Site icon Vistara News

Venkatesh Iyer: ಎಂಗೇಜ್‌ ಆದ ಎಡಗೈ ಬ್ಯಾಟರ್ ವೆಂಕಟೇಶ್​ ಅಯ್ಯರ್!

Venkatesh Iyer gets engaged Shruti Raghunathan

ಬೆಂಗಳೂರು: ಕ್ರಿಕೆಟಿಗ ಎಡಗೈ ಬ್ಯಾಟರ್ ವೆಂಕಟೇಶ್​ ಅಯ್ಯರ್ (Venkatesh Iyer) ಇತ್ತೀಚೆಗೆ ಶ್ರುತಿ ರಘುನಾಥನ್ (shruti Raghunathan) ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಇನ್‌ಸ್ಟಾದಲ್ಲಿ ವೆಂಕಟೇಶ್​ ಅಯ್ಯರ್ ಫೋಟೊಗಳನ್ನು ಹಂಚಿಕೊಂಡಿದ್ದು, ಎಂಗೇಜ್‌ ಆಗಿರುವ ಬಗ್ಗೆ ಅಧಿಕೃತವಾಗಿ ಹೇಳಿಕೊಂಡಿದ್ದಾರೆ. ವೆಂಕಟೇಶ್ ತಿಳಿ ಹಸಿರು ಕುರ್ತಾ ಧರಿಸಿ ಕಾಣಿಸಿಕೊಂಡಿದ್ದು, ಶ್ರುತಿ ಅವರು ಸೀರೆಯಲ್ಲಿ ಕಂಡಿದ್ದಾರೆ. ʻʻನನ್ನ ಜೀವನದ ಮುಂದಿನ ಅಧ್ಯಾಯʼʼಎಂದು ವೆಂಕಟೇಶ್​ ಅಯ್ಯರ್ ಫೋಟೊಗಳನ್ನು ಹಂಚಿಕೊಂಡಿದ್ದಾರೆ.

ಶ್ರುತಿ ಅವರ ಬಗ್ಗೆ ಇನ್ನೂ ತಿಳಿದು ಬಂದಿಲ್ಲ. ವರದಿಗಳ ಪ್ರಕಾರ ಶ್ರುತಿ ಅವರು PSG ಕಾಲೇಜ್ ಆಫ್ ಆರ್ಟ್ಸ್ ಆ್ಡ್ ಸೈನ್ಸ್‌ನಿಂದ B.com ಪೂರ್ಣಗೊಳಿಸಿದ್ದಾರೆ. ಭಾರತದ NIFTನಿಂದ ಫ್ಯಾಷನ್ ಮ್ಯಾನೇಜ್‌ಮೆಂಟ್‌ನಲ್ಲಿ ಸ್ನಾತಕೋತ್ತರ ಪದವಿಯನ್ನು ಹೊಂದಿದ್ದಾರೆ. ಪ್ರಸ್ತುತ ಕರ್ನಾಟಕದ ಬೆಂಗಳೂರಿನಲ್ಲಿರುವ ಲೈಫ್‌ಸ್ಟೈಲ್ ಇಂಟರ್‌ನ್ಯಾಶನಲ್ ಪ್ರೈವೇಟ್ ಲಿಮಿಟೆಡ್‌ನಲ್ಲಿ ಮರ್ಚಂಡೈಸ್ ಪ್ಲಾನರ್ ಆಗಿ ಕೆಲಸ ಮಾಡುತ್ತಿದ್ದಾರೆ ಎನ್ನಲಾಗಿದೆ.

ಗಾಯದ ಮಧ್ಯೆಯೂ ಶತಕ ಸಿಡಿಸಿದ್ದ ವೆಂಕಟೇಶ್​ ಅಯ್ಯರ್

ಕೋಲ್ಕೊತಾ ನೈಟ್​ ರೈಡರ್ಸ್​ ತಂಡದ ಮಧ್ಯಮ ಕ್ರಮಾಂಕದ ಬ್ಯಾಟರ್​ ವೆಂಕಟೇಶ್​ ಅಯ್ಯರ್​ ಐಪಿಎಲ್​ 16ನೇ ಆವೃತ್ತಿಯಲ್ಲಿ ಮುಂಬಯಿ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಶತಕ ಬಾರಿಸಿದ್ದರು. ತಮ್ಮ ತಂಡ 11 ರನ್​ಗಳಿಗೆ 1 ವಿಕೆಟ್​ ಕಳೆದುಕೊಂಡಿದ್ದ ಸಮಯದಲ್ಲಿ ಬ್ಯಾಟ್​ ಮಾಡಲು ಬಂದ ವೆಂಕಟೇಶ್​ ಅಯ್ಯರ್ ನಾಲ್ಕನೇ ಓವರ್​ನಲ್ಲಿ ಮಂಡಿಗೆ ಚೆಂಡು ಬಡಿದ ಕಾರಣ ನೋವಿನಿಂದ ಕುಸಿದು ಬಿದ್ದಿದ್ದರು. ಎದ್ದವರಿಗೆ ವಿಕೆಟ್​ಗಳ ನಡುವಿನ ಓಡಾಟ ಕಷ್ಟವಾಗುತ್ತಿತ್ತು. ಹೀಗಾಗಿ ಬೌಂಡರಿ, ಸಿಕ್ಸರ್​ಗಳಿಗೆ ಮೊರೆ ಹೋದರು. ಅದರ ಫಲವಾಗಿ ಅವರು ಶತಕದ ಸಾಧನೆ ಮಾಡಿದ್ದರು.

ಇದನ್ನೂ ಓದಿ: IPL 2023: ಗಾಯದ ಮಧ್ಯೆಯೂ ಶತಕ ಸಿಡಿಸಿದ ವೆಂಕಟೇಶ್​ ಅಯ್ಯರ್​; ಮುಂಬೈ ಗೆಲುವಿಗೆ 186 ರನ್​ ಸವಾಲು

ಅಂದ ಹಾಗೆ ವೆಂಕಟೇಶ್​ ಅಯ್ಯರ್​ ಕೋಲ್ಕೊತಾ ನೈಟ್​​ ರೈಡರ್ಸ್ ತಂಡದ ಇತಿಹಾಸದಲ್ಲಿ ಶತಕ ಬಾರಿಸುತ್ತಿರುವ ಎರಡನೇ ಆಟಗಾರ. ಉದ್ಘಾಟನಾ ಆವೃತ್ತಿಯಲ್ಲಿ ಬೆಂಡನ್ ಮೆಕಲಮ್​ ಆರ್​ಸಿಬಿ ವಿರುದ್ಧ 158 ರನ್​ ಬಾರಿಸಿದ ಬಳಿಕದಿಂದ ಆ ತಂಡದ ಯಾವುದೇ ಆಟಗಾರ ಶತಕ ಬಾರಿಸಿರಲಿಲ್ಲ. 15 ವರ್ಷಗಳ ಕಾಯುವಿಕೆ ಬಳಿಕ ವೆಂಕಟೇಶ್​ ಅಯ್ಯರ್​ ಈ ಸಾಧನೆ ಮಾಡಿದ್ದರು.

Exit mobile version