ಲಾರ್ಡ್ಸ್: ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ(England vs Australia) ವಿರುದ್ಧ ನಡೆಯುತ್ತಿರುವ ದ್ವಿತೀಯ ಆ್ಯಶಸ್(The Ashes, 2023) ಟೆಸ್ಟ್ ಸರಣಿಯಲ್ಲಿ ನಡೆದ ಘಟನೆಯೊಂದು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ(Viral Video). ಮೈದಾನಕ್ಕೆ ನುಗ್ಗಿದ ಕೆಲ ಪ್ರೇಕ್ಷಕರನ್ನು ಇಂಗ್ಲೆಂಡ್ ಆಟಗಾರರು ತಡೆದು ಹೆಗಲ ಮೇಲೆ ಹೊತ್ತೊಯ್ದ ವಿಡಿಯೊ ಟ್ವಿಟರ್ನಲ್ಲಿ ಟ್ರೆಂಡ್ ಆಗಿದೆ.
ಲಂಡನ್ನ ಐತಿಹಾಸಿಕ ಮೈದಾನ ಲಾರ್ಡ್ಸ್ನಲ್ಲಿ ಬುಧವಾರ ಆರಂಭಗೊಂಡ ಈ ಟೆಸ್ಟ್ ಪಂದ್ಯಲ್ಲಿ ಆಸ್ಟ್ರೇಲಿಯಾ ಟಾಸ್ ಸೋತು ಬ್ಯಾಟಿಂಗ್ ನಡೆಸುತ್ತಿದೆ. ಪಂದ್ಯ ಆರಂಭಗೊಂಡ ಕೆಲವೇ ಕ್ಷಣದಲ್ಲಿ ಪಂದ್ಯ ವೀಕ್ಷಿಸುತ್ತಿದ್ದ ಕೆಲ ಪ್ರೇಕ್ಷಕರು ಮೈದಾನಕ್ಕೆ ನುಗ್ಗಿದರು. ಇದೇ ವೇಳೆ ಇಂಗ್ಲೆಂಡ್ ತಂಡದ ಆಟಗಾರರಾದ ಬೆನ್ ಸ್ಟೋಕ್ಸ್(Ben Stokes) ಮತ್ತು ವಿಕೆಟ್ ಕೀಪರ್ ಜಾನಿ ಬೇರ್ ಸ್ಟೊ(Jonny Bairstow) ಭದ್ರತಾ ಪಡೆ ಬರುವ ಮುನ್ನವೇ ಅವರನ್ನು ತಡೆದು ಮೈದಾನದಿಂದ ಹೊರಗೆ ಕಳುಹಿಸಿದ್ದಾರೆ. ಅದರಲ್ಲೂ ಬೇರ್ ಸ್ಟೊ ಅವರು ಪ್ರೇಕ್ಷಕನನ್ನು ಎತ್ತಿಕೊಂಡು ಸಾಗಿ ಬೌಂಡರಿ ಲೈನ್ನಿಂದ ಹೊರಗೆ ಹಾಕಿದ್ದಾರೆ. ಈ ವಿಡಿಯೊವನ್ನು ಭಾರತ ಕ್ರಿಕೆಟ್ ತಂಡದ ಅನುಭವಿ ಸ್ಪಿನ್ನರ್ ಆರ್.ಅಶ್ವಿನ್(Ravichandran Ashwin) ಅವರು ಟ್ವಿಟರ್ನಲ್ಲಿ ಹಂಚಿಕೊಂಡು “ದ್ವಿತೀಯ ಟೆಸ್ಟ್ ಪಂದ್ಯ ಉತ್ತಮ ಆರಂಭ” ಎಂದು ಬರೆದು ನಗುತ್ತಿರುವ ಎರಡು ಎಮೊಜಿಯನ್ನು ಹಾಕಿದ್ದಾರೆ.
Good start to the 2nd test.
— Ashwin 🇮🇳 (@ashwinravi99) June 28, 2023
Bairstow has done some heavy lifting already😂😂 #Ashes2023 pic.twitter.com/f0JcZnCvEr
ಲಂಡನ್ನಲ್ಲಿ ಯಾವುದೇ ಪಂದ್ಯಗಳು ನಡೆಯುತ್ತಿದ್ದರೂ ಪ್ರೇಕ್ಷಕರು ಈ ರೀತಿ ಮೈದಾನಕ್ಕೆ ನುಗ್ಗುವುದು ಸರ್ವೆ ಸಾಮಾನ್ಯವಾಗಿದೆ. ಉದಾಹರಣೆಗೆ ಯಾವುದೇ ಒಂದು ನೂತನ ಕಾನೂನು ಜಾರಿಯಾದರೆ ಅದನ್ನು ಪ್ರತಿರೋಧಿಸಲು ಕೆಲವರು ಇಲ್ಲಿ ನಡೆಯುವ ಅಂತಾರಾಷ್ಟ್ರೀಯ ಪಂದ್ಯಗಳ ವೇಳೆ ಈ ರೀತಿ ಮೈದಾನಕ್ಕೆ ನುಗ್ಗಿ ಪ್ರತಿರೋಧ ವ್ಯಕ್ತಪಡಿಸುತ್ತಾರೆ. ಏಕೆಂದರೆ ಈ ಪಂದ್ಯವನ್ನು ದೇಶ-ವಿದೇಶಗಳಲ್ಲಿ ನೋಡುತ್ತಿರುತ್ತಾರೆ ಜತೆಗೆ ಇದು ಎಲ್ಲಡೆ ದೊಡ್ಡ ಸುದ್ದಿಯೂ ಆಗುತ್ತದೆ. ಇದನ್ನೇ ಟಾರ್ಗೆಟ್ ಮಾಡಿಕೊಂಡು ಈ ರೀತಿ ಮಾಡುತ್ತಾರೆ.
ಬೇರ್ಸ್ಟೋ ಅವರು ಈ ಪ್ರೇಕ್ಷಕನನ್ನು ಎತ್ತಿಕೊಂಡು ಹೋಗುತ್ತಿದ್ದ ವೇಳೆ ಆತ ಏನೋ ಘೋಷಣೆಯನ್ನೂ ಕೂಗುತ್ತಿದ್ದ. ಆದರೆ ಬೇರ್ ಸ್ಟೋ ಅವರು ಆತನನ್ನು ಮೈದಾನದಿಂದ ಹೊರಗಡೆ ಹಾಕಿರುವ ವಿಡಿಯೊ ಮಾತ್ರ ಎಲ್ಲಡೆ ವೈರಲ್ ಆಗುತ್ತಿದೆ.