ಬೆಂಗಳೂರು: ಪ್ರಭಾಸ್, ಕೃತಿ ಸನೂನ್ ಮತ್ತು ಸೈಫ್ ಅಲಿ ಖಾನ್ ಅಭಿನಯದ ಬಹು ನಿರೀಕ್ಷಿತ ಚಿತ್ರ ಆದಿಪುರುಷ (Adipurush Movie) ಜೂನ್ 16 ರಂದು ವಿಶ್ವಾದ್ಯಂತ ಬಿಡುಗಡೆಯಾಗಿದೆ. ಅಂದಿನಿಂದ ಇದು ತನ್ನ VFX, ಸಂಭಾಷಣೆಗಳು ಮತ್ತು ವೇಷಭೂಷಣಗಳಿಗೆ ಹಿನ್ನಡೆಯನ್ನು ಅನುಭವಿಸುತ್ತಲೇ ಇದೆ. ಈ ಚಿತ್ರವು ಮೀಮ್‌ಗಳಿಗೆ ಆಹಾರವಾಗುತ್ತಿದ್ದಂತೆ, ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಅವರು ಚಿತ್ರದ ಬಗ್ಗೆ ಟ್ರೋಲ್ ಮಾಡಿದ್ದಾರೆ.
ವೀರೇಂದ್ರ ಸೆಹ್ವಾಗ್ ತಮ್ಮ ಟ್ವೀಟ್‌ನಲ್ಲಿ ಸ್ಕ್ರೀನ್‌ಶಾಟ್‌ವನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ “ಆದಿಪುರುಷನನ್ನು ನೋಡಿದ ನಂತರ, ಕಟ್ಟಪ್ಪ ಬಾಹುಬಲಿಯನ್ನು ಏಕೆ ಕೊಂದಿದ್ದಾನೆಂದು ನನಗೆ ಅರಿವಾಯಿತು” ಎಂದು ಬರೆದುಕೊಂಡಿದ್ದಾರೆ. ಆದಿಪುರುಷ್ ಚಿತ್ರದಲ್ಲಿ ರಾಮನ ಪಾತ್ರ ಹಾಗೂ ಬಾಹುಬಲಿ ಚಿತ್ರದಲ್ಲಿ ಬಾಹುಬಲಿಯ ಪಾತ್ರವನ್ನು ಪ್ರಭಾಸ್ ನಿರ್ವಹಿಸಿದ್ದು, ಆದಿಪುರುಷ್ ಚಿತ್ರ ಚೆನ್ನಾಗಿರದ ಕಾರಣ ಕಟ್ಟಪ್ಪ ಪ್ರಭಾಸ್ ಬೆನ್ನಿಗೆ ಚೂರಿ ಹಾಕಿದ ಎಂಬರ್ಥದಲ್ಲಿ ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: Kamal Haasan: ʻಪ್ರಾಜೆಕ್ಟ್ ಕೆʼ ಸಿನಿಮಾದಲ್ಲಿ ಪ್ರಭಾಸ್‌ಗೆ ಕಮಲ್ ಹಾಸನ್ ವಿಲನ್!
ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಪೋಸ್ಟ್
ಮತ್ತೊಂದೆಡೆ ಸಿನಿಮಾ ಕಲೆಕ್ಷನ್ ವಿಷಯದಲ್ಲಿಯೂ ಸಹ ಚಿತ್ರ ಸೋತಿದೆ ಮೊದಲ ದಿನ 140 ಕೋಟಿ ಗಳಿಸಿದ್ದ ಆದಿಪುರುಷ್ ಎರಡನೇ ದಿನ 100 ಕೋಟಿ, ಮೂರನೇ ದಿನವೂ ಸಹ 100 ಕೋಟಿ ರೂ. ನಾಲ್ಕನೇ ದಿನ 35 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಮಾಡಿತು. ಐದನೇ ದಿನ 20 ಕೋಟಿ ಕಲೆಕ್ಷನ್ ಮಾಡಿತು, ಆರನೇ ದಿನ ಕೇವಲ 15 ಕೋಟಿ ಗಳಿಕೆ ಮಾಡಿತು. ಹೀಗೆ ಚಿತ್ರ 6 ದಿನಗಳ ಪ್ರದರ್ಶನವನ್ನು ಪೂರೈಸಿದ್ದು ವಿಶ್ವ ಬಾಕ್ಸ್ ಆಫೀಸ್‌ನಲ್ಲಿ 415 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಎಂಬುದನ್ನು ಚಿತ್ರತಂಡ ಅಧಿಕೃತವಾಗಿ ಘೋಷಿಸಿದೆ.
ಮಹಾಕಾವ್ಯ ರಾಮಾಯಣವನ್ನು ಆಧರಿಸಿದ ಈ ಚಿತ್ರದಲ್ಲಿ ಪ್ರಭಾಸ್ ರಾಮನಾಗಿ, ಕೃತಿ ಸನೂನ್ ಜಾನಕಿಯಾಗಿ ಮತ್ತು ಸೈಫ್ ಅಲಿ ಖಾನ್ ರಾವಣನಾಗಿ ಕಾಣಿಸಿಕೊಂಡಿದ್ದಾರೆ. ಆದಿಪುರುಷ್ ಚಿತ್ರವನ್ನು 700 ಕೋಟಿ ರೂ. ಬಜೆಟ್‌ನಲ್ಲಿ ನಿರ್ಮಿಸಲಾಗಿದೆ. ಇದುವರೆಗೆ ನಿರ್ಮಿಸಲಾದ ಅತ್ಯಂತ ದುಬಾರಿ ಭಾರತೀಯ ಚಿತ್ರ ಇದೆಂದು ಹೇಳಲಾಗಿದೆ.