Site icon Vistara News

Viral Video: ಪಂದ್ಯದ ವೇಳೆ ಮೈದಾನಕ್ಕೆ ನುಗ್ಗಿದ ಗುಳ್ಳೆ ನರಿ; ವಿಡಿಯೊ ವೈರಲ್​

Viral Video

Viral Video: Brown Fox Breaches Security To Enter Cricket Field in London During an Ongoing Match

ಲಂಡನ್​: ಸಾಮನ್ಯವಾಗಿ ಕ್ರಿಕೆಟ್​ ಪಂದ್ಯದ ವೇಳೆ ನಾಯಿ, ಹಾವು, ಬೆಕ್ಕು ಕಾಣಿಸಿಕೊಳ್ಳುವುದು ಸರ್ವೆ ಸಾಮಾನ್ಯ. ಪಂದ್ಯದ ವೇಳೆ ಇವುಗಳು ಮೈದಾನಕ್ಕೆ ಬಂದು ಪಂದ್ಯಗಳು ಅಡಚಣೆಯಾದ ಹಲವು ನಿದರ್ಶನಗಳು ನಮ್ಮ ಕಣ್ಣ ಮುಂದಿದೆ. ಆದರೆ, ಈ ಬಾರಿ ವಿಶೇಷ ಅತಿಥಿಯಂತೆ ನರಿಯೊಂದು(Monitor Lizard) ಮೈದಾನಕ್ಕೆ ಬಂದಿದೆ. ಈ ವಿಡಿಯೊ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್(Viral Video)​ ಆಗಿದೆ. ಲಂಡನ್​ನಲ್ಲಿ ಈ ಘಟನೆ ನಡೆದಿದೆ.

ಲಂಡನ್​ನಲ್ಲಿ ಕ್ರಿಕೆಟ್​ ಪಂದ್ಯವೊಂದು ನಡೆಯುತ್ತಿದ್ದ ವೇಳೆ ಕಂದು ಬಣ್ಣದ ನರಿಯೊಂದು(Brown Fox) ಏಕಾಏಕಿಯಾಗಿ ಮೈದಾನಕ್ಕೆ ನುಗ್ಗಿದೆ. ನೆರದಿದ್ದ ಪ್ರೇಕ್ಷಕರು ಮತ್ತು ಆಟಗಾರರ ಗದ್ದಲದಿಂದ ಹೆದರಿಕೊಂಡ ಈ ನರಿ ಕೆಲ ಕಾಲ ಮೈದಾನದ ಸುತ್ತಲೂ ಓಡಿ ಕೊನೆಗೂ ಮೈದಾನದಿಂದ ಜಿಗಿದು ಹೊರ ಹೋಗಿದೆ. ಆಟಗಾರರು ನರಿ…ನರಿ ಎಂದು ಕೂಗುತ್ತಿರುವುದನ್ನು ವಿಡಿಯೊದಲ್ಲಿ ಕೇಳಬಹುದಾಗಿದೆ.

ಕೆಲವು ತಿಂಗಳುಗಳ ಹಿಂದೆ ಕೊಲಂಬೊದಲ್ಲಿ ನಡೆದಿದ್ದ ಅಫಘಾನಿಸ್ತಾನ ಮತ್ತು ಶ್ರೀಲಂಕಾ(Sri Lanka vs Afghanistan) ನಡುವಣ ಏಕೈಕ ಟೆಸ್ಟ್​ ಪಂದ್ಯದಲ್ಲಿ ಉಡವೊಂದು(Monitor Lizard) ಬೌಂಡರಿ ಗೆರೆ ದಾಟಿ ಮೈದಾನಕ್ಕೆ ಎಂಟ್ರಿ ಕೊಟ್ಟಿತ್ತು. ಸೀಳಿದಂತಿದ್ದ ಕೆಂಗುಲಾಬಿ ಬಣ್ಣದ ನಾಲಿಗೆಯನ್ನು ಹೊರಚಾಚುತ್ತಾ ಮೈದಾನದಲ್ಲಿ ಓಡಾಡಿತ್ತು. ಈ ವಿಡಿಯೊ ಕೂಡ ವೈರಲ್ ಆಗಿತ್ತು. 

ಉಡವನ್ನು ಕಂಡ ಫೀಲ್ಡ್​ ಅಂಪೈರ್ ಬೌಲಿಂಗ್​ ನಡೆಸಲು ಓಡಿ ಬಂದ ನಿಜತ್ ಮಸೂದ್ ಅವರನ್ನು ತಡೆದು ನಿಲ್ಲಿಸಿ ಬಳಿಕ ಮೈದಾನ ಸಿಬ್ಬಂದಿಗೆ ಉಡವನ್ನು ಹೊರಗಡೆ ಹಾಕುವಂತೆ ಸೂಚನೆ ನೀಡಿದ್ದರು. ಈ ವೇಳೆ ಮೈದಾನದ ಹೊರಗಿದ್ದ ಅಂಪೈರ್​ ಉಡವನ್ನು ಓಡಿಸಲು ಕೆಲ ಕಾಲ ಹರ ಸಾಹಸ ಪಟ್ಟು ಅಂತಿಮವಾಗಿ ಉಡವನ್ನು ಮೈದಾನದಿಂದ ಓಡಿಸಿದ್ದರು.

ದಿಟ್ಟ ಹೋರಾಟ ನಡೆಸಿದ ವಿಂಡೀಸ್​


ಇಂಗ್ಲೆಂಡ್‌ ಎದುರಿನ ದ್ವಿತೀಯ ಟೆಸ್ಟ್‌ ಪಂದ್ಯದಲ್ಲಿ ವೆಸ್ಟ್‌ ಇಂಡೀಸ್‌ ದಿಟ್ಟ ಆಟವಾಡುವ ಮೂಲಕ ತೀವ್ರ ಪೈಪೋಟಿ ನೀಡಿದೆ. ಇಂಗ್ಲೆಂಡ್​ ತಂಡದ ಮೊದಲ ಇನಿಂಗ್ಸ್​ನ 416 ರನ್ನಿಗೆ ಉತ್ತರವಾಗಿ ಬ್ಯಾಟಿಂಗ್​ ನಡೆಸುತ್ತಿರುವ ವೆಸ್ಟ್​ ಇಂಡೀಸ್​ ಕಾವೆಮ್‌ ಹಾಜ್‌(120) ಅಮೋಘ ಶತಕದ ನೆರವಿನಿಂದ 5 ವಿಕೆಟಿಗೆ 351 ರನ್‌ ಗಳಿಸಿ ದ್ವಿತೀಯ ದಿನದಾಟ ಮುಂದುವರಿಸಿದೆ. ಇನ್ನೂ 65 ರನ್​ ಹಿನ್ನಡೆಯಲ್ಲಿದೆ. ಸದ್ಯದ ಪರಿಸ್ಥಿತಿ ನೋಡುವಾಗ ವಿಂಡೀಸ್​ ಮೊದಲ ಇನಿಂಗ್ಸ್​ನಲ್ಲಿ ಭಾರೀ ಮುನ್ನಡೆ ಸಾಧಿಸುವ ನಿರೀಕ್ಷೆಯಿದೆ. ಜಾಸನ್​ ಹೋಲ್ಡರ್​(23) ಮತ್ತು ಜೋಶುವಾ ಡಾ ಸಿಲ್ವಾ(32) ರನ್​ ಗಳಿಸಿ ಬ್ಯಾಟಿಂಗ್​ ಕಾಯ್ದುಕೊಂಡಿದ್ದಾರೆ.

ಇದನ್ನೂ ಓದಿ Viral Video: ನೋಡ ನೋಡ್ತಿದ್ದಂತೆ ಕುಸಿದು ಬಿತ್ತು ಕ್ಲಾಸ್‌ರೂಂ ಗೋಡೆ; ಒಳಗಿದ್ದ ಮಕ್ಕಳ ಕತೆ ಏನಾಯ್ತು ಗೊತ್ತಾ? ವಿಡಿಯೋ ಇದೆ

ಮುಂಬೈ ತಂಡ ಸೇರಲಿದ್ದಾರೆ ಬೆನ್ ಸ್ಟೋಕ್ಸ್​​

ದಕ್ಷಿಣ ಆಫ್ರಿಕಾದ ಪ್ರೀಮಿಯರ್ ಫ್ರ್ಯಾಂಚೈಸ್ ಲೀಗ್ ಎಸ್ಎ 20 ಯ ಮುಂದಿನ ಆವೃತ್ತಿಯಲ್ಲಿ ಇಂಗ್ಲೆಂಡ್ ಸ್ಟಾರ್ ಬೆನ್ ಸ್ಟೋಕ್ಸ್ (Ben Stokes) ಎಂಐ ಕೇಪ್ ಟೌನ್​ ತಂಡಕ್ಕೆ ಆಡಲು ಸಹಿ ಹಾಕಲು ಸಜ್ಜಾಗಿದ್ದಾರೆ ಎಂದು ವರದಿಯಾಗಿದೆ. ಎಸ್ಎ 20 ಅನ್ನು 2023 ರಲ್ಲಿ ಒಟ್ಟು ಆರು ತಂಡಗಳೊಂದಿಗೆ ಪ್ರಾರಂಭಿಸಲಾಯಿತು. ಎಲ್ಲಾ ತಂಡಗಳು ಪ್ರಸ್ತುತ ಇಂಡಿಯನ್ ಪ್ರೀಮಿಯರ್ ಲೀಗ್ ಮಾಲೀಕರ ಒಡೆತನದಲ್ಲಿವೆ. ಎಂಐ ಕೇಪ್ ಟೌನ್ ಅಂಬಾನಿ ಒಡೆತನದ ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯ ಪಾಲುದಾರ ತಂಡವಾಗಿದೆ.

ದಿ ಟೆಲಿಗ್ರಾಫ್ ವರದಿಯ ಪ್ರಕಾರ, ಬೆನ್ ಸ್ಟೋಕ್ಸ್ ಎಸ್ಎ 20 ನ ಮೂರನೇ ಆವೃತ್ತಿಯಲ್ಲಿ ಕೇಪ್ ಟೌನ್ ಮೂಲದ ಫ್ರಾಂಚೈಸಿಗಾಗಿ ಆಡುವುದನ್ನು ಕಾಣಬಹುದು. ಮುಂದಿನ ಜನವರಿಯಲ್ಲಿ ನಡೆಯಲಿರುವ ಸ್ಪರ್ಧೆಯಲ್ಲಿ ಆಡಲು ಇಂಗ್ಲೆಂಡ್ ಟೆಸ್ಟ್ ನಾಯಕನಿಗೆ 800,000 ಪೌಂಡ್ (ಅಂದಾಜು 8.65 ಕೋಟಿ ರೂ.) ವರೆಗೆ ಆಫರ್ ನೀಡಲಾಗಿದೆ ಎಂದು ವರದಿ ತಿಳಿಸಿದೆ. ಬೆನ್ ಸ್ಟೋಕ್ಸ್ ಇತ್ತೀಚಿನ ದಿನಗಳಲ್ಲಿ ಟಿ 20 ಯಿಂದ ದೂರವಿದ್ದರೂ, ಅವರು ಇನ್ನೂ ವಿಶ್ವದ ಅತ್ಯುತ್ತಮ ಆಲ್​ರೌಂಡರ್​ಗಳಲ್ಲಿ ಒಬ್ಬರು. ಅವರು ಇತ್ತೀಚೆಗೆ ನಿಯಮಿತವಾಗಿ ಬೌಲಿಂಗ್ ಪುನರಾರಂಭಿಸಿದ್ದಾರೆ. ಇದು ಅವರನ್ನು ಇನ್ನಷ್ಟು ಮೌಲ್ಯಯುತವಾಗಿಸುತ್ತದೆ.

Exit mobile version