Site icon Vistara News

WPL 2024: ಆರ್‌ಸಿಬಿ ಗೆಲ್ಲುತ್ತಲೇ ವಿಡಿಯೊ ಕಾಲ್‌ ಮೂಲಕ ವಿಶ್‌ ಮಾಡಿದ ಕೊಹ್ಲಿ; ಈ ಖುಷಿ ನೋಡಿ

WPL 2024 RCB

Virat Kohli Joins Smriti Mandhana And Co In Celebrations After WPL 2024 Victory

ನವದೆಹಲಿ: ಮಹಿಳೆಯರ ಪ್ರೀಮಿಯರ್‌ ಲೀಗ್‌ನಲ್ಲಿ (WPL 2024) ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (RCB) ತಂಡವು ಗೆಲುವು ಸಾಧಿಸಿದ್ದು, 16 ವರ್ಷಗಳ ಕಪ್‌ ಬರವನ್ನು ನೀಗಿಸಿದ್ದಾರೆ. ಇದರಿಂದಾಗಿ ಆರ್‌ಸಿಬಿ ಆಟಗಾರ್ತಿಯರು, ಅಭಿಮಾನಿಗಳ ಸಂತಸ ಮುಗಿಲುಮುಟ್ಟಿದೆ. ಸ್ಮೃತಿ ಮಂಧಾನ (Smriti Mandhana) ಪಡೆಗೆ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ. ಇನ್ನು ಆರ್‌ಸಿಬಿ ಮಹಿಳೆಯರ ತಂಡವು ಗೆಲುವು ಸಾಧಿಸುತ್ತಲೇ ಆರ್‌ಸಿಬಿ ಪುರುಷರ ತಂಡದ ಸ್ಟಾರ್‌ ಆಟಗಾರ ವಿರಾಟ್‌ ಕೊಹ್ಲಿ (Virat Kohli) ವಿಡಿಯೊ ಕಾಲ್‌ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ. ಈ ವಿಡಿಯೊ ಈಗ ಭಾರಿ ವೈರಲ್‌ ಆಗಿದೆ.

ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ಆರ್‌ಸಿಬಿ ವನಿತೆಯರು ಗೆಲುವು ಸಾಧಿಸುತ್ತಲೇ ಮೈದಾನದ ತುಂಬ ಆರ್‌ಸಿಬಿ ಆರ್‌ಸಿಬಿ ಎಂಬ ಘೋಷಣೆಗಳು ಕೇಳಿಬರುತ್ತಿದ್ದವು. ಕಪ್‌ ಗೆದ್ದ ಖುಷಿಯಲ್ಲಿ ಆಟಗಾರ್ತಿಯರೂ ಕುಣಿದು ಕುಪ್ಪಳಿಸುತ್ತಿದ್ದರು. ಇದೇ ವೇಳೆ ವಿರಾಟ್‌ ಕೊಹ್ಲಿ ಅವರು ವಿಡಿಯೊ ಕಾಲ್‌ ಮಾಡಿದ್ದಾರೆ. ಕೊಹ್ಲಿ ಕಾಲ್‌ ಬರುತ್ತಲೇ ಎಲ್ಲ ಆಟಗಾರ್ತಿಯರು ಓಡೋಡಿ ಬಂದು ಸಂತಸ ಹಂಚಿಕೊಂಡಿದ್ದಾರೆ. ವಿರಾಟ್‌ ಕೊಹ್ಲಿ ಅವರೂ ತಂಡದ ಆಟಗಾರ್ತಿಯರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಸ್ಮೃತಿ ಮಂಧಾನ ಅವರು ಕೂಡ ಕೊಹ್ಲಿ ಜತೆ ಮಾತನಾಡಿ ಖುಷಿ ಹಂಚಿಕೊಂಡಿದ್ದಾರೆ.

ಮೊದಲು ಬ್ಯಾಟಿಂಗ್ ಮಾಡಿದ ಡಿಸಿ ತಂಡ ನಿಗದಿತ 20 ಓವರ್​​ಗಳಲ್ಲಿ ಕೇವಲ 113 ರನ್​ಗಳಿಗೆ ಆಲೌಟ್ ಆಯಿತು. ಆರ್​ಸಿಬಿ ಇನ್ನೂ 3 ಎಸೆಗಳು ಇರುವಂತೆಯೇ 115 ರನ್​ ಬಾರಿಸಿ ಸಂಭ್ರಮಿಸಿತು. ಆರಂಭಿಕ ಆಟಗಾರ್ತಿಯರಾದ ಸ್ಮೃತಿ ಮಂದಾನ ಮತ್ತು ಸೋಫಿ ಡಿವೈನ್ (27 ಎಸೆತಗಳಲ್ಲಿ 32 ರನ್) ಮೊದಲ ವಿಕೆಟ್​ಗೆ 49 ಎಸೆತಗಳಲ್ಲಿ 49 ರನ್ ಸೇರಿಸಿದರು. ಒಂಬತ್ತನೇ ಓವರ್​ನಲ್ಲಿ ಡಿವೈನ್ ಔಟ್​ ಮಾಡಿದ ಶಿಖಾ ಪಾಂಡೆ ಜತೆಯಾಟ ಮುರಿದರು.

ನಾಯಕಿ ಮಂಧನಾ (39 ಎಸೆತಗಳಲ್ಲಿ 31 ರನ್), ಎಲಿಸ್ ಪೆರ್ರಿ (37 ಎಸೆತಗಳಲ್ಲಿ 35* ರನ್) ಮತ್ತು ರಿಚಾ ಘೋಷ್ (14 ಎಸೆತಗಳಲ್ಲಿ 17* ರನ್) ಮಧ್ಯಮ ಓವರ್​ಗಳಲ್ಲಿ ಯಾವುದೇ ಕುಸಿತವಾಗದಂತೆ ನೋಡಿಕೊಂಡರು. ಬೆಂಗಳೂರು ಮೂಲದ ಫ್ರಾಂಚೈಸಿ ಪಂದ್ಯಾವಳಿಯುದ್ದಕ್ಕೂ ಆಡಿದ ರೀತಿಗೆ ಅಭಿಮಾನಿಗಳು ವಿಸ್ಮಯಗೊಂಡಿದ್ದಾರೆ. ಕೆಲವು ಸಂತೋಷದ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. ಅಂಥ ಕೆಲವು ಪ್ರತಿಕ್ರಿಯೆಗಳು ಇಲ್ಲಿವೆ

ಇದನ್ನೂ ಓದಿ: WPL 2024 : ಆರ್​ಸಿಬಿ ಚಾಂಪಿಯನ್ ಆದ ಬಳಿಕ ಸೃಷ್ಟಿಯಾದ ಕೆಲವು ಮೀಮ್ಸ್​ಗಳು ಇಲ್ಲಿವೆ

ವಿರಾಟ್‌ ಕೊಹ್ಲಿ ಮಾತ್ರವಲ್ಲ ಆರ್‌ಸಿಬಿ ಮಾಜಿ ಆಟಗಾರರಾದ ಎಬಿಡಿ ವಿಲಿಯರ್ಸ್‌, ಕ್ರಿಸ್‌ ಗೇಲ್‌, ಹಾಲಿ ನಾಯಕ ಡುಪ್ಲೆಸಿಸ್‌, ಗ್ಲೆನ್‌ ಮ್ಯಾಕ್ಸ್‌ವೆಲ್‌, ದಿನೇಶ್‌ ಕಾರ್ತಿಕ್‌ ಸೇರಿ ಹಲವು ಕ್ರಿಕೆಟಿಗರು ಕೂಡ ಆರ್‌ಸಿಬಿ ಗೆಲುವಿನ ಹಿನ್ನೆಲೆಯಲ್ಲಿ ಅಭಿನಂದನೆ ಸಲ್ಲಿಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version