Site icon Vistara News

Yuzvendra Chahal : ಟಿ20 ವಿಕೆಟ್​​ಗಳ ಗಳಿಕೆಯಲ್ಲಿ ನೂತನ ದಾಖಲೆ ಬರೆದ ಸ್ಪಿನ್ನರ್ ಯಜ್ವೇಂದ್ರ ಚಹಲ್​

Yuzvendra Chahal

ನವ ದೆಹಲಿ: ರಾಜಸ್ಥಾನ್​ ರಾಯಲ್ಸ್​ ತಂಡದ ಸ್ಪಿನ್ ಬೌಲರ್​ ಯಜುವೇಂದ್ರ ಚಹಲ್ (Yuzvendra Chahal) ಮಂಗಳವಾರ (ಮೇ 7) ಟಿ20 ಪಂದ್ಯಗಳಲ್ಲಿ 350 ವಿಕೆಟ್ ಪಡೆದ ಮೊದಲ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಐಪಿಎಲ್​ 17ನೇ ಆವೃತ್ತಿಯಲ್ಲಿ (IPL 2024) ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ರಾಜಸ್ಥಾನ್ ರಾಯಲ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಪಂದ್ಯದಲ್ಲಿ ಲೆಗ್ ಸ್ಪಿನ್ನರ್ ದೊಡ್ಡ ಮೈಲಿಗಲ್ಲನ್ನು ಸಾಧಿಸಿದರು.

ಆಟದ ಕಿರು ಸ್ವರೂಪದಲ್ಲಿ 350 ವಿಕೆಟ್​​ಗಳ ಕ್ಲಬ್​​ ಪ್ರವೇಶಿಸಲು ಭಾರತದ ಸ್ಪಿನ್ನ್ ತಾರೆಗೆ ಕೇವಲ ಒಂದು ವಿಕೆಟ್ ಅಗತ್ಯವಿತ್ತು. ಅವರು ಅದನ್ನು ಪೂರ್ಣಗೊಳಿಸಿದರು. ಚಹಲ್ ತಮ್ಮ ಸಹ ಆಟಗಾರ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಾಯಕ ರಿಷಭ್ ಪಂತ್ ಅವರನ್ನು ಔಟ್ ಮಾಡಿ ಟಿ 20 ಯಲ್ಲಿ 350 ವಿಕೆಟ್​​​ಗಳನ್ನು ಪೂರೈಸಿದರು. ಅವರು ತಮ್ಮ 301 ನೇ ಟಿ 20 ಪಂದ್ಯದಲ್ಲಿ ಈ ಸಾಧನೆ ಮಾಡಿದ್ದಾರೆ.

ಪಿಯೂಷ್ ಚಾವ್ಲಾ ಮತ್ತು ರವಿಚಂದ್ರನ್ ಅಶ್ವಿನ್ 300 ಮತ್ತು ಅದಕ್ಕಿಂತ ಹೆಚ್ಚಿನ ಟಿ 20 ವಿಕೆಟ್ ಪಡೆದ ಇತರ ಭಾರತೀಯ ಬೌಲರ್​ಗಳು. ಚಾವ್ಲಾ 310 ವಿಕೆಟ್ ಪಡೆದರೆ, ಅಶ್ವಿನ್ 306 ವಿಕೆಟ್ ಪಡೆದಿದ್ದಾರೆ. ಈ ಪಟ್ಟಿಯಲ್ಲಿ ಭುವನೇಶ್ವರ್ ಕುಮಾರ್ 297 ವಿಕೆಟ್​ಗಳೊಂಇಗೆ ನಾಲ್ಕನೇ ಸ್ಥಾನದಲ್ಲಿದ್ದರೆ, ಅಮಿತ್ ಮಿಶ್ರಾ 285 ಟಿ 20 ವಿಕೆಟ್​​ಗಳನ್ನು ಪಡೆದಿದ್ದಾರೆ.

ಟಿ20 ಕ್ರಿಕೆಟ್​ಬಲ್ಲಿ ಭಾರತದ ಪರ ಅತಿ ಹೆಚ್ಚು ವಿಕೆಟ್ ಸಾಧನೆಗಳು

ವೆಸ್ಟ್ ಇಂಡೀಸ್​ನ ಮಾಜಿ ಆಲ್ರೌಂಡರ್ ಡ್ವೇನ್ ಬ್ರಾವೋ 625 ವಿಕೆಟ್​​ಗಳನ್ನು ಕಬಳಿಸುವ ಮೂಲಕ ಟಿ20 ಕ್ರಿಕೆಟ್​​ಗೆ ತೆರೆ ಎಳೆದಿದ್ದಾರೆ. ವಿಶ್ವದ ಬೇರೆ ಯಾವುದೇ ಬೌಲರ್ ಇದುವರೆಗೆ 600 ವಿಕೆಟ್​ಗಳ ಗಡಿ ಮುಟ್ಟಲು ಸಾಧ್ಯವಾಗಿಲ್ಲ.

ಅಫ್ಘಾನಿಸ್ತಾನದ ಸೂಪರ್ ಸ್ಟಾರ್ ರಶೀದ್ ಖಾನ್ 572 ವಿಕೆಟ್​ಗಳೊಂಇಎಗ ಅತಿ ಹೆಚ್ಚು ಟಿ 20 ವಿಕೆಟ್ಗಳ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದರೆ, ಸುನಿಲ್ ನರೈನ್ 549 ವಿಕೆಟ್​ಗಳನ್ನು ಪಡೆದಿದ್ದಾರೆ. ಇಮ್ರಾನ್ ತಾಹಿರ್ (502) ಮತ್ತು ಶಕೀಬ್ ಅಲ್ ಹಸನ್ (482) ಮೊದಲ ಐದು ಸ್ಥಾನಗಳಲ್ಲಿದ್ದಾರೆ.

ಇದನ್ನೂ ಓದಿ:IPL 2024 : ಅಭಿಮಾನಿಯ 80 ಸಾವಿರ ರೂಪಾಯಿ ಮೊಬೈಲ್​ ಒಡೆದು ಹಾಕಿದ ಚೆನ್ನೈ ಸ್ಟಾರ್​; ಇಲ್ಲಿದೆ ವಿಡಿಯೊ

ಐಪಿಎಲ್​ನಲ್ಲಿ ಚಹಲ್ ಸಾಧನೆ

ಐಪಿಎಲ್ ಇತಿಹಾಸದಲ್ಲಿ 200 ವಿಕೆಟ್ ಪಡೆದ ಮೊದಲ ಬೌಲರ್ ಎಂಬ ಹೆಗ್ಗಳಿಕೆಗೆ ಯಜುವೇಂದ್ರ ಚಾಹಲ್ ಪಾತ್ರರಾಗಿದ್ದಾರೆ. ಕಳೆದ ತಿಂಗಳು ಜೈಪುರದಲ್ಲಿ ನಡೆದ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಮೊಹಮ್ಮದ್ ನಬಿ ಅವರನ್ನು ಔಟ್ ಮಾಡುವ ಮೂಲಕ ಅವರು ಗಮನಾರ್ಹ ಸಾಧನೆ ಮಾಡಿದ್ದಾರೆ.

ಚಹಲ್ ಈ ಋತುವಿನಲ್ಲಿ ಇಲ್ಲಿಯವರೆಗೆ ಉತ್ತಮ ಪ್ರದರ್ಶನ ನೀಡಿದ್ದಾರೆ. ಈವರೆಗೆ 11 ಪಂದ್ಯಗಳನ್ನಾಡಿರುವ ಅವರು 14 ವಿಕೆಟ್ಗಳನ್ನು ಕಬಳಿಸಿದ್ದಾರೆ. ಈ ಋತುವಿನಲ್ಲಿ ಅವರ ಉತ್ತಮ ಪ್ರದರ್ಶನವು ಐಸಿಸಿ ಟಿ 20 ವಿಶ್ವಕಪ್ 2024 ಗಾಗಿ ಭಾರತ ತಂಡದಲ್ಲಿ ಸ್ಥಾನ ಪಡೆಯಲು ಸಹಾಯ ಮಾಡಿತು.

Exit mobile version