ಬೆಂಗಳೂರು: ‘ನಮಸ್ಕಾರ ದೇವ್ರು’ ಎಂದು ಯೂಟ್ಯೂಬ್‌ನಲ್ಲಿ ವಿಡಿಯೊ ಆರಂಭಿಸುವ ಡಾ. ಬ್ರೋ (Dr Bro) ನಿಜವಾದ ಹೆಸರು ಗಗನ್ ಶ್ರೀನಿವಾಸ್. ವಿದೇಶಗಳಿಗೆ ಹೋಗಿ ಅಲ್ಲಿ ಅದ್ಭುತ ಸಾಹಸಗಳನ್ನು ಮಾಡುವ, ಅಲ್ಲಿನ ಪರಿಸರ, ಜನರ ಬದುಕು, ರೀತಿ ನೀತಿಗಳನ್ನು ಪರಿಚಯಿಸುವ ಕಾರ್ಯವನ್ನು ಅವರು ಮಾಡುತ್ತ ಬಂದಿದ್ದಾರೆ. ಕೆಲವು ದಿನಗಳಿಂದ ಬಿಗ್ ಬಾಸ್‌ಗೆ ಡಾ. ಬ್ರೋ ಎಂಟ್ರಿ ಕೊಡುತ್ತಾರೆ ಎಂಬ ಗಾಸಿಪ್‌ಗಳು ಇತ್ತು. ಆದರೀಗ ಡಾ. ಬ್ರೋ ಬಿಗ್ ಬಾಸ್‌ಗೆ ಹೋಗೋದಿಲ್ಲ ಎಂಬುದು ಕನ್‌ಫರ್ಮ್ ಆಗಿದೆ. ಆದರೆ, ಅವರು ಸ್ಟಾರ್ ಸ್ಪೋರ್ಟ್ಸ್ ಕನ್ನಡಕ್ಕೆ ಹೋಗುತ್ತಿದ್ದಾರೆ. ಅದ್ಯಾಕೆ, ಮುಂದೆ ಓದಿ!
ಡಾ. ಬ್ರೋಗೆ ಈಗಾಗಲೇ ದೊಡ್ಡ ಅಭಿಮಾನಿ ವರ್ಗವಿದೆ. ಡಾ. ಬ್ರೋ ಅವರನ್ನು ಬಿಗ್ ಬಾಸ್‌ನಲ್ಲಿ ನೋಡಬೇಕು ಎಂಬುದು ಅವರ ಫ್ಯಾನ್ಸ್ ಆಸೆ. ಆದರೀಗ ಡಾ. ಬ್ರೋ ಕ್ಯಾಮೆರಾ ಹಿಡಿದು ವಿದೇಶ ಸುತ್ತುವ ಬದಲು ಭಾರತದ ಪ್ರಮುಖ ನಗರಗಳಿಗೆ ಭೇಟಿ ನೀಡಲಿದ್ದಾರೆ. ಆ ಪೈಕಿ ಮೊದಲಿಗೆ ಚೆನ್ನೈಗೆ ಈಗಾಗಲೇ ತೆರಳಿದ್ದಾರೆ. ಅ. 8 ಭಾನುವಾರ ಭಾರತ vs ಆಸ್ಟ್ರೇಲಿಯಾ ಮ್ಯಾಚ್ ನಡೆಯಲಿದೆ. ವಿಶ್ವಕಪ್ನ ಮೊದಲ ಭಾರತದ ಮ್ಯಾಚ್ ಇದು. ಚೆನ್ನೈನಲ್ಲಿ ಈ ಪಂದ್ಯ ನಡೆಯುತ್ತಿದೆ. ಸ್ಟಾರ್ ಸ್ಪೋರ್ಟ್ಸ್ ಈ ಮ್ಯಾಚ್ನ ಪ್ರಸಾರದ ಹಕ್ಕನ್ನು ಹೊಂದಿದೆ. ಕನ್ನಡದಲ್ಲೂ ಕಾಮೆಂಟರಿ ಪ್ರಸಾರ ಕಾಣಲಿದೆ. ‘ಸರ್ಪ್ರೈಸ್ ಹೇಗಿತ್ತು ಫ್ರೆಂಡ್ಸ್. ಡಾಕ್ಟರ್ ಬ್ರೋ ಇನ್ಮೇಲೆ ಎಲ್ಲಾ ಅಪ್ಡೇಟ್ಸ್ ಕೊಡ್ತಾರೆ, ಸ್ಟಾರ್ ಸ್ಪೋರ್ಟ್ಸ್ ಕನ್ನಡ ನೋಡೋದು ಮರಿಬೇಡಿ’ ಎಂದು ಸ್ಟಾರ್ ಸ್ಪೋರ್ಟ್ಸ್ ಕನ್ನಡ ಕ್ಯಾಪ್ಶನ್ ನೀಡಿದೆ. ಮೂಲಗಳ ಪ್ರಕಾರ ಪಂದ್ಯದ ಕಾಮೆಂಟರಿಯನ್ನೂ ತಮ್ಮ ಸ್ಟೈಲ್‌ನಲ್ಲಿಯೇ ಡಾ.ಬ್ರೋ ಮಾಡಲಿದ್ದಾರೆ ಎನ್ನಲಾಗುತ್ತಿದೆ.
ಇದನ್ನೂ ಓದಿ: Dr Bro: ಗೋಮೂತ್ರದಲ್ಲೇ ತಲೆ ತೊಳ್ಕೋತಾರೆ; ಆಫ್ರಿಕನ್ ಮುಂಡಾರಿಗಳ ಹಸು ಪ್ರೀತಿ ತೆರೆದಿಟ್ಟ ಡಾ. ಬ್ರೋ!
ವಿಡಿಯೊದಲ್ಲಿ ಡಾ.ಬ್ರೋ ಹೇಳಿದ್ದೇನು?
ʻʻಎಂದಿನಂತೆ ಕೆಂಪೆಗೌಡ ಇಂಟರ್‌ನ್ಯಾಶನಲ್ ಏರ್‌ಪೋರ್ಟ್‌ಗೆ ಬಂದೇ ಬಿಟ್ವಿ. ಆದರೆ ಈ ಸಲ ಸ್ಪೆಷಲ್ ಮಿಷನ್‌ಗೆ ಹೋಗುತ್ತಿದ್ದೇನೆ. ವಣಕ್ಕಂ ದೇವ್ರು. ಚೆನ್ನೈಗೆ ಸುಸ್ವಾಗತ. ಚೆನ್ನೈ 8ನೇ ತಾರೀಖಿಗೆ ಫುಲ್ ತಯಾರಿಯಾಗಿದೆ. ನೀವಲ್ಲಿ ನೋಡುತ್ತಿದ್ದೀರಾ ಚಿದಂಬರಂ ಸ್ಟೇಡಿಯಂ, ಇದರ ಕೆಪಾಸಿಟಿ 50 ಸಾವಿರ. ಮೂರು ದಿನಗಳ ಹಿಂದೆಯೇ ಟಿಕೆಟ್ ಸೋಲ್ಡ್ ಔಟ್ ಆಗಿವೆ. ಸ್ಟಾರ್ ಸ್ಪೋರ್ಟ್ಸ್ ಕನ್ನಡ ಸ್ಟೇಡಿಯಂನಿಂದಲೇ ಲೈವ್ ಅಪ್‌ಡೇಟ್ ಕೊಡುತ್ತಿರುತ್ತೆ. ನಾನಂತೂ ಗಂಟು ಮೂಟೆ ಹೊತ್ತುಕೊಂಡು ಬಂದಿದ್ದೇನೆ. ನಾನಂತೂ ಎಲ್ಲೆಲ್ಲಿ ವರ್ಲ್ಡ್ ಕಪ್ ನಡೆಯುತ್ತಿರುತ್ತೋ ಅಲ್ಲೆಲ್ಲ ಟ್ರಾವೆಲ್ ಮಾಡುತ್ತಿರುತ್ತೀನಿʼʼ ಎಂದಿದ್ದಾರೆ.
ಇದೀಗ ಡಾ.ಬ್ರೋ ವಿಡಿಯೊ ಕಂಡು ನೆಟ್ಟಗರು ʻʻನಿಮ್ಮಿಂದ ವರ್ಲ್ಡ್ ಕಪ್‌ಗೆ ಇನ್ನಷ್ಟು ಕಳೆ ಬರಲಿʼʼ ಎಂದು ಕಮೆಂಟ್ ಮಾಡಿದ್ದಾರೆ. ʻʻಈ ಸಲ ಡಬಲ್ ಮನರಂಜನೆ ಹಾಗಾದರೆʼʼ ಎಂದು ಸಂಭ್ರಮಿಸುತ್ತಿದ್ದಾರೆ.
ಭಾರತ ತಂಡ ಭಾನುವಾರ (ಅ.8) ಚೆನ್ನೈಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಆಡುವ ಮೂಲಕ ವಿಶ್ವಕಪ್ ಅಭಿಯಾನ ಆರಂಭಿಸಲು ಸಜ್ಜಾಗಿದೆ. ಆದರೆ ಪಂದ್ಯಕ್ಕೂ ಮುನ್ನ ಭಾರತಕ್ಕೆ ಚಿಂತೆಯೊಂದು ಕಾಡಿದೆ. ಹಾರ್ದಿಕ್ ಪಾಂಡ್ಯ ಅವರು ನೆಟ್ಸ್ನಲ್ಲಿ ಬ್ಯಾಟಿಂಗ್ ಅಭ್ಯಾಸ ನಡೆಸುತ್ತಿರುವಾಗ ಗಾಯಗೊಂಡಿದ್ದಾರೆ ಎನ್ನಲಾಗಿದೆ. ಅಲ್ಲದೆ ಅವರು ಅಭ್ಯಾಸದಿಂದ ಹೊರಗುಳಿದಿದ್ದಾರೆ ಎಂದು ವರದಿಯಾಗಿದೆ. ಆಸೀಸ್ ವಿರುದ್ಧದ ಪಂದ್ಯದಲ್ಲಿ ಆಡುವುದು ಅನುಮಾನ ಎನ್ನಲಾಗಿದೆ.