`ಬೆಂಗಳೂರು : ಜಿಂಬಾಬ್ವೆ ವಿರುದ್ಧದ 5ನೇ ಟಿ20 ಪಂದ್ಯದಲ್ಲಿ (INDvsZIM) ಭಾರತ ತಂಡದ ಭರ್ಜರಿ ಗೆಲುವು ದಾಖಲಿಸಿದೆ. ಇದರೊಂದಿಗೆ ಭಾರತ ಸರಣಿಯನ್ನು 4-1 ಅಂತರದಿಂದ ವಶಪಡಿಸಿಕೊಂಡಿದೆ. ಈ ಪಂದ್ಯದಲ್ಲಿ ಭಾರತದ ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್ (Yashasvi Jaiswal ) 13 ರನ್ ಬಾರಿಸಿ ಔಟಾಗಿದ್ದಾರೆ. ಆದರೆ ಅದಕ್ಕಿಂತ ಮೊದಲು ಅವರು ವಿಶೇಷ ಸಾಧನೆಯೊಂದನ್ನು ಮಾಡಿದ್ದಾರೆ. ಈ ಸಾಧನೆ ಮಾಡಿದ ಮೊಟ್ಟ ಮೊದಲ ಕ್ರಿಕೆಟರ್ ಎಂಬ ದಾಖಲೆಗ ಸೃಷ್ಟಿಸಿದ್ದಾರೆ.
Yashasvi Jaiswal became the first batter in history to score 13 runs on the 1st ball of a T20i. 🌟pic.twitter.com/98j63xmtGu
— Mufaddal Vohra (@mufaddal_vohra) July 14, 2024
ಟಾಸ್ ಸೋತ ನಂತರ ಮೊದಲು ಬ್ಯಾಟಿಂಗ್ ಮಾಡಲು ಭಾರತ ಆಹ್ವಾನ ಪಡೆಯಿತು. ಅಂತೆಯೇ ಇನಿಂಗ್ಸ್ ಆರಂಭಿಸಿದ ಯಶಸ್ವಿ ಜೈಸ್ವಾಲ್ ಮೊದಲ ಎಸೆತದಲ್ಲೇ ಸ್ಟ್ರೈಕ್ ತೆಗೆದುಕೊಂಡು ಜಿಂಬಾಬ್ವೆ ನಾಯಕ ಸಿಕಂದರ್ ರಾಜಾ ಅವರನ್ನು ಎದುರಿಸಿದರು. ಕಳೆದ ಪಂದ್ಯದಲ್ಲಿ 93*(53) ರನ್ ಗಳಿಸಿದ ನಂತರ ಜೈಸ್ವಾಲ್ ಸರಣಿಯ ಕೊನೆಯ ಪಂದ್ಯದಲ್ಲೂ ಆತ್ಮವಿಶ್ವಾಸದಿಂದ ಆಡಲು ಮುಂದಾದರು. ರಾಜಾ ಆಫ್ ಸ್ಟಂಪ್ ಕಡೆಗೆ ಫುಲ್ ಟಾಸ್ ಎಸೆತ ಹಾಕಿದರು. ಯಶಸ್ವಿ ಅದನ್ನು ಮಿಡ್ ವಿಕೆಟ್ ಕಡೆಗೆ ಸ್ಲಾಗ್ ಸ್ವೀಪ್ ಮಾಡುವ ಅದನ್ನು ಸಿಕ್ಸರ್ಗೆ ಅಟ್ಟಿದರು. ಮೂರನೇ ಅಂಪೈರ್ ರಾಜಾ ನೊಬಾಲ್ ಹಾಕಿರುವುದನ್ನು ಗುರುತಿಸಿದರು. ಒಂದು ಎಸೆತ ಪೂರ್ತಿಯಾಗದೇ ಜೈಸ್ವಾಲ್ 6 ರನ್ ಗಳಸಿಕೊಂಡರು.
ನೋಬಾಲ್ ಕಾರಣಕ್ಕೆ ಫ್ರೀಹಿಟ್ ದೊರೆಯಿತು. ಅದನ್ನು ಜೈಸ್ವಾಲ್ ಬೌಲರ್ ತಲೆ ಮೇಲಿಂದ ಸಿಕ್ಸರ್ ಆಗಿ ಪರಿವರ್ತಿಸಿದರು. ಹೀಗಾಗಿ ಜೈಸ್ವಾಲ್ ಒಂದೇ ಒಂದು ನಿಯಮ ಬದ್ಧ ಎಸೆತದಲ್ಲಿ 12 ಹಾಗೂ ಒಂದು ನೋಬಾಲ್ ಸೇರಿ 13 ರನ್ ಗಳಿಸಿದಂತಾಯಿತು. ಆದಾಗ್ಯೂ, ಬ್ಯಾಟರ್ ಹೆಚ್ಚಿನ ರನ್ ಗಳಿಸಲು ಸಾಧ್ಯವಾಗಲಿಲ್ಲ. ರಾಜಾ ಅದೇ ಓವರ್ನಲ್ಲಿ ಜೈಸ್ವಾಲ್ ಅವರನ್ನು ಔಟ್ ಮಾಡಿದರು.
ಪಂದ್ಯದಲ್ಲಿ ಏನಾಯಿತು?
ಹರಾರೆ: ಸಂಜು ಸ್ಯಾಮ್ಸನ್ (55) ಬಾರಿಸಿದ ಅಮೋಘ ಅರ್ಧ ಶತಕ ಹಾಗೂ ಮುಕೇಶ್ ಕುಮಾರ್ ಅವರ 4 ವಿಕೆಟ್ ಸಾಧನೆಯೊಂದಿಗೆ ಮಿಂಚಿದ ಭಾರತ ತಂಡ ಆತಿಥೇಯ ಜಿಂಬಾಬ್ವೆ ವಿರುದ್ಧದ (IND vs ZIM ) ಟಿ20 ಸರಣಿಯ ಐದನೇ ಪಂದ್ಯದಲ್ಲೂ ವಿಜಯ ಸಾಧಿಸಿದೆ. ಇದರೊಂದಿಗೆ ಭಾರತ ತಂಡ ಸರಣಿಯನ್ನು 4-1 ಅಂತರದಿಂದ ತನ್ನದಾಗಿಸಿಕೊಂಡಿದೆ. ಆರಂಭಿಕ ಪಂದ್ಯದಲ್ಲಿ ಅಚ್ಚರಿಯ ಸೋಲನ್ನು ಕಂಡ ಕಾರಣ ಕ್ಲೀನ್ ಸ್ವೀಪ್ ಮಾಡುವ ಅವಕಾಶವನ್ನು ಶುಬ್ಮನ್ ಗಿಲ್ ನೇತೃತ್ವದ ಬಳಗ ಕಳೆದುಕೊಂಡಿತು. ಆದಾಗ್ಯೂ ಮೊದಲ ನಾಯಕತ್ವದಲ್ಲಿಯೇ ಶುಬ್ಮನ್ ಗಿಲ್ ತಮ್ಮ ಸಾಮರ್ಥ್ಯವನ್ನು ಸಾಬೀತಪಡಿಸಿಕೊಂಡಿದ್ದಾರೆ.