗುರಿಯನ್ನು ಬೆನ್ನತ್ತಿದ ಅಮೆರಿಕ ತಂಡಕ್ಕೆ ಆರಂಭದಲ್ಲೇ ಆಘಾತ ಉಂಟಾಯಿತು. ತಂಡದ ಮೊತ್ತ 33 ಆಗಿದ್ದಾಗ ಸ್ಟೀವನ್‌ ಟೇಲರ್‌, 53 ರನ್‌ ಆಗಿದ್ದಾಗ ನಿತೀಶ್‌ ಕುಮಾರ್‌ ಹಾಗೂ 56 ರನ್‌ ಆಗಿದ್ದಾಗ ನಾಯಕ ಆರೋನ್‌ ಜೋನ್ಸ್‌ ಅವರು ವಿಕೆಟ್‌ ಒಪ್ಪಿಸಿದ ಕಾರಣ ಸಂಕಷ್ಟಕ್ಕೆ ಸಿಲುಕಿತ್ತು. ಒಂದೆಡೆ ವಿಕೆಟ್‌ ಬೀಳುತ್ತಿದ್ದರೂ ಆಂಡ್ರೀಸ್‌ ಗೌಸ್‌ ಅವರು ಮನಮೋಹಕ ಆಟವಾಡಿದರು. ಇದು ಒಂದು ಹಂತದಲ್ಲಿ ಅಮೆರಿಕಕ್ಕೆ ಗೆಲುವಿನ ಆಸೆ ಹುಟ್ಟಿಸಿತ್ತು.

ಆಂಡ್ರೀಸ್‌ ಗೌಸ್‌ ಅವರು 47 ಎಸೆತಗಳಲ್ಲಿ 5 ಬೌಂಡರ್‌ ಹಾಗೂ 5 ಸಿಕ್ಸರ್‌ಗಳ ನೆರವಿನಿಂದ 80 ರನ್‌ ಹಾಗೂ ಹರ್ಮೀತ್‌ ಸಿಂಗ್‌ ಅವರು 22 ಎಸೆತಗಳಲ್ಲಿ 38 ರನ್‌ ಗಳಿಸಿದರು. ಆದರೆ, ಬೇರೆ ಯಾವೊಬ್ಬ ಆಟಗಾರನೂ ಸ್ಫೋಟಕ ಪ್ರದರ್ಶನ ತೋರದ ಕಾರಣ ನಿಗದಿತ 20 ಓವರ್‌ಗಳಲ್ಲಿ ಅಮೆರಿಕ ತಂಡವು 6 ವಿಕೆಟ್‌ ಕಳೆದುಕೊಂಡು 176 ರನ್‌ ಗಳಿಸಲಷ್ಟೇ ಶಕ್ತವಾಯಿತು. ಮನಮೋಹಕ ಆಟವಾಡಿದ ಕ್ವಿಂಟನ್‌ ಡಿಕಾಕ್‌ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದುಕೊಂಡರು.

ಇದನ್ನೂ ಓದಿ: Virat Kohli: 100 ಶತಕ ಬಾರಿಸುವಂತೆ ಕೊಹ್ಲಿಗೆ ಆಶೀರ್ವಾದ ಮಾಡಿದ ವಿಂಡೀಸ್​ ದಂತಕಥೆ ಸರ್ ವೆಸ್ಲಿ ಹಾಲ್

Continue Reading

ಕ್ರೀಡೆ

IND vs AFG: ಅಪಾಯಕಾರಿ ಆಫ್ಘಾನ್​ ಸವಾಲಿಗೆ ಟೀಮ್​ ಇಂಡಿಯಾ ಸಿದ್ಧ!

IND vs AFG: ಪ್ರತಿ ಬಾರಿಯೂ ಮಹತ್ವದ ಕೂಡದಲ್ಲಿ ತಂಡಕ್ಕೆ ಆಸರೆಯಾಗುತ್ತಿದ್ದ ವಿರಾಟ್​ ಕೊಹ್ಲಿಯ ಬ್ಯಾಟ್​ ಈ ಬಾರಿ ಸದ್ದು ಮಾಡುತ್ತಿಲ್ಲ. ಆಡಿದ ಮೂರು ಪಂದ್ಯಗಳಲ್ಲಿಯೂ ಒಂದಂಕಿಗೆ ಸೀಮಿತರಾಗಿ ಘೋರ ಬ್ಯಾಟಿಂಗ್​ ವೈಫಲ್ಯ ಕಂಡಿದ್ದಾರೆ. ಇದೀಗ ಮಹತ್ವದ ಸೂಪರ್​-8 ಹಂತದ ಪಂದ್ಯದಲ್ಲಾದರೂ ಕೊಹ್ಲಿ ನಿರೀಕ್ಷಿತ ಬ್ಯಾಟಿಂಗ್​ ನಡೆಸುವ ಅನಿವಾರ್ಯತೆ ಮತ್ತು ಒತ್ತಡ ಅವರ ಮೇಲಿದೆ.

VISTARANEWS.COM


on

IND vs AFG
Koo

ಬಾರ್ಬಡೋಸ್​: ಬಲಿಷ್ಠ ಮತ್ತು ಅನುಭವಿ ಆಟಗಾರರನ್ನು ನೆಚ್ಚಿಕೊಂಡಿದ್ದ ನ್ಯೂಜಿಲ್ಯಾಂಡ್​ಗೆ ಸೋಲುಣಿಸಿ ಅಪಾಯಕಾರಿ ಎನಿಸಿಕೊಂಡಿರುವ ಅಫಘಾನಿಸ್ತಾನ(IND vs AFG) ತಂಡದ ವಿರುದ್ಧ ಭಾರತ ತಂಡ ನಾಳೆ ನಡೆಯುವ ಸೂಪರ್​-8 ಪಂದ್ಯದಲ್ಲಿ ಕಣಕ್ಕಿಳಿಯಲಿದೆ. ಇತ್ತಂಡಗಳ ನಡುವಣ ಈ ಪಂದ್ಯವನ್ನು ‘ಸೂಪರ್​-8 ಫೈಟ್’​ ಎಂದೇ ಬಿಂಬಿಸಲಾಗಿದೆ. ಪಂದ್ಯ ಭಾರತೀಯ ಕಾಲಮಾನ ರಾತ್ರಿ 8ಕ್ಕೆ ಪ್ರಸಾರಗೊಳ್ಳಲಿದೆ.

ಕಡೆಗಣನೆ ಸಲ್ಲ


ಟಿ20 ಶ್ರೇಯಾಂಕದಲ್ಲಿ ನಂ.1 ಸ್ಥಾನದಲ್ಲಿರುವ ಭಾರತ ತಂಡ ಅಫಘಾನಿಸ್ತಾನ ವಿರುದ್ಧ ಅಜೇಯ ದಾಖಲೆ ಹೊಂದಿದೆ. ಜತೆಗೆ ಈ ಬಾರಿಯ ಕೂಟದ ಬಲಿಷ್ಠ ತಂಡಗಳಲ್ಲಿ ಒಂದಾಗಿದೆ. ಹೀಗಾಗಿ ಸಹಜವಾಗಿಯೇ ಟೀಮ್​ ಬಲಿಷ್ಠ ಎನ್ನಬಹುದು. ರೋಹಿತ್‌ ಶರ್ಮ, ವಿರಾಟ್‌ ಕೊಹ್ಲಿ, ಸೂರ್ಯಕುಮಾರ್‌, ಹಾರ್ದಿಕ್‌ ಪಾಂಡ್ಯ, ರಿಷಭ್​ ಪಂತ್​, ಜಸ್​ಪ್ರೀತ್​ ಬುಮ್ರಾ ತಂಡದ ಪ್ರಮುಖ ಆಟಗಾರರು. ಆದರೆ, ಭಾರತ ಪೂರ್ಣ ಎಚ್ಚರವಾಗಿಯೇ ಪ್ರತೀ ಪಂದ್ಯದಲ್ಲಿ ಕಣಕ್ಕಿಳಿಯಬೇಕು.

ಎದುರಾಳಿಯನ್ನು ಒಮ್ಮೆಯೂ ಕಡೆಗಣಿಸುವುದು ಸಾಧ್ಯವೇ ಇಲ್ಲ. ಯಾರು ಯಾರನ್ನು ಕೆಡವಿ ಬೀಳಿಸುತ್ತಾರೆ ಎಂಬುದು ಟಿ20 ಮಾದರಿಯಲ್ಲಿ ಅಂದಾಜಿಸುವುದಕ್ಕೆ ಕಷ್ಟ ಸಾಧ್ಯ. ಇದಕ್ಕೆ ಉತ್ತಮ ನಿದರ್ಶನವೆಂದರೆ ಆಫ್ಘಾನ್​ ತಂಡ ಬಲಿಷ್ಠ ನ್ಯೂಜಿಲ್ಯಾಂಡ್​ ತಂಡವನ್ನು 75 ರನ್​ಗೆ ಆಲೌಟ್​ ಮಾಡಿ ಸೋಲುಣಿಸಿದ್ದು, ನ್ಯೂಜಿಲ್ಯಾಂಡ್​, ಪಾಕಿಸ್ತಾನ ಲೀಗ್​ ಹಂತದಲ್ಲೇ ಹೊರಬಿದ್ದಿದ್ದು ಇದನ್ನೆಲ್ಲ ಗಮನದಲ್ಲಿಟ್ಟುಕೊಂಡು ಭಾರತ ಎಚ್ಚರ ತಪ್ಪಬಾರದು. ಕೆಲವೇ ಓವರ್‌ಗಳಲ್ಲಿ ಪಂದ್ಯದ ಚಿತ್ರಣವೇ ಬದಲಾಗುವುದು ಟಿ20 ಪಂದ್ಯಗಳ ಶಕ್ತಿ.

ಫಾರ್ಮ್​ಗೆ ಮರಳ ಬೇಕು ಕೊಹ್ಲಿ


ಪ್ರತಿ ಬಾರಿಯೂ ಮಹತ್ವದ ಕೂಡದಲ್ಲಿ ತಂಡಕ್ಕೆ ಆಸರೆಯಾಗುತ್ತಿದ್ದ ವಿರಾಟ್​ ಕೊಹ್ಲಿಯ ಬ್ಯಾಟ್​ ಈ ಬಾರಿ ಸದ್ದು ಮಾಡುತ್ತಿಲ್ಲ. ಆಡಿದ ಮೂರು ಪಂದ್ಯಗಳಲ್ಲಿಯೂ ಒಂದಂಕಿಗೆ ಸೀಮಿತರಾಗಿ ಘೋರ ಬ್ಯಾಟಿಂಗ್​ ವೈಫಲ್ಯ ಕಂಡಿದ್ದಾರೆ. ಇದರಲ್ಲೊಂದು ಗೋಲ್ಡನ್​ ಡಕ್​ ಕೂಡ ಒಳಗೊಂಡಿದೆ. ಇದೀಗ ಮಹತ್ವದ ಸೂಪರ್​-8 ಹಂತದ ಪಂದ್ಯದಲ್ಲಾದರೂ ಕೊಹ್ಲಿ ನಿರೀಕ್ಷಿತ ಬ್ಯಾಟಿಂಗ್​ ನಡೆಸುವ ಅನಿವಾರ್ಯತೆ ಮತ್ತು ಒತ್ತಡ ಅವರ ಮೇಲಿದೆ.

ಇದನ್ನೂ ಓದಿ IND vs AFG: ನಾಳೆ ಆಫ್ಘಾನ್​ ವಿರುದ್ಧ ಸೂಪರ್​-8 ಫೈಟ್​; ವಿಂಡೀಸ್​ ನೆಲದಲ್ಲಿ ಭಾರತದ ಟಿ20 ದಾಖಲೆ ಹೇಗಿದೆ?

ಭಾರತ ಈ ಪಂದ್ಯಕ್ಕೆ ಒಂದು ಬದಲಾವಣೆ ಮಾಡುವ ಸಾಧ್ಯತೆ ಇದೆ. ವಿಂಡೀಸ್​ ಸ್ಪಿನ್​ ಸ್ನೇಹಿ ಮತ್ತು ನಿಧಾನ ಗತಿಯ ಪಿಚ್​ ಆಗಿರುವ ಕಾರಣ ಭಾರತ ಹೆಚ್ಚುವರಿ ಸ್ಪಿನ್ನರ್​ ಆಯ್ಕೆ ಮಾಡಿಕೊಳ್ಳಬಹುದು. ಮಧ್ಯಮ ವೇಗಿ ಆಲ್​ರೌಂಡರ್​ ಆಗಿರುವ ಶಿವಂ ದುಬೆ ಅವರನ್ನು ಕೈಬಿಟ್ಟು ಈ ಸ್ಥಾನದಲ್ಲಿ ಕುಲ್​ದೀಪ್​ ಯಾದವ್​ ಅಥವಾ ಯಜುವೇಂದ್ರ ಚಹಲ್​ ಅವರನ್ನು ಆಡಿಸಬಹುದು. ಉಳಿದಂತೆ ಯಾವುದೇ ಬದಲಾವಣೆ ಸಂಭವಿಸುವುದು ಅನುಮಾನ. ರೋಹಿತ್​ ಮತ್ತು ಕೊಹ್ಲಿಯೇ ಭಾರತದ ಇನಿಂಗ್ಸ್​ ಆರಂಭಿಸಬಹುದು.

ಆಫ್ಘಾನ್​ ಕೂಡ ಬಲಿಷ್ಠ


ಅಫಘಾನಿಸ್ತಾನ ಕೂಡ ಈ ಬಾರಿ ಆಡಿದ 4 ಪಂದ್ಯಗಳಲ್ಲಿ 3 ಪಂದ್ಯಗಳನ್ನು ಗೆದ್ದು ಬಲಿಷ್ಠವಾಗಿ ಗೋಚರಿಸಿದೆ. ಅದೂ ಅಲ್ಲದೆ ವಿಂಡೀಸ್​ ನೆಲದಲ್ಲೇ ಆಫ್ಘಾನ್​ ಲೀಗ್​ ಪಂದ್ಯ ಕೂಡ ಆಡಿತ್ತು. ಇದರ ಲಾಭ ಕೂಡ ತಂಡಕ್ಕಿದೆ. ಟೂರ್ನಿಯಲ್ಲಿ ಅತ್ಯಧಿಕ ರನ್​ ಗಳಿಸಿರುವ ರಹಮಾನುಲ್ಲಾ ಗುರ್ಬಾಜ್, ಇಬ್ರಾಹಿಂ ಝದ್ರಾನ್, ನಜಿಬುಲ್ಲಾ ಝದ್ರಾನ್ ಬ್ಯಾಟಿಂಗ್​ ಬಲವಾದರೆ, ಈ ಬಾರಿಯ ಟೂರ್ನಿಯಲ್ಲಿ ಅತ್ಯಧಿಕ ವಿಕೆಟ್​ ಕಿತ್ತ ಫಜಲ್ಹಕ್ ಫಾರೂಕಿ(12 ವಿಕೆಟ್​) ಅವರ ಘಾತಕ ಬೌಲಿಂಗ್​ ದಾಳಿ, ರಶೀದ್​ ಖಾನ್​ ಮತ್ತು ನಬಿ ಅವರ ಸ್ಪಿನ್​ ಮ್ಯಾಜಿಕ್​ ಇವೆಲ್ಲವನ್ನು ಒಳಗೊಂಡ ಆಫ್ಘಾನ್​ ಎಲ್ಲ ವಿಭಾಗದಲ್ಲಿಯೂ ಸಮರ್ಥವಾಗಿದೆ.

Continue Reading

ಕ್ರೀಡೆ

Haris Rauf: ಅಭಿಮಾನಿ ಮೇಲೆ ಹಲ್ಲೆಗೆ ಯತ್ನಿಸಿದ್ದ ರೌಫ್​ಗೆ ಬೆಂಬಲ ಸೂಚಿಸಿದ ರಿಜ್ವಾನ್

Haris Rauf: ರೌಫ್​ ಅವರು ಪತ್ನಿ ಜತೆ ತಾವು ತಂಗಿದ್ದ ಹೋಟೆಲ್​ಗೆ ಹೋಗುತ್ತಿದ್ದಾಗ ವೇಳೆ ಅಭಿಮಾನಿಯೊಬ್ಬ ನಿಮ್ಮ ಜತೆಗೊಂದು ಫೋಟೊ ಬೇಕಿತ್ತು ಎಂದು ಕೇಳಿದ್ದ. ಈ ವೇಳೆ ರೌಫ್​, ನೀನು ಭಾರತೀಯನಾಗಿರಬೇಕು ಎಂದು ಹೇಳಿದ್ದರು. ಇದಕ್ಕೆ ಸಿಟ್ಟಿನಿಂದ ಉತ್ತರಿಸಿದ ಅಭಿಮಾನಿ ನಾನು ಕೂಡ ಪಾಕಿಸ್ತಾನ ಮೂಲದವನೇ ಎಂದು ಹೇಳಿ ಬಳಿಕ ಏನೋ ಕೆಟ್ಟ ಪದಗಳಿಂದ ನಿಂದಿಸಿದ್ದರು. ಇದು ರೌಫ್​ ಅವರ ಪಿತ್ತ ನೆತ್ತಿಗೇರುವಂತೆ ಮಾಡಿತ್ತು.

VISTARANEWS.COM


on

Haris Rauf
Koo

ಫ್ಲೋರಿಡಾ: ಭಾರತೀಯನೆಂದು ಪಾಕಿಸ್ತಾನದ ಅಭಿಮಾನಿ ಮೇಲೆ ಹಲ್ಲೆ ನಡೆಸಲು ಮುಂದಾಗಿದ್ದ ಪಾಕ್​ ವೇಗಿ ಹ್ಯಾರಿಸ್ ರೌಫ್(Haris Rauf)​ ವಿರುದ್ಧ ಭಾರೀ ಟಿಕೆ ವ್ಯಕ್ತವಾಗುತ್ತಿದ್ದರೂ ಕೂಡ ಸಹ ಆಟಗಾರ ಮೊಹಮ್ಮದ್​ ರಿಜ್ವಾನ್​(Mohammad Rizwan) ಅವರು ಬೆಂಬಲ ಸೂಚಿಸಿದ್ದಾರೆ.

ಟ್ವಿಟರ್​ ಎಕ್ಸ್​ನಲ್ಲಿ ರೌಫ್​ ಅವರನ್ನು ಸಮರ್ಥಿಸಿಕೊಂಡಿರುವ ರಿಜ್ವಾನ್​, “ರೌಫ್ ಅವರನ್ನು ಅಗೌರವಿಸಿದ ವ್ಯಕ್ತಿ ಪಾಕಿಸ್ತಾನದವನೋ ಅಥವಾ ಭಾರತದವನೋ ಎಂಬುದು ಅಪ್ರಸ್ತುತವಾಗಿದೆ. ಈ ವ್ಯಕ್ತಿಗೆ ಮೌಲ್ಯಗಳು ಮತ್ತು ನಡವಳಿಕೆಯ ಕೊರತೆಯಿದೆ. ಯಾವುದೇ ವ್ಯಕ್ತಿಯನ್ನು ವಿಶೇಷವಾಗಿ ಅವರ ಕುಟುಂಬದ ಸದಸ್ಯರ ಮುಂದೆ ಅಗೌರವಿಸುವ ಹಕ್ಕು ಯಾರಿಗೂ ಇಲ್ಲ. ಸಹನೆ, ಗೌರವ ಮತ್ತು ಸಹಾನುಭೂತಿಯಂತಹ ಮೌಲ್ಯಗಳು ಇರಬೇಕು” ಎಂದು ಹೇಳುವ ಮೂಲಕ ರೌಫ್ ಅವರ ಪರ ಬ್ಯಾಟ್​ ಬೀಸಿದ್ದಾರೆ. ರಿಜ್ವಾನ್​ ಮಾತ್ರವಲ್ಲದೆ ಪಾಕಿಸ್ತಾನ ಕೆಲ ಆಟಗಾರರು ಕೂಡ ರೌಫ್​ ಬೆಂಬಲಕ್ಕೆ ನಿಂತಿದ್ದಾರೆ.


ಏನಿದು ಘಟನೆ?


ಈಗಾಗಲೇ ಟಿ20 ವಿಶ್ವಕಪ್​ ಟೂರ್ನಿಯಿಂದ ಹೊರಬಿದ್ದಿರುವ ಪಾಕಿಸ್ತಾನ ತಂಡದ ಆಟಗಾರರು ಫ್ಲೋರಿಡಾದಲ್ಲಿ ಕೆಲ ದಿನಗಳ ಕಾಲ ಎಂಜಾಯ್​ ಮಾಡಲಿದ್ದಾರೆ. ಹ್ಯಾರಿಸ್ ರೌಫ್ ಕೂಡ ತಮ್ಮ ಪತ್ನಿ ಜತೆ ಇಲ್ಲಿನ ಪ್ರವಾಸಿ ತಾಣಗಳಿಗೆ ಭೇಟಿ ನೀಡಿ ಕಾಲ ಕಳೆಯುತ್ತಿದ್ದಾರೆ. ಆದರೆ, ಮಂಗಳವಾರದಂದು ಹ್ಯಾರಿಸ್ ರೌಫ್(Haris Rauf) ಅವರು ಫ್ಲೋರಿಡಾದಲ್ಲಿ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಲು ಮುಂದಾದ ವಿಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್(Viral Video)​ ಆಗಿತ್ತು.

ರೌಫ್​ ಅವರು ಪತ್ನಿ ಜತೆ ತಾವು ತಂಗಿದ್ದ ಹೋಟೆಲ್​ಗೆ ಹೋಗುತ್ತಿದ್ದಾಗ ವೇಳೆ ಅಭಿಮಾನಿಯೊಬ್ಬ ನಿಮ್ಮ ಜತೆಗೊಂದು ಫೋಟೊ ಬೇಕಿತ್ತು ಎಂದು ಕೇಳಿದ್ದ. ಈ ವೇಳೆ ರೌಫ್​, ನೀನು ಭಾರತೀಯನಾಗಿರಬೇಕು ಎಂದು ಹೇಳಿದ್ದರು. ಇದಕ್ಕೆ ಸಿಟ್ಟಿನಿಂದ ಉತ್ತರಿಸಿದ ಅಭಿಮಾನಿ ನಾನು ಕೂಡ ಪಾಕಿಸ್ತಾನ ಮೂಲದವನೇ ಎಂದು ಹೇಳಿ ಬಳಿಕ ಏನೋ ಕೆಟ್ಟ ಪದಗಳಿಂದ ನಿಂದಿಸಿದ್ದರು. ಇದು ರೌಫ್​ ಅವರ ಪಿತ್ತ ನೆತ್ತಿಗೇರುವಂತೆ ಮಾಡಿತ್ತು.

ಇದನ್ನೂ ಓದಿ IND vs AFG: ಈ ಬಾರಿಯಾದರೂ ಭಾರತದ ಪಾಲಿಗೆ ಲಕ್ಕಿಯಾಗಲಿ ವಿಂಡೀಸ್​ ನೆಲ; ಹಿಂದಿನ 2 ವಿಶ್ವಕಪ್​ನಲ್ಲಿ ಏನಾಗಿತ್ತು?

ಅಭಿಮಾನಿಯ ಮಾತಿನಿಂದ ಸಿಟ್ಟುಗೊಂಡ ರೌಫ್​ ಏಕಾಏಕಿ ಆತನ ಮೇಲೆ ಹಲ್ಲೆ ನಡೆಸಲು ಮುಂದಾಗಿದ್ದಾರೆ. ಪತ್ನಿ ರೌಫ್​ ಅವರನ್ನು ಹಿಡಿದು ನಿಲ್ಲಿಸುವ ಪ್ರಯತ್ನ ಪಟ್ಟರೂ ಕೂಡ ರೌಫ್​ ತಪ್ಪಿಸಿಕೊಂಡು ಹಲ್ಲೆಗೆ ಮುಂದಾದರು. ತಕ್ಷಣ ರೌಫ್​ ಅವರ ಮ್ಯಾನೇಜರ್​ ಹಾಗು ಕೆಲ ಸಿಬ್ಬಂದಿಗಳು ಅವರನ್ನು ತಡೆದು ನಿಲ್ಲಿಸಿದ್ದಾರೆ. ಪತ್ನಿ ಕೂಡ ಅವರ ಕೈಗಳನ್ನು ಹಿಡಿದು ಹಲ್ಲೆ ಮಾಡದಂತೆ ಮನವಿ ಮಾಡುತ್ತಲೇ ಅವರನ್ನು ಸಮಾಧಾನ ಪಡೆಸಿದ್ದರು. ಈ ಎಲ್ಲ ದೃಶ್ಯಗಳು ವಿಡಿಯೊದಲ್ಲಿ ಸೆರೆಯಾಗಿತ್ತು.

ಪಾಕ್​ ತಂಡದ ವಿರುದ್ಧ ದೇಶದ್ರೋಹದ ಕೇಸ್‌


ನಿರಾಸದಾಯಕ ಪ್ರದರ್ಶನ ತೋರಿರುವ ಪಾಕಿಸ್ತಾನ ತಂಡದ ವಿರುದ್ಧ ಪಾಕ್‌ನ ಗುಜ್ರಾನ್ವಾಲಾ ನಗರದ ವಕೀಲರೊಬ್ಬರು ದೇಶದ್ರೋಹ ಕೇಸ್‌ ದಾಖಲಿಸಿದ್ದಾರೆ. ಈ ಬಗ್ಗೆ ಸ್ಥಳೀಯ ಮಾಧ್ಯಮಗಳು ವರದಿ ಮಾಡಿದ್ದು, ಕೇಸ್‌ನ ಬಗ್ಗೆ ಜೂನ್​ 21ಕ್ಕೆ ಮುನ್ನ ವರದಿ ಸಲ್ಲಿಸುವಂತೆ ಪೊಲೀಸರಿಗೆ ನ್ಯಾಯಾಲಯ ಸೂಚಿಸಿದೆ ಎಂದು ತಿಳಿದುಬಂದಿದೆ. ಪಾಕ್‌ ತಂಡದ ಕಳಪೆ ಪ್ರದರ್ಶನದಿಂದ ಹಣ ವ್ಯರ್ಥವಾಗುತ್ತಿದೆ ಮತ್ತು ರಾಷ್ಟ್ರದ ನಂಬಿಕೆಗೆ ದ್ರೋಹ ಉಂಟಾಗಿದೆ. ಆಟಗಾರರು ದೇಶದ ಬಗ್ಗೆ ಗೌರವಕ್ಕಿಂತ ಆರ್ಥಿಕ ಲಾಭಕ್ಕೆ ಆದ್ಯತೆ ನೀಡಿದ್ದಾರೆ ಎಂದು ಅರ್ಜಿದಾರ ತನ್ನ ದೂರಿನಲ್ಲಿ ಉಲ್ಲೇಖಿಸಿದ್ದಾಗಿ ವರದಿಯಾಗಿದೆ.

Continue Reading

ಕ್ರೀಡೆ

IND vs AFG: ಈ ಬಾರಿಯಾದರೂ ಭಾರತದ ಪಾಲಿಗೆ ಲಕ್ಕಿಯಾಗಲಿ ವಿಂಡೀಸ್​ ನೆಲ; ಹಿಂದಿನ 2 ವಿಶ್ವಕಪ್​ನಲ್ಲಿ ಏನಾಗಿತ್ತು?

IND vs AFG: ಹೌದು, ವೆಸ್ಟ್​ ಇಂಡೀಸ್​ನಲ್ಲಿ ನಡೆದ ಇದುವರೆಗಿನ ಐಸಿಸಿ ಟೂರ್ನಿಯಲ್ಲಿ ಭಾರತಕ್ಕೆ ನಿರಾಸೆ ಎದುರಾಗಿದ್ದೆ ಹೆಚ್ಚು. 2007 ಏಕದಿನ ವಿಶ್ವಕಪ್​, 2010 ಟಿ20 ವಿಶ್ವಕಪ್​ನಲ್ಲಿ ಭಾರತ ಅತ್ಯಂತ ಹೀನಾಯವಾಗಿ ಸೋಲು ಕಂಡ ಅವಮಾನಕ್ಕೆ ಸಿಲುಕಿತ್ತು.

VISTARANEWS.COM


on

IND vs AFG
Koo

ಬಾರ್ಬಡೋಸ್: ಹಾಲಿ ಆವೃತ್ತಿಯ ಟಿ20 ವಿಶ್ವಕಪ್​ ಟೂರ್ನಿಯಲ್ಲಿ ನಾಳೆ(ಗುರುವಾರ) ನಡೆಯುವ ಸೂಪರ್​-8(Super 8 Group 1) ಪಂದ್ಯದಲ್ಲಿ ಭಾರತ ಮತ್ತು ಅಫಘಾನಿಸ್ತಾನ(IND vs AFG) ಮುಖಾಮುಖಿಯಾಗಲಿದೆ. ಈ ಪಂದ್ಯ ಬಾರ್ಬಡೋಸ್​ನಲ್ಲಿ ನಡೆಯಲಿದೆ. ಅಮೆರಿಕದಲ್ಲಿ ನಡೆದ ಲೀಗ್​ ಹಂತದ ಎಲ್ಲ ಪಂದ್ಯಗಳನ್ನು ಭಾರತ ಗೆದ್ದರೂ ಕೂಡ ಸೂಪರ್-8 ಪಂದ್ಯಕ್ಕೂ ಮುನ್ನ ಟೀಮ್​ ಇಂಡಿಯಾ ಅಭಿಮಾನಿಗಳಿಗೆ ಆತಂಕವೊಂದು ಕಾಡಿದೆ. ಅದೇನೆಂದರೆ ಭಾರತದ ಪಾಲಿಗೆ ವಿಂಡೀಸ್​ ಅನ್​ ಲಕ್ಕಿ ಎನ್ನುವುದು.

ಹೌದು, ವೆಸ್ಟ್​ ಇಂಡೀಸ್​ನಲ್ಲಿ ನಡೆದ ಇದುವರೆಗಿನ ಐಸಿಸಿ ಟೂರ್ನಿಯಲ್ಲಿ ಭಾರತಕ್ಕೆ ನಿರಾಸೆ ಎದುರಾಗಿದ್ದೆ ಹೆಚ್ಚು. 2007 ಏಕದಿನ ವಿಶ್ವಕಪ್​, 2010 ಟಿ20 ವಿಶ್ವಕಪ್​ನಲ್ಲಿ ಭಾರತ ಅತ್ಯಂತ ಹೀನಾಯವಾಗಿ ಸೋಲು ಕಂಡ ಅವಮಾನಕ್ಕೆ ಸಿಲುಕಿತ್ತು. 2007ರಲ್ಲಿ ದ್ರಾವಿಡ್​ ಸಾರಥ್ಯದಲ್ಲಿ ಕಣಕ್ಕಿಳಿದಿದ್ದ ಭಾರತ ತಂಡ ಬಾಂಗ್ಲಾದೇಶ ವಿರುದ್ಧವೂ ಸೋಲು ಕಂಡು ಗುಂಪು ಹಂತದಿಂದಲೇ ಹೊರಬಿದ್ದಿತ್ತು. 2010ರ ಟಿ20 ವಿಶ್ವಕಪ್​ನಲ್ಲಿಯೂ ಧೋನಿ ಸಾರಥ್ಯದ ಟೀಮ್​ ಇಂಡಿಯಾ ಗುಂಪು ಹಂತದಿಂದಲೇ ನಿರ್ಗಮನ ಕಂಡಿತ್ತು. ಕೆರಿಬಿಯನ್​ ದ್ವೀಪ ಭಾರತದ ಪಾಲಿಗೆ ಅಷ್ಟು ಅದೃಷ್ಟವಲ್ಲ.

2007ರ ಟಿ20 ವಿಶ್ವ ಕಪ್ (T20 World Cup 2024)​ ಉದ್ಘಾಟನಾ ಆವೃತ್ತಿಯಲ್ಲೇ ಚಾಂಪಿಯನ್​ ಆಗಿ ಭಾರತ ಹೊರಹೊಮ್ಮಿತು. ಇದರ ಬಳಿಕ ಭಾರತ ಮತ್ತೆ ಟಿ20 ಚಾಂಪಿಯನ್​ ಆಗಲೇ ಇಲ್ಲ. ಇದೀಗ 17 ವರ್ಷಗಳ ಬಳಿಕ ಮತ್ತೆ ಚಾಂಪಿಯನ್​ ಆಗುವ ಇರಾದೆಯೊಂದಿಗೆ ಟೀಮ್ ಇಂಡಿಯಾ ಸೂಪರ್​-8 ಪಂದ್ಯವನ್ನಾಡಲು ಸಜ್ಜಾಗಿದೆ ಈ ಬಾರಿ ವಿಂಡೀಸ್​ ನೆಲ ಭಾರತಕ್ಕೆ ಲಕ್ಕಿ ಯಾಗಲೀ ಎನ್ನುವುದು ಭಾರತೀಯರ ಆಶಯ.

ಈ ಕೂಟದಲ್ಲಿ ಭಾರತ ನೀಡುವ ಪ್ರದರ್ಶನದ ಮೇಲೆ ವಿರಾಟ್‌ ಕೊಹ್ಲಿ ಮತ್ತು ರೋಹಿತ್‌ ಶರ್ಮ ಟಿ20 ಭವಿಷ್ಯ ಅಡಗಿದೆ. ಈ ಕೂಟ ಮುಗಿದ ಮೇಲೆ ಯಾರ್ಯಾರು ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆ ಎನ್ನುವ ಪ್ರಶ್ನೆಗಳೂ ಇವೆ. ಹೀಗಾಗಿ ರೋಹಿತ್​ ಮತ್ತು ಕೊಹ್ಲಿ ಪಾಲಿಗೆ ಇದೊಂದು ಮಹತ್ವದ ಕೂಟ ಎನ್ನಲಡ್ಡಿಯಿಲ್ಲ.

ಇದನ್ನೂ ಓದಿ IND vs AFG: ನಾಳೆ ಆಫ್ಘಾನ್​ ವಿರುದ್ಧ ಸೂಪರ್​-8 ಫೈಟ್​; ವಿಂಡೀಸ್​ ನೆಲದಲ್ಲಿ ಭಾರತದ ಟಿ20 ದಾಖಲೆ ಹೇಗಿದೆ?

ಭಾರತ ಬಾರ್ಬಡೋಸ್​ನ ಕೆನ್ಸಿಂಗ್ಟನ್ ಓವಲ್ ಸ್ಟೇಡಿಯಂನಲ್ಲಿ ಇದುವರೆಗೆ ಕೇವಲ 2 ಟಿ20 ಪಂದ್ಯವನ್ನು ಮಾತ್ರ ಆಡಿದೆ. ಈ ಎರಡೂ ಪಂದ್ಯಗಳಲಿಲ್ಲಯೂ ಟೀಮ್​ ಇಂಡಿಯಾ ಸೋಲು ಕಂಡಿತ್ತು. 2010ರಲ್ಲಿ ನಡೆದಿದ್ದ ಟಿ20 ವಿಶ್ವಕಪ್​ ಟೂರ್ನಿಯ ಪಂದ್ಯಗಳು ಇದಾಗಿತ್ತು. ಆಸ್ಟ್ರೇಲಿಯಾ ಮತ್ತು ವೆಸ್ಟ್​ ಇಂಡೀಸ್​ ವಿರುದ್ಧ ಅಂದು ಭಾರತ ಸೋಲು ಕಂಡಿತ್ತು.

ಟಿ20 ವಿಶ್ವ ಕಪ್​ನಲ್ಲಿ ಭಾರತ ಸಾಧನೆ

2007ಚಾಂಪಿಯನ್​
20092ನೇ ಸುತ್ತು
20102ನೇ ಸುತ್ತು
20122ನೇ ಸುತ್ತು
2014ರನ್ನರ್​ ಅಪ್​
2016ಸೆಮಿಫೈನಲ್​
20212ನೇ ಸುತ್ತು
2022ಸೆಮಿಫೈನಲ್​
Continue Reading
Advertisement
Hooch Tragedy
ದೇಶ55 mins ago

Hooch Tragedy: ಕಳ್ಳಬಟ್ಟಿ ಸೇವಿಸಿ 16 ಮಂದಿ ಸಾವು, 70ಕ್ಕೂ ಅಧಿಕ ಜನ ಅಸ್ವಸ್ಥ

Blacklist contractors who do not complete work within time says Minister Mankala Vaidya
ಉತ್ತರ ಕನ್ನಡ1 hour ago

Uttara Kannada News: ಅವಧಿಯೊಳಗೆ ಕಾಮಗಾರಿ ಮುಕ್ತಾಯಗೊಳಿಸದ ಗುತ್ತಿಗೆದಾರರನ್ನು ಬ್ಲ್ಯಾಕ್ ಲಿಸ್ಟ್‌ಗೆ ಸೇರಿಸಿ: ಸಚಿವ ಮಂಕಾಳ ವೈದ್ಯ

Appu Cup Season 2 to be held in July A team building event was held in Bengaluru
ಬೆಂಗಳೂರು1 hour ago

Appu Cup Badminton: ʼಅಪ್ಪು ಕಪ್ ಸೀಸನ್ 2ʼ; ಟೀಮ್ ಬಿಲ್ಡಿಂಗ್‌ಗೆ ಶುಭ ಕೋರಿದ ಅಶ್ವಿನಿ ಪುನೀತ್ ರಾಜಕುಮಾರ್

RSA vs USA
ಕ್ರೀಡೆ1 hour ago

SA vs USA: ಮಿಂಚಿದ ಡಿಕಾಕ್; ಯುಎಸ್‌ಎ ವಿರುದ್ಧ ದಕ್ಷಿಣ ಆಫ್ರಿಕಾಕ್ಕೆ 18 ರನ್‌ಗಳ ಜಯ

NET 2024
ದೇಶ2 hours ago

NET 2024: ಪರೀಕ್ಷೆ ನಡೆದ ಒಂದೇ ದಿನದಲ್ಲಿ ನೆಟ್ ರದ್ದುಗೊಳಿಸಿದ ಕೇಂದ್ರ ಸರ್ಕಾರ; ಏನಿದು ಕೇಸ್?‌

Hajj Pilgrims
ದೇಶ3 hours ago

Hajj Pilgrims: ಬಿಸಿಗಾಳಿ, ಬಿಸಿಲಿನ ಹೊಡೆತ; ಹಜ್‌ ಯಾತ್ರೆ ಕೈಗೊಂಡ 68 ಭಾರತೀಯರ ಸಾವು

Bescom complaint against false information video about electricity compensation for farmers
ಕರ್ನಾಟಕ3 hours ago

Fact Check: ಹೊಲದಲ್ಲಿ ಟ್ರಾನ್ಸ್‌ಫಾರ್ಮರ್‌ ಇದ್ದರೆ ರೈತರಿಗೆ ಪರಿಹಾರ? ಬೆಸ್ಕಾಂ ಹೇಳಿದ್ದೇನು?

Murder Case
ಕರ್ನಾಟಕ4 hours ago

Murder Case: 3 ವರ್ಷದ ಬಾಲಕನ ಕತ್ತು ಸೀಳಿ ಕೊಂದ ಚಿಕ್ಕಪ್ಪ; ನದಿಯಲ್ಲಿ ಈಜಲು ಹೋಗಿ ಇಬ್ಬರು ನಾಪತ್ತೆ

Suniel Shetty
ಬಾಲಿವುಡ್4 hours ago

Suniel Shetty: ಅಪ್ಪ ವೇಟರ್‌ ಆಗಿ ಕೆಲಸ ಮಾಡುತ್ತಿದ್ದ ರೆಸ್ಟೋರೆಂಟ್‌ಗೆ ಈಗ ಸುನೀಲ್‌ ಶೆಟ್ಟಿ ಒಡೆಯ; ಇದಪ್ಪ Success ಅಂದ್ರು ಜನ!

DCM DK Shivakumar visit Kengal Anjaneya temple
ಕರ್ನಾಟಕ4 hours ago

DK Shivakumar: ಕೆಂಗಲ್ ಆಂಜನೇಯ ಸ್ವಾಮಿ ದೇವಸ್ಥಾನದಿಂದ ನನ್ನ ಹೊಸ ರಾಜಕೀಯ ಅಧ್ಯಾಯ ಪ್ರಾರಂಭ: ಡಿ.ಕೆ.ಶಿ

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Actor Darshan
ಮೈಸೂರು2 days ago

Actor Darshan : ಕೊಲೆ ಕೇಸ್‌ ಬೆನ್ನಲ್ಲೇ ನಟ ದರ್ಶನ್‌ ಸೇರಿ ಪತ್ನಿ ವಿಜಯಲಕ್ಷ್ಮಿಗೆ ಬಾರ್ ಹೆಡೆಡ್ ಗೂಸ್ ಸಂಕಷ್ಟ!

Bakrid 2024
ಬೆಂಗಳೂರು3 days ago

Bakrid 2024 : ಮತ್ತೊಂದು ಧರ್ಮವನ್ನೂ ಪ್ರೀತಿಸಿ; ಬಕ್ರೀದ್‌ ಪ್ರಾರ್ಥನೆಯಲ್ಲಿ ಸಿಎಂ ಸಿದ್ದರಾಮಯ್ಯ ಕರೆ

Renukaswamy murder case The location of the accused is complete
ಸಿನಿಮಾ3 days ago

Renuka Swamy murder : ಭೀಕರವಾಗಿ ಕೊಂದರೂ ಆರೋಪಿಗಳಿಗೆ ಕಾಡುತ್ತಿಲ್ವಾ ಪಾಪಪ್ರಜ್ಞೆ? ನಗುತ್ತಲೇ ಹೊರಬಂದ ಪವಿತ್ರಾ ಗೌಡ, ಪವನ್‌

Renuka swamy murder
ಚಿತ್ರದುರ್ಗ3 days ago

Renuka swamy Murder : ರೇಣುಕಾಸ್ವಾಮಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಬಾಳೆಹೊನ್ನೂರು ಶ್ರೀಗಳು

Vijayanagara News
ವಿಜಯನಗರ4 days ago

Vijayanagara News : ಕೆಲಸಕ್ಕೆ ಚಕ್ಕರ್, ಸಂಬಳಕ್ಕೆ ಹಾಜರ್! ಹಾರಕನಾಳು ಗ್ರಾಪಂ ಪಿಡಿಓಗಾಗಿ ಗ್ರಾಮಸ್ಥರ ಹುಡುಕಾಟ

Actor Darshan
ಯಾದಗಿರಿ4 days ago

Actor Darshan : ಬಾಸ್‌ ಅಂತ ಯಾಕ್‌ ಬಕೆಟ್‌ ಹಿಡಿಯುತ್ತೀರಾ ಅಂದವನಿಗೆ ದರ್ಶನ್ ಅಭಿಮಾನಿಯಿಂದ ಜೀವ ಬೆದರಿಕೆ!

Karnataka Weather Forecast
ಮಳೆ5 days ago

Karnataka Weather : ಕರಾವಳಿ, ಉತ್ತರ ಒಳನಾಡಿನಲ್ಲಿ ವರುಣಾರ್ಭಟ; ನಾಳೆಯು ಹಲವೆಡೆ ಸಿಕ್ಕಾಪಟ್ಟೆ ಮಳೆ

Actor Darshan
ಬೆಂಗಳೂರು5 days ago

Actor Darshan : ರೇಣುಕಾಸ್ವಾಮಿಯನ್ನು ಕಿಡ್ನ್ಯಾಪ್ ಮಾಡಿ ಕರೆತರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ!

actor Darshan
ಬೆಂಗಳೂರು5 days ago

Actor Darshan : ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಮತ್ತಿಬ್ಬರು ಸರೆಂಡರ್‌; ಆರೋಪಿಗಳ ಸಂಖ್ಯೆ 16ಕ್ಕೆ ಏರಿಕೆ

Actor Darshan
ಸಿನಿಮಾ5 days ago

Actor Darshan : ರೇಣುಕಾಸ್ವಾಮಿ ‌ಮೃತದೇಹ ಬಿಸಾಡಿ ಬಳಿಕ ಸಾಕ್ಷ್ಯಇದ್ದ 2 ಮೊಬೈಲ್‌ಗಳನ್ನು ಮೋರಿಗೆ ಎಸೆದ್ರಾ ಆರೋಪಿಗಳು?

ಟ್ರೆಂಡಿಂಗ್‌