Site icon Vistara News

Team India T20 World Cup: ಚಿಂಟುವಿನ ಆಸೆ ನೆರವೇರಿಸಲು ಟೀಮ್​ ಇಂಡಿಯಾ ಜತೆ ನ್ಯೂಯಾರ್ಕ್​ಗೆ ತೆರಳಿದ ತಾಯಿ

Team India Dream 11

Team India T20 World Cup: Dream11’s T20WC Campaign “Yeh Sabka Dream Hai“

ಮುಂಬಯಿ: ಟಿ20 ವಿಶ್ವಕಪ್​ ಟೂರ್ನಿ(T20 World Cup 2024) ಇನ್ನೆರಡು ದಿನಗಳಲ್ಲಿ ಕಾವೇರಲಿದೆ. ಭಾರತ(Team India T20 World Cup) ತನ್ನ ಮೊದಲ ಪಂದ್ಯವನ್ನು ಜೂನ್​ 5ರಂದು ಐರ್ಲೆಂಡ್​ ವಿರುದ್ಧ ಆಡುವ ಮೂಲಕ ಅಭಿಯಾನ ಆರಂಭಿಸಲಿದೆ. 2007ರಲ್ಲಿ ನಡೆದಿದ್ದ ಚೊಚ್ಚಲ ಆವೃತ್ತಿಯಲ್ಲಿ ಕಪ್​ ಗೆದ್ದ ಬಳಿಕ ಇದುವರೆಗೆ ಭಾರತ(Team India) ಕಪ್​ ಗೆದಿಲ್ಲ. 17 ವರ್ಷಗಳ ಬಳಿಕ ಮತ್ತೊಂದು ಕಪ್​ ಗೆಲ್ಲುವ ಇರಾದೆಯೊಂದಿಗೆ ಆಟಗಾರರು ಕಣಕ್ಕಿಳಿಯಲಿದ್ದಾರೆ. ಇದೀಗ ಡ್ರೀಮ್​ ಇಲೆವೆನ್​ನ(Dream11) ಜಾಹೀರಾತೊಂದು ಭಾರೀ ಸದ್ದು ಮಾಡುತ್ತಿದೆ.

ಭಾರತ ತಂಡ ಉತ್ತಮವಾಗಿ ಆಡು ಕಪ್​ ಗೆಲ್ಲಲಿ ಎನ್ನುವ ಪ್ರಧಾನ ಗುರಿಯೊಂದಿಗೆ ಡ್ರೀಮ್​ ಇಲೆವೆನ್​ ಜಾಹೀರಾತೊಂದನ್ನು ಬಿಡುಗಡೆ ಮಾಡಿದೆ. ಇದಲ್ಲಿ ಪುಟ್ಟ ಮಗು ಭಾರತ ತಂಡ ಜೆರ್ಸಿ ತೊಟ್ಟು ತನ್ನ ತಾಯಿಯ ಬಳಿ ನನ್ನ ತಂದೆ, ಸಹೋದರ ಭಾರತ ತಂಡ ವಿಶ್ವಕಪ್​ ಗೆದ್ದಿರುವುದನ್ನು ನೋಡಿದ್ದಾರೆ. ಆದರೆ ನಾನು ಯಾವಾಗ ಈ ಸುಂದರ ಕ್ಷಣವನ್ನು ನೋಡಲು ಸಾಧ್ಯ. ಈ ಬಾರಿ ಖಂಡಿತವಾಗಿಯೂ ನೋಡಲು ಸಾಧ್ಯವೇ? ಎಂದು ಪ್ರಶ್ನೆ ಮಾಡುತ್ತಾನೆ. ಈ ವಿಡಿಯೊವನ್ನು ತಾಯಿ ಟೀಮ್​ ಇಂಡಿಯಾದ ಆಟಗಾರರಿಗೆ ತೋರಿಸಿ ನೀವು ಏನು ಮಾಡುತ್ತೀರಾ ಎಂದು ನನಗೆ ತಿಳಿದಿಲ್ಲ ನನ್ನ ಮಗ ಚಿಂಟುವಿನ ಆಸೆಯನ್ನು ಈ ಬಾರಿ ಈಡೇರಿಸಲೇ ಬೇಕೆಂದು ಮಗುವಿನ ತಾಯಿ ಆಟಗಾರರಿಗೆ ಖಡಕ್​ ಎಚ್ಚರಿಕೆಯ ಸಂದೇಶ ನೀಡಿದ್ದಾರೆ.

ಇದನ್ನೂ ಓದಿ T20 World Cup 2007: ಚೊಚ್ಚಲ ಟಿ20 ವಿಶ್ವಕಪ್ ಭಾರತ-ಪಾಕ್​ ಫೈನಲ್​ ಪಂದ್ಯದ ಮೆಲುಕು ನೋಟ

ಈ ಬಾರಿಯ ಟೂರ್ನಿಗೆ ಸಿದ್ಧತೆ ಹೇಗಿದೆ ಎಂದು ಕೇಳಿದಾಗ ರೋಹಿತ್​ ನಾವು ಕಠಿಣ ತರಬೇತಿ ಪಡೆಯುತ್ತಿದ್ದೇವೆ ಎನ್ನುತ್ತಾರೆ. ಈ ವೇಳೆ ಚಿಂಟು ತಾಯಿ ನೋಡುತ್ತಿದ್ದೇನೆ ನಿಮ್ಮ ತಯಾರಿಯನ್ನು… ಹೀಗೆ ಅಭ್ಯಾಸ ನಡೆಸಿದರೆ ಕಪ್​ ಗೆಲ್ಲಲು ಸಾಧ್ಯವೇ ಎನ್ನುತ್ತಾರೆ. ಈ ವೇಳೆ ಉಪನಾಯಕ ಹಾರ್ದಿಕ್​ ಪಾಂಡ್ಯ ನೀವು ಆಶೀರ್ವಾದ ಮಾಡಿ ಸಾಕು ಉಳಿದದ್ದು ನಾವು ನೋಡಿಕೊಳ್ಳುತ್ತೇವೆ ಎನ್ನುತ್ತಾರೆ. ನಾವು ವಿಶ್ವದ ನಂ.1 ತಂಡ ಎಂದು ರೋಹಿತ್​ ಹೇಳುತ್ತಾರೆ. ಆಗ ಈ ತಾಯಿ ತಾನು ಈ ವಿಶ್ವದ ನಂ.1 ಮಮ್ಮಿ ಎಂದು ಹೇಳುತ್ತಾರೆ. ಈ ವೇಳೆ ಜಡೇಜಾ ಮಮ್ಮಿಜೀ ಇದು ಕ್ರಿಕೆಟ್​ ಎಂದು ಹೇಳುತ್ತಾರೆ. ಇದಕ್ಕೆ ಮಮ್ಮಿ ಹಾ… ಇದು ಕ್ರಿಕೆಟ್..​ ಬ್ಯಾಟ್​, ವಿಕೆಟ್​ ಮತ್ತು ಚೆಂಡು ತಂದು ಅಭ್ಯಾಸ ಆರಂಭಿಸಿ ಎಂದು ಹೇಳುವ ಮೂಲಕ ಕೋಚಿಂಗ್​ ಮಾಡುತ್ತಾರೆ.

ಈ ವಿಡಿಯೊವನ್ನು ಬಿಸಿಸಿಐ ತನ್ನ ಅಧಿಕೃತ ಟ್ವಿಟರ್​ ಎಕ್ಸ್​ನಲ್ಲಿ ಹಂಚಿಕೊಂಡು, ವಿಶ್ವಕಪ್‌ಗಳು ಅಭಿಮಾನಿಗಳ ಶಕ್ತಿಯ ಜತೆಗೆ ಈ ಬಾರಿ ತಾಯಂದಿರ ಹರ್ಷೋದ್ಗಾರ ಜೋರಾಗಿರಲಿವೆ. ‘ಮಮ್ಮಿ ಕೆ ಮ್ಯಾಜಿಕ್ ಕೆ ಸಾಥ್'(ತಾಯಿಯ ವಿಶೇಷ ಬೆಂಬಲದೊಂದಿಗೆ) ಟೀಮ್​ ಇಂಡಿಯಾ ವಿಶ್ವಕಪ್​ ಗೆಲ್ಲಲು ಸಜ್ಜಾಗಿದೆ ಎಂದು ಬರೆದುಕೊಂಡಿದೆ.

ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಹಾರ್ದಿಕ್ ಪಾಂಡ್ಯ (ಉಪನಾಯಕ), ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್ (ವಿಕೆಟ್​ ಕೀಪರ್​), ಸಂಜು ಸ್ಯಾಮ್ಸನ್ (ವಿಕೆಟ್​ ಕೀಪರ್​), ಶಿವಂ ದುಬೆ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಯುಜ್ವೇಂದ್ರ ಚಾಹಲ್, ಅರ್ಶದೀಪ್​ ಸಿಂಗ್​, ಜಸ್​ಪ್ರೀತ್​ ಬುಮ್ರಾ, ಮೊಹಮ್ಮದ್​ ಸಿರಾಜ್. ಮೀಸಲು ಆಟಗಾರರು ಶುಭಮನ್ ಗಿಲ್, ರಿಂಕು ಸಿಂಗ್, ಖಲೀಲ್ ಅಹ್ಮದ್ ಮತ್ತು ಅವೇಶ್ ಖಾನ್.

Exit mobile version