Site icon Vistara News

Yusuf Pathan: ಕ್ರಿಕೆಟಿಗ ಯೂಸುಫ್ ಪಠಾಣ್ ಟಿಎಂಸಿ ಅಭ್ಯರ್ಥಿಯಾಗಿ ಬಂಗಾಳದಿಂದ ಸ್ಪರ್ಧೆ

yusuf pathan

ಕೊಲ್ಕತ್ತಾ: ಭಾರತ ಕ್ರಿಕೆಟ್​ ತಂಡದ ಮಾಜಿ ಕ್ರಿಕೆಟಿಗ, ವಿಶ್ವಕಪ್​ ತಂಡದ ಸದಸ್ಯ ಯೂಸುಫ್ ಪಠಾಣ್(Yusuf Pathan) ಅವರು ರಾಜಕೀಯ ಇನಿಂಗ್ಸ್​ ಆರಂಭಿಸಿದ್ದಾರೆ. ಟಿಎಂಸಿ ಮೂಲಕ ರಾಜಕೀಯ ಕ್ಷೇತ್ರಕ್ಕೆ ಇಳಿದಿದ್ದು, ಪಶ್ಚಿಮ ಬಂಗಾಳದ ಬಹರಂಪುರ ಕ್ಷೇತ್ರದಿಂದ ಲೋಕಸಭಾ ಚುನಾವಣೆಗೆ ಸ್ಪರ್ಧಿಸಲಿದ್ದಾರೆ ಎಂದು ತೃಣಮೂಲ ಪಕ್ಷದ ಮೂಲಗಳು ತಿಳಿಸಿವೆ. ಯೂಸುಫ್ ಪಠಾಣ್ ಅವರು ಭಾರತ ಪರ 57 ಏಕದಿನ ಮತ್ತು 22 ಟಿ20 ಕ್ರಿಕೆಟ್​ ಆಡಿದ್ದಾರೆ.

ವಿಶ್ವಕಪ್‌ ಹೀರೋ


ಪಠಾಣ್‌ ಸೋದರರಲ್ಲಿ ಹಿರಿಯರಾದ ಯೂಸುಫ್ ಪಠಾಣ್‌ ಹೊಡಿಬಡಿ ಆಟಕ್ಕೆ ಖ್ಯಾತರಾಗಿದ್ದರು. 2007ರ ಚೊಚ್ಚಲ ಟಿ20 ವಿಶ್ವಕಪ್‌, 2011ರ ವಿಶ್ವಕಪ್‌, ಕೆಕೆಆರ್‌ನ ಐಪಿಎಲ್‌ ಗೆಲುವಿನ ವೇಳೆ ತಂಡದ ಸ್ಟಾರ್‌ ಆಟಗಾರನಾಗಿ ಮಿಂಚಿದ್ದು ಯೂಸುಫ್ ಹೆಗ್ಗಳಿಕೆ. 2021ರಲ್ಲಿ ಎಲ್ಲ ಮಾದರಿಯ ಕ್ರಿಕೆಟ್​ಗೆ ವಿದಾಯ ಹೇಳಿದ್ದರು.

ಯೂಸುಫ್ ಪಠಾಣ್‌ 57 ಏಕದಿನ ಪಂದ್ಯಗಳಿಂದ 810 ರನ್‌ ಹೊಡೆದಿದ್ದಾರೆ. 2 ಶತಕ, 3 ಅರ್ಧ ಶತಕ ಇದರಲ್ಲಿ ಒಳಗೊಂಡಿದೆ. 22 ಟಿ20 ಪಂದ್ಯಗಳಿಂದ 236 ರನ್‌ ಬಾರಿಸಿದ್ದಾರೆ. 2012ರಲ್ಲಿ ಭಾರತವನ್ನು ಕೊನೆಯ ಸಲ ಪ್ರತಿನಿಧಿಸಿದ್ದರು.

ಸ್ಮರಣೀಯ ಇನಿಂಗ್ಸ್​


ಪಾಕಿಸ್ತಾನ ವಿರುದ್ಧದ 2007ರ ಟಿ20 ವಿಶ್ವಕಪ್‌ ಫೈನಲ್‌ನಲ್ಲಿ ಯೂಸುಫ್ ಪಠಾಣ್‌ ಅಂತಾರಾಷ್ಟ್ರೀಯ ಕ್ರಿಕೆಟಿಗೆ ಅಡಿಯಿರಿಸಿದ್ದರು. ಗಂಭೀರ್‌ ಜತೆ ಆರಂಭಿಕನಾಗಿ ಇಳಿದು 8 ಎಸೆತಗಳಿಂದ 15 ರನ್‌ ಹೊಡೆದಿದ್ದರು.
174 ಐಪಿಎಲ್‌ ಪಂದ್ಯಗಳಿಂದ 3,204 ರನ್‌, ಭಾರತದ ಅತೀ ವೇಗದ ಶತಕದ ದಾಖಲೆ, 16 ಪಂದ್ಯಶ್ರೇಷ್ಠ ಗೌರವ, 42 ವಿಕೆಟ್‌ ಸಂಪಾದಿಸಿದ ಹೆಗ್ಗಳಿಕೆ ಯೂಸುಫ್ ಅವರದು.

Exit mobile version