Site icon Vistara News

WPL Points Table: ಹೀನಾಯ ಸೋಲಿನೊಂದಿಗೆ ಅಂಕಪಟ್ಟಿಯಲ್ಲಿ ಭಾರೀ ಕುಸಿತ ಕಂಡ ಆರ್​ಸಿಬಿ

Sophie Devine and Smriti Mandhana warm up ahead of their fourth game

ಬೆಂಗಳೂರು: ಹಾಲಿ ಚಾಂಪಿಯನ್​ ಮುಂಬೈ ಇಂಡಿಯನ್ಸ್​​(Mumbai Indians) ಎದುರಿದ ಪಂದ್ಯದಲ್ಲಿ ಹೀನಾಯ 7 ವಿಕೆಟ್​ಗಳ ಸೋಲು ಕಂಡ ರಾಯಲ್​ ಚಾಲೆಂಜರ್ಸ್​ ಬೆಂಗಳೂರು(Royal Challengers Bangalore) ತಂಡ ಅಂಕಪಟ್ಟಿಯಲ್ಲಿ(WPL Points Table) ಭಾರೀ ಕುಸಿತ ಕಂಡಿದೆ. ನಾಲ್ಕನೇ ಸ್ಥಾನದಲ್ಲಿದ್ದ ಮುಂಬೈ ಈ ಗೆಲುವಿನಿಂದ 6 ಅಂಕ ಸಂಪಾದಿಸಿ ಅಗ್ರಸ್ಥಾನಕ್ಕೇರಿದೆ. ಆರ್​ಸಿಬಿ ನಾಲ್ಕನೇ ಸ್ಥಾನಕ್ಕೆ ಜಾರಿದೆ.

ಈ ಪಂದ್ಯದಕ್ಕೂ ಮುನ್ನ ಮೆಗ್​ ಲ್ಯಾನಿಂಗ್ ಸಾರಥ್ಯದ ಡೆಲ್ಲಿ ಕ್ಯಾಪಿಟಲ್ಸ್​ ತಂಡ ಅಗ್ರಸ್ಥಾನದಲ್ಲಿತ್ತು. ಆರ್​ಸಿಬಿ 4 ಅಂಕದೊಂದಿಗೆ ದ್ವಿತೀಯ ಸ್ಥಾನಿಯಾಗಿತ್ತು. ಆದರೆ ಮುಂಬೈ ತಂಡದ ಗೆಲುವಿನಿಂದಾಗಿ ಇದೀಗ ಅಂಕಪಟ್ಟಿಯಲ್ಲಿ ಮಹತ್ವದ ಬದಲಾವಣೆ ಸಂಭವಿಸಿದೆ. ನೂತನ ಅಂಕಪಟ್ಟಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ 2ನೇ ಸ್ಥಾನಕ್ಕೆ ಜಾರಿದರೆ, ಆರ್​ಸಿಬಿ 2 ಸ್ಥಾನ ಕುಸಿತ ಕಂಡು ನಾಲ್ಕನೇ ಸ್ಥಾನದಲ್ಕಿ ಕಾಣಿಸಿಕೊಂಡಿದೆ. ಯುಪಿ ತಂಡ ಈ ಹಿಂದೆ ಇದ್ದ ಮೂರನೇ ಸ್ಥಾನದಲ್ಲಿಯೇ ಮುಂದುವರಿದಿದೆ.

ಇದನ್ನೂ ಓದಿ WPL 2024: ಸತತ 2ನೇ ಸೋಲಿಗೆ ತುತ್ತಾದ ಆರ್​ಸಿಬಿ; ಮುಂಬೈಗೆ 7 ವಿಕೆಟ್​ ಗೆಲುವು

ನೂತನ ಅಂಕಪಟ್ಟಿ

ತಂಡಪಂದ್ಯಗೆಲುವುಸೋಲುಅಂಕ
ಮುಂಬೈ ಇಂಡಿಯನ್ಸ್​4316 (+0.402)
ಡೆಲ್ಲಿ ಕ್ಯಾಪಿಟಲ್ಸ್​3214 (+1.271)
ಯುಪಿ ವಾರಿಯರ್ಸ್​​3214 (+0.211)
ಆರ್​ಸಿಬಿ​​4224 (-0.015)
ಗುಜರಾತ್​ ಜೈಂಟ್ಸ್​3030 (-1.995)


ಸತತ 2ನೇ ಸೋಲು ಕಂಡ ಆರ್​ಸಿಬಿ


ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರಿಕೆಟ್​ ಸ್ಟೇಡಿಯಂನಲ್ಲಿ ಶನಿವಾರ ನಡೆದ ಡಬ್ಲ್ಯುಪಿಎಲ್​ 2ನೇ ಆವೃತ್ತಿಯ 9ನೇ ಪಂದ್ಯದಲ್ಲಿ ಟಾಸ್​ ಗೆದ್ದು ಬೌಲಿಂಗ್​ ಆಯ್ದುಕೊಂಡ ಮುಂಬೈ ಇಂಡಿಯನ್ಸ್ ತಂಡ ಆರ್​ಸಿಬಿಯನ್ನು ​ಅಲ್ಪ ಮೊತ್ತಕ್ಕೆ ಕಟ್ಟಿ ಹಾಕಿ ತನ್ನ ಆಯ್ಕೆಯನ್ನು ಸಮರ್ಥಿಸಿಕೊಂಡಿತು. ನಿಗದಿತ 20 ಓವರ್​ ಬ್ಯಾಟಿಂಗ್​ ಮಾಡಿದ ಆರ್​ಸಿಬಿ 6 ವಿಕೆಟ್​ಗೆ 131 ರನ್​ ಮಾತ್ರ ಕಲೆ ಹಾಕಿತು. ಸಣ್ಣ ಮೊತ್ತವನ್ನು ಬೆನ್ನಟ್ಟಿದ ಮುಂಬೈ 15.1 ಓವರ್​ನಲ್ಲಿ 3 ವಿಕೆಟ್ ನಷ್ಟಕ್ಕೆ 133 ರನ್​ ಬಾರಿಸಿ ಗೆಲುವು ತನ್ನದಾಗಿಸಿಕೊಂಡಿತು. ಆರ್​ಸಿಬಿಗೆ ತವರಿನಲ್ಲಿ ಎದುರಾದ ಸತತ 2ನೇ ಸೋಲು ಇದಾಗಿದೆ. ಇದಕ್ಕೂ ಮುನ್ನ ಡೆಲ್ಲಿ ವಿರುದ್ಧ ಸೋಲು ಕಂಡಿತ್ತು.

Exit mobile version