Site icon Vistara News

Cristiano Ronaldo | ಸೌದಿ ಅರೇಬಿಯಾದ ಫುಟ್ಬಾಲ್​ ಕ್ಲಬ್‌ ಸೇರಿದರೇ ಕ್ರಿಸ್ಟಿಯಾನೋ ರೊನಾಲ್ಡೊ!

cristiano

ದೋಹಾ: ಕೆಲ ದಿನಗಳ ಹಿಂದಷ್ಟೇ ಮ್ಯಾಂಚೆಸ್ಟರ್ ಯುನೈಟೆಡ್‌ ತೊರೆದಿದ್ದ ಕ್ರಿಸ್ಟಿಯಾನೋ ರೊನಾಲ್ಡೊ(Cristiano Ronaldo) ಇದೀಗ ಸೌದಿ ಅರೇಬಿಯಾದ ಫುಟ್ಬಾಲ್ ಕ್ಲಬ್‌ ‘ಅಲ್‌ ನಾಸರ್‌‘ ಜತೆ ಮುಂದಿನ ಎರಡುವರೆ ವರ್ಷದ ಅವಧಿಗೆ ಒಪ್ಪಂದ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.

37 ವರ್ಷದ ರೊನಾಲ್ಡೊ ಅವರು ಸದ್ಯ ನಡೆಯುತ್ತಿರುವ ಫಿಫಾ ವಿಶ್ವಕಪ್‌ ಪಂದ್ಯಾವಳಿ ಬಳಿಕ ಎರಡುವರೆ ವರ್ಷದ ಮಟ್ಟಿಗೆ 172.9 ಮಿಲಿಯನ್​ (ಸುಮಾರು 1,399 ಕೋಟಿ) ಮೊತ್ತ ನೀಡಿ ತನ್ನ ಪರ ಆಡಲು ಅಲ್‌ ನಾಸರ್‌ ಒಪ್ಪಂದ ಮಾಡಿಕೊಂಡಿದೆ ಎಂದು ಸ್ಪೇನ್​ನ ಪತ್ರಿಕೆಯೊಂದು ವರದಿ ಮಾಡಿದೆ.

ರೊನಾಲ್ಡೊ ಅವರನ್ನು ತಮ್ಮ ಕ್ಲಬ್‌ಗೆ ಸೇರಿಸಿಕೊಳ್ಳಬೇಕು ಎಂದು ಅಲ್‌ ನಾಸರ್‌ ಈ ಹಿಂದಿನಿಂದಲೂ ಉತ್ಸಾಹ ತೋರಿತ್ತು. ಅದರಂತೆ ರೊನಾಲ್ಡೊ ಮ್ಯಾಂಚೆಸ್ಟರ್‌ ಯುನೈಟೆಡ್‌ ತೊರೆದ ಬಳಿಕ ಇದೀಗ ಅಲ್‌ ನಾಸರ್‌ ಕ್ಲಬ್,​ ರೊನಾಲ್ಡೊ ಜತೆ ಮಾತುಕತೆ ನಡೆಸಿ ಒಪ್ಪಂದ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದೆ ಎಂದು ತಿಳಿದುಬಂದಿದೆ. ಆದರೆ ರೊನಾಲ್ಡೊ ಅವರ ಅಂತಿಮ ಘೋಷಣೆಯೊಂದೆ ಬಾಕಿ ಇದೆ.

ಇದನ್ನೂ ಓದಿ | FIFA World Cup | ನೆದರ್ಲೆಂಡ್ಸ್‌, ಸೆನೆಗಲ್‌ ತಂಡಗಳಿಗೆ ಜಯ ನಾಕೌಟ್‌ ಸುತ್ತಿಗೆ ಪ್ರವೇಶ

Exit mobile version