ಬೆಂಗಳೂರು: ಐಪಿಎಲ್ ಟೂರ್ನಿ ಪ್ಲೇ ಆಫ್ ಹಂತಕ್ಕೆ ಏರಿದ್ದು 2024ರ ಟಿ20 ವಿಶ್ವಕಪ್ ಟೂರ್ನಿಗೆ ಕ್ಷಣಗಣನೆ ಆರಂಭವಾಗಿದೆ. ವಿಶ್ವದಾದ್ಯಂತದ ಕ್ರಿಕೆಟ್ ಅಭಿಮಾನಿಗಳು ಕಾತರದಿಂದ ತಮ್ಮ ನೆಚ್ಚಿನ ತಂಡಗಳ ಪಂದ್ಯಕ್ಕಾಗಿ ಕಾಯುತ್ತಿದ್ದಾರೆ. ಹೆಚ್ಚಿನ ಅಭಿಮಾನಿಗಳು ತಮ್ಮ ಮನೆಯಿಂದ ಕ್ರಿಯೆಯನ್ನು ಆನಂದಿಸಿದರೆ, ಕೆಲವು ಜನರು ಅಭಿಮಾನಕ್ಕಾಗಿ ಕ್ರೀಡಾಂಗಣದಲ್ಲೇ ಪಂದ್ಯ ವೀಕ್ಷಿಸಲು ಯೋಜಿಸಿದ್ದಾರೆ. ಪಂದ್ಯಾವಳಿಯು ಜೂನ್ 02 ರಂದು ಪ್ರಾರಂಭವಾಗಲಿದ್ದು, ಒಟ್ಟು 20 ತಂಡಗಳು ಭಾಗವಹಿಸಲಿವೆ . ಹೆಚ್ಚು ತಂಡಗಳು ಇರುವ ಕಾರಣ ಈ ಬಾರಿಯ ವಿಶ್ವ ಕಪ್ ಪಂದ್ಯಗಳ ನೇರ ವೀಕ್ಷಿಸಲು ಸಾಕಷ್ಟು ಕಾಯುತ್ತಿದ್ದಾರೆ.
ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯವು ಟೂರ್ನಿಯಲ್ಲಿ ಹೆಚ್ಚು ಬೇಡಿಕೆಯ ಸ್ಪರ್ಧೆಗಳಲ್ಲಿ ಒಂದಾಗಿದೆ. ಜೂನ್ 09 ರಂದು ನ್ಯೂಯಾರ್ಕ್ನ ನಸ್ಸಾವು ಕೌಂಟಿ ಇಂಟರ್ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಈ ಪಂದ್ಯ ಆಯೋಜನೆಗೊಂಡಿದೆ. ಸಾಂಪ್ರದಾಯಿಕ ಎದುರಾಳಿಗಳ ಮುಖಾಮುಖಿಗೆ ಹಿಂದೆಂದಿಗಿಂತಲೂ ಹೆಚ್ಚಿನ ಪ್ರಚಾರ ನಡೆಯುತ್ತಿದೆ. ಎರಡೂ ದೇಶಗಳ ಅಭಿಮಾನಿಗಳು ದುಬಾರಿ ಟಿಕೆಟ್ ದರವಿದ್ದರೂ ಜಗತ್ತಿನ ಸುಪ್ರಸಿದ್ಧ ಮುಖಾಮುಖಿಗೆ ತಮ್ಮ ಟಿಕೆಟ್ ಗಳನ್ನು ಕಾಯ್ದಿರಿಸಿದ್ದಾರೆ.
ದುಬಾರಿ ಟಿಕೆಟ್ ಬೆಲೆ
ನ್ಯೂಯಾರ್ಕ್ನಿಂದಲೇ ಆಟವನ್ನು ಲೈವ್ ಆಗಿ ನೋಡಬೇಕಾದರೆ ಅಭಿಮಾನಿಗಳು ಪ್ರತಿ ವ್ಯಕ್ತಿಗೆ ಯುಎಸ್ $ 2,500 (ರೂ ~ 200,000) ಖರ್ಚು ಮಾಡಬೇಕಾಗುತ್ತದೆ. ಅಂದರೆ ನಾಲ್ಕು ಜನರ ಗುಂಪು ಕನಿಷ್ಠ 8,50,00 ರೂಪಾಯಿಗಳನ್ನು ಖರ್ಚು ಮಾಡುತ್ತದೆ. ಆದಾಗ್ಯೂ, ಅಧಿಕೃತ ಸೈಟ್ನಲ್ಲಿ ಟಿಕೆಟ್ಗಳು ಸೋಲ್ಡ್ ಔಟ್ ಆಗಿರುವುದರಿಂದ, ಅನೇಕ ಅಭಿಮಾನಿಗಳು ಬ್ಲ್ಯಾಕ್ನಲ್ಲಿ ಟಿಕೆಟ್ ಪಡೆಯಲು ನೋಡುತ್ತಿದ್ದಾರೆ. ಟಿಕೆಟ್ಗಳ ದ್ವಿತೀಯ ಬೆಲೆಗಳು ಒಂದು ಟಿಕೆಟ್ಗೆ 1.84 ಕೋಟಿ ರೂಪಾಯಿಗೆ ಏರಿದೆ ಎಂದು ಹೇಳಲಾಗಿದೆ.
ಇದನ್ನೂ ಓದಿ:Virat kohli : ಆರ್ಸಿಬಿ ಆಟಗಾರರಿಗೆ ಬ್ಯಾಟಿಂಗ್ ಅಭ್ಯಾಸ ನಡೆಸಲು ನೆರವಾದ ಕೊಹ್ಲಿ; ಇಲ್ಲಿದೆ ವಿಡಿಯೊ
2023ರ ಏಕದಿನ ವಿಶ್ವಕಪ್ನಲ್ಲ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಭಾರತ-ಪಾಕಿಸ್ತಾನ ಪಂದ್ಯದ ಒಂದು ಟಿಕೆಟ್ 57 ಲಕ್ಷ ರೂ.ಗೆ ಮಾರಾಟವಾಗಿತ್ತು. ಅದೇ ಸ್ಥಳದಲ್ಲಿ ನಡೆದ ಅಂತಿಮ ಪಂದ್ಯದಲ್ಲೂ ಟಿಕೆಟ್ ಬೆಲೆಗಳು ಅಕ್ರಮ ಕಾಳಸಂತೆಯಲ್ಲಿ ಏನಾದರೊಂದು ಏರಿಕೆಯಾಗಿದ್ದವು. ಆದಾಗ್ಯೂ, ಜಿದ್ದಾಜಿದ್ದಿನ ಪಂದ್ಯ ವೀಕ್ಷಿಸಲು ಅಭಿಮಾನಿಗಳು ಭಾರಿ ಮೊತ್ತವನ್ನು ಪಾವತಿಸಲು ಸ್ವಲ್ಪವೂ ಹಿಂಜರಿಯಲಿಲ್ಲ.
ಪಾಕಿಸ್ತಾನಕ್ಕೆ ಬರುವೆ ಎಂದು ಅಲ್ಲಿನ ಪರ್ವತಾರೋಹಿಗೆ ಭರವಸೆ ಕೊಟ್ಟಿದ್ದ ವಿರಾಟ್ ಕೊಹ್ಲಿ
ನವದೆಹಲಿ: ಪಾಕಿಸ್ತಾನದ ಪರ್ವತಾರೋಹಿ ಶೆಹ್ರೋಜ್ ಕಾಶಿಫ್ ಅವರೊಂದಿಗೆ ಸಂವಹನ ನಡೆಸಿದ್ದ ವೇಳೆ ಭಾರತ ತಂಡದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ (Virat kohli) ಭವಿಷ್ಯದಲ್ಲಿ ಪಾಕಿಸ್ತಾನಕ್ಕೆ ಭೇಟಿ ನೀಡುವ ಭರವಸೆಯಿದೆ ಎಂದು ಹೇಳಿರುವ ವಿಡಿಯೊ ವೈರಲ್ ಆಗಿದೆ. ಕಾಶಿಫ್ 2021 ರಲ್ಲಿ ಕೆ 2 ಶಿಖರವನ್ನು ಏರಿದ ವಿಶ್ವದ ಯುವ ಪರ್ವತಾರೋಹಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಇದೇ ವೇಳೆ ಅವರಿಗೆ ಭಾರತೀಯ ಕ್ರಿಕೆಟ್ ಸೂಪರ್ಸ್ಟಾರ್ ಜತೆ ಅವರೊಂದಿಗೆ ಮಾತನಾಡುವ ಅವಕಾಶ ಅವರಿಗೆ ಸಿಕ್ಕಿತು. ಅವರು 2022 ರಲ್ಲಿ ನೇಪಾಳದಲ್ಲಿದ್ದಾಗ ಭಾರತೀಯ ಕ್ರಿಕೆಟ್ ತಂಡದ ಜತೆ ಮಾತನಾಡಿದ್ದರು. ಈ ವೇಳೆ ಕೊಹ್ಲಿ ಅವರಿಗೆ ಪಾಕ್ಗೆ ಹೋಗುವ ಭರವಸೆ ನೀಡಿದ್ದರು.
ಕಾಶಿಫ್ ವಿರಾಟ್ ಕೊಹ್ಲಿಯೊಂದಿಗೆ ಸಂಭಾಷಣೆ ನಡೆಸುವ ಬಯಕೆ ವ್ಯಕ್ತಪಡಿಸಿದ್ದರು. ಅಂತೆಯೇ ಪಾಕಿಸ್ತಾನದ ಪರ್ವತಾರೋಹಿ ಭಾರತದ ಮಾಜಿ ನಾಯಕನೊಂದಿಗೆ ಸಂಭಾಷಣೆ ನಡೆಸಿದ್ದರು ಅದರ ಕ್ಲಿಪ್ ಅನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.
2022 ರಲ್ಲಿ ನಾನು ನೇಪಾಳದಲ್ಲಿದ್ದಾಗ, ಮೂಲತಃ ಭಾರತದಿಂದ ಬಂದ ಅಪರಿಚಿತರೊಬ್ಬರು (ರಾಜಕೀಯ ಕಾರಣಗಳಿಂದಾಗಿ ಅವರು ಯಾವುದೇ ತೊಂದರೆಗೆ ಸಿಲುಕದಂತೆ ಅವರ ಹೆಸರನ್ನು ಹೇಳುವುದಿಲ್ಲ) ನನ್ನ ಕೆಲಸವನ್ನು ಶ್ಲಾಘಿಸಿದ್ದರು ಎಂದು ಹೇಳಿದ್ದಾರೆ.