Site icon Vistara News

Virat Kohli : ಐಪಿಎಲ್​ 2024ರ ಮೊದಲ ಶತಕ ಬಾರಿಸಿದ ಕೊಹ್ಲಿ; ಅವರ ಒಟ್ಟು ಐಪಿಎಲ್ ಶತಕಗಳೆಷ್ಟು?

Virat kohli

ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಾಜಿ ನಾಯಕ ಹಾಗೂ ಸ್ಟಾರ್ ಬ್ಯಾಟರ್ ವಿರಾಟ್​ ಕೊಹ್ಲಿ (Virat Kohli) ಐಪಿಎಲ್ 2024 ರಲ್ಲಿ (IPL 2024) ಮೊದಲ ಶತಕ ಬಾರಿಸಿದ್ದಾರೆ. ಇದು ಹಾಲಿ ಆವೃತ್ತಿಯಲ್ಲಿ ಮೂಡಿ ಬಂದ ಮೊದಲ ಶತಕವೂ ಹೌದು. ಜೈಪುರದಲ್ಲಿ ನಡೆದ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಮೊದಲು ಬ್ಯಾಟ್​ ಮಾಡಿದ ಆರ್​​ಸಿಬಿಯ ಆರಂಭಿಕ ಬ್ಯಾಟರ್ ಕೊಹ್ಲಿ ಶತಕ ಬಾರಿಸಿದರು. ತವರು ತಂಡದ ಬೌಲರ್​ಗಳನ್ನು ದಂಡಿಸಿದ ಅವರು 183 ರನ್​ ಪೇರಿಸಲು ನೆರವಾದರು. ಬ್ಯಾಟಿಂಗ್ ಮಾಂತ್ರಿಕ 67 ಎಸೆತಗಳಲ್ಲಿ 9 ಬೌಂಡರಿ ಮತ್ತು 4 ಸಿಕ್ಸರ್​​ಗಳನ್ನು ಬಾರಿಸಿದ ಶತಕದ ಗಡಿ ದಾಟಿದರು. ಅವರು 72 ಎಸೆತಗಳಲ್ಲಿ 4 ಸಿಕ್ಸರ್​ ಹಾಗೂ 12 ಫೋರ್ ಸಮೇತ 113 ರನ್ ಬಾರಿಸಿದ್ದಾರೆ.

ವಿರಾಟ್ ಕೊಹ್ಲಿ ಐಪಿಎಲ್​ನಲ್ಲಿ ಅತಿ ಹೆಚ್ಚು ಶತಕ ಬಾರಿಸಿದ ದಾಖಲೆಯನ್ನೂ ಹೊಂದಿದ್ದಾರೆ. ಅವರ ಖಾತೆಯಲ್ಲಿ ಒಟ್ಟು 8 ಶತಕಗಳಿವೆ. ಕ್ರಿಸ್​ಗೇಲ್​ 6, ಜೋಸ್ ಬಟ್ಲರ್​ 5 ಶತಕಗಳ ಮೂಲಕ ನಂತರದ ಸ್ಥಾನದಲ್ಲಿದ್ದಾರೆ. ಕೆ. ಎಲ್​ ರಾಹುಲ್​ ಹಾಗೂ ಶೇನ್ ವಾಟ್ಸನ್ ತಲಾ 4 ಐಪಿಎಲ್ ಶತಕಗಳನ್ನು ಬಾರಿಸಿದ್ದಾರೆ.

ಐಪಿಎಲ್​ನಲ್ಲಿ ಅತಿ ಹೆಚ್ಚು ಶತಕ ಬಾರಿಸಿದವರು

7500 ರನ್​ ಗಡಿ ದಾಟಿದ ಕಿಂಗ್ ಕೊಹ್ಲಿ

ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ (IPL) ಇತಿಹಾಸದಲ್ಲಿ 7500 ಕ್ಕೂ ಹೆಚ್ಚು ರನ್ ಗಳಿಸಿದ ಮೊದಲ ಬ್ಯಾಟರ್​ ಎಂಬ ಹೆಗ್ಗಳಿಕೆಗೆ ವಿರಾಟ್ ಕೊಹ್ಲಿ ಪಾತ್ರರಾಗಿದ್ದಾರೆ. ಜೈಪುರದಲ್ಲಿ ಶನಿವಾರ ನಡೆದ ರಾಜಸ್ಥಾನ್​ ವಿರುದ್ಧದ ಪಂದ್ಯದಲ್ಲಿ ಮಾಜಿ ಆರ್​ಸಿಬಿ ನಾಯಕ ಈ ಮೈಲಿಗಲ್ಲನ್ನು ಸಾಧಿಸಿದ್ದಾರೆ. ಐಪಿಎಲ್ ಇತಿಹಾಸದಲ್ಲಿ ಐಪಿಎಲ್​ನ ಇನಿಂಗ್ಸ್​ವೊಂದರಲ್ಲಿ ಗರಿಷ್ಠ 113 ಗರಿಷ್ಠ ಸ್ಕೋರ್ ಗಳಿಸಿರುವ ಭಾರತೀಯ ಬ್ಯಾಟಿಂಗ್ ಮಾಂತ್ರಿಕ ಪಂದ್ಯಾವಳಿಯಲ್ಲಿ 37 ಸರಾಸರಿ ಹೊಂದಿದ್ದಾರೆ.

ವಿರಾಟ್ ಕೊಹ್ಲಿ ಐಪಿಎಲ್​ನಲ್ಲಿ ಹಲವಾರು ದಾಖಲೆಗಳನ್ನು ಹೊಂದಿದ್ದಾರೆ. ಅಂತೆಯೇ ಇದೀಗ ಅವರು ಹೊಸ ದಾಖಲೆಯನ್ನು ಮಾಡಿದ್ದಾರೆ. ಪಂಜಾಬ್ ತಂಡದ ನಾಯಕ ಶಿಖರ್ ಧವನ್​ 6755 ರನ್ ಬಾರಿಸಿ ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಡೇವಿಡ್ ವಾರ್ನರ್​ 6545 ರನ್ ಬಾರಿಸಿ ಮೂರನೇ ಸ್ಥಾನ ಪಡೆದುಕೊಂಡಿದ್ದಾರೆ. 6280 ರೋಹಿತ್ ಶರ್ಮಾ ಮೂರನೇ ಸ್ಥಾನ ಪಡೆದುಕೊಂಡಿದ್ದಾರೆ. ಮಾಜಿ ಆಟಗಾರ ಸುರೇಶ್ ರೈನಾ 5528 ರನ್ ಬಾರಿಸಿ ಐದನೇ ಸ್ಥಾನ ಪಡೆದುಕೊಂಡಿದ್ದಾರೆ.

ಇದನ್ನೂ ಓದಿ: Virat Kohli : ಕೊಹ್ಲಿಯ ಹೇರ್​ಕಟ್​ ಚಾರ್ಜ್​ ಎಷ್ಟು ಗೊತ್ತಾ? ಗುಟ್ಟು ಬಹಿರಂಗ ಮಾಡಿದ ಸ್ಟೈಲಿಸ್ಟ್​​

2008 ರಲ್ಲಿ ಐಪಿಎಲ್ ಪ್ರಾರಂಭವಾದಾಗಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಪರ ಆಡಿದ್ದಾರೆ. ಅವರು ಚಾಂಪಿಯನ್​ಪಟ್ಟ ಗಳಿಸದೇ ಹೋದರೂ ಅವರು ನಿಷ್ಠಾವಂತ ಅಭಿಮಾನಿ ಬಳಗವನ್ನು ಹೊಂದಿದ್ದಾರೆ.

Exit mobile version