ಲಂಡನ್: ಮ್ಯಾಂಚೆಸ್ಟರ್ ಯುನೈಟೆಡ್ ಕ್ಲಬ್ ತೊರೆದು ಸುದ್ದಿಯಲ್ಲಿರುವ ಫುಟ್ಬಾಲ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ(Cristiano Ronaldo)ಗೆ ಇದೀಗ ಸಂಕಷ್ಟವೊಂದು ಎದುರಾಗಿದೆ. ಅಭಿಮಾನಿಯೊಬ್ಬರ ಮೊಬೈಲ್ ಒಡೆದು ಹಾಕಿದ ಪ್ರಕರಣಕ್ಕೆ ಅವರಿಗೆ ಕ್ಲಬ್ ಸರಣಿಯ 2 ಪಂದ್ಯಗಳಿಗೆ ನಿಷೇಧ ಮತ್ತು 42.8 ಲಕ್ಷ ರೂ.(50,000 ಯೂರೊ) ದಂಡ ವಿಧಿಸಲಾಗಿದೆ.
ಏಪ್ರಿಲ್‌ನಲ್ಲಿ ನಡೆದ ಇಪಿಎಲ್ ಟೂರ್ನಿಯ ಪಂದ್ಯದಲ್ಲಿ ಎವರ್‌ಟನ್ ವಿರುದ್ಧ ಯುನೈಟೆಡ್ ತಂಡ 1-0 ಗೋಲ್ ಅಂತರದಿಂದ ಸೋಲು ಕಂಡಿತ್ತು. ಈ ವೇಳೆ ಆಕ್ರೋಶಗೊಂಡ ರೊನಾಲ್ಡೊ ಅಭಿಮಾನಿಯ ಮೊಬೈಲ್ ಫೋನ್ ಒಡೆದು ಹಾಕಿದ್ದರು. ಇದೀಗ ಈ ವಿಡಿಯೊ ತುಣುಕನ್ನು ಆಧಾರವಾಗಿಟ್ಟುಕೊಂಡು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರೊನಾಲ್ಡೊಗೆ ಇಂಗ್ಲೆಂಡ್ ಫುಟ್ಬಾಲ್ ಒಕ್ಕೂಟ ಈ ಶಿಕ್ಷೆ ವಿಧಿಸಿದೆ.
ಫಿಫಾ ವಿಶ್ವ ಕಪ್ ಟೂರ್ನಿಯಲ್ಲಿ ಕ್ರಿಸ್ಟಿಯಾನೊ ರೊನಾಲ್ಡೊ ನೇತೃತ್ವದ ಪೋರ್ಚುಗಲ್ ತಂಡ ಗುರುವಾರ ಘಾನಾ ವಿರುದ್ಧ ಸೆಣಸಲಿದೆ.
ಇದನ್ನೂ ಓದಿ | Cristiano Ronaldo | ಮ್ಯಾಂಚೆಸ್ಟರ್ ಯುನೈಟೆಡ್ ಕ್ಲಬ್ಗೆ ಗುಡ್ ಬೈ ಹೇಳಿದ ಕ್ರಿಸ್ಟಿಯಾನೊ ರೊನಾಲ್ಡೊ