Site icon Vistara News

FIFA World Cup | ಕ್ರೊಯೇಷ್ಯಾಗೆ ಜಯ, ಕೆನಡಾ ತಂಡ ವಿಶ್ವ ಕಪ್‌ ಪ್ರಶಸ್ತಿ ರೇಸ್‌ನಿಂದ ಹೊರಕ್ಕೆ

FIFA WOrld cup

ದೋಹಾ : ಪಂದ್ಯದುದ್ದಕ್ಕೂ ಆಕ್ರಮಣಕಾರಿ ಆಟ ಪ್ರದರ್ಶಿಸಿದ ಕ್ರೊಯೇಷ್ಯಾ ತಂಡ, ಫಿಫಾ ವಿಶ್ವ ಕಪ್‌ನ (FIFA World Cup) ಭಾನುವಾರದ ಕೊನೇ ಪಂದ್ಯದಲ್ಲಿ ಕೆನಡಾ ತಂಡವನ್ನು ೪-೧ ಗೋಲ್‌ಗಳಿಂದ ಮಣಿಸಿತು. ಈ ವಿಜಯದೊಂದಿಗೆ ಒಟ್ಟಾರೆ ೪ ಅಂಕಗಳನ್ನು ಸಂಪಾದಿಸಿದ ಕ್ರೊಯೇಷ್ಯಾ ತಂಡ ಎಫ್‌ ಗುಂಪಿನಲ್ಲಿ ಅಗ್ರ ಸ್ಥಾನಕ್ಕೇರಿತಲ್ಲದೆ, ನಾಕೌಟ್ ಹಂತದ ಪ್ರವೇಶಕ್ಕೆ ವೇದಿಕೆ ಸಿದ್ಧಪಡಿಸಿದಕೊಂಡಿತು. ಇತ್ತ ಕೆನಡಾ ತಂಡ ಸತತವಾಗಿ ಎರಡು ಸೋಲುಗಳನ್ನು ಎದುರಿಸುವ ಮೂಲಕ ಟೂರ್ನಿಯಿಂದ ಹೊರಕ್ಕೆ ಬಿತ್ತು.

ಪಂದ್ಯ ಆರಂಭಗೊಂಡ ಬಳಿಕದ ಎರಡನೇ ನಿಮಿಷದಲ್ಲಿ ಆಲ್ಫಾನ್ಸೋ ಡೇವಿಸ್ ಗೋಲ್‌ ಬಾರಿಸುವ ಮೂಲಕ ಕೆನಡಾ ತಂಡಕ್ಕೆ ಮುನ್ನಡೆ ಸಿಕ್ಕಿತು. ಅದರೆ, ಆ ಬಳಿಕ ಏಕಾಏಕಿ ಚೇತರಿಸಿಕೊಂಡ ಕ್ರೊಯೇಷ್ಯಾ ತಂಡ ಪಂದ್ಯದ ಮೇಲೆ ಸಂಪೂರ್ಣ ಹಿಡಿತ ಸಾಧಿಸಿತು. ಆಂಡ್ರೆ ಕ್ರಾಮರಿಕ್‌ (೩೬ ಹಾಗೂ ೭೦ನೇ ನಿಮಿಷ), ಮಾರ್ಕ್‌ ಲಿವಾಜ (೪೪ನೇ ನಿಮಿಷ) ಹಾಗೂ ಲಾವ್ರೊ ಮಜೇರ್‌ (೯೦+೪ನೇ ನಿಮಿಷ) ಒಂದು ಗೋಲ್ ಬಾರಿಸುವ ಮೂಲಕ ಅಧಿಕಾರಯುತ ಜಯ ಸಾಧಿಸಲು ನೆರವಾದರು.

ಗುಂಪಿನ ಇನ್ನೊಂದು ತಂಡವಾಗಿರುವ ಮೊರಾಕ್ಕೊ ಅದಕ್ಕಿಂತ ಮೊದಲು ನಡೆದ ಪಂದ್ಯದಲ್ಲಿ ಬಲಿಷ್ಠ ಬೆಲ್ಜಿಯಮ್‌ ತಂಡವನ್ನು ಮಣಿಸಿ ಒಟ್ಟಾರೆ ನಾಲ್ಕು ಅಂಕಗಳನ್ನು ಗಳಿಸಿಕೊಂಡಿದೆ. ಕ್ರೊಯೇಷ್ಯಾ ಕೂಡ ಅಷ್ಟೇ ಅಂಕಗಳನ್ನು ಪಡೆದುಕೊಂಡಿದೆ. ಕ್ರೊಯೇಷ್ಯಾ ತಂಡ ಬೆಲ್ಜಿಯಮ್ ವಿರುದ್ಧದ ಪಂದ್ಯದಲ್ಲಿ ಡ್ರಾ ಮಾಡಿಕೊಂಡರೂ ನಾಕೌಟ್‌ ಹಂತಕ್ಕೇರಲಿದೆ.

ಇದನ್ನೂ ಓದಿ | Video| ಫಿಫಾ ವಿಶ್ವ ಕಪ್​ ಪಂದ್ಯದ ವೇಳೆ ಭಾರತದ ತ್ರಿವರ್ಣ ಧ್ವಜ ಹೊದ್ದು ತನ್ನ ದೇಶವನ್ನು ಬೆಂಬಲಿಸಿದ ಅರ್ಜೆಂಟೀನಾ ಯುವತಿ; ಕಾರಣ ಇಲ್ಲಿದೆ

Exit mobile version