Site icon Vistara News

Virat Kohli: ಗಂಭೀರ್​, ನವೀನ್ ಜತೆಗಿನ ರಾಜಿಯಿಂದ ಹಲವರಿಗೆ ಬೇಸರ ತರಿಸಿದೆ ಎಂದ ಕೊಹ್ಲಿ

Virat Kohli

ಮುಂಬೈ: ಬದ್ಧ ವೈರಿಗಳೆಂದೆ ಗುರುತಿಸಿಕೊಂಡಿದ್ದ ಗೌತಮ್​ ಗಂಭೀರ್​(Gautam Gambhir) ಮತ್ತು ವಿರಾಟ್​ ಕೊಹ್ಲಿ(Virat Kohli) ಈ ಬಾರಿಯ ಐಪಿಎಲ್​ನಲ್ಲಿ ತಬ್ಬಿಕೊಳ್ಳುವ ಮೂಲಕ ತಮ್ಮ ಎಲ್ಲ ಮುನಿಸುಗಳಿಗೂ ಎಳ್ಳು ನೀರು ಬಿಟ್ಟಿದ್ದರು. ಇದೇ ಘಟನೆಯ ಬಗ್ಗೆ ವಿರಾಟ್​ ಕೊಹ್ಲಿ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಗಂಭೀರ್ ಅವರನ್ನು ಈ ಬಾರಿ ನಾನು ಅಪ್ಪಿಕೊಂಡಿದ್ದು ಹಲವರಿಗೆ ಬೇಸರ ತರಿಸಿದೆ ಎಂದು ಹೇಳಿದ್ದಾರೆ.

ಪೂಮಾ ಕಾರ್ಯಕ್ರಮದ ಸಂದರ್ಶನದಲ್ಲಿ ಮಾತನಾಡಿದ ಕೊಹ್ಲಿ, ಕಳೆದ ಆವೃತ್ತಿಯಲ್ಲಿ ನವೀನ್ ಉಲ್ ಹಕ್ ಮತ್ತು ಗೌತಮ್ ಗಂಭೀರ್ ಜತೆ ಜಗಳವಾಡಿದ್ದೆ. ಆದರೆ ವಿಶ್ವಕಪ್​ನಲ್ಲಿ ನವೀನ್​ ಜತೆ, ಇದೀಗ ಐಪಿಎಲ್​ನಲ್ಲಿ ಗಂಭೀರ್​ ಜತೆ ಸ್ನೇಹದಿಂದ ವರ್ತಿಸಿದ ಕಾರಣ ಅನೇಕರು ಬೇಸರ ಮತ್ತು ನಿರಾಸೆಗೊಂಡಿದ್ದಾರೆ ಎಂದು ನಗುತ್ತಲೇ ಹೇಳಿದರು.

“ನನ್ನ ವರ್ತನೆಯಿಂದ ಜನರು ತುಂಬಾ ನಿರಾಸೆಯಾಗಿದ್ದಾರೆ. ಕಳೆದ ವರ್ಷದ ಐಪಿಎಲ್​ನಲ್ಲಿ ನಾನು ಮತ್ತು ಗಂಭೀರ್​ ಕಿತ್ತಾಟ ನಡೆಸಿದ್ದೆವು. ಹೀಗಾಗಿ ಈ ಬಾರಿಯ ಐಪಿಎಲ್​ನಲ್ಲಿಯೂ ನಮ್ಮಿಬ್ಬರಿಂದ ಅನೇಕರು ಮಸಾಲಾ ಪದಾರ್ಥಗಳನ್ನು ಬಯಸಿದ್ದರು. ಆದರೆ ನಾಬಿಬ್ಬರು ತಬ್ಬಿಕೊಂಡ ಬಳಿಕ ನಿಮಗೆಲ್ಲ ಮಸಾಲ ಮುಗಿದೆ” ಎಂದರು.

ಆರ್​ಸಿಬಿ ಮತ್ತು ಕೆಕೆಆರ್​ ನಡುವಿನ ಪಂದ್ಯದ 16 ನೇ ಓವರ್ ನಲ್ಲಿ ಟೈಮ್​ ಔಟ್ ವೇಳೆ ಈ ಆಹ್ಲಾದಕರ ಘಟನೆ ನಡೆದಿತ್ತು. ಮೈದಾನಕ್ಕೆ ಬಂದಿದ್ದ ಕೋಚ್​ ಗೌತಮ್ ಗಂಭೀರ್ ಅವರು ವಿರಾಟ್ ಕೊಹ್ಲಿಯ ಹತ್ತಿರಕ್ಕೆ ಹೋಗಿ ಅರ್ಧಶತಕಕ್ಕಾಗಿ ಅವರನ್ನು ಅಭಿನಂದಿಸಿದ್ದರು. ವಿರಾಟ್ ಕೊಹ್ಲಿ ಕೂಡ ಚಂದದ ಅಪ್ಪುಗೆಯೊಂದಿಗೆ ಆತ್ಮೀಯವಾಗಿ ಪ್ರತಿಕ್ರಿಯಿಸಿದರು. ಇಬ್ಬರೂ ದಂತಕಥೆಗಳು ನಗುವಿನೊಂದಿಗೆ ಕೆಲವು ಮಾತುಗಳನ್ನು ವಿನಿಮಯ ಮಾಡಿಕೊಂಡಿದ್ದರು. ಈ ಪಂದ್ಯವನ್ನು ಕೊಹ್ಲಿ vs ಗಂಭೀರ್​ ಎಂದೇ ಅಭಿಮಾನಿಗಳು ಹೈಪ್​ ಕ್ರಿಯೆಟ್​ ಮಾಡಿದ್ದರು. ಆದರೆ ಉಭಯ ಆಟಗಾರರು ಸ್ನೇಹದಿಂದ ವರ್ತಿಸಿ ಅಭಿಮಾನಿಗಳ ಎಲ್ಲ ನಿರೀಕ್ಷೆಯನ್ನು ನೀರಲ್ಲಿ ಹೋಮ ಮಾಡಿದ್ದರು.

ಇದನ್ನೂ ಓದಿ IPL 2024: ಸೋಲಿನ ಆಘಾತದ ಮಧ್ಯೆ ಸಂಜುಗೆ ಬಿತ್ತು 12 ಲಕ್ಷ ರೂ. ದಂಡ

ಕಳೆದ ವರ್ಷ ನಡೆದಿದ್ದ ಏಕದಿನ ವಿಶ್ವಕಪ್​ ಟೂರ್ನಿಯ ವೇಳೆ ನ್ಯೂಜಿಲ್ಯಾಂಡ್‌ ವಿರುದ್ಧದ ಪಂದ್ಯದಲ್ಲಿ ಅತ್ಯುತ್ತಮ ಬ್ಯಾಟಿಂಗ್‌ ನಡೆಸಿದ್ದ ಕೊಹ್ಲಿ ಪ್ರದಶನಕ್ಕೆ ಗಂಭೀರ್‌ ಅವರು ಮೆಚ್ಚುಗೆ ಸೂಚಿಸಿದ್ದರು. ಕೊಹ್ಲಿಯನ್ನು ಆಧುನಿಕ ಕ್ರಿಕೆಟ್​ನ ಅತ್ಯುತ್ತಮ ಫಿನಿಶರ್ ಎಂದಿದ್ದರು.

“ಆಧುನಿಕ ಕ್ರಿಕೆಟ್​ನಲ್ಲಿ ವಿರಾಟ್ ಕೊಹ್ಲಿ ವಿಶ್ವದ ಅತ್ಯುತ್ತಮ ಫಿನಿಶರ್ ಆಗಿದ್ದಾರೆ. ಅವರನ್ನು ಬಿಟ್ಟು ಈ ರೀತಿಯ ಫಿನಿಶರ್ ಕ್ರಿಕೆಟ್​ನಲ್ಲಿ ಸದ್ಯ ಮತ್ತೊಬ್ಬರಿಲ್ಲ. ವಿರಾಟ್​ ಯಾವುವೇ ಕ್ರಮಂಕದಲ್ಲಿ ಬ್ಯಾಟ್​ ಬೀಸಿದರೂ ಅವರಿಗೆ ಪಂದ್ಯವನ್ನು ಫಿನಿಶಿಂಗ್​ ಮಾಡುವ ಸಾಮರ್ಥ್ಯವಿದೆ. ಎಲ್ಲ ವಿಕೆಟ್​ ಆಧಾರದಲ್ಲೂ ಕೊಹ್ಲಿ ಚೇಸಿಂಗ್ ಮಾಸ್ಟರ್ ಆಗಿದ್ದಾರೆ” ಎಂದು ಗೌತಮ್ ಗಂಭೀರ್ ಪ್ರಶಂಸೆ ವ್ಯಕ್ತಪಡಿಸಿದ್ದರು. ಇದು ಕೊಹ್ಲಿ ಅಭಿಮಾನಿಗಳಿಗೂ ಅಚ್ಚರಿಯಾಗಿತ್ತು.

Exit mobile version