Site icon Vistara News

Venue For 2027 World Cup: ಈ ತಾಣದಲ್ಲಿ ನಡೆಯಲಿದೆ ಮುಂದಿನ ಏಕದಿನ ವಿಶ್ವಕಪ್​

Venue For 2027 World Cup

ಬೆಂಗಳೂರು: ಐಸಿಸಿ ಪುರುಷರ ಪ್ರತಿಷ್ಠಿತ ಏಕದಿನ ವಿಶ್ವಕಪ್​ ಟೂರ್ನಿಯ 14ನೇ ಆವೃತ್ತಿ ಯಾವಾಗ, ಎಲ್ಲಿ ನಡೆಯಲಿದೆ(Venue For 2027 World Cup) ಎಂಬ ಮಾಹಿತಿಯೊಂದು ಹೊರಬಿದ್ದಿದೆ. 2027ರಲ್ಲಿ ಏಕದಿನಿ ವಿಶ್ವಕಪ್​ ನಡೆಯಲಿದ್ದು ದಕ್ಷಿಣ ಆಫ್ರಿಕಾ, ಜಿಂಬಾಬ್ವೆ ಮತ್ತು ನಮೀಬಿಯಾದ ಮೂರು ದೇಶಗಳ ಜಂಟಿ ಆತಿಥ್ಯದಲ್ಲಿ ಈ ಟೂರ್ನಿ ನಡೆಯಲಿದೆ. ಒಟ್ಟು 14 ತಂಡಗಳು ಪಾಲ್ಗೊಳ್ಳಲಿದ್ದು ಅಕ್ಟೋಬರ್​ ಮತ್ತು ನವೆಂಬರ್​ನಲ್ಲಿ ಟೂರ್ನಿ ನಡೆಯಲಿದೆ ಎಂದು ತಿಳಿದುಬಂದಿದೆ.

ಇದೇ ವಿಚಾರವಾಗಿ ಮಾತನಾಡಿದ ದಕ್ಷಿಣ ಆಫ್ರಿಕಾ ಕ್ರಿಕೆಟ್​ ಮಂಡಳಿಯ ಸಿಇಒ ಫೋಲೆಟ್ಸಿ ಮೊಸೆಕಿ, ವಿಶ್ವಕಪ್ ನಡೆಯುವ ತಾಣಗಳ ಬಗ್ಗೆ ಈಗಾಗಲೇ ಚರ್ಚೆ ನಡೆದಿದೆ. ಟೂರ್ನಿ ಆಡಲಿರುವ ತಣಗಳಿಗೆ ಬೇಕಾದ ಹೋಟೆಲ್ ಮತ್ತು ವಿಮಾನ ನಿಲ್ದಾಣಗಳ ಲಭ್ಯತೆಯನ್ನು ಮುಂದಿನ ದಿನಗಳಲ್ಲಿ ಪರಿಗಣಿಸಬೇಕಾಗಿದೆ ಎಂದು ಹೇಳಿದರು.

ದಕ್ಷಿಣ ಆಫ್ರಿಕಾ ಮತ್ತು ಜಿಂಬಾಬ್ವೆ ಸಹ-ಆತಿಥೇಯರಾಗಿ ಕಾರ್ಯನಿರ್ವಹಿಸುತ್ತಿರುವ ಕಾರಣ ಈ ತಂಡಗಳಿಗೆ ನೇರವಾಗಿ ಅರ್ಹತೆ ಸಿಗಲಿದೆ. ನಮೀಬಿಯಾ ಮೊದಲ ಬಾರಿಗೆ ಪಂದ್ಯಾವಳಿಯ ಆತಿಥ್ಯ ವಹಿಸಿದೆ. ಆದರೆ ಅವರು ಪೂರ್ಣ ಐಸಿಸಿ ಸದಸ್ಯರಲ್ಲದ ಕಾರಣ ಅವರಿಗೆ ನೇರ ಅರ್ಹತೆ ನೀಡಲಾಗಿಲ್ಲ. ಅರ್ಹತಾ ಸುತ್ತಿನ ಪಂದ್ಯವನ್ನು ಆಡಿ ಅರ್ಹತೆ ಗಳಿಸಬೇಕಿದೆ.

ಇದನ್ನೂ ಓದಿ IPL 2024: ಆರ್​ಸಿಬಿ ಸೋಲಿಗೆ ಮ್ಯಾಕ್ಸ್​ವೆಲ್ ಕುಡಿತವೇ ಕಾರಣವಂತೆ!; ದಿನಕ್ಕೆ ಎಷ್ಟು ಪೆಗ್​ ಬೇಕು?

ತಂಡಗಳ ಸಂಖ್ಯೆ 14ಕ್ಕೇರಿದೆ. ಐಸಿಸಿ ಏಕದಿನ ಶ್ರೇಯಾಂಕದಲ್ಲಿ ಅಗ್ರ ಎಂಟು ಸ್ಥಾನ ಪಡೆಯುವ ತಂಡಗಳು ನೇರವಾಗಿ ಅರ್ಹತೆ ಪಡೆಯಲಿವೆ. ಉಳಿದ ನಾಲ್ಕು ಸ್ಥಾನಗಳನ್ನು ಕ್ವಾಲಿಫೈಯರ್ ಟೂರ್ನಿಗಳಲ್ಲಿ ಆಡಿ ಅರ್ಹತೆ ಪಡೆಯಬೇಕಿದೆ.

ಗುಂಪು ಹಂತದಲ್ಲಿ ಪಂದ್ಯ


2027ರ ವಿಶ್ವಕಪ್​ನಲ್ಲಿಯೂ ಎರಡು ಗುಂಪುಗಳು ಒಳಗೊಂಡಿದೆ. ಒಂದು ಗುಂಪಿಯಲ್ಲಿ ಏಳು ತಂಡಗಳಿರುತ್ತದೆ. ಪ್ರತಿ ಗುಂಪಿನಲ್ಲಿ ಅಗ್ರ ಮೂರು ತಂಡಗಳು ಸೂಪರ್ ಸಿಕ್ಸ್ ಸುತ್ತಿಗೆ ಪ್ರವೇಶಿಸುತ್ತವೆ. ನಂತರ ಅಂತಿಮ ವಿಜೇತರನ್ನು ನಿರ್ಧರಿಸಲು ಸೆಮಿಫೈನಲ್ ಮತ್ತು ಫೈನಲ್‌ಗಳು ನಡೆಯಲಿವೆ. ಗುಂಪು ಹಂತದಲ್ಲಿ, ಪ್ರತಿ ತಂಡವು ತನ್ನ ಗುಂಪಿನಲ್ಲಿರುವ ಇತರ ಎಲ್ಲ ತಂಡಗಳ ವಿರುದ್ಧ ಆಡಬೇಕು.

ಸಂಭಾವ್ಯ ಸ್ಟೇಡಿಯಂಗಳು


ಜೋಹಾನ್ಸ್‌ಬರ್ಗ್‌ನ ವಾಂಡರರ್ಸ್, ಪ್ರಿಟೋರಿಯಾದ ಸೆಂಚುರಿಯನ್ ಪಾರ್ಕ್, ಡರ್ಬನ್‌ನ ಕಿಂಗ್ಸ್‌ಮೀಡ್, ಗ್ಕೆಬರ್ಹಾದ ಸೇಂಟ್ ಜಾರ್ಜ್ ಪಾರ್ಕ್, ಪರ್ಲ್‌ನ ಬೋಲ್ಯಾಂಡ್ ಪಾರ್ಕ್ ಮತ್ತು ಕೇಪ್ ಟೌನ್‌ನ ನ್ಯೂಲ್ಯಾಂಡ್ಸ್ ಪ್ರಮುಖ ಸ್ಥಳಗಳಾಗಿ ಆಯ್ಕೆಗೊಂಡಿದೆ.

Exit mobile version