ಚೆನ್ನೈ: ಮೊಣಕಾಲಿನ ಗಾಯದ ಹೊರತಾಗಿಯೂ ಎಂಎಸ್ ಧೋನಿ ಇಂಡಿಯನ್ ಪ್ರೀಮಿಯರ್ ಲೀಗ್ 2023 ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಪ್ರತಿಯೊಂದು ಪಂದ್ಯವನ್ನು ಆಡಿದ್ದಾರೆ. ಬ್ಯಾಟಿಂಗ್ ವೇಳೆ ಹೆಚ್ಚು ಸಮಸ್ಯೆ ಎದುರಿಸುತ್ತಿದ್ದ ಅವರು ವಿಕೆಟ್ ಕೀಪಿಂಗ್ನಲ್ಲಿ ಯಾವುದೇ ಅದ್ಧೂರಿ ಪ್ರದರ್ಶನ ನೀಡಿದ್ದರು. ಐಪಿಎಲ್ ಫೈನಲ್ ಪಂದ್ಯದಲ್ಲಿ ಗೆದ್ದ ಬಳಿಕ ಮೊಣಕಾಲಿನ ಶಸ್ತ್ರಚಿಕಿತ್ಸೆಗೆ ಅವರು ಒಳಗಾಗಿದ್ದರು. ಇದೀಗ ಅವರು ಈಗ ರಾಂಚಿಯಲ್ಲಿದ್ದಾರೆ. ತಮ್ಮ ಆರೋಗ್ಯ ಅನುಮತಿಸಿದರೆ ಕನಿಷ್ಠ ಇನ್ನೂ ಒಂದು ಋತುವಿನಲ್ಲಿ ಆಡುವುದಾಗಿ ಧೋನಿ ತಮ್ಮ ಬೆಂಬಲಿಗರಿಗೆ ಹೇಳಿದ್ದಾರೆ ಎನ್ನಲಾಗಿದೆ.
ಫೈನಲ್ ನಂತರದ ನಂತರ ಮಾತನಾಡಿದ್ದ ಧೋನಿ ಪ್ರಶಸ್ತಿ ಗೆದ್ದ ನಂತರ ನಿವೃತ್ತಿ ಹೊಂದಲು ಉತ್ತಮ ಸಮಯ ಎಂದು ಒಪ್ಪಿಕೊಂಡರು. ಆದರೆ ಆರೋಗ್ಯವು ಅನುಮತಿಸಿದರೆ ಕನಿಷ್ಠ ಒಂದು ಋತುವಿನಲ್ಲಿ ಆಡುವುದಾಗಿ ಹೇಳಿದ್ದರು. ಇನ್ನೂ ಒಂಬತ್ತು ತಿಂಗಳ ಕಾಲ ಕಠಿಣ ಪರಿಶ್ರಮದ ಮೂಲಕ ಫಿಟ್ನೆಸ್ ಉಳಿಸಿಕೊಂಡು ಆಡುವುದಾಗಿ ಅವರು ಹೇಳಿದ್ದರು. ಶಸ್ತ್ರಚಿಕಿತ್ಸೆಯ ನಂತರದ ಮೂರು ವಾರಗಳ ವಿಶ್ರಾಂತಿ ಪಡೆದಿದ್ದು, ಅವರು ಸಂಪೂರ್ಣ ಫಿಟ್ ಆಗಿದ್ದಾರೆ ಎಂದು ಹೇಳಲಾಗಿದೆ. ಹೀಗಾಗಿ ಅವರು ಮುಂದಿನ ಆವೃತ್ತಿಯಲ್ಲಿ ಆಡುವುದು ಬಹುತೇಕ ಖಚಿತ ಎನ್ನಲಾಗಿದೆ.
ಸಿಎಸ್ಕೆ ಫ್ರಾಂಚೈಸಿಯ ಸಿಇಒ ಕಾಶಿ ವಿಶ್ವನಾಥನ್ ಮುಂಬಯಿಯಲ್ಲಿ ಧೋನಿಯನ್ನು ಭೇಟಿಯಾಗಿದ್ದರು. ಧೋನಿ ಜನವರಿ ಅಥವಾ ಫೆಬ್ರವರಿವರೆಗೆ ಆಡದಿರಲು ನಿರ್ಧರಿಸಿದ್ದಾರೆ. ಆದರೆ, ಐಪಿಎಲ್ ವೇಳೆಗೆ ಅವರು ಸಂಪೂರ್ಣವಾಗಿ ಸಜ್ಜಾಗುವ ಭರವಸೆ ನೀಡಿದ್ದಾರೆ. ಧೋನಿಯ ಇಚ್ಛೆಯ ಪ್ರಕಾರ ಅವರನ್ನು ಮುಂದಿನ ಆವೃತ್ತಿಗೂ ಅವರ ನಾಯಕತ್ವದಲ್ಲೇ ಸಿಎಸ್ಕೆ ತಂಡ ಮುಂದಿನ 2024ರ ಐಪಿಎಲ್ನಲ್ಲಿ ಆಡಲಿದೆ ಎಂಬುದಾಗಿ ಕಾಶಿ ವಿಶ್ವನಾಥನ್ ಅವರ ವಿಶ್ವಾಸ ವ್ಯಕ್ತಪಡಿಸಿದ್ದರು. ಹೀಗಾಗಿ ಧೋನಿ ಆಡುವುದು ಖಚಿತ ಎಂದು ಹೇಳಲಾಗಿದೆ.
ಇದನ್ನೂ ಓದಿ : MS Dhoni: ಧೋನಿ ವಿಕೆಟ್ ಕೀಪರ್ ಆದ ಹಿಂದಿದೆ ಒಂದು ರೋಚಕ ಸ್ಟೋರಿ
ಅಂತಿಮ ಪಂದ್ಯದವರೆಗೂ ಧೋನಿ ಎಂದಿಗೂ ಮೊಣಕಾಲಿನ ನೋವಿನ ಬಗ್ಗೆ ತಕರಾರು ಎತ್ತಿರಲಿಲ್ಲ. ಧೋನಿ ರನ್ಗಾಗಿ ಓಡುವಾಗ ಸಮಸ್ಯೆ ಎದುರಿಸುವುದನ್ನು ನೋಡಿದ್ದೀರಿ. ಆದರೆ, ಅದನ್ನೂ ದೊಡ್ಡ ವಿಷಯವನ್ನಾಗಿ ಮಾಡಿರಲಿಲ್ಲ. ಫೈನಲ್ ಪಂದ್ಯದ ನಂತರ, ‘ಸರಿ, ನಾನು ಶಸ್ತ್ರಚಿಕಿತ್ಸೆಗೆ ಒಳಗಾಗುತ್ತೇನೆ’ ಎಂದು ಅವರು ಹೇಳಿದ್ದರು. ಚಿಕಿತ್ಸೆ ಮುಗಿಸಿ ಅವರು ಸಂಪೂರ್ಣವಾಗಿ ಸಜ್ಜಾಗಿದ್ದಾರೆ ಎಂಬುದಾಗಿ ಕಾಶಿ ವಿಶ್ವನಾಥನ್ ಅವರು ಹೇಳಿದ್ದರು.
ಜಡೇಜಾಗೆ ನೋವಾಗಿರುವುದು ನಿಜ
ಬಾರಿಯ ಐಪಿಎಲ್ನಲ್ಲಿ(IPL 2023) ರವೀಂದ್ರ ಜಡೇಜಾಗೆ ಧೋನಿ(Dhoni vs Jadeja) ಅಭಿಮಾನಿಗಳಿಂದ ನೋವಾಗಿರುವು ನಿಜ. ಆದರೆ ಉಭಯ ಆಟಗಾರರ ಮಧ್ಯೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ ಎಂದು ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸಿಇಒ ಕಾಶಿ ವಿಶ್ವನಾಥನ್(CSK CEO Kasi Viswanathan) ಹೇಳಿದ್ದಾರೆ.
ಗುಜರಾತ್ ಟೈಟನ್ಸ್ ವಿರುದ್ಧ ಮೊದಲನೇ ಕ್ವಾಲಿಫೈಯರ್ ಪಂದ್ಯದ ಗೆಲುವಿನ ಬಳಿಕ ಮಾತನಾಡಿದ್ದ ರವೀಂದ್ರ ಜಡೇಜಾ ಅವರು, ತಾನು ಬ್ಯಾಟಿಂಗ್ಗೆ ಆಗಮಿಸುವ ವೇಳೆ ಧೋನಿ ಅಭಿಮಾನಿಗಳು ಬೇಗನೇ ಔಟ್ ಆಗುವಂತೆ ಹಿಡಿ ಶಾಪ ಹಾಕುತ್ತಾರೆ ಎಂದು ಹೇಳಿದ್ದರು. ಜಡೇಜಾ ಅವರ ಈ ಹೇಳಿಕೆ ಭಾರಿ ಚರ್ಚೆಗೂ ಕಾರಣವಾಗಿತ್ತು, ಜತೆಗೆ ಧೋನಿ ಮತ್ತು ಜಡೇಜಾ ಮಧ್ಯೆ ಎಲ್ಲವೂ ಸರಿಯಿಲ್ಲ ಉಭಯ ಆಟಗಾರರು ನಾಯಕತ್ವದ ವಿಚಾರದಲ್ಲಿ ಮುನಿಸಿಕೊಂಡಿದ್ದಾರೆ ಎಂಬ ಹಲವು ಸುದ್ದಿಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಆದರೆ ಫೈನಲ್ನಲ್ಲಿ ಜಡೇಜಾ ಚೆನ್ನೈ ತಂಡಕ್ಕೆ ಸ್ಮರಣೀಯ ಗೆಲುವು ದಾಖಲಿಸಿದ ಬಳಿಕ ಧೋನಿ ಅವರು ಜಡೇಜಾರನ್ನು ಭಜದ ಮೇಲೆ ಎತ್ತಿಕೊಂಡು ಸಂಭ್ರಮಿಸಿದ್ದರು. ಈ ಘಟನೆ ಬಳಿಕ ಧೋನಿ ಮತ್ತು ಜಡೇಜಾ ಅವರ ಮಧ್ಯೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ ಎಂಬ ಸ್ಪಷ್ಟ ಸಂದೇಶ ರವಾನೆಯಾಗಿತ್ತು.