ಮುಂಬಯಿ: ಅಮೆರಿಕ ಮತ್ತು ವೆಸ್ಟ್ ಇಂಡೀಸ್ ಜಂಟಿ ಆತಿಥ್ಯದಲ್ಲಿ ನಡೆದಿದ್ದ ಟಿ20 ವಿಶ್ವಕಪ್ನಲ್ಲಿ(t20 world cup 2024) ಭಾರತ ತಂಡ ಕಪ್ ಗೆದ್ದು ಸರಿ ಸುಮಾರು 2 ತಿಂಗಳು ಕಳೆದಿದೆ. ಇದೀಗ ತಂಡದ ನಾಯಕ ರೋಹಿತ್ ಶರ್ಮ(Rohit Sharma) ಮತ್ತು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ(Jay Shah) ಮುಂಬಯಿಯ ಸಿದ್ಧಿ ವಿನಾಯಕನ ಸನ್ನಿಧಿಯಲ್ಲಿ ಬುಧವಾರ ಟ್ರೋಫಿಗೆ ಪೂಜೆ ಸಲ್ಲಿಸಿದರು. ಈ ಫೋಟೊ ವೈರಲ್(Viral News) ಆಗಿದೆ.
17ನೇ ವರ್ಷಗಳ ಬಳಿಕ ಟಿ20 ವಿಶ್ವಕಪ್(T20 World Cup final) ಗೆದ್ದ ಭಾರತ ತಂಡದ ಈ ಅಭೂತಪೂರ್ವ ಗೆಲುವನ್ನು ಅಭಿಮಾನಿಗಳು ದೇಶಾದ್ಯಂತ ಸಂಭ್ರಮದಿಂದ ಆಚರಿಸಿದ್ದರು. ಟಿ20 ವಿಶ್ವಕಪ್(T20 World Cup) ಗೆದ್ದ ಭಾರತ ಕ್ರಿಕೆಟ್ ತಂಡದ ಆಟಗಾರರನ್ನು ಮುಂಬೈಯಲ್ಲಿ ಭರ್ಜರಿಯಾಗಿ ಅಭಿನಂದಿಸಲಾಗಿತ್ತು. ಮರೀನ್ ಡ್ರೈವ್ ಪ್ರೇದೇಶದಲ್ಲಿ ಸಾಗರೋಪಾದಿಯಲ್ಲಿ ಜನ ಸೇರಿದ್ದರು.
ಕೆನ್ಸಿಂಗ್ಟನ್ ಓವಲ್ ಕ್ರಿಕೆಟ್ ಮೈದಾನದಲ್ಲಿ ಜೂನ್ 29ರಂದು ನಡೆದಿದ್ದ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಭಾರತ, ವಿರಾಟ್ ಕೊಹ್ಲಿ ಮತ್ತು ಅಕ್ಷರ್ ಪಟೇಲ್ ಅವರ ಜವಾಬ್ದಾರಿಯುತ ಆಟದ ನೆರವಿನಿಂದ 7 ವಿಕೆಟ್ ನಷ್ಟಕ್ಕೆ 176 ರನ್ ಗಳಿಸಿತು. ಈ ಮೊತ್ತವನ್ನು ಒಂದು ಹಂತದ ವರೆಗೆ ದಿಟ್ಟವಾಗಿ ಬೆನ್ನಟ್ಟಿಕೊಂಡು ಬಂದ ದಕ್ಷಿಣ ಆಫ್ರಿಕಾ(South Africa vs India) 8 ವಿಕೆಟ್ಗೆ 169 ರನ್ ಗಳಿಸಲಷ್ಟೇ ಶಕ್ತವಾಯಿತು. ಭಾರತ 7 ರನ್ಗಳ ಗೆಲುವು ಸಾಧಿಸಿತ್ತು.
ಟೀಮ್ ಇಂಡಿಯಾ ಬಳಿ ಇರುವುದು ನಕಲಿ ವಿಶ್ವಕಪ್ ಟ್ರೋಫಿ
ಟೀಮ್ ಇಂಡಿಯಾ ಭಾರತಕ್ಕೆ ತಂದಿರುವುದು ಡುಪ್ಲಿಕೇಟ್ ಟಿ20 ವಿಶ್ವಕಪ್ ಟ್ರೋಫಿ. ಸಾಮಾನ್ಯವಾಗಿ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಆಯೋಜಿಸುವ ಯಾವುದೇ ವಿಶ್ವಕಪ್ ಟೂರ್ನಿಯಲ್ಲಿ ಫೋಟೋಶೂಟ್‌ಗೆ ಮಾತ್ರ ಮೂಲ ಟ್ರೋಫಿಯನ್ನು ನೀಡಲಾಗುತ್ತದೆ. ಆ ಬಳಿಕ ಐಸಿಸಿ ವರ್ಷದ ಲಾಂಛನದೊಂದಿಗೆ ನಕಲಿ ಬೆಳ್ಳಿಯ ಟ್ರೋಫಿಯನ್ನು ವಿನ್ಯಾಸಗೊಳಿಸುತ್ತದೆ ಮತ್ತು ಇದರನ್ನು ವಿಜೇತ ತಂಡಕ್ಕೆ ನೀಡಲಾಗುತ್ತದೆ. ಮೂಲ ಟ್ರೋಫಿ ಐಸಿಸಿ ಬಳಿಯೇ ಇರುತ್ತದೆ.
ಅಸಲಿ ಟ್ರೋಫಿ ದುಬೈನಲ್ಲಿರುವ ಐಸಿಸಿ ಕೇಂದ್ರ ಕಚೇರಿಯಲ್ಲಿದೆ. ಫೋಟೋಶೂಟ್ ನಡೆಸಿದ ಬಳಿಕ ಮೂಲ ಟ್ರೋಫಿಯನ್ನು ಕೇಂದ್ರ ಕಚೇರಿಗೆ ನೀಡಲಾಗುತ್ತದೆ. ಯಾವುದೇ ತಂಡ ಕಪ್ ಗೆದ್ದರೂ ಅದನ್ನು ಸಂಭ್ರಮಾಚರಣೆ ಮತ್ತು ಫೋಟೋ ಸೆಷನ್ವರೆಗೂ ಮಾತ್ರ ಪ್ರಸ್ತುತಪಡಿಸಲಾಗುತ್ತದೆ. ಅದರ ನಂತರ, ಗೆದ್ದವರು ನಕಲಿ ಟ್ರೋಫಿಯೊಂದಿಗೆ ತವರಿಗೆ ಹಿಂದಿರುಗುತ್ತಾರೆ.