ಮುಂಬಯಿ: ಐಪಿಎಲ್ 16ನೇ ಆವೃತ್ತಿಯ (IPL 2023) ಶೀರ್ಷಿಕೆ ಪ್ರಾಯೋಜಕತ್ವವನ್ನು ಟಾಟಾ ಕಂಪನಿ ಪಡೆದುಕೊಂಡಿದೆ. ಅದೇ ರೀತಿ ಟಾಟಾ ಮೋಟಾರ್ಸ್ನ ಇವಿ ಕಾರು ಟಿಯಾಗೊ ಟೂರ್ನಿಯ ಅಧಿಕೃತ ಪಾಲುದಾರಿಕೆಯನ್ನು ಪಡೆದುಕೊಂಡಿದೆ. ಆರು ವರ್ಷದಿಂದ ಟಾಟಾ ಕಂಪನಿಯು ಐಪಿಎಲ್ನ ಟೈಟಲ್ ಸ್ಪಾನ್ಷರ್ ಪಡೆದುಕೊಂಡಿದೆ. ಅಂತೆಯೇ ಪ್ರತಿ ವರ್ಷ ಒಂದೊಂದು ಕಾರುಗಳಿಗೆ ಬ್ರ್ಯಾಂಡ್ ಪಾಲುದಾರಿಕೆ ಪಡೆದುಕೊಳ್ಳುತ್ತಿದೆ. ಅಂತೆಯೇ ಈ ಬಾರಿ ಎಂಟ್ರಿ ಲೆವೆಲ್ನ ಇವಿ ಕಾರು ಟಿಯಾಗೊಕ್ಕೆ ಪ್ರಾಯೋಜಕತ್ವ ಪಡೆದುಕೊಂಡಿದ್ದು ಪಂದ್ಯ ನಡೆಯಲಿರುವ 12 ಸ್ಟೇಡಿಯಮ್ಗಳಲ್ಲಿ ಈ ಕಾರು ಪ್ರದರ್ಶನಗೊಳ್ಳಲಿದೆ.
ಸತತ ಐದು ವರ್ಷಗಳ ಯಶಸ್ಸಿನ ಬಳಿಕ ಐಪಿಎಲ್ ಜತೆಗಿನ ನಮ್ಮ ಪಾಲುದಾರಿಕೆ ಮುಂದುವರಿಯುತ್ತದೆ. ಅಂತೆಯೇ ಈ ಬಾರಿ ನಮ್ಮ ಹೊಸ ಇವಿ ಕಾರನ್ನು ಪ್ರದರ್ಶಿಸಲಿದ್ದೇವೆ. ಈ ಒಂದು ಅವಕಾಶದ ಮೂಲಕ ಭಾರತದಲ್ಲಿ ನಮ್ಮ ಇವಿ ಉತ್ಪನ್ನವನ್ನು ಇನಷ್ಟು ಮಂದಿಗೆ ತಲುಪಿಸಲಿದ್ದೇವೆ ಎಂದು ಟಾಟಅ ಮೋಟಾರ್ಸ್ನ ಮಾರ್ಕೆಂಟಿಂಗ್ ಮುಖ್ಯಸ್ಥ ವಿವೇಕ್ ಶ್ರೀವಾಸ್ತವ ಅವರು ಹೇಳಿದ್ದಾರೆ.
ಟಾಟ ಟಿಯಾಗೊ ಇವಿ ಕಾರನ್ನು ಕಳೆದ ವರ್ಷ ಟಾಟಾ ಮೋಟಾರ್ಸ್ ಮಾರುಕಟ್ಟೆಗೆ ಇಳಿಸಿತ್ತು. ಆರಂಭದಲ್ಲಿ ಅದರ ಬೆಲೆ 8.49 ಲಕ್ಷ ರೂಪಾಯಿಗಳಿತ್ತು. ಆದರೆ, ಕಳೆದ ಫೆಬ್ರವರಿಯಲ್ಲಿ 20 ಸಾವಿರ ರೂಪಾಯಿ ಏರಿಕೆ ಮಾಡಿತ್ತು. ಟಾಟಾ ಟಿಯಾಗೊ ಎರಡು ಬ್ಯಾಟರಿ ಪ್ಯಾಕ್ನಂತೆ ಏಳು ವೇರಿಯಂಟ್ಗಳಲ್ಲಿ ಲಭ್ಯವಿದೆ. 19.2 ಕೆಡಬ್ಲ್ಯುಎಚ್ ಬ್ಯಾಟರಿ ಪ್ಯಾಕ್ ಹೊಂದಿರುವ ಮಿಡ್ ರೇಂಜ್ ಹಾಗೂ 24 ಕೆಡಬ್ಲ್ಯುಎಚ್ ಬ್ಯಾಟರಿ ಹೊಂದಿರುವ ಲಾಂಗ್ ರೇಂಜ್ ಎಂಬ ಎರಡು ಪ್ಯಾಕೇಜ್ನ ವಾಹನ ಮಾರುಕಟ್ಟೆಯಲ್ಲಿದೆ. ಎಲ್ಲ ವೇರಿಯೆಂಟ್ಗಳು 3.3 ಸಿಂಗಲ್ ಸಾಕೆಟ್ ಚಾರ್ಜಿಂಗ್ ಹೊಂದಿದೆ ಹಾಗೂ ಎಕ್ಸ್ಜಡ್ ಹಾಗೂ ಎಕ್ಸ್ ಜಡ್ ಪ್ಲಸ್ ಕಾರು 7.2 ಕೆಡ್ಬ್ಲು ಎಸಿ ಚಾರ್ಜರ್ ಹೊಂದಿದೆ.
ಐಪಿಎಲ್ ಜತೆ ಬ್ರ್ಯಾಂಡ್ ಪಾಲುದಾರಿಕೆಯ ಹಿನ್ನೆಲೆಯಲ್ಲಿ ಟಾಟಾ ಟಿಯಾಗೊಗೆ ಸಂಬಂಧಿಸಿದ ಚಟುವಟಿಕೆಗಳು 12 ಸ್ಟೇಡಿಯಮ್ಗಳಲ್ಲಿ ನಡೆಯಲಿವೆ ಎಂದು ಟಾಟಾ ಮೋಟಾರ್ಸ್ ಹೇಳಿದೆ. ಅದೇ ರೀತಿ 100 reasons to go.ev with Tiago.ev ಎಂಬ ಕಾರ್ಯಕ್ರಮವನ್ನು ಕೂಡ ಆಯೋಜಿಸುತ್ತಿದೆ. ಇದರ ಮೂಲಕ ಇವಿ ಕಾರುಗಳನ್ನು ಕೊಳ್ಳಲು ಮುಂದಾಗುವ ಗ್ರಾಹಕರಿಗೆ ಇರುವ ಗೊಂದಲವನ್ನು ಪರಿಹರಿಸಲಾಗುತ್ತದೆ.
ಟಾಟಾ ಮೋಟಾರ್ಸ್ 2018 ರಿಂದ ಇಂಡಿಯನ್ ಪ್ರೀಮಿಯರ್ ಲೀಗ್‌ನೊಂದಿಗೆ ತೊಡಗಿಸಿಕೊಂಡಿದೆ, ನೆಕ್ಸಾನ್, ಹ್ಯಾರಿಯರ್, ಆಲ್ಟ್ರೋಜ್, ಸಫರ್ ಮತ್ತು ಪಂಚ್ ಕಾರನ್ನು ಪ್ರದರ್ಶಿಸಿದೆ. Tiago.ev ಜೊತೆಗೆ.