Site icon Vistara News

Viral Video: ಅಭಿಮಾನಿ ಮೇಲೆ ಹಲ್ಲೆಗೆ ಯತ್ನಿಸಿದ ಪಾಕ್​ ವೇಗಿ; ತಡೆದು ನಿಲ್ಲಿಸಿದ ಪತ್ನಿ

Viral Video

Viral Video: Haris Rauf Loses Cool, Breaks Into Ugly Fight With Pakistan Fan

ಫ್ಲೋರಿಡಾ: ಪಾಕಿಸ್ತಾನ ತಂಡದ ವೇಗದ ಬೌಲರ್ ಹ್ಯಾರಿಸ್ ರೌಫ್(Haris Rauf) ಅವರು ಫ್ಲೋರಿಡಾದಲ್ಲಿ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಲು ಮುಂದಾದ ವಿಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್(Viral Video)​ ಆಗಿದೆ. ಹಲ್ಲೆಗೆ ಮುಂದಾದ ಹ್ಯಾರಿಸ್ ರೌಫ್(Angry Haris Rauf) ಅವರನ್ನು ಅವರ ಪತ್ನಿ ತಡೆದು ನಿಲ್ಲಿಸಿದ್ದನ್ನು ಈ ವಿಡಿಯೊದಲ್ಲಿ ಕಾಣಬಹುದಾಗಿದೆ.

ಈಗಾಗಲೇ ಟಿ20 ವಿಶ್ವಕಪ್​ ಟೂರ್ನಿಯಿಂದ ಹೊರಬಿದ್ದಿರುವ ಪಾಕಿಸ್ತಾನ ತಂಡದ ಆಟಗಾರರು ಫ್ಲೋರಿಡಾದಲ್ಲಿ ಕೆಲ ದಿನಗಳ ಕಾಲ ಎಂಜಾಯ್​ ಮಾಡಲಿದ್ದಾರೆ. ಹ್ಯಾರಿಸ್ ರೌಫ್ ಕೂಡ ತಮ್ಮ ಪತ್ನಿ ಜತೆ ಇಲ್ಲಿನ ಪ್ರವಾಸಿ ತಾಣಗಳಿಗೆ ಭೇಟಿ ನೀಡಿ ಕಾಲ ಕಳೆಯುತ್ತಿದ್ದಾರೆ. ಇದೇ ವೇಳೆ ತಾವು ತಂಗಿದ್ದ ಹೋಟೆಲ್​ಗೆ ಹೋಗುತ್ತಿದ್ದಾಗ ಅಭಿಮಾನಿಯೊಬ್ಬ ನಿಮ್ಮ ಜತೆಗೊಂದು ಫೋಟೊ ಬೇಕಿತ್ತು ಎಂದು ಕೇಳಿದ್ದಾನೆ. ಈ ವೇಳೆ ರೌಫ್​, ನೀನು ಭಾರತೀಯನಾಗಿರಬೇಕು ಎಂದು ಹೇಳಿದ್ದಾರೆ. ಇದಕ್ಕೆ ಉತ್ತರಿಸಿದ ಅಭಿಮಾನಿ ನಾನು ಕೂಡ ಪಾಕಿಸ್ತಾನ ಮೂಲದವನೇ ಎಂದು ಹೇಳಿ ಬಳಿಕ ಏನೋ ಹೇಳಿದ್ದಾನೆ.

ಅಭಿಮಾನಿಯ ಮಾತಿನಿಂದ ಸಿಟ್ಟುಗೊಂಡ ರೌಫ್​ ಏಕಾಏಕಿ ಆತನ ಮೇಲೆ ಹಲ್ಲೆ ನಡೆಸಲು ಮುಂದಾಗಿದ್ದಾರೆ. ಪತ್ನಿ ರೌಫ್​ ಅವರನ್ನು ಹಿಡಿದು ನಿಲ್ಲಿಸುವ ಪ್ರಯತ್ನ ಪಟ್ಟರೂ ಕೂಡ ರೌಫ್​ ತಪ್ಪಿಸಿಕೊಂಡು ಹಲ್ಲೆಗೆ ಮುಂದಾದರು. ತಕ್ಷಣ ರೌಫ್​ ಅವರ ಮ್ಯಾನೇಜರ್​ ಹಾಗು ಕೆಲ ಸಿಬ್ಬಂದಿಗಳು ಅವರನ್ನು ತಡೆದು ನಿಲ್ಲಿಸಿದ್ದಾರೆ. ಪತ್ನಿ ಕೂಡ ಅವರ ಕೈಗಳನ್ನು ಹಿಡಿದು ಹಲ್ಲೆ ಮಾಡದಂತೆ ಮನವಿ ಮಾಡುತ್ತಲೇ ಅವರನ್ನು ಸಮಾಧಾನ ಪಡೆಸಿದ್ದಾರೆ. ಈ ಎಲ್ಲ ದೃಶ್ಯಗಳು ವಿಡಿಯೊದಲ್ಲಿ ಸೆರೆಯಾಗಿದೆ. ಸದ್ಯ ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ. ರೌಫ್​ ಅವರ ಈ ದರ್ಪವನ್ನು ಅನೇಕ ನೆಟ್ಟಿಗರು ಮತ್ತು ಪಾಕ್​ ಅಭಿಮಾನಿಗಳು ಖಂಡಿಸಿದ್ದಾರೆ. ಇದೇ ದರ್ಪವನ್ನು ಟಿ20 ವಿಶ್ವಕಪ್​ ಪಂದ್ಯದಲ್ಲಿ ತೋರಿಸುತ್ತಿದ್ದರೆ ನಿಮಗೆ ಈ ಗತಿ ಬರುತ್ತಿರಲಿಲ್ಲ ಎಂದು ಕಮೆಂಟ್​ ಮಾಡಿದ್ದಾರೆ.

ಇದನ್ನೂ ಓದಿ T20 World Cup 2024: ಸೂಪರ್​-8 ಪಂದ್ಯಕ್ಕೂ ಮುನ್ನ ಭಾರತ ತಂಡಕ್ಕೆ ಆಘಾತ; ಅಭ್ಯಾಸದ ವೇಳೆ ಸ್ಟಾರ್​ ಆಟಗಾರನಿಗೆ ಗಾಯ

ಪಾಕ್​ ಆಟಗಾರರ ವೇತನ ಕಡಿತ!


ಈ ಬಾರಿಯ ಟಿ20 ವಿಶ್ವಕಪ್‌ನಲ್ಲಿ(T20 World Cup 2024) ಕಳಪೆ ಪ್ರದರ್ಶನ ತೋರಿದ ಕಾರಣ ಆಟಗಾರರ ವಾರ್ಷಿಕ ಸಂಭಾವನೆಯಲ್ಲಿ ಕಡಿತ ಮಾಡಲು ಪಾಕ್​ ಕ್ರಿಕೆಟ್​ ಮಂಡಳಿ(PCB) ನಿರ್ಧರಿಸಿದೆ. ಪಾಕ್​ ಮಾಧ್ಯಮ ವರದಿಗಳ ಪ್ರಕಾರ ಮಾಜಿ ಆಟಗಾರರು ಹಾಗೂ ಪಿಸಿಬಿ ಸದಸ್ಯರು ಆಟಗಾರರ ಸಂಬಳ ಕಡಿತಗೊಳಿಸಲು ಪಾಕ್​ ಕ್ರಿಕೆಟ್​ ಮಂಡಳಿಯ ಅಧ್ಯಕ್ಷ ಮೊಹ್ಸಿನ್​ ನಖ್ವಿಗೆ ಸಲಹೆ ನೀಡಿದ್ದಾರೆ ಎನ್ನಲಾಗಿದೆ. ಪಾಕ್​ ಕ್ರಿಕೆಟ್​ ಮಂಡಳಿ ಕೂಡ ಈ ವಿಚಾರವನ್ನು ಗಂಭಿರವಾಗಿ ಪರಿಗಣಿಸಿದ್ದು ಉನ್ನತ ಮಟ್ಟದ ಸಭೆ ನಡೆಸಿ ಆಟಗಾರರ ಕೇಂದ್ರೀಯ ಗುತ್ತಿಗೆಯನ್ನು ಮರು ಪರಿಶೀಲಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

ಪಾಕ್​ ತಂಡದ ವಿರುದ್ಧ ದೇಶದ್ರೋಹದ ಕೇಸ್‌


ನಿರಾಸದಾಯಕ ಪ್ರದರ್ಶನ ತೋರಿರುವ ಪಾಕಿಸ್ತಾನ ತಂಡದ ವಿರುದ್ಧ ಪಾಕ್‌ನ ಗುಜ್ರಾನ್ವಾಲಾ ನಗರದ ವಕೀಲರೊಬ್ಬರು ದೇಶದ್ರೋಹ ಕೇಸ್‌ ದಾಖಲಿಸಿದ್ದಾರೆ. ಈ ಬಗ್ಗೆ ಸ್ಥಳೀಯ ಮಾಧ್ಯಮಗಳು ವರದಿ ಮಾಡಿದ್ದು, ಕೇಸ್‌ನ ಬಗ್ಗೆ ಜೂನ್​ 21ಕ್ಕೆ ಮುನ್ನ ವರದಿ ಸಲ್ಲಿಸುವಂತೆ ಪೊಲೀಸರಿಗೆ ನ್ಯಾಯಾಲಯ ಸೂಚಿಸಿದೆ ಎಂದು ತಿಳಿದುಬಂದಿದೆ. ಪಾಕ್‌ ತಂಡದ ಕಳಪೆ ಪ್ರದರ್ಶನದಿಂದ ಹಣ ವ್ಯರ್ಥವಾಗುತ್ತಿದೆ ಮತ್ತು ರಾಷ್ಟ್ರದ ನಂಬಿಕೆಗೆ ದ್ರೋಹ ಉಂಟಾಗಿದೆ. ಆಟಗಾರರು ದೇಶದ ಬಗ್ಗೆ ಗೌರವಕ್ಕಿಂತ ಆರ್ಥಿಕ ಲಾಭಕ್ಕೆ ಆದ್ಯತೆ ನೀಡಿದ್ದಾರೆ ಎಂದು ಅರ್ಜಿದಾರ ತನ್ನ ದೂರಿನಲ್ಲಿ ಉಲ್ಲೇಖಿಸಿದ್ದಾಗಿ ವರದಿಯಾಗಿದೆ.

Exit mobile version