Site icon Vistara News

WPL 2024 Points Table: ಮುಂಬೈ ಸೋಲಿನ ಬಳಿಕ ಅಂಕಪಟ್ಟಿ ಹೇಗಿದೆ?

WPL 2024

ಬೆಂಗಳೂರು: 2ನೇ ಆವೃತ್ತಿ(WPL 2024)ಯ ಮಹಿಳಾ ಪ್ರೀಮಿಯರ್‌ ಲೀಗ್‌ (ಡಬ್ಲ್ಯುಪಿಎಲ್‌)ನಲ್ಲಿ 6 ಪಂದ್ಯಗಳು ಮುಕ್ತಾಯ ಕಂಡಿದೆ. ಇಂದು ನಡೆಯುವ 7ನೇ ಪಂದ್ಯದಲ್ಲಿ ಆತಿಥೇಯ ಆರ್​ಸಿಬಿ ಮತ್ತು ಡೆಲ್ಲಿ ಕ್ಯಾಪಿಟಲ್ಸ್​ ಮುಖಾಮುಖಿಯಾಗಲಿದೆ. ನಿನ್ನೆ(ಬುಧವಾರ) ನಡೆದ ಪಂದ್ಯದಲ್ಲಿ ಹಾಲಿ ಚಾಂಪಿಯನ್​ ಮುಂಬೈ ತಂಡ ಸೋಲು ಕಂಡ ಕಾರಣ ಅಂಕಪಟ್ಟಿಯಲ್ಲಿ(WPL 2024 Points Table) ಮಹತ್ವದ ಬದಲಾವಣೆ ಸಂಭವಿಸಿದೆ.

2 ಪಂದ್ಯಗಳ ಸೋಲಿನ ಬಳಿಕ ಗೆಲುವಿನ ಖಾತೆ ತೆರೆದ ಯುಪಿ ವಾರಿಯರ್ಸ್ ತಂಡ 2 ಅಂಕದೊಂದಿಗೆ ನಾಲ್ಕನೇ ಸ್ಥಾನ ಪಡೆದಿದೆ. ಅಜೇಯ ಗೆಲುವಿನ ಓಟ ಕಾಯ್ದುಕೊಂಡಿರುವ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ 4 ಅಂಕದೊಂದಿಗೆ ಅಗ್ರಸ್ಥಾನದಲ್ಲೇ ಮುಂದುವರಿದಿದೆ. ಮುಂಬೈ ಇಂಡಿಯನ್ಸ್​ 4 ಅಂಕದೊಂದಿಗೆ ದ್ವಿತೀಯ ಸ್ಥಾನಿಯಾಗಿದೆ. ಡೆಲ್ಲಿ 2 ಅಂಕ ಮತ್ತು ಮುತ್ತಮ ರನ್​ರೇಟ್​ ಆಧಾರದಲ್ಲಿ ಮೂರನೇ ಸ್ಥಾನಿಯಾಗಿದೆ. ಖಾತೆ ತೆರೆಯದ ಗುಜರಾತ್​ ಜೈಂಟ್ಸ್​ ಕೊನೆಯ ಸ್ಥಾನಿಯಾಗಿದೆ.

ಬುಧವಾರದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್​ ಗೆಲುವು ದಾಖಲಿಸಿದ್ದರೆ 6 ಅಂಕದೊಂದಿಗೆ ಅಗ್ರಸ್ಥಾನಕ್ಕೇರಬಹುದಿತ್ತು. ಆದರೆ ಸೋಲು ಕಂಡು ಈ ಅವಕಾಶದಿಂದ ವಂಚಿತವಾಯಿತು. ಇಂದು ನಡೆಯುವ ಪಂದ್ಯದಲ್ಲಿ ಆರ್​ಸಿಬಿ ವಿರುದ್ಧ ಡೆಲ್ಲಿ ಗೆಲುವು ಸಾಧಿಸಿದರೆ ರನ್​ರೇಟ್​ ಧಾರಣೆಯಲ್ಲಿ ಮುಂದಿರುವ ಡೆಲ್ಲಿ ದ್ವಿತೀಯ ಸ್ಥಾನಕ್ಕೇರಲಿದೆ. ಮುಂಬೈ ಮೂರನೇ ಸ್ಥಾನಕ್ಕೆ ಜಾರಲಿದೆ.

ಅಂಕಪಟ್ಟಿ ಹೀಗಿದೆ

ತಂಡಪಂದ್ಯಗೆಲುವುಸೋಲುಅಂಕ
ಆರ್​ಸಿಬಿ2204 (+1.665)
ಮುಂಬೈ ಇಂಡಿಯನ್ಸ್​3214 (-0.182)
ಡೆಲ್ಲಿ ಕ್ಯಾಪಿಟಲ್ಸ್​2112 (+1.222)
ಯುಪಿ ವಾರಿಯರ್ಸ್​3122 (-0.357)
ಗುಜರಾತ್​ ಜೈಂಟ್ಸ್​2020 (-1.968)

ಮುಂಬೈಗೆ 7 ವಿಕೆಟ್​ ಸೋಲು


ಬುಧವಾರ ಚಿನ್ನಸ್ವಾಮಿ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆದ ಯುಪಿ ಮತ್ತು ಮುಂಬೈ ವಿರುದ್ಧದ ಪಂದ್ಯದಲ್ಲಿ ಟಾಸ್​ ಸೋತು ಬ್ಯಾಟಿಂಗ್​ಗೆ ಇಳಿಸಲ್ಪಟ್ಟ ಮುಂಬೈ ಇಂಡಿಯನ್ಸ್(Mumbai Indians vs UP Warriorz) ಉತ್ತಮ ಆರಂಭ ಪಡೆದರೂ ಆ ಬಳಿಕ ನಾಟಕೀಯ ಕುಸಿತ ಕಂಡು ನಿಗದಿತ 20 ಓವರ್​ಗಳಲ್ಲಿ 6 ವಿಕೆಟ್​ಗೆ 161 ರನ್​ ಬಾರಿಸಿತು. ಜವಾಬಿತ್ತ ಯುಪಿ ವಾರಿಯರ್ಸ್16.3​ ಓವರ್​ಗಳಲ್ಲಿ 3 ವಿಕೆಟ್​ ಕಳೆದುಕೊಂಡು 163 ರನ್​ ಬಾರಿಸಿ ಗೆಲುವಿನ ನಗೆ ಬೀರಿತು. ಇದಕ್ಕೂ ಮುನ್ನ ಆಡಿದ 2 ಪಂದ್ಯಗಳಲ್ಲಿ ಯುಪಿ ಹೀನಾಯ ಸೋಲು ಕಂಡಿತ್ತು.

ಗುರಿ ಬೆನ್ನಟ್ಟಿದ ಯುಪಿ ತಂಡಕ್ಕೆ ನಾಯಕಿ ಅಲಿಸ್ಸಾ ಹೀಲಿ ಮತ್ತು ಹಾರ್ಡ್​ ಹಿಟ್ಟರ್​ ಕಿರಣ್ ನವಗಿರೆ ಉತ್ತಮ ಜತೆಯಾಟದ ಮೂಲಕ ಭರ್ಜರಿ ಆರಂಭ ಒದಗಿಸಿದರು. ಈ ಜೋಡಿ ಮೊದಲ ವಿಕೆಟ್​ಗೆ 94 ರನ್​ಗಳನ್ನು ರಾಶಿ ಹಾಕಿತು. 6 ಬೌಂಡರಿ ಮತ್ತು 4 ಸಿಕ್ಸರ್​ ಬಾರಿಸಿದ ಕಿರಣ್ ನವಗಿರೆ 57 ರನ್​ ಗಳಿಸಿ ಅಮೆಲಿಯಾ ಕೆರ್​ಗೆ ವಿಕೆಟ್​ ಒಪ್ಪಿಸಿದರು. ಈ ವಿಕೆಟ್​ ಪತನಗೊಂಡು 3 ರನ್​ ಒಟ್ಟುಗೂಡುವಷ್ಟರಲ್ಲಿ ಅಲಿಸ್ಸಾ ಹೀಲಿ ವಿಕೆಟ್​ ಕೂಡ ಉದುರಿತು. ಅವರ ಗಳಿಕೆ 33. ಉಭಯ ಆಟಗಾರ್ತಿಯರ ವಿಕೆಟ್​ ಕಳೆದುಕೊಂಡ ಬಳಿಕ ಆಡಲಿಳಿದ ಗ್ರೇಸ್ ಹ್ಯಾರಿಸ್ ಮತ್ತು ದೀಪ್ತಿ ಶರ್ಮ(ಅಜೇಯ 27) ಜವಾಬ್ದಾರಿಯುತ ಬ್ಯಾಟಿಂಗ್​ ನಡೆಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಉಭಯ ಆಟಗಾರ್ತಿಯರು ಕೂಡ ಅಜೇಯರಾಗಿ ಉಳಿದರು. ಅಗ್ರೆಸಿವ್​ ಬ್ಯಾಟಿಂಗ್​ ನಡೆಸಿದ ಗ್ರೇಸ್ ಹ್ಯಾರಿಸ್ ಕೇವಲ 17 ಎಸೆತಗಳಿಂದ 38* ರನ್​ ಚಚ್ಚಿದರು. ಮುಂಬೈ ಪರ ಇಸ್ಸಿ ವಾಂಗ್ 2 ವಿಕೆಟ್​ ಪಡೆದರು.

Exit mobile version